Search
  • Follow NativePlanet
Share
» »ವಿವಾಹಕ್ಕೂ ಮುಂಚೆ ಮಾಡಲೇಬೇಕಾಗಿರುವ ಅದ್ಭುತವಾದ ಟ್ರೆಕ್ಕಿಂಗ್‍ಗಳು

ವಿವಾಹಕ್ಕೂ ಮುಂಚೆ ಮಾಡಲೇಬೇಕಾಗಿರುವ ಅದ್ಭುತವಾದ ಟ್ರೆಕ್ಕಿಂಗ್‍ಗಳು

ವಿವಾಹಕ್ಕೂ ಮುಂಚೆ ಮಾಡಲೇಬೇಕಾಗಿರುವ ಟ್ರೆಕ್ಕಿಂಗ್‍ಗಳ ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ಏಕೆಂದರೆ ಇಲ್ಲಿ ಸಾಹಸಮಯವಾದ ಟ್ರೆಕ್ಕಿಂಗ್‍ಗಳಾಗಿದ್ದು, ವಿವಾಹದ ಮುಂಚೆ ತೆರಳುವುದು ಉತ್ತಮವಾದ ಅನುಭೂತಿಯನ್ನು ಉಂಟುಮಾಡುತ್ತದೆ. ಸ್ನೇಹಿತರೊಂದಿಗೆ ಕಾಲ ಕಳೆಯುವುದು ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವೇ. ಈ ಟ್ರೆಕ್ಕಿಂಗ್ ಅತ್ಯಂತ ಜಾಗರೂಕತೆಯಿಂದ ಹಾಗು ಯೋಜನಬದ್ಧವಾಗಿ ತೆರಳಬೇಕಾಗಿರುತ್ತದೆ. ಸಾಕಷ್ಟು ಮಾನಸಿಕ ಹಾಗು ದೈಹಿಕವಾದ ಸಾಮಥ್ರ್ಯದ ಅವಶ್ಯಕತೆ ಇದೆ.

ವಿವಾಹದ ನಂತರ ಇಂಥಹ ಟ್ರೆಕ್ಕಿಂಗ್ ಮಾಡಬಾರದು ಎಂದೆನಿಲ್ಲ. ಬದಲಾಗಿ ವಿವಾಹದ ನಂತರ ಕೆಲವು ಜವಾಬ್ದಾರಿಗಳು ಹೆಚ್ಚಾಗುವುದರಿಂದ ಇಂಥಹ ಟ್ರೆಕ್ಕಿಂಗ್‍ಗಳಿಗೆ ಅವಕಾಶ ಲಭಿಸದೇ ಇರಬಹುದು. ಲೇಖನದಲ್ಲಿ ತಿಳಿಸಲಾಗುವ ಟ್ರೆಕ್ಕಿಂಗ್‍ನ ಸ್ಥಳಗಳು ಅತ್ಯಂತ ಅದ್ಭುತವಾದ ಅನುಭವವನ್ನೇ ಅಲ್ಲದೇ ಅಪಾಯಕಾರಿ ಕೂಡ ಆಗಿರುತ್ತದೆ. ಅಂತಹ ಟ್ರೆಕ್ಕಿಂಗ್ ಸ್ಥಳವಾದರೂ ಯಾವುದು ಎಂಬುದನ್ನು ಲೇಖನದ ಮೂಲಕ ತಿಳಿದುಕೊಳ್ಳಿ.

ಉತ್ತರಾಖಂಡ

ಉತ್ತರಾಖಂಡ

ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಈ ಚಾರಣ ಮಾರ್ಗವಿದ್ದು ಸುಮಾರು 99 ಕಿ.ಮೀಗಳಷ್ಟು ದೂರವನ್ನು ಹೊಂದಿದೆ. ಗಂಗೋತ್ರಿಯಿಂದ ಪ್ರಾರಂಭವಾಗುವ ಈ ಟ್ರೆಕ್ಕಿಂಗ್ ಬದರಿನಾಥ ಕಣಿವೆಯಲ್ಲಿ ಅಂತ್ಯವಾಗುತ್ತದೆ. ಇದು ಸಮುದ್ರ ಮಟ್ಟದಿಂದ 6000 ಕಿ.ಮೀ ಅಂದರೆ ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಮಾರ್ಗವು ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ.

Sharada Prasad CS

ಉತ್ತರಾಖಂಡ

ಉತ್ತರಾಖಂಡ

ಆಶ್ಚರ್ಯ ಏನಪ್ಪ ಎಂದರೆ ಈ ಟ್ರೆಕ್ಕಿಂಗ್ ಮಾರ್ಗವು ಎಷ್ಟು ಕಠಿಣವಾಗಿರುತ್ತದೆ ಎಂದರೆ ಪರಿಣಿತ ಚಾರಣಿಗರು ಕೂಡ ಈ ಟ್ರೆಕ್ಕಿಂಗ್ ಮಾಡಲು ಪರಿತಪಿಸುತ್ತಾರೆ. ಸಾಕಷ್ಟು ದೈಹಿಕವಾದ ಹಾಗು ಮಾನಸಿಕವಾದ ಸಾಮಥ್ರ್ಯವೇ ಅಲ್ಲದೇ ಯೋಜನಾ ಬದ್ಧ ಪೂರ್ವ ಸಿದ್ಧತೆಗಳ ಅವಶ್ಯಕತೆಯು ಇರುತ್ತದೆ. ಆದರೆ ಇಲ್ಲಿ ಪ್ರಕೃತಿಯ ಸುಂದರವಾದ ದೃಶ್ಯಗಳು, ಅನುಭವಗಳು ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯೇ ಆಗಿರುತ್ತದೆ.

Sharada Prasad CS

ಆಡೆನ್ಸ್ ಕೋಲ್ ಟ್ರೆಕ್

ಆಡೆನ್ಸ್ ಕೋಲ್ ಟ್ರೆಕ್

ಇದು ವಿಶ್ವದ ಅಪಾಯಕಾರಿ ಟ್ರೆಕ್ಕಿಂಗ್‍ಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ವಿಪರೀತವಾದ ಹವಾಮಾನ, ಹೆಚ್ಚು ಕೊರೆಯುವ ಚಳಿ, ಅಂಕುಡೊಂಕಾದ ಹಿಮ ಪರ್ವತಗಳು, ಆಮ್ಲಜನಕದ ಕೊರತೆ, ನಿರ್ಜನವಾದ ಪ್ರದೇಶ, ಆಯ ತಪ್ಪಿ ಬಿದ್ದರೂ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗುವ ಎಲ್ಲಾ ಲಕ್ಷಣಗಳು ಇಲ್ಲಿ ನೀವು ಅನುಭವಿಸಬಹುದು.

Barry Silver

ಆಡೆನ್ಸ್ ಕೋಲ್ ಟ್ರೆಕ್

ಆಡೆನ್ಸ್ ಕೋಲ್ ಟ್ರೆಕ್

ಈ ಅಪಾಯಕಾರಿ ಚಾರಣವು ಗಂಗೋತ್ರಿಯಿಂದ ಕೇದಾರನಾಥದೊಂದಿಗೆ ಬೆಸೆಯುತ್ತದೆ. ಗಂಗೋತ್ರಿಯಿಂದ ಪ್ರಾರಂಭವಾಗಿ ಕೇದಾರ ಕಣಿವೆಯಲ್ಲಿ ಅಂತ್ಯಗೊಳ್ಳುತ್ತದೆ. ಟ್ರೆಕ್ಕಿಂಗ್ ಸಂದರ್ಭದಲ್ಲಿ ಸಾಕಷ್ಟು ಜಾಗರೂಕತೆಯಿಂದ ಮುಂದೆ ಸಾಗಬೇಕಾಗುತ್ತದೆ. ಈ ಮಾರ್ಗವನ್ನು ಬ್ರಿಟಿಷ್ ಭೂ ಸರ್ವೇಕ್ಷಣಾ ಅಧಿಕಾರಿಯಾದ ಭಿಲಾಂಗನಾ ಎಂಬುವವನ ಹೆಸರನ್ನು ಇಡಲಾಗಿದ್ದು, ಗಂಗೋತ್ರಿಯಿಂದ ಕೇದಾರನಾಥದೊಂದಿಗೆ ಸಹ ಈ ಮಾರ್ಗ ಬೆಸೆಯುತ್ತದೆ.


Barry Silver

ಪಿನ್-ಪಾರ್ವತಿ ಟ್ರೆಕ್

ಪಿನ್-ಪಾರ್ವತಿ ಟ್ರೆಕ್

ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಹಾಗು ಸ್ಪತಿಯನ್ನು ಕಣಿವೆಯನ್ನು ಚೆಸೆಯುವ ಈ ಚಾರಣ ಮಾರ್ಗವು ಕಠಿಣವಾದ ಹಾಗು ಅಪಾಯಕಾರಿಯಾದ ಚಾರಣ ಮಾರ್ಗವಾಗಿದೆ. ಮೂಲತಃ ಈ ಮಾರ್ಗವು 100 ಕಿ.ಮೀಗಳಷ್ಟು ಉದ್ದವಿದ್ದು, ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯನ್ನು ಸ್ಪಿತಿಯಲ್ಲಿರುವ ಪಿನ್ ಕಣಿವೆಯೊಂದಿಗೆ ಬೆಸೆಯುವುದರಿಂದ ಇದಕ್ಕೆ ಪಿನ್-ಪಾರ್ವತಿ ಟ್ರೆಕ್ ಎಂದು ಕರೆಯುತ್ತಾರೆ.

RuckSackKruemel


ಶಿವಲಿಂಗ ಟ್ರೆಕ್

ಶಿವಲಿಂಗ ಟ್ರೆಕ್

ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಕಂಡುಬರುವ ಗಂಗೋತ್ರಿ ಶಿಖರಗಳ ಸಮೂಹದಲ್ಲಿ ತಪೋವನ ಎಂಬ ಹೆಸರಿನ ಸ್ಥಳವಿದೆ. ಇಲ್ಲಿ ಕಂಡುಬರುವ ಒಂದು ಅದ್ಭುತವಾದ ಹಿಮ ಪರ್ವತವೇ ಶಿವಲಿಂಗವಾಗಿದೆ. ಇಲ್ಲಿಗೆ ತಲುಪುವ ಈ ಚಾರಣವೂ ಸಹ ಸಾಕಷ್ಟು ಸವಾಲು ಅನ್ನು ಹೊಂದಿದೆ.

Prathyush Thota

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X