Search
  • Follow NativePlanet
Share
» »ಪಂಚರಂಗ ಕ್ಷೇತ್ರಗಳ ದರ್ಶನ!

ಪಂಚರಂಗ ಕ್ಷೇತ್ರಗಳ ದರ್ಶನ!

ತ್ರಿರಂಗ ಕ್ಷೇತ್ರಗಳಂತೆ ಪಂಚರಂಗ ಕ್ಷೇತ್ರಗಳೂ ಸಹ ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರಗಳಾಗಿದ್ದು ರಂಗನಾಥನಿಗೆ ಮುಡಿಪಾದ ದೇವಾಲಯಗಳಿಗಾಗಿ ಹೆಸರುವಾಸಿಯಾಗಿವೆ

By Vijay

ವಿಷ್ಣುವಿನ ಇನ್ನೊಂದು ರೂಪವಾದ ರಂಗನಾಥಸ್ವಾಮಿಗೆಂದು ಮುಡಿಪಾದ ಐದು ಪವಿತ್ರ ಹಾಗೂ ಪ್ರಖ್ಯಾತ ದೇವಾಲಯ ಕ್ಷೇತ್ರಗಳಿದ್ದು ಅವುಗಳನ್ನು ಒಟ್ಟಾರೆಯಾಗಿ ಪಂಚರಂಗ ಕ್ಷೇತ್ರಗಳೆಂದು ಕರೆಯುತ್ತಾರೆ. ಅಂದರೆ ಇವು ರಂಗನಾಥನಿಗೆ ಮುಡಿಪಾದ ಐದು ಪ್ರಸಿದ್ಧ ದೇವಾಲಯಗಳಾಗಿವೆ.

ಈ ಪಂಚ ರಂಗನ ಕ್ಷೇತ್ರಗಳು ಕಾವೇರಿ ನದಿಯ ತಟದ ಮೇಲೆ ನೆಲೆಸಿರುವುದು ವಿಶೇಷ. ಯಾರು ಈ ಐದೂ ರಂಗನಾಥಸ್ವಾಮಿಯ ದರ್ಶನ ಪಡೆಯುತ್ತಾರೊ ಅವರಿಗೆ ವಿಷ್ಣುವಿನ ಕೃಪಾ ಕಟಾಕ್ಷ ದೊರೆಯುತ್ತದೆ ಎಂದು ನಂಬಲಾಗುತ್ತದೆ. ಹಾಗಾಗಿ ಪಂಚರಂಗಂ ಕ್ಷೇತ್ರಗಳು ತನ್ನದೆ ಆವಿಶೇಷತೆಯನ್ನು ಹೊಂದಿರುವ ತೀರ್ಥ ಕ್ಷೇತ್ರಗಳಾಗಿ ಹೆಸರುವಾಸಿಯಾಗಿವೆ.

ಪ್ರಸ್ತುತ ಲೇಖನದಲ್ಲಿ ಪಂಚರಂಗ ಕ್ಷೇತ್ರಗಳು ಯಾವುವು ಹಾಗೂ ಅವುಗಳು ನೆಲೆಸಿರುವುದಾದರೂ ಎಲ್ಲಿ ಎಂಬುದರ ಕುರಿತು ಸಮಗ್ರ ಮಾಹಿತಿ ತಿಳಿಯಿರಿ. ಪಂಚರಂಗಗಳಲ್ಲದೆ ತ್ರಿರಂಗ ಕ್ಷೇತ್ರಗಳೂ ಸಹ ಪ್ರಚಲಿತದಲ್ಲಿದ್ದು ಅವು ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಳನ್ನು ಸೂಚಿಸುತ್ತವೆ.

ಇವೆ ರಂಗನ ತ್ರಿರಂಗ ಕ್ಷೇತ್ರಗಳು!

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ

ಪಂಚರಂಗ ಕ್ಷೇತ್ರಗಳಲ್ಲೂ ಸಹ ಆದಿ ರಂಗವಾಗಿ ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ದಡದಲ್ಲಿ ನೆಲೆಸಿರುವ ರಂಗನಾಥಸ್ವಾಮಿಯು ಪರಿಗಣಿಸಲ್ಪಡುತ್ತಾನೆ. ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Redtigerxyz

ಸಾಕಷ್ಟು ಬಸ್ಸುಗಳು

ಸಾಕಷ್ಟು ಬಸ್ಸುಗಳು

ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ. ದರ್ಶನದ ವೇಳೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 01.00 ಘಂಟೆ ಹಾಗೂ ಸಂಜೆ 4.00 ಘಂಟೆಯಿಂದ ರಾತ್ರಿ 8.00 ಘಂಟೆಯವರೆಗೆ.

ಚಿತ್ರಕೃಪೆ: rajesh_dangi

ಶ್ರೀರಂಗಂ

ಶ್ರೀರಂಗಂ

ತ್ರಿರಂಗ ಕ್ಷೇತ್ರಗಳಲ್ಲಿ ಮೊದಲ ಎರಡು ದೇವಾಲಯಗಳು ಕರ್ನಾಟಕದಲ್ಲಿದ್ದರೆ ಕೊನೆಯ ದೇವಸ್ಥಾನವು ಶ್ರೀರಂಗಂನಲ್ಲಿದ್ದು, ವಿಷ್ಣುವಿನ ಪರಿಪಾಲಕರಾದ ಶ್ರೀವೈಷ್ಣವರ ಪರಮ ಪಾವನ ದೇವಾಲಯವಾಗಿದೆ. ಅಲ್ಲದೆ ಇಂದಿಗೂ ಕಾರ್ಯಚಟುವಟಿಕೆಯಲ್ಲಿರುವ ಭಾರತದ ಅತಿ ದೊಡ್ಡ ದೇವಾಲಯವಾಗಿ ಶ್ರೀರಂಗಂನ ದೇವಸ್ಥಾನ ಪ್ರಸಿದ್ಧವಾಗಿದೆ. ಪಂಚರಂಗ ಕ್ಷೇತ್ರಗಳ ಪೈಕಿ ಎರಡನೇಯ ದೇವಾಲಯವಾಗಿ ಇದು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Ryan

ಪ್ರಮುಖ ಆಕರ್ಷಣೆ

ಪ್ರಮುಖ ಆಕರ್ಷಣೆ

ಶ್ರೀರಂಗನಾಥಸ್ವಾಮಿ ಶ್ರೀರಂಗಂ: ಮೂಲತಃ ಶ್ರೀರಂಗಂ ಒಂದು ನಡುಗಡ್ಡೆ ಪ್ರದೇಶವಾಗಿದ್ದು ತಿರುಚ್ಚಿ ನಗರದ ಪ್ರಮುಖ ಭಾಗವಾಗಿ ನಿರ್ವಹಿಸಲ್ಪಡುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆ ಅತಿ ವಿಶಾಲವಾದ ಶ್ರೀರಂಗನಾಥಸ್ವಾಮಿಯ ದೇವಾಲಯ ಸಂಕೀರ್ಣ.

ಚಿತ್ರಕೃಪೆ: Jean-Pierre Dalbéra

ಇನ್ನೊಂದು ಕಡೆ ಕೊಳ್ಳಿಡಂ

ಇನ್ನೊಂದು ಕಡೆ ಕೊಳ್ಳಿಡಂ

ಶ್ರೀರಂಗಂ ಒಂದು ಕಡೆಯಿಂದ ಕಾವೇರಿ ನದಿಯಿಂದ ಸುತ್ತುವರೆದಿದ್ದರೆ ಇನ್ನೊಂದು ಕಡೆಯಿಂದ ಕಾವೇರಿಯ ಉಪನದಿಯಾದ ಕೊಳ್ಳಿಡಂನಿಂದ ಸುತ್ತುವರೆದಿದೆ. ಕಾವೇರಿಗೆ ಅಡ್ಡಲಾಗಿ ಕಟ್ಟಲಾದ ವಿಶಾಲವಾದ ಸೇತುವೆಯಿಂದ ಶ್ರೀರಂಗಂ ಅನ್ನು ತಿರುಚ್ಚಿ ನಗರದಿಂದ ಪ್ರವೇಶಿಸಬಹುದು.

ಚಿತ್ರಕೃಪೆ: Ramanathan Kathiresan

ಅತಿ ದೊಡ್ಡ ದೇವಾಲಯ

ಅತಿ ದೊಡ್ಡ ದೇವಾಲಯ

ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯವು ಹಿಂದುಗಳಲ್ಲಿ ಅದರಲ್ಲೂ ವಿಶೇಷವಾಗಿ ಶ್ರೀವೈಷ್ಣವರಿಗೆ ಪವಿತ್ರ ಯಾತ್ರಾ ಕೇಂದ್ರವಾಗಿದ್ದು ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಸಹ ಸೆಳೆಯುತ್ತದೆ. ದೇವಸ್ಥಾನ ಮಂಡಳಿಯ ವೆಬ್ ತಾಣದ ಪ್ರಕಾರ, ಇದನ್ನು ಪ್ರಸ್ತುತ ದೇಶದ ಕಾರ್ಯಚಟುವಟಿಕೆಯಲ್ಲಿರುವ ಅತಿ ದೊಡ್ಡ ಹಿಂದು ದೇವಾಲಯವೆಂದು ಪರಿಗಣಿಸಬಹುದಾಗಿದೆ.

ಚಿತ್ರಕೃಪೆ: sowrirajan s

ಬಲು ಮಹತ್ವ

ಬಲು ಮಹತ್ವ

ಸ್ಥಳ ಪುರಾಣದಂತೆ, ಕೆಲವೆ ಕೆಲವು ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳ ಪೈಕಿ ಶ್ರೀರಂಗಂ ಸಹ ಒಂದಾಗಿದೆ. ಆದ್ದರಿಂದ ಧಾರ್ಮಿಕವಾಗಿ ಬಹು ಮಹತ್ವವುಳ್ಳ ಯಾತ್ರಾ ಕೇಂದ್ರವಾಗಿ ಶ್ರೀರಂಗಂ ಹೆಸರುವಾಸಿಯಾಗಿದೆ. ಇನ್ನೂ ಈ ದೇವಸ್ಥಾನದ ಗಾತ್ರಕ್ಕೆ ಬರುವುದಾದರೆ ಇದರ ಸಂಕೀರ್ಣ ವಿಶಾಲವಾಗಿದ್ದು 156 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿದೆ. ಈ ಸಂಕೀರ್ಣದ ಸುತ್ತಳತೆಯೆ ಸುಮಾರು ನಾಲ್ಕು ಕಿ.ಮೀ ಗಳಷ್ಟೆಂದರೆ ನೀವೇ ಊಹಿಸಿಕೊಳ್ಳಬಹುದು.

ಚಿತ್ರಕೃಪೆ: BOMBMAN

ಕೊವಿಲಾದಿ

ಕೊವಿಲಾದಿ

ಪಂಚರಂಗ ಕ್ಷೇತ್ರಗಳ ಪೈಕಿ ಮೂರನೇಯ ಕ್ಷೇತ್ರವಾಗಿ ತಿರುಚಿರಾಪಳ್ಳಿಯ ಕೊವಿಲಾದಿ ಗ್ರಾಮದ ಅಪ್ಪಕ್ಕುಡತಾನ್ (ಅಪ್ಪಾಳ ರಂಗನಾಥರ್) ಪೆರುಮಾಳ ದೇವಾಲಯ ಅಥವಾ ತಿರುಪ್ಪೇರ ನಗರ ದೇವಾಲಯ ಸ್ಥಾನ ಪಡೆದಿದೆ. ದಿವ್ಯದೇಸಂ ಕ್ಷೇತ್ರಗಳ ಪೈಕಿ ಒಂದಾದ ಈ ವಿಷ್ಣುವಿನ ದೇವಾಲಯವು ಕೊಳ್ಳಿಡಂ ನದಿಯ ತಟದ ಮೇಲೆ ನೆಲೆಸಿದೆ.

ಚಿತ್ರಕೃಪೆ: Ssriram mt

ಇಂದ್ರನ ಅಹಂ

ಇಂದ್ರನ ಅಹಂ

ಈ ಒಂದು ಸ್ಥಳದಲ್ಲೆ ರಂಗನಾಥನು ಅವನ ಪರಮ ಭಕ್ತನಾಗಿದ್ದ ಉಭಮನ್ಯು ರಾಜನನ್ನು ದುರ್ವಾಸರ ಶಾಪದಿಂದ ಮುಕ್ತಿಗೊಳಿಸಿದ್ದನು ಹಾಗೂ ಈ ಒಂದು ಸ್ಥಳದಲ್ಲೆ ರಂಗನಾಥನು ಇಂದ್ರನ ಅಹಂಕಾರವನ್ನು ಮುರಿದಿದ್ದನು ಎನ್ನಲಾಗುತ್ತದೆ.

ಚಿತ್ರಕೃಪೆ: Ssriram mt

ಕುಂಭಕೋಣಂ

ಕುಂಭಕೋಣಂ

ಇದು ಕುಂಭಕೋಣಂನಲ್ಲಿಯೆ ಅತಿ ದೊಡ್ಡದಾದ ವಿಷ್ಣುವಿನ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ವಿಷ್ಣುವಿನನ್ನು ಇಲ್ಲಿ ವಿಶೇಷವಾದ ಅವತಾರದ ಹೆಸರಿನಲ್ಲಿ ಪೂಜಿಸಲಾಗುತ್ತದೆ. ತಮಿಳಿನ ಪ್ರಖ್ಯಾತ ಅಳ್ವಾರ್ ಸಂತರು ಪಟ್ಟಿ ಮಾಡಿರುವ ದಿವ್ಯ ದೇಸಂನ 108 ವಿಷ್ಣು ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಾಲಯವೆ ಸಾರಂಗಪಾಣಿ ದೇವಾಲಯ.

ಚಿತ್ರಕೃಪೆ: Adam63

ಅತಿ ದೊಡ್ಡ ದೇಗುಲ

ಅತಿ ದೊಡ್ಡ ದೇಗುಲ

ಕುಂಭಕೋಣಂ ಪಟ್ಟಣದಲ್ಲೆ ವಿಷ್ಣುವಿನ ಅತಿ ದೊಡ್ಡದಾದ ಹಾಗೂ ಎತ್ತರದ ಗೋಪುರವುಳ್ಳ ಅದ್ಭುತ ದೇವಾಲಯ ಇದಾಗಿದ್ದು ಸಾಕಷ್ಟು ಭಕ್ತಾದಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ಚಿತ್ರಕೃಪೆ: பா.ஜம்புலிங்கம்

173 ಅಡಿಗಳಷ್ಟು!

173 ಅಡಿಗಳಷ್ಟು!

ಈ ದೇವಾಲಯದ ರಾಜಗೋಪುರವು 173 ಅಡಿಗಳಷ್ಟು ಎತ್ತರವನ್ನು ಹೊಂದಿದ್ದು ಇದರ ಪಶ್ಚಿಮದ ಪ್ರವೇಶ ದ್ವಾರಕ್ಕೆ ಪೊಟ್ರಮರೈ ಎಂಬ ಬಲು ಪವಿತ್ರವಾದ ವಿಶಾಲವಾದ ಕಲ್ಯಾಣಿಯಿದೆ. ಸಾಕಷ್ಟು ಪುರಾತನವಾದ ದೇವಾಲಯ ಇದಾಗಿದ್ದು ಮಧ್ಯಯುಗದ ಚೋಳರು, ವಿಜಯನಗರ ಅರಸರು ಹಾಗೂ ಮದುರೈ ನಾಯಕರಿಂದ ಕಾಲಕ್ಕೆ ತಕ್ಕಂತೆ ನಿರಂತರವಾಗಿ ನವೀಕರಣ ಹೊಂದುತ್ತ ಬಂದಿದೆ.

ಚಿತ್ರಕೃಪೆ: Ssriram mt

ಆಕರ್ಷಕ

ಆಕರ್ಷಕ

ಪಂಚರಂಗ ಕ್ಷೇತ್ರಗಳ ಪೈಕಿ ಕೂನೆಯದಾಗಿ ಪರಿಗಣಿಸಲ್ಪಡುವ ರಂಗನಾಥನ ದೇವಾಲಯವೆಂದರೆ ಪರಿಮಳ ರಂಗನಾಥಸ್ವಾಮಿ ದೇವಾಲಯ. ತಮಿಳುನಾಡು ರಾಜ್ಯದ ಮೈಲಾಡುತುರೈನಲ್ಲಿರುವ ತಿರುವಿಲಂದೂರು ಎಂಬ ಪಟ್ಟಣದಲ್ಲಿ ವಿಷ್ಣುವಿನ ಈ ದೇವಾಲಯ ಸ್ಥಿತವಿದೆ.

ಚಿತ್ರಕೃಪೆ: Krishna Kumar Subramanian

ಶಾಪಮುಕ್ತನಾದ ಚಂದ್ರ

ಶಾಪಮುಕ್ತನಾದ ಚಂದ್ರ

ಇಂದು ಎಂದರೆ ತಮಿಳಿನಲ್ಲಿ ಚಂದ್ರ ಎಂದಾಗುತ್ತದೆ. ಪ್ರದೇಶದ ಹೆಸರಾದ ತಿರುವಿಂದಲೂರು ಚಂದ್ರನಿಂದಾಗಿಯೆ ಬಂದಿದೆ ಎಂದು ಹೇಳಲಾಗಿದೆ. ದಂತಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲೆ ಚಂದ್ರ ತನಗಂಟಿದ್ದ ಶಾಪದಿಂದ ರಂಗನಾಥನನ್ನು ಪ್ರಾರ್ಥಿಸಿ ಮುಕ್ತಿ ಪಡೆದನೆಂಬ ಪ್ರತೀತಿಯಿದೆ.

ಚಿತ್ರಕೃಪೆ: Ssriram mt

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X