Search
  • Follow NativePlanet
Share
» »ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ

ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ

ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲೊಂದಾದ ಮಹಾಭಾರತವನ್ನು ವೇದವ್ಯಾಸರು ಬರೆದಿದ್ದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಮಹಾಭಾರತವನ್ನು ವೇದವ್ಯಾಸರು ಎಲ್ಲಿ ಬರೆದಿದ್ದು ಎನ್ನುವುದನ್ನು ನಾವು ಇಂದು ಹೇಳಲಿದ್ದೇವೆ. ಆ ಸ್ಥಳ ಇಂದೂ ವೇದವ್ಯಾಸ ಮಂದಿರ ಎನ್ನುವ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ.

ಓಡಿಸ್ಸಾದ ರಾವುರ್‌ಕೆಲಾ

ಓಡಿಸ್ಸಾದ ರಾವುರ್‌ಕೆಲಾ

PC: User:Msec109

ಓಡಿಸ್ಸಾದ ಉತ್ತರ ಭಾಗದಲ್ಲಿರುವ ರಾವುರ್‌ಕೆಲಾ ಎನ್ನುವುದು ಒಂದು ನಗರವಾಗಿದ್ದು ಇದು ಅಲ್ಲಿನ ಮೂರನೇ ದೊಡ್ಡ ನಗರಗಳಲ್ಲಿ ಸೇರಿದೆ. ಇದು ಭುವನೇಶ್ವರದಿಂದ 340 ಕಿ.ಮೀ ದೂರದಲ್ಲಿದೆ. ಪರ್ವತಗಳು ಹಾಗೂ ಶಿಖರಗಳು, ನದಿಗಳಿಂದ ಸುತ್ತುವರಿದಿದೆ. ರಾವುರ್‌ಕೆಲಾ ಸ್ಟೀಲ್ ಪ್ಲಾಂಟ್ ಬಹಳ ಪ್ರಸಿದ್ಧಿಯನ್ನು ಹೊಂದಿದೆ. ಅಲ್ಲದೆ ಎನ್‌ಐಇಟಿ ರೂರ್‌ಕೆಲಾಗೂ ಪ್ರಸಿದ್ಧಿಹೊಂದಿದೆ.

ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕುಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು

ವೇದವ್ಯಾಸ ಮಂದಿರ

ವೇದವ್ಯಾಸ ಮಂದಿರ

ರಾವುಲ್‌ಕೆಲಾ ಸುತ್ತಾಡುವುದಾದರೆ ನೀವು ಮೊದಲಿಗೆ ಇಲ್ಲಿನ ಪ್ರಸಿದ್ಧ ವೇದವ್ಯಾಸ ಮಂದಿರದಿಂದ ಆರಂಭಿಸಿ. ಬ್ರಹ್ಮಿಣಿ ನದಿ ತಟದಲ್ಲಿರುವ ಈ ಸ್ಥಳದಲ್ಲಿಯೇ ಹಿಂದೂ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ವೇದವ್ಯಾಸರು ಬರೆದಿದ್ದು ಎನ್ನಲಾಗುತ್ತದೆ. ಈ ವೇದವ್ಯಾಸ ಮಂದಿರದಲ್ಲಿ ಮೂರು ಮುಖ್ಯ ಭಾಗಗಳಿವೆ. ಅವುಗಳ್ಲಿ ಒಂದು ಶಾಲೆ, ಆಶ್ರಮ ಹಾಗೂ ಗುಹೆ ಸೇರಿಕೊಂಡಿದೆ.

ವೈಷ್ಣೋ ದೇವಿ ಮಂದಿರ

ವೈಷ್ಣೋ ದೇವಿ ಮಂದಿರ

PC: Anil Kumar Chowdhary

ವೇದವ್ಯಾಸ ಮಂದಿರದ ಜೊತೆಗೆ ನೀವು ಇಲ್ಲಿನ ವೈಷ್ಣೋದೇವಿ ಮಂದಿರವನ್ನು ಭೇಟಿ ನೀಡುವ ಪ್ಲ್ಯಾನ್ ಕೂಡಾ ಮಾಡಬಹುದು. ಜಮ್ಮು ಕಾಶ್ಮೀರದಲ್ಲಿರು ವ ವೈಷ್ಣೋ ದೇವಿಯ ಪ್ರತಿಕೃತಿಯಾಗಿರುವ ಈ ಮಂದಿರವು ಬೆಟ್ಟದ ಮೇಲಿದೆ. ಈ ಮಂದಿರವನ್ನು 2007ರಲ್ಲಿ ಜನಸಾಮಾನ್ಯರಿಗಾಗಿ ತೆರೆಯಲಾಗಿದ್ದು, ಹೋಳಿ, ದಸರದಂತಹ ವಿಶೇಷ ಸಂದರ್ಭದಲ್ಲಿ ವಿಶೇಷ ಉತ್ಸವವನ್ನು ಆಯೋಜಿಸಲಾಗುತ್ತದೆ.

ಪಿಕ್‌ನಿಕ್‌ ಹೋಗುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್ಪಿಕ್‌ನಿಕ್‌ ಹೋಗುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್

ರಾಣಿ ಸತಿ ಮಂದಿರ

ರಾಣಿ ಸತಿ ಮಂದಿರ

PC: Niru786

2 ಎಕರೆ ಸ್ಥಳದಲ್ಲಿರುವ ಈ ಮಂದಿರವು ಜುನ್‌ ಜುನ್‌ ಧಾಮದ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಮಂದಿರವನ್ನು 1967ರಲ್ಲಿ ನಿರ್ಮಿಸಲಾಗಿದ್ದು, 1992 ಹಾಗೂ 2000 ಇಸವಿಯಲ್ಲಿ ಮಂದಿರದ ಪುನಃನಿರ್ಮಾಣ ಮಾಡಲಾಯಿತು. ಇಲ್ಲಿಗೆ ನೀವು ಯಾವುದೇ ಸಂದರ್ಭದಲ್ಲೂ ಭೇಟಿ ನೀಡಬಹುದು. ಆದರೆ ಹಬ್ಬ ಹರಿದಿನಗಳ ಸಮಯದಲ್ಲಿ ಭೇಟಿ ನೀಡುವುದು ಇನ್ನೂ ಸೂಕ್ತ.

ಡಾರ್ಜಿಂಗ್

ಡಾರ್ಜಿಂಗ್

ಇಲ್ಲಿ ಬರೀ ಮಂದಿರಗಳಷ್ಟೇ ಅಲ್ಲ ಇನ್ನಿತರ ಸ್ಥಳಗಳನ್ನೂ ಭೇಟಿಯಾಗಬಹುದು. ಬ್ರಹ್ಮಿಣಿ ನದಿಯ ತಟದಲ್ಲಿನ ಡಾರ್ಜಿಂಗ್ ಇಲ್ಲಿನ ಪ್ರಸಿದ್ಧ ಪಿಕ್‌ನಿಕ್ ತಾಣವಾಗಿದೆ. ಹಚ್ಚ ಹಸಿರುನಿಂದ ಕೂಡಿರುವ ಈ ಸ್ಥಳಕ್ಕೆ ನೀವು ವಾರಾಂತ್ಯದಲ್ಲಿ ಭೇಟಿ ನೀಡಬಹುದು.

ಹನುಮಾನ್ ವಾಟಿಕ

ಹನುಮಾನ್ ವಾಟಿಕ

PC: Akilola

ಇಲ್ಲಿ ನೀವು ಹನುಮಾನ್ ವಾಟಿಕದ ಆನಂದವನ್ನು ಪಡೆಯಬಹುದು. ಪುರಾಣದ ಪ್ರಕಾರ ಪ್ರಾಚೀನ ಕಾಲದಲ್ಲಿ ಇಲ್ಲಿ ಹನುಮಾನ್ ನೆಲೆಸುತ್ತಿದ್ದರು. ಈ ಸ್ಥಳದ ಸಾಂಸ್ಕೃತಿಕ ಮಹತ್ವವನ್ನು ಅರಿತ ಓಡಿಸ್ಸಾ ಸರ್ಕಾರ ಇದನ್ನು ಪುನಃನಿರ್ಮಾಣ ಮಾಡಿ ಜನರಿಗೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಈ ಉದ್ಯಾನದಲ್ಲಿ ವಿವಿಧ ಹಿಂದೂ ದೇವತೆಗಳ ಮಂದಿರಗಳಿವೆ. ಅವುಗಳ ಮಧ್ಯದಲ್ಲಿ ಹನುಮಾನ್‌ನ 22.8ಮೀಟರ್ ಉದ್ದದ ಮೂರ್ತಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X