Search
  • Follow NativePlanet
Share
» »ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....

ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....

ತಿರುಪತಿ ವೆಂಕಟೇಶ್ವರನನ್ನು ಆರಾಧಿಸಿ ಆತನ ಆಶೀರ್ವಾದವನ್ನು ಪಡೆದಿರುವ ಅನೇಕ ಮಂದಿ ಇದ್ದಾರೆ. ಪ್ರಸ್ತುತ ಕಾರ್ಪೊರೇಟ್ ದಿಗ್ಗಜರಿಂದ ಹಿಡಿದು ರಾಜಕೀಯ ನಾಯಕರವರೆವಿಗೂ ಯಾವ ಕೆಲಸವನ್ನು ಪ್ರಾರಂಭಿಸಬೇಕಾದರೂ ಅಥವಾ ಒಂದು ಮುಖ್ಯವಾದ ನಿರ್ಣಯವನ್ನು

ತಿರುಪತಿ ವೆಂಕಟೇಶ್ವರನನ್ನು ಆರಾಧಿಸಿ ಆತನ ಆಶೀರ್ವಾದವನ್ನು ಪಡೆದಿರುವ ಅನೇಕ ಮಂದಿ ಇದ್ದಾರೆ. ಪ್ರಸ್ತುತ ಕಾರ್ಪೊರೇಟ್ ದಿಗ್ಗಜರಿಂದ ಹಿಡಿದು ರಾಜಕೀಯ ನಾಯಕರವರೆವಿಗೂ ಯಾವ ಕೆಲಸವನ್ನು ಪ್ರಾರಂಭಿಸಬೇಕಾದರೂ ಅಥವಾ ಒಂದು ಮುಖ್ಯವಾದ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೂ ಸ್ವಾಮಿಯನ್ನು ದರ್ಶಿಸಿ ಕೊಂಡು ಕಾಣಿಕೆಯನ್ನು ಸಮರ್ಪಿಸಿ ನಂತರವಷ್ಟೇ ತೀರ್ಮಾನಿಸುತ್ತಾರೆ. ಈ ಪದ್ಧತಿ ಇಂದಿನಿಂದಲ್ಲ ಬದಲಾಗಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಬಂದ ಆಚಾರವಾಗಿದೆ.

ಈ ಮೂಲಕ ಸ್ವಾಮಿಯನ್ನು ಆರಾಧಿಸಿದವರಲ್ಲಿ ಪುರಾಣಪುರುಷರೇ ಅಲ್ಲದೆ ಚರಿತ್ರೆಯಲ್ಲಿನ ರಾಜರು ಕೂಡ ಇದ್ದಾರೆ. ತಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಸ್ವಾಮಿಗೆ ಕಾಣಿಕೆಗಳನ್ನು ಸಮರ್ಪಿಸಿ ಏಳು ಬೆಟ್ಟದ ಒಡೆಯನಾದ ವೆಂಕಟೇಶ್ವರ ಸ್ವಾಮಿಯ ಕೃಪಾಕಟಾಕ್ಷವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರಲ್ಲಿ ಮೈಸೂರಿನ ಮಹಾರಾಜರು ಕೂಡ ಒಬ್ಬರು. ಶ್ರೀ ವೆಂಕಟೇಶ್ವರ ಸ್ವಾಮಿಗೆ ಮೈಸೂರಿನ ಮಹಾರಾಜರು ಸಮರ್ಪಿಸಿದ ಕಾಣಿಕೆಗಳನ್ನು ಇಂದಿಗೂ ಉಪಯೋಗಿಸುತ್ತಿದ್ದಾರೆ. ಈ ಲೇಖನದ ಮೂಲಕ ಶ್ರೀ ವೆಂಕಟೇಶ್ವರ ಸ್ವಾಮಿಗೆ ಮೈಸೂರು ರಾಜರು ಸಮರ್ಪಿಸಿದ ಕಾಣಿಕೆಗಳ ಸಂಬಂಧಿಸಿದ ವಿವರಗಳನ್ನು ತಿಳಿದು ಕೊಳ್ಳಿ.

೧. ಮೈಸೂರು ಮಹಾರಾಜರು

೧. ಮೈಸೂರು ಮಹಾರಾಜರು

PC:YOUTUBE

ತಿರುಮಲ ವೆಂಕಟೇಶ್ವರನಿಗೆ ಮೈಸೂರಿನ ಮಹಾರಾಜರು ಪರಮಭಕ್ತರು. ದೇವಾಲಯದ ಅಭಿವೃದ್ಧಿಗಾಗಿ ಮಹಾರಾಜರು ಅತ್ಯಂತ ಭಕ್ತಿಭಾವದಿಂದ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದರು. ಮುಖ್ಯವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹದ ಜೊತೆಜೊತೆಗೆ ಉತ್ಸವ ಮೂರ್ತಿಗಳಿಗೆ ಪ್ಲಾಟಿನಂ, ಬಂಗಾರ ,ಬೆಳ್ಳಿ, ವಜ್ರ, ಪಚ್ಚೆ, ಹವಳದಿಂದ ತಯಾರು ಮಾಡಿದ ಅತ್ಯಮೂಲ್ಯವಾದ ಆಭರಣಗಳನ್ನು ನೀಡುತ್ತಿದ್ದಾರೆ.

೨. ಆನೆ ದಂತ

೨. ಆನೆ ದಂತ

PC:YOUTUBE

ಬ್ರಹ್ಮೋತ್ಸವದ ಸಮಯದಲ್ಲಿ ಉಪಯೋಗಿಸುವ ಗರುಡ ,ಗಜ, ಮತ್ಸ್ಯಕವಚಗಳ ಜೊತೆಜೊತೆಗೆ ಸರ್ವಭೂಪಾಲ, ಅಶ್ವ ಸೂರ್ಯಪ್ರಭಾ, ಚಂದ್ರಪ್ರಭಾ ವಾಹನಗಳನ್ನು ಮೈಸೂರು ಮಹಾರಾಜರೇ ನೀಡಿದ್ದರು. ಸ್ವಾಮಿಯ ವಾಹನ ಸೇವೆಯ ಭಾಗವಾಗಿ ಬ್ರಹ್ಮೋತ್ಸವದಲ್ಲಿ ಐದನೇ ದಿನದ ಬೆಳಿಗ್ಗೆ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ಉಪಯೋಗಿಸುವ ಪಲ್ಲಕ್ಕಿಯನ್ನು ಮೈಸೂರು ಮಹಾರಾಜರೇ ಆನೆಯ ದಂತಗಳಿಂದ ಪ್ರತ್ಯೇಕವಾಗಿ ತಯಾರು ಮಾಡಿಸಿದರು.

 ೩. ನಿತ್ಯ ದೀಪಾರಾಧನೆ

೩. ನಿತ್ಯ ದೀಪಾರಾಧನೆ

PC:YOUTUBE

ನಿತ್ಯ ದೀಪಾರಾಧನೆ ಇಷ್ಟೇ ಅಲ್ಲದೆ ನಿತ್ಯ ದೀಪಾರಾಧನೆಗೆ ಅತ್ಯವಶ್ಯಕವಾದ ಎಣ್ಣೆಯನ್ನು ಕೂಡ ಸುಮಾರು ಮೈಸೂರು ಸಂಸ್ಥಾನದಿಂದ ಪೂರೈಸುವ ಸಂಪ್ರದಾಯವು ಸುಮಾರು 300 ವರ್ಷಗಳಿಂದ ಪ್ರಾರಂಭವಾಯಿತು. ಪ್ರಸ್ತುತ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರವು ಮುಂದುವರಿಸುತ್ತಿದೆ.

೪. ಪ್ರತ್ಯೇಕವಾದ ಅರ್ಚನೆ

೪. ಪ್ರತ್ಯೇಕವಾದ ಅರ್ಚನೆ

PC:YOUTUBE

ಪ್ರತಿದಿನ ಮುಂಜಾನೆ ಶ್ರೀ ವೆಂಕಟೇಶ್ವರ ಸ್ವಾಮಿ ಸುಪ್ರಭಾತ ಸೇವೆಗಿಂತ ಮುಂಚಿತವಾಗಿ ನಡೆಯುವ ನವನೀತ ಆರತಿ ಹಾಗು ಅಖಂಡದೀಪ ಬ್ರಹ್ಮ ದೀಪಕ್ಕೆ ಪ್ರತಿದಿನ ಐದು ಕೆಜಿ ಎಣ್ಣೆಯನ್ನು ಇಂದಿಗೂ ಕರ್ನಾಟಕ ಸರ್ಕಾರವು ನೀಡುತ್ತಿದೆ. ದೇವಾಲಯದ ಅಭಿವೃದ್ಧಿಗಾಗಿ ಮೈಸೂರು ಮಹಾರಾಜರು ಮಾಡಿದ ಸೇವೆಯ ನೆನಪಿಗೆ ರಾಜರ ಹೆಸರಿನಲ್ಲಿ ಪ್ರತಿ ತಿಂಗಳು ರಾತ್ರಿ 7:30ಕ್ಕೆ ಪ್ರತ್ಯೇಕಾರ್ಚನೆ ನಿರ್ವಹಿಸುತ್ತಾರೆ.

೫. 300 ವರ್ಷಗಳಿಂದ

೫. 300 ವರ್ಷಗಳಿಂದ

PC:YOUTUBE

ಅದೇ ವಿಧವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಯುಗಾದಿ, ದೀಪಾವಳಿ ಹಬ್ಬದ ಸಮಯದಲ್ಲಿ ಮೈಸೂರಿನ ಮಹಾರಾಜರ ಹೆಸರಿನ ಮೇಲೆ ಪ್ರತ್ಯೇಕವಾದ ಆರತಿ ಮಾಡುತ್ತಾರೆ. ಮುಖ್ಯವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭಕ್ಕೆ ನಿರ್ವಹಿಸುವ ಉತ್ಸವದ ಹಾಗೂ ಪರ್ವ ದಿನಗಳಲ್ಲಿಯೂ ಕೂಡ ಶ್ರೀ ಮಲೆಯಪ್ಪ ಸ್ವಾಮಿಯವರು ಉತ್ಸವದಲ್ಲಿ ಪಾಲ್ಗೊಂಡು ಅನಂತರ ದೇವಾಲಯಕ್ಕೆ ಸೇರಿಕೊಳ್ಳುತ್ತಾರೆ. ಈ ಪದ್ಧತಿಯು ಕಳೆದ 300 ವರ್ಷಗಳಿಂದ ಕ್ರಮ ತಪ್ಪದೆ ನಡೆಯುತ್ತ ಬಂದಿರುವುದು ವಿಶೇಷವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X