Search
  • Follow NativePlanet
Share
» »ಸರೋವರ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?

ಸರೋವರ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?

By Manjula Balaraj Tantry

ಭಾರತದಲ್ಲಿನ ದೇವಾಲಯಗಳ ಸೌಂದರ್ಯವು ಅವರ ಪ್ರಾರಂಭದಿಂದಲೂ ಇದ್ದರೂ ಕೂಡ ನಾವು ಇವುಗಳ ಪರಿಸರ ಮತ್ತು ಅವುಗಳ ಸೌಂದರ್ಯತೆ ಮತ್ತು ಭವ್ಯತೆಗಳು ದೇವಾಲಯಗಳ ಅಸ್ತಿತ್ವದಲ್ಲಿರುವ ಮೋಡಿಯನ್ನು ಹೆಚ್ಚಿಸುವಲ್ಲಿ ಸಹಾಯಮಾಡಿವೆ ಎಂಬ ಮಾತನ್ನು ನಾವು ಅಲ್ಲಗಳೆಯುವಂತಿಲ್ಲ. ದೇವಾಲಯಗಳ ಒಟ್ಟಾರೆ ಸೌಂದರ್ಯತೆಯ ಬದಲಾವಣೆಗೆ ಈ ಪರಿಸರವು ಮುಖ್ಯ ಕಾರಣವಾಗಿವೆ. ಆದುದರಿಂದ ಭಾರತದ ಈ ಸರೋವರ ದೇವಾಲಯಗಳ ಬಗ್ಗೆ ತಿಳಿಯೋಣ ಮತ್ತು ಅವುಗಳ ಬೆರಗುಗೊಳಿಸುವ ಸೌಂದರ್ಯತೆಯನ್ನು ಶೋಧಿಸೋಣ

ಅನಂತಪುರ ಸರೋವರ ದೇವಾಲಯ

ಅನಂತಪುರ ಸರೋವರ ದೇವಾಲಯ

PC- Kateelkshetra

ಕಾಸರಗೋಡು ಜಿಲ್ಲೆಯಲ್ಲಿರುವ ಅನಂತಪುರ ಸರೋವರ ದೇವಾಲಯವು ಸುಂದರವಾದ ಕೇರಳ ರಾಜ್ಯದ ಏಕೈಕ ಸರೋವರ ದೇವಾಲಯವಾಗಿದೆ. ಈ ದೇವಾಲಯವು ವಿಷ್ಣು ದೇವರಿಗೆ ಸಮರ್ಪಿತವಾಗಿದ್ದು ಇಲ್ಲಿ ವಿಷ್ಣು ದೇವರು ತಮ್ಮ ಮೂಲ ವಾಸವನ್ನು ಭೂಮಿಯ ಮೇಲೆ ಈ ಸ್ಥಳದಲ್ಲಿಯೇ ಮಾಡಿದ್ದರು ಎಂದು ನಂಬಲಾಗುತ್ತದೆ ಆದುದರಿಂದ ಇದು ಕೇರಳದ ವೈಷ್ಣವರ ಒಂದು ಪ್ರಮುಖ ಯಾತ್ರಾ ಸ್ಥಳವೆನಿಸಿದೆ. ಸರೋವರದ ಪರಿಸರದಲ್ಲಿರುವ ಒಂದು ಸಣ್ಣ ಗುಹೆಗೂ ನೀವು ಭೇಟಿ ನೀಡಬಹುದಾಗಿದೆ. ಆದುದರಿಂದ ಕಾಸರಗೋಡಿನಲ್ಲಿ ಅಥವಾ ಅದರ ಸುತ್ತ ಮುತ್ತಲಲ್ಲಿ ನೀವು ಇದ್ದಲ್ಲಿ ಈ ಭವ್ಯವಾದ ದೇವಾಲಯಕ್ಕೆ ಭೇಟಿ ಕೊಡುವುದನ್ನು ಮರೆಯದಿರಿ.

ಪ್ರಶಾರ್ ಮುನಿ ದೇವಾಲಯ

ಪ್ರಶಾರ್ ಮುನಿ ದೇವಾಲಯ

PC- Ritpr9

ಅಪ್ರಜ್ಞಾಪೂರ್ವಕವಾಗಿ, ಹಿಮಾಚಲ ಪ್ರದೇಶದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದೆನಿಸಿರುವ ಪ್ರಶಾರ ಮುನಿ ದೇವಾಲಯವು ಪ್ರಶಾರ್ ಸರೋವರದ ಸುತ್ತಲೂ ನೆಲೆಸಿರುವ ಇದು ಪರ್ವತ ಶ್ರೇಣಿಗಳಲ್ಲಿ ನಿರ್ಮಿಸಲ್ಪಟ್ಟಿದೆ ಮತ್ತು ಹಚ್ಚ ಹಸಿರು ಬೆಟ್ಟಗಳು ಮತ್ತು ಹಿಮ ಹೊದಿಕೆಯ ಪರ್ವತಗಳಿಂದ ಆವರಿಸಲ್ಪಟ್ಟಿದೆ. ಇದು 13 ನೇ ಶತಮಾನದ ಪಗೋಡಾ ಮಾದರಿಯ ದೇವಾಲಯವಾಗಿದ್ದು ಪ್ರಶಾರ್ ಮುನಿಗೆ ಸಮರ್ಪಿತವಾಗಿದೆ. ಈ ಮುನಿಯು ಈ ಸರೋವರದ ಪಕ್ಕದಲ್ಲಿ ಧ್ಯಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಅಲ್ಲದೆ ಅವರ ಅನುಯಾಯಿಗಳಿಗೆ ಈ ಸರೋವರದ ಪ್ರಶಾಂತವಾದ ನೀರು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಕಾಡಿನ ಒಂದೇ ಒಂದು ಮರವನ್ನು ಉಪಯೋಗಿಸಿ ಒಂದು ಮಗುವಿನಿಂದ ಈ ದೇವಾಲಯವು ನಿರ್ಮಿತವಾಯಿತು ಎಂದು ನಂಬಲಾಗುತ್ತದೆ. ದಂತಕತೆಗಳ ಪ್ರಕಾರ ಮಹಾಭಾರತ ಯುದ್ದದ ಬಳಿಕ ಪಾಂಡವರು ವಿಶ್ರಾಂತಿಗಾಗಿ ಈ ಸ್ಥಳಕ್ಕೆ ಬಂದ ಪಾಂಡವರು ಈ ಸರೋವರವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ಗಡಿ ಸಾಗರ್ ದೇವಾಲಯ

ಗಡಿ ಸಾಗರ್ ದೇವಾಲಯ

PC- rajkumar1220

ನೀವು ಜೈಸಲ್ಮೇರ್‍ ನಗರದಲ್ಲಿ ಅಥವಾ ಅಕ್ಕ ಪಕ್ಕದಲ್ಲಿ ಇದ್ದಲ್ಲಿ ನೀವು ಗಡಿ ಸಾಗರ್ ದೇವಾಲಯಕ್ಕೆ ಭೇಟಿ ಕೊಟ್ಟು ಅಲ್ಲಿಯ ಸೌಂದರ್ಯಗೆಯನ್ನು ಅನ್ವೇಷಿಸಲೇಬೇಕು. ಈ ದೇವಾಲಯವು ಗಡಿಸಾಗರ ಸರೋವರದಿಂದ ಆವರಿಸಲ್ಪಟ್ಟಿದೆ. 15ನೇ ಶತಮಾನದಲ್ಲಿ ನೀರಿನ ಸಂರಕ್ಷಣೆಗಾಗಿ ಹತ್ತಿರದ ನಗರಗಳು ಮತ್ತು ಹಳ್ಳಿಗಳ ನೀರಿನ ಅಗತ್ಯಗಳನ್ನು ಪೂರೈಸಲು ಈ ಸರೋವರವನ್ನು ನಿರ್ಮಿಸಲಾಯಿತು. ಇಂದು, ಇದು ಒಂದು ಪ್ರವಾಸೀ ತಾಣವಾಗಿ ಮತ್ತು ವಾರಾಂತ್ಯ ರಜಾದಿನಗಳನ್ನು ಕಳೆಯುವ ತಾಣವಾಗಿದೆ. ಅಲ್ಲದೆ ಇಲ್ಲಿ ಪಕ್ಷಿ ವೀಕ್ಷಣೆಗಾರರು ಇಲ್ಲಿ ಅನೇಕ ಅಳಿವಂಚಿನಲ್ಲಿರುವ ಪಕ್ಷಿಗಳನ್ನು ಈ ಸರೋವರದಲ್ಲಿ ಮತ್ತು ಇದರ ಸುತ್ತ ಮುತ್ತ ಕಾಣಬಹುದಾಗಿದೆ. ರಾಜಸ್ಥಾನದ ಒಂದು ವಿಸ್ಮಯವೆನಿಸಿರುವ ಗಡಿ ಸಾಗರ್ ದೇವಾಲಯವು ಸುಂದರವಾದ ವಾಸ್ತುಶಿಲ್ಪ ಗಳನ್ನು ಅದರ ಗೋಪುರ ಮತ್ತು ಕಮಾನುಗಳಲ್ಲಿ ಹೊಂದಿದೆ.

ಜಗ್ ಮಂದಿರ್

ಜಗ್ ಮಂದಿರ್

PC- Antoine Taveneaux

ಸರೋವರಗಳ ನಗರವೆನಿಸಿರುವ ಉದಯ್ ಪುರದಲ್ಲಿ ನೆಲೆಸಿರುವ ಇದು ಇನ್ನೊಂದು ಮೋಡಿ ಮಾಡುವ ಸರೋವರದ ಮಧ್ಯೆ ಇರುವ ಸುಂದರವಾದ ದೇವಾಲಯವೆನಿಸಿದೆ. ಜಗ್ ಮಂದಿರ್ ಅನ್ನು 17 ನೇ ಶತಮಾನದಲ್ಲಿ ಉದಯಪುರದ ರಾಜರು ನಿರ್ಮಿಸಿದರು. ಈ ದೇವಾಲಯದ ನಿರ್ಮಾಣದ ಕೆಲಸವನ್ನು ಮಹಾರಾಜ ಜಗತ್ ಸಿಂಗರು ಪೂರ್ಣ ಗೊಳಿಸಿದುದಕ್ಕಾಗಿ ಈ ದೇವಾಲಯಕ್ಕೆ ಅವರ ಹೆಸರಿಡಲಾಗಿದೆ. ಜಗ್ ಮಂದಿರ್ ಭಾರತದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದೆನಿಸಿದ್ದು ಇದು ಪಿಚೋಲಾ ಸರೋವರದ ಮಧ್ಯೆ ಇರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಸಿದೆ. ಇದೊಂದು ಅರಮನೆಯಾಗಿದ್ದರೂ ಕೂಡಾ, ಇದು ಉದಯ್ ಪುರದ ರಾಜಮನೆತದವರ ನಿವಾಸವಾಗಿದೆ ಮತ್ತು ಈ ಅರಮನೆಯಲ್ಲಿ ದೇವಾಲಯವಿದೆ. ಪಿಚೋಲಾ ಸರೋವರದ ಸೌಂದರ್ಯತೆಯ ಸಿಂಚನದಿಂದಾಗಿ ಈ ದೇವಾಲಯದ ಸೌಂದರ್ಯತೆಯು ವೃದ್ಧಿಸಿದೆ.

ಚಂದ್ರಮೌಳೀಶ್ವರ ದೇವಾಲಯ

ಚಂದ್ರಮೌಳೀಶ್ವರ ದೇವಾಲಯ

PC- Manjunath Doddamani Gajendragad

ವಾಸ್ತು ಶಿಲ್ಪದ ಅದ್ಬುತವಾಗಿರುವ ಚಂದ್ರಮೌಳೀಶ್ವರ ದೇವಾಲಯದ ಸಂಕೀರ್ಣದಲ್ಲಿ ಸಿಗಲ್ಪಟ್ಟ ಶಾಸನದ ಪ್ರಕಾರ ಇದನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಉನ್ಕಾಲ್ ಸರೋವರದ ಪಕ್ಕದಲ್ಲಿಯೇ ನಿರ್ಮಿತವಾಗಿದೆ ಆದುದರಿಂದ ಇದೊಂದು ಮುಖ್ಯವಾದ ಪ್ರವಾಸಿ ಕೇಂದ್ರವೆನಿಸಿದೆ. ದಿನವಿಡೀ ಬೀಸುವ ತಂಪಾದ ಗಾಳಿಯುಕ್ತ ವಾತಾವರಣ ಈ ದೇವಾಲಯದ ಜೊತೆಗೆ ಸರೋವರವೂ ಕೂಡ ಒಂದು ಭೇಟಿ ಕೊಡಲೇ ಬೇಕಾದ ತಾಣವೆನಿಸಿದೆ. ಅದರ ಪ್ರಶಾಂತವಾದ ಸುತ್ತಮುತ್ತಲಿನ ವಾತಾವರಣದ ಕಾರಣದಿಂದಾಗಿ ಪಿಕ್ನಿಕ್ ಪ್ರಿಯರ ಒಂದು ಪ್ರಸಿದ್ದ ತಾಣವೆನಿಸಿದೆ. ಇಲ್ಲಿ ಜನರು ತಮ್ಮ ಅಮೂಲ್ಯ ಸಮಯವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯಲು ಸೂಕ್ತವಾಗಿದೆ.

ಕರ್ನಾಟಕ ರಾಜ್ಯದ ಹುಬ್ಬಳ್ಳಿಯಲ್ಲಿರುವ ಚಂದ್ರಮೌಳೀಶ್ವರ ದೇವಾಲಯವು ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ಅತ್ಯಂತ ಸುಂದರವಾದ ಕೆಲಸಗಳಲ್ಲಿ ಒಂದಾಗಿದೆ. ಕೆತ್ತನೆಗಳು ಮತ್ತು ಚಿತ್ರಕಲೆಗಳು ಎಲ್ಲಾ ಕಂಬದ ಮೇಲೆ ಮತ್ತು ಗೋಡೆಗಳಲ್ಲಿ ಅಲಂಕರಿಸಲ್ಪಟ್ಟಿದೆ. ನೀವು ಸೂಕ್ತವಾದ ಪ್ರಕೃತಿ ಮತ್ತು ಇತಿಹಾಸಗಳಿರುವ ಸ್ಥಳಗಳನ್ನು ಹುಡುಕುತ್ತಿದ್ದಲ್ಲಿ , ಈ ಐತಿಹಾಸಿಕ ದೇವಾಲಯಗಳು ನಿಮ್ಮ ಮುಂದಿನ ಪ್ರವಾಸಿ ತಾಣಗಳಾಗಿರಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X