Search
  • Follow NativePlanet
Share
» »ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?

ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?

ದಕ್ಷಿಣ ಖಂಡದ ಈ ಭೂಮಿಯಲ್ಲಿ ಅನೇಕ ಹಿಂದೂ ರಾಜರುಗಳ ಜೊತೆ ಅನೇಕ ಮುಸ್ಮಿಮ್ ರಾಜರೂ ಕೂಡಾ ಆಳ್ವಿಕೆ ನಡೆಸಿದ್ದಾರೆ. ಇವರ ಆಳ್ವಿಕೆಯ ಕಾಲದಲ್ಲಿ ಅನೇಕ ಕೋಟೆಗಳು ಭವನಗಳ ನಿರ್ಮಾಣವಾಗಿದೆ. ಅದು ಇಂದಿಗೆ ಐತಿಹಾಸಿಕ ಸ್ಮಾರಕಗಳ ರೂಪದಲ್ಲಿ ಪ್ರಸಿದ್ಧಿಯಾಗಿದೆ. ಶಾತವಾಹನರು, ಚೋಳರು, ಚಾಲುಕ್ಯರು, ಪಾಂಡ್ಯರು, ಪಲ್ಲವರು, ರಾಷ್ಟ್ರಕೂಟರನ್ನು ಹೊರತುಪಡಿಸಿ ಇನ್ನಿತರ ರಾಜರು ಆಳಿದ್ದಾರೆ ಅದರಲ್ಲಿ ಕಾಕತೀಯರು ಕೂಡಾ ಸೇರಿದ್ದಾರೆ. ಕಾಕತೀಯರು ವಾರಂಗಲ್‍ನ್ನು ತಮ್ಮ ರಾಜಧಾನಿಯನ್ನಾಗಿಸಿದರು.
ದೇವರು ಕೂಡಾ ಈ ರಹಸ್ಯವನ್ನು ಭೇದಿಸಲಾರರೇನೋ !
ಇದು ದಕ್ಷಿಣದ ರಾಜವಂಶಸ್ಥರ ಸಂಕ್ಷಿಪ್ತ ವಿವರ. ಈ ಭೂಮಿಯಲ್ಲಿರುವ ಐತಿಹಾಸಿಕ ಗುಲಬರ್ಗಾ ಕೋಟೆಯ ಬಗ್ಗೆ ತಿಳಿಯಿರಿ. ಇದರಲ್ಲಿ ಒಂದು ಐತಿಹಾಸಿಕ ಕಥೆ ಇದೆ.

ಸಂಕ್ಷಿಪ್ತ ಇತಿಹಾಸ

ಸಂಕ್ಷಿಪ್ತ ಇತಿಹಾಸ

PC- Seo~commonswiki

ಗುಲಬರ್ಗಾ ಕೋಟೆಯು ಗುಲಬರ್ಗಾ ಜಿಲ್ಲೆಯಲ್ಲಿದೆ. ಈ ಕೋಟೆಯನ್ನು ವಾರಂಗಲ್‍ನ ರಾಜ ಗುಲ್‍ಚಂದ್ ನಿರ್ಮಾಣ ಮಾಡಿದ್ದು. ನಂತರ ಇದನ್ನು ಬಹಮನಿ ಸಾಮ್ರಾಜ್ಯದ ಬಹಮನಿ ಷಾಹ ಇದನ್ನು ಒಂದು ವಿಶಾಲವಾದ ಕೋಟೆಯನ್ನಾಗಿ ಮಾಡಿದನು. ಕೋಟೆಯ ಒಳಗಿರುವ ಕೆಲವು ಭಾಗಗಳನ್ನು ನಂತರ ನಿರ್ಮಿಸಲಾಯಿತು. ಇಲ್ಲಿ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ದೇವಗಿರಿಯ ಯಾದವರ ಮುಟ್ಟಿಯಲ್ಲಿತ್ತು. ನಂತರ ಅದು ಕಾಕತೀಯರ ಅಧೀನದಲ್ಲಿತ್ತು.

ಕೋಟೆ ನಾಶ ಮಾಡಲಾಗಿತ್ತು

ಕೋಟೆ ನಾಶ ಮಾಡಲಾಗಿತ್ತು

PC- Dayal, Deen

ಹಲವಾರು ಸಾಮ್ರಾಟರ ಆಳ್ವಿಕೆ ಹೊಂದಿದ ಈ ಕೋಟೆಯು ವಿಜಯನಗರದ ಆಳ್ವಿಕೆಯಲ್ಲಿ ನಷ್ಟವಾಯಿತು. ಕೋಟೆಯ ಬಹುಭಾಗ ನಷ್ಟವಾಯಿತು. ನಂತರ ಈ ಕೋಟೆಯ ಪುನಃ ನಿರ್ಮಾಣವನ್ನು ಬಿಜಾಪುರ ಸುಲ್ತಾನರ ಆದಿಲ್‍ಶಾಹಿಗಳು ಮಾಡಿದರು. ಆದಿಲ್ ಶಾಹಿಗಳು ವಿಜಯನಗರ ಸಾಮ್ರಾಟರನ್ನು ಯುದ್ಧದಲ್ಲಿ ಸೋಲಿಸಿ ಹಣ ಸಂಗ್ರಹಿಸಿ ಕೋಟೆಯನ್ನು ಪುನಃ ನಿರ್ಮಾಣ ಮಾಡಿದನು. 15ನೇ ಶತಮಾನದಿಂದ 19ನೇ ಶತಮಾನದವರೆಗೆ ಬಹುಮನಿ ಸಾಮ್ರಾಜ್ಯದ ಶಾಸನ ನಡೆದಿತ್ತು.

ಗುಲ್ಬರ್ಗಾದ ಇತರ ಐತಿಹಾಸಿಕ ಸ್ಥಳಗಳು ಜುಮ ಮಸ್ಜೀದ್

ಗುಲ್ಬರ್ಗಾದ ಇತರ ಐತಿಹಾಸಿಕ ಸ್ಥಳಗಳು ಜುಮ ಮಸ್ಜೀದ್

PC- Hashimpi

ಗುಲ್ಬರ್ಗ ಕೋಟೆಯ ಹೊರತಾಗಿ ಇಲ್ಲಿ ದಕ್ಷಿಣ ಭಾರತದ ಮೊದಲ ಮಸ್ಜೀದ್ ಇದೆ. ಗುಲ್ಬರ್ಗದ ಬಹಮನಿ ಸಾಮ್ರಾಜ್ಯದ ಕಾಲದಲ್ಲಿ ಈ ಮಸೀದಿಯ ನಿರ್ಮಾಣ ಮಾಡಲಾಗಿದೆ. ಈ ಮಸೀದಿಯ ವಾಸ್ತುಕಲೆ ಅಷ್ಟೊಂದು ಸುಂದರವಾಗಿಲ್ಲದಿದ್ದರೂ ಬಹಳ ವಿಶಾಲವಾಗಿದೆ. ಇಲ್ಲಿ ಪ್ರಾರ್ಥನಾ ಕೋಣೆಯ ಜೊತೆಗೆ ಮೊಹರಬಾದ್ ಗ್ವಾಲಿಯರ್ ಕೂಡಾ ಇದೆ.

ಖ್ವಾಜಾ ಬಂದೇ ನವಾಜ್

ಖ್ವಾಜಾ ಬಂದೇ ನವಾಜ್

ಕೋಟೆ ಹಾಗೂ ಮಸೀದಿಯನ್ನು ಹೊರತುಪಡಿಸಿ ಇಲ್ಲಿ ಖ್ವಾಜಾ ಬಂದೇ ನವಾಜ್ ದರ್ಗಾ ಕೂಡಾ ಇದೆ. ಇದನ್ನು ನಿರ್ಮಿಸಲು ಭಾರತೀಯ-ಮುಸ್ಲೀಮ್ ವಾಸ್ತುಕಲಾವನ್ನು ಬಳಸಲಾಗಿದೆ. ಮಾಹಿತಿಗಳ ಪ್ರಕಾರ ಖ್ವಾಜಾ ಬಂದೇ ನವಾಜ್ 1413ರಲ್ಲಿ ಗುಲಬರ್ಗಕ್ಕೆ ಬಂದಿದ್ದರು. ಇದನ್ನು ಮಿಶ್ರಿತ ವಾಸ್ತುಲೆಯ ಶೈಲಿ ಎನ್ನಲಾಗುತ್ತದೆ. ಇಲ್ಲಿ ತುರ್ಕಿ, ಬಹಮನಿ ಹಾಗೂ ಇರಾನಿ ಪ್ರಭಾವ ಕಾಣಸಿಗುತ್ತದೆ.

ಪ್ರವೇಶಿಸುವುದು ಹೇಗೆ?

ಪ್ರವೇಶಿಸುವುದು ಹೇಗೆ?

ಗುಲ್ಬರ್ಗಾವು ಕರ್ನಾಟಕದ ಉತ್ತ ಭಾಗದಲ್ಲಿದೆ. ನೀವು ರೈಲಿನಲ್ಲಿ ಹೋಗುವುದಾದರೆ ಗುಲ್ಬರ್ಗಾ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು. ಬಸ್ ಮೂಲಕ ಹೋಗುವುದಾದರೆ ಎಲ್ಲಾ ಪ್ರದೇಶಗಳಿಂದ ಗುಲ್ಬರ್ಗಾಕ್ಕೆ ಬಸ್‍ಗಳಿವೆ. ಇನ್ನು ನೀವು ವಿಮಾನದ ಮೂಲಕ ಹೋಗಬೇಕೆಂದಿದ್ದರೆ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಹೈದರಾಬಾದ್ ವಿಮಾನ ನಿಲ್ದಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X