Search
  • Follow NativePlanet
Share
» »ಪ್ರಸಿದ್ಧ ಪ್ರವಾಸಿ ಸ್ಥಳಗಳಾದರೂ ಕೊಳಚೆಗೆ ಹೆಸರುವಾಸಿ

ಪ್ರಸಿದ್ಧ ಪ್ರವಾಸಿ ಸ್ಥಳಗಳಾದರೂ ಕೊಳಚೆಗೆ ಹೆಸರುವಾಸಿ

By Vijay

ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿ ಸ್ಥಳಗಳಿವೆ ಹಾಗೂ ಅವುಗಳ ಕುರಿತು ಸಾಕಷ್ಟು ಕೇಳಿರುವ ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆಯಿಂದ ಭೇಟಿ ನೀಡುತ್ತಾರೆ. ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯುಳ್ಳ ಕೆಲ ಅದ್ಭುತ ಪ್ರವಾಸಿ ಆಕರ್ಷಣೆಗಳು ಭಾರತದಲ್ಲಿರುವುದು ನಮಗೆಲ್ಲ ಹೆಮ್ಮೆಯ ವಿಷಯವೆ ಅಲ್ಲವೆ?

ಉಚಿತ ಕೂಪನ್ನುಗಳು : ಹೋಟೆಲ್ ಮತ್ತು ಪ್ರವಾಸದ ಬುಕ್ಕಿಂಗ್ ಮೇಲೆ 70% ರಷ್ಟು ಕಡಿತ

ಆದರೆ, ಇಂತಹ ಅದ್ಭುತ ಪ್ರವಾಸಿ ಆಕರ್ಷಣೆಗಳನ್ನು ಇಂದು ನಾವು ನಮ್ಮ ಜಾಣ ಮೌನದಿಂದ, ನಿರ್ಲಕ್ಷತನದಿಂದ ಅಧೋ ಗತಿಗೆ ದುಡುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯೆ ಹೌದು. ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಏರಿದಾಗ ಸ್ವಾಭಾವಿಕವಾಗಿ ತ್ಯಾಜ್ಯ ಉತ್ಪಾದನೆಯೂ ಏರತೊಡಗುತ್ತದೆ. ಜೀವಿಗಳಲ್ಲೆ ಅತಿ ಬುದ್ಧಿವಂತನಾದ ಮನುಷ್ಯನು ತಾನು ಯಾವ ರೀತಿ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ತಿಳಿಯದೆ ಇರಲಾರ.

ಇಷ್ಟೆಲ್ಲ ತಿಳಿದಿದ್ದರೂ ಇಂದು ನಾವು ದೇಶದ ತುಂಬೆಲ್ಲ ಕೆಲ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು ತ್ಯಾಜ್ಯ, ಕೊಳಚೆಗಳ ಆಗರವಾಗಿ ಮಾರ್ಪಾಡಾಗುತ್ತಿರುವುದನ್ನು ಗಮನಿಸಿದಾಗ ಪ್ರಜ್ಞಾವಂತ ಪ್ರಜೆಗೆ ಸಂಕಟವಾಗದೆ ಇರಲಾರದು. ಕೆಲ ಸ್ಥಳಗಳು ಆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಬೇಜವಾಬ್ದಾರಿತನದಿಂದ ಕಲುಷಿತಗೊಳ್ಳುತ್ತಿದ್ದರೆ ಇನ್ನೂ ಕೆಲ ಪ್ರವಾಸಿ ಸ್ಥಳಗಳು ಅವುಗಳಿಗೆ ಭೇಟಿ ನೀಡುವ ಪ್ರವಾಸಿಗರ ಅಶಿಸ್ತಿನಿಂದ ಕಲುಷಿತಗೊಳ್ಳುತ್ತಿವೆ.

ವಿಶೇಷ ಲೇಖನ : ದೇಶದ ದೊಡ್ಡ ಕೊಳೆಗೇರಿ ಪ್ರದೇಶ

ಪ್ರಸ್ತುತ ಲೇಖನವು ಕಲ್ಮಶಗೊಳ್ಳುತ್ತಿರುವ ಹಾಗೂ ಈಗಾಗಲೆ ಸಾಕಷ್ಟು ಕಲ್ಮಶಗೊಂಡಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳು ಹಾಗೂ ಆಕರ್ಷಣೆಗಳ ಪೈಕಿ ಕೆಲವು ಆಯ್ದ ಸ್ಥಳಗಳ ಕುರಿತು ತಿಳಿಸುತ್ತದೆ. ಈ ಲೇಖನದ ಮೂಲ ಉದ್ದೇಶ ಯಾವ ಪ್ರವಾಸಿಗರೆ ಆಗಲಿ ಇಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ಅವುಗಳನ್ನು ಗೌರವಾದರದಿಂದ ಕಾಣಬೇಕು ಎಂಬುದಾಗಿದೆ. ನಿಜಾರ್ಥದಲ್ಲಿ ಇವು ನಮ್ಮ ಸಂಪತ್ತೆ ಆಗಿವೆ. ಇವುಗಳನ್ನು ಅಳಿಯದ ಹಾಗೆ ಶುಚಿತ್ವ ಕಾಪಾಡಿಕೊಂಡು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿರುವುದನ್ನರಿತು ನಡೆದಾಗ ಮಾತ್ರವೆ ಇದು ಸಾಧ್ಯ.

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಮರೀನಾ ಕಡಲ ತೀರ : ದಕ್ಷಿಣ ಭಾರತದ ಪ್ರಮುಖ ಮಹಾ ನಗರಗಳಲ್ಲಿ ಒಂದಾಗಿದೆ ಚೆನ್ನೈ ನಗರ. ದಿನವಿಡಿ ಸಾಕಷ್ಟು ಚಟುವಟಿಕೆಯುಕ್ತ ಚೆನ್ನೈ ನಗರವು ಬಂಗಾಳ ಕೊಲ್ಲಿ ಸಮುದ್ರಕ್ಕೆ ಅಭಿಮುಖವಾಗಿದೆ. ಇನ್ನೂ ಸಮುದ್ರ ಅಂದ ತಕ್ಷಣ ತೀರ ಇರಲೇಬೇಕಲ್ಲವೆ? ಹೌದು ಚೆನ್ನೈ ನಗರದ ಮರೀನಾ ಕಡಲ ತೀರ ಬಲು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಯಾವ ಪ್ರವಾಸಿಗನೆ ಆಗಲಿ ಚೆನ್ನೈಗೆ ಭೇಟಿ ನೀಡಿದರೆ ಮರೀನಾ ಕಡಲ ತೀರಕ್ಕೆ ಭೇಟಿ ನೀಡದ ಹೊರಟು ಮರಳಲಾರ. ಅಷ್ಟೊಂದು ಪ್ರಸಿದ್ಧ ಈ ಕಡಲ ತೀರ.

ಚಿತ್ರಕೃಪೆ: Ashwin Kumar

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಆದರೆ ಸಮಯ ಕಳೆದಂತೆ ಈ ಕಡಲ ತೀರವು ಸಾಕಷ್ಟು ಕಲುಶಿತಗೊಂಡಿರುವುದು ಕಳವಳಕಾರಿ ವಿಷಯ. ಅತಿಯಾದ ಜನಜಂಗುಳಿ, ಎಲ್ಲೆಂದರಲ್ಲಿ ಬಿಸಾಡಿದ ವಸ್ತುಗಳು, ಪ್ಲಾಅಸ್ಟಿಕ್ ಬ್ಯಾಗುಗಳು, ಬಲಿಕೊಟ್ಟ ಅಥವಾ ಸತ್ತ ಪ್ರಾಣಿ ಪಕ್ಷಿಗಳ ಅವಶೇಷಗಳು ಈ ಕಡಲ ತೀರದ ಅಂದವನ್ನು ಕುಗ್ಗಿಸಿವೆ.

ಚಿತ್ರಕೃಪೆ: Simply CVR

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಜುಹು ಕಡಲ ತೀರ : ಭಾರತದ ಆರ್ಥಿಕ ರಾಜಧಾನಿ ಎಂದೆ ಬಿಂಬಿತವಾದ ಮುಂಬೈ ನಗರದಲ್ಲಿ ಪ್ರವಾಸಿ ಆಕರ್ಷಣೆಗಳಿಗೇನು ಕಮ್ಮಿ ಇಲ್ಲ. ಒಂದಕ್ಕಿಂತ ಒಂದು ಮಿಗಿಲಂತೆ ಅದ್ಭುತವಾದ ಸ್ಥಳಗಳನ್ನು ಹೊತ್ತಿರುವ ಮುಂಬೈ ನಗರವು ತನ್ನ ರಾತ್ರಿ ಬದುಕು ಹಾಗೂ ರಭಸದ ಜೀವನ ಶೈಲಿಗೆ ಹೆಸರುವಾಸಿ. ಮುಂಬೈನಲ್ಲಿರುವ ಚೌಪಾಟಿ, ಜುಹು ಬೀಚುಗಳಂತೂ ಮುಂಬೈಗೆ ಭೇಟಿ ನೀಡಿದಾಗ ತಪ್ಪಿಸಿಕೊಳ್ಳಲಾಗದ ಆಕರ್ಷಣೆಗಳು. ಆದರೆ ಇಂದು ಕಾಣುವ ಜುಹು ಬೀಚ್ ಇದು ಸುಂದರ ತೀರವೆ? ಎನ್ನುವಷ್ಟರ ಮಟ್ಟಿಗೆ ಕಲುಶಿತಗೊಂಡಿದೆ.

ಚಿತ್ರಕೃಪೆ: Kunal Shah

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ತೀರದಲ್ಲಿ ಕುಳಿತು ಹಾಯಾಗಿ ಸಮಯ ಕಳೆಯಲೆಂದು ಬರುವ ಜನರಿಗೆ ಇಲ್ಲಿನ ವಾಸನೆಯೆ ಎದ್ದು ಹೋಗುವಂತೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಪ್ಲಾಸ್ಟಿಕ್ ಬ್ಯಾಗುಗಳು, ಅಳಿದುಳಿದ ಕೊಳೆತ ತಿಂಡಿ ತಿನಿಸುಗಳು, ಬಿಸಾಡಿದ ಇತರೆ ವಸ್ತುಗಳು ಅಲೆಗಳು ನಿಮ್ಮನ್ನು ಸ್ವಾಗತಿಸುವುದಕ್ಕಿಂತ ಮುಂಚೆಯೆ ನಿಮ್ಮನ್ನು ಆದರದಿಂದ ಬರಮಾಡಿಕೊಳ್ಳುತ್ತವೆ.

ಚಿತ್ರಕೃಪೆ: Kunal Shah

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ. ಮಹಾ ಹಾಗೂ ಭಾರತದ ಅತಿ ಪವಿತ್ರ ನದಿಯಾದ ಗಂಗೆಯ ತಟದಲ್ಲಿ ನೆಲೆಸಿರುವ ವಾರಣಾಸಿಯು ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ಪಡೆದಿರುವ ಪ್ರಮುಖ ಧಾರ್ಮಿಕ ನಗರವಾಗಿದೆ.

ಚಿತ್ರಕೃಪೆ: Lyle Vincent

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಇಂದಿಗೂ ಸಹ ಸಾಕಷ್ಟು ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳು ಇಲ್ಲಿ ನಿತ್ಯ ಜರುಗುತ್ತಿರುತ್ತವೆ. ಪ್ರತಿಯೊಂದು ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಕಾಶಿಯ ಮಹಾರಾಜ ಕಾಶಿ ನರೇಶನ ಪೂಜೆಯು ಒಂದು ಭಾಗವಾಗಿರುವುದನ್ನು ಗಮನಿಸಬಹುದು. ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗಿರುವಂತೆ ಈ ಕ್ಷೇತ್ರವು ಎಷ್ಟೊಂದು ಪುಣ್ಯದಾಯಕವಾಗಿದೆ ಎಂದರೆ ಯಾವೋಬ್ಬ ವ್ಯಕ್ತಿಯು ಇಲ್ಲಿ ಸಾವನ್ನು ಪಡೆದರೆ ಅಥವಾ ಸತ್ತ ವ್ಯಕ್ತಿಯ ಅಂತಿಮ ಕ್ರಿಯೆಯನ್ನು ಇಲ್ಲಿ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ ಮೋಕ್ಷ ಪಡೆಯುತ್ತಾರೆ.

ಚಿತ್ರಕೃಪೆ: Arian Zwegers

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಈ ಒಂದು ನಂಬಿಕೆ ಬಲವಾಗಿ ತಳವೂರಿರುವುದರಿಂದ ಇಂದು ವಾರಣಾಸಿಯ ಕೆಲ ಘಾಟುಗಳಲ್ಲಿ ಸಾಲುಸಾಲಾಗಿ ದಹನ ಕ್ರಿಯೆ ಜರುಗುತ್ತಿರುವುದನ್ನು ಕಾಣಬಹುದು. ಅಲ್ಲದೆ ಪವಿತ್ರ ಗಂಗೆಯ ಒಡಲು ಸತ್ತ ಪಶು ಪಕ್ಷಿ ಹಗೂ ಮಾನವರ ದೇಹಗಳಿಂದಲೂ ಕೂಡಿರುವುದನ್ನು ಗಮನಿಸಭುದಾಗಿದೆ.

ಚಿತ್ರಕೃಪೆ: Arian Zwegers

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಅಲ್ಲದೆ ಧಾರ್ಮಿಕ ವಿಧಿ ವಿಧಾನಗಳ ಆಚರಣೆಯಲ್ಲಿ ಸಾಕಷ್ಟು ತ್ಯಾಜ್ಯಗಳೂ ಸಹ ಗಂಗೆಯ ಮಡಿಲಲ್ಲಿ ಸೇರಿಕೊಳ್ಳುತ್ತಿರುವುದು ನಿಜಕ್ಕೂ ಆತಂಕ ಪಡಬೇಕಾದ ವಿಷಯವಾಗಿದೆ.

ಚಿತ್ರಕೃಪೆ: Arian Zwegers

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಧಾರ್ಮಿಕ ಪ್ರಾಮುಖ್ಯತೆಯುಳ್ಳ ವಾರಣಾಸಿಗೆ ಕುತೂಹಲದಿಂದ ವಿದೇಶಿ ಪ್ರವಾಸಿಗರು ಸದಾ ಬರುತ್ತಿರುತ್ತಾರೆ. ಸಾಕಷ್ಟು ಪಾವಿತ್ರ್ಯತೆ ಹೊಂದಿರುವ ಈ ಕ್ಷೇತ್ರವೂ ನಿಜಕ್ಕೂ ಭೇಟಿ ನೀಡಲೇಬೇಕಾದ ಶ್ರೀಕ್ಷೇತ್ರ. ಆದರೆ ಮನುಷ್ಯನ ಬೇಜವಬ್ದಾರಿತನದಿಂದ ಈ ಕ್ಷೇತ್ರವು ತನ್ನ ಅಂದ ಚೆಂದವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ.

ಚಿತ್ರಕೃಪೆ: Michał Huniewicz

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಭಾರತದಲ್ಲಿನ ಹೆಚ್ಚಿನ ಮಹಾನಗರಗಳಲ್ಲಿ ಮೊಳಕೆಯೊಡೆಯುತ್ತಿರುವ ಅವಳಿ ನಗರಗಳಂತೆ, ಪಶ್ಚಿಮ ಬಂಗಾಳದಲ್ಲಿರುವ ಹೌರಾ ಕೂಡಾ ಕೋಲ್ಕತ್ತಾದ ಅವಳಿ ನಗರವಾಗಿದೆ. ಹೌರಾ ಕೊಲ್ಕತ್ತದೊಂದಿಗೆ ನಾಲ್ಕು ಸೇತುವೆಗಳಾದ - ವಿವೇಕಾನಂದ, ವಿದ್ಯಾಸಾಗರ್, ಖ್ಯಾತ ಹೌರಾ ಹಾಗೂ ನಿವೇದಿತ - ಮೂಲಕ ಸಂಪರ್ಕ ಹೊಂದಿದೆ. ಈ ಯಾವುದೇ ಸೇತುವೆ ಮೂಲಕ ವಾಯುವಿಹಾರ ನಡೆಸುವ ಅನುಭವ ಅದ್ಭುತವಾಗಿದ್ದು, ಇಲ್ಲಿಂದ ಕಾಣಸಿಗುವ ಗಂಗಾ ನದಿಯ ಹಾಗೂ ಅದರಲ್ಲಿ ತೇಲಾಡುವ ಹಡಗುಗಳು ಹಾಗೂ ಹಾಯಿದೊಣಿಗಳ ದೃಶ್ಯ ನಿಜಕ್ಕೂ ಮನಸೂರೆಗೊಳ್ಳುವಂತಹದ್ದು. ಆದರೆ ಹೌರಾ ದಿನೆ ದಿನೆ ಹೆಚ್ಚು ಹೆಚ್ಚು ಕಲುಶಿತಗೊಳ್ಳುತ್ತಿರುವುದು ವಿಷಾದಕರ ಸಂಗತಿಯಾಗಿದೆ.

ಚಿತ್ರಕೃಪೆ: Adam Jones

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಹೌರಾ ಬ್ರಿಜ್ ತನ್ನ ಮನಸೂರೆಗೊಳ್ಳುವ ಸೌಂದರ್ಯದಿಂದ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಇದು ಹೌರಾ ಹಾಗೂ ಕೋಲ್ಕತ್ತಾ ಸಂಪಕಿಸುತ್ತದೆ ಹಾಗೂ ಇದನ್ನು ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಆದರೆ ಸೇತುವೆ ತುಂಬೆಲ್ಲ ಚಿಂದಿ ಅಂಗಡಿಗಳು, ಬೀದಿ ವ್ಯಾಪಾರಿಗಳು ಸಾಕಷ್ಟಿದ್ದು ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಗೊಂಡು ನಗರದ ನಿರ್ಮಲತೆಗೆ ಧಕ್ಕೆ ಉಂಟುಮಾಡುತ್ತಿದೆ.

ಚಿತ್ರಕೃಪೆ: Adam Jones

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಜನರ ಚಟುವಟಿಕೆಗಳಿಂದ ಕಲುಶಿತಗೊಳ್ಳುತ್ತಿರುವ ಹೂಗ್ಲಿ ನದಿಯ ತೀರ.

ಚಿತ್ರಕೃಪೆ: Srijan Kundu

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಪಂಬಾ ನದಿ, ಶಬರಿಮಲೈ : ದಕ್ಷಿಣದ ಪ್ರಖ್ಯಾತ ತೀರ್ಥ ಕ್ಷೇತ್ರಗಳಲ್ಲೊಂದಾದ ಶಬರಿಮಲೈಗೆ ಭೇಟಿ ನೀಡುವವರ ಸಂಖ್ಯೆ ಅಪಾರ. ಇಲ್ಲಿಗೆ ಬರುವ ಭಕ್ತಾದಿಗಳು ಅಯ್ಯಪ್ಪನ ದರುಶನ ತ್ಗೆದುಕೊಳ್ಳುವುದಕ್ಕಿಂತ ಮುಂಚೆ ಇಲ್ಲಿರುವ ಪಂಬಾ ನದಿಯಲ್ಲಿ ಮಿಂದು ನಂತರ ದೇವಸ್ಥಾನ ಪ್ರವೇಶಿಸುವುದು ವಾಡಿಕೆ. ಈ ದೃಷ್ಟಿಯಿಂದ ಪಂಬಾ ನದಿ ಒಂದು ವಿಶಿಷ್ಟ ಪ್ರವಾಸಿ ಆಕರ್ಷಣೆಯಾಗಿಯೂ ಜನರನ್ನು ಸೆಳೆಯುತ್ತದೆ.

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಆದರೆ ಇತ್ತೀಚೆಗೆ ಈ ನದಿ ಪ್ರದೇಶದಲ್ಲಿ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿದ್ದು ಸಾಕಷ್ಟು ಕಲುಶಿತಗೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆಯಿಂದ ಪ್ರದೇಶವು ನಿರ್ಮಲತೆಯನ್ನು ಕಳೆದುಕೊಳ್ಳುತ್ತಿದೆ.

ಚಿತ್ರಕೃಪೆ: Raghunath N.B

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಅಷ್ಟೆ ಅಲ್ಲದೆ, ಈ ನದಿಯ ದಂಡೆಗುಂಟ ತ್ಯಾಜ್ಯ ವಿಸರ್ಜಿಸಿರುವುದನ್ನು ಕಾಣಬಹುದಾಗಿದ್ದು, ಇದೆ ನದಿಯಲ್ಲಿ ಭಕ್ತಾದಿಗಳು ಪವಿತ್ರ ಸ್ನಾನ ಮಾಡುವುದರಿಂದ ಸಾಕಷ್ಟು ರೋಗ ರುಜಿನಗಳು ಬರುವ ಸಾಧ್ಯತೆಯುಂಟಾಗಿದೆ.

ಚಿತ್ರಕೃಪೆ: Raghunath N.B

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೇವಲ ಮಲ ಮೂತ್ರವಲ್ಲದೆ ಭೇಟಿ ನೀಡುವ ಎಷ್ಟೊ ಬೇಜವಾಬ್ದಾರಿಯುತ ಪ್ರವಾಸಿಗರು ಪ್ಲ್ಯಾಸ್ಟಿಕ್ ಬಾಟಲ್ಲುಗಳಲ್ಲಿ ಕೊಂಡ ಪಾನೀಯಗಳನ್ನು ಹಾಗೂ ನೀರಿನ ಖಾಲಿ ಬಾಟಲ್ಲುಗಳನ್ನು ಬಿಸಾಕಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Natesh Ramasamy

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಹುಸೇನ್ ಸಾಗರ್ ಕೆರೆ, ಹೈದರಾಬಾದ್ : ಹುಸೇನ್ ಸಾಗರ್ ಕೆರೆಯು ಹೈದರಬಾದಿನಲ್ಲಿ ಭೌಗೋಳಿಕವಾಗಿಯೂ ಮತ್ತು ಪ್ರಮುಖ ಪ್ರವಾಸಿ ಸ್ಥಳವಾಗಿಯೂ ಪ್ರಖ್ಯಾತಿಯನ್ನು ಪಡೆದಿದೆ. ಈ ಕೆರೆಯನ್ನು ಮೂಸಿ ನದಿಗೆ ಪೂರಕ ಕೆರೆಯನ್ನಾಗಿ ನಿರ್ಮಿಸಲಾಗಿದೆ. ಹೈದರಬಾದಿಗೆ ನೀರು ಒದಗಿಸಲು ಮತ್ತು ನೀರಾವರಿ ಉದ್ದೇಶಗಳಿಗಾಗಿ ಈ ಕೆರೆಯ ನಿರ್ಮಾಣವಾಗಿದೆ. ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಕೆರೆಯು ಪ್ರಸ್ತುತ ಸಾಕಷ್ಟು ಕಲುಶಿತಗೊಂಡಿದೆ. ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಇಲ್ಲಿ ನಿರಂತರವಾಗಿ ಎಸೆಯಲಾಗಿದ್ದರಿಂದ ಕೆರೆ ಈ ದುಸ್ಥಿತಿಗೆ ಬಂದು ತಲುಪಿದೆ.

ಚಿತ್ರಕೃಪೆ: Michael Coghlan

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಐತಿಹಾಸಿಕ ಸ್ಮಾರಕಗಳು, ವಿಜಯಪುರ (ಬಿಜಾಪುರ) : ಉತ್ತರ ಕರ್ನಾಟಕ ಭಾಗದ ಪ್ರಮುಖ ಐತಿಹಾಸಿಕ ನಗರಗಳಲ್ಲೊಂದಾದ ವಿಜಯಪುರವು ತನ್ನಲ್ಲಿರುವ ಐತಿಹಾಸಿಕ ಸ್ಮಾರಕಗಳಿಂದಾಗಿ ಈ ಭಾಗದಲ್ಲಿ ಬಹು ನೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಆದಿಲ್ ಶಾಹಿಗಳ ಕೊಡುಗೆ ಈ ನಗರದ ಮೇಲೆ ಅಪಾರವಾಗಿ ಆಗಿರುವುದನ್ನು ಕಾಣಬಹುದು. ಗೋಲ ಗುಮ್ಮಟವಿರಬಹುದು, ಬಾರಾ ಕಮಾನ್ ಆಗಿರಬಹುದು, ಇಬ್ರಾಹಿಂ ರೋಝಾ ಆಗಿರಬಹುದು ಎಲ್ಲವೂ ವಿಶಿಷ್ಟವಾಗಿ ರಚಿಸಲ್ಪಟ್ಟಿದ್ದು ಇತಿಹಾಸ ಪ್ರಿಯ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತವೆ. ಈ ನಗರದ ಪ್ರಮುಖ ಹೆಗ್ಗುರುತು ಗೋಲ ಗುಮ್ಮಟ. ಇದನ್ನು ಓದಿ ಮರೆಯಲಾಗದ ಬಿಜಾಪುರ.

ಚಿತ್ರಕೃಪೆ: Florian Recklebe

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಆದರೆ ಈ ನಗರದಲ್ಲಿರುವ ಇನ್ನೀತರ ಐತಿಹಾಸಿಕ ಸ್ಮಾರಕಗಳ ದುಸ್ಥಿತಿ ನೋಡಿದವನೆ ಬಲ್ಲ. ಅಕ್ಷರಶಃ ಈ ಆಕರ್ಷಣೆಗಳು ಗಲೀಜುಗಳ ಕೊಂಪೆಯಾಗಿದೆ. ಜೋಡ ಗುಮ್ಮಟ ಎಂಬ ಸ್ಮಾರಕದ ಗೋಡೆಗಳು ನಿಷ್ಕ್ರೀಯವಾಗಿರುವುದು ಹಾಗೂ ನಿರ್ವಹಣೆಯಿಲ್ಲದೆ ಜಾಲಿ ಮರಗಳು ಎಲ್ಲೆಂದರಲ್ಲಿ ಬೆಳೆದಿರುವುದು.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಯಾವುದೇ ರೀತಿಯ ನಿರ್ವಹಣೆಯಿಲ್ಲದೆ ನಿರ್ಲಕ್ಷಿಸಲ್ಪಟ್ಟ ಐತಿಹಾಸಿಕ ಸ್ಮಾರಕಗಳ ದುಸ್ಥಿತಿ.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೋಟೆ ಗೋಡೆಯ ಕೆಳ ಬದಿಯೆಲ್ಲ ಕೃತಕ ತ್ಯಾಜ್ಯ ಘಟಕವಾಗಿ ಮಾರ್ಪಟ್ಟು ಶ್ರೀಮಂತ ಐತಿಹಾಸಿಕ ಹಿನ್ನಿಲೆಯನ್ನು ಗೆದ್ದಲಿನ ಹಾಗೆ ತಿನ್ನುತ್ತಿವೆ.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಅಳಿದುಳಿದ ಸ್ಮಾರಕಾವಶೇಷಗಳು, ಕಸ ಕಡ್ಡಿಗಳಿಗೆ ಪಾಲು.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಜಾಲಿ ಗಿಡ ಬಳ್ಳಿಗಳ, ಕಸ ಕಡ್ಡಿಗಳ ಹಾಗೂ ಶೌಚಾಲಯವಾಗಿ ಮಾರ್ಪಟ್ಟಿರುವ ಕೋಟೆಯ ಒಂದು ಗೋಡೆ.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಹಿಂದೆ ನಾಡನ್ನಾಳುತ್ತಿದ್ದ ಅರಸರು ಪ್ರಜೆಗಳಿಗಾಗಿ ಹಾಗೂ ರಾಜ ವಂಶಸ್ಥರಿಗಾಗಿ ನೀರನ್ನು ಸಂಗ್ರಹಿಸುವ ದೃಷ್ಟಿಯಿಂದ ಕಲ್ಯಾಣಿಗಳನ್ನು ನಿರ್ಮಿಸುತ್ತಿದ್ದರು. ಇಂತಹ ಕಲ್ಯಾಣಿಗಳು ಬಿಜಾಪುರಿನಲ್ಲೂ ಸಹ ಕಾಣಬಹುದಾಗಿದೆ. ಇವುಗಳನ್ನು ಇಲ್ಲಿ ಬಾವಡಿಗಳೆಂದು ಕರೆಯಲಾಗುತ್ತದೆ. ಇಂತಹದೆ ಒಂದು ಬಾವಡಿಯ ಚಿತ್ರ ಇದಾಗಿದೆ. ತಾಜ್ ಬಾವಡಿ ಎಂದು ಕರೆಯಲಾಗುವ ಇದು, ಇಂದು ಕಸಗಳ ಬೀಡಾಗಿರುವುದು ದುರದೃಷ್ಟಕರ.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಉಪ್ಪಲಿ ಬುರುಜ : ವಿಜಯಪುರದಲ್ಲಿರುವ ಭೇಟಿ ನೀಡಬಹುದಾದ ಮತ್ತೊಂದು ಐತಿಹಾಸಿಕ ಸ್ಮಾರಕ ರಚನೆ ಇದಾಗಿದೆ. ಕೋಟೆಯ ಹಾಗೆ ನಿರ್ಮಿಸಲ್ಪಟ್ಟಿರುವ ಈ ಬುರುಜಿನ ಮೇಲೆ ದೊಡ್ಡದಾದ ಸಿಡಿ ಮದ್ದಿನ ತೋಪನ್ನು ಕಾಣಬಹುದು. ಕಲಾತ್ಮಕವಾಗಿ ನಿರ್ಮಿಸಲ್ಪಟ್ಟ ಈ ತೋಪು ಹಿಂದೆ ಶತ್ರುಗಳ ನಿಗ್ರಹಕ್ಕಾಗಿ ಪರಿಣಾಮಾತ್ಮಕವಾಗಿ ಬಳಸಲ್ಪಡುತ್ತಿತ್ತು. ಚಿತ್ರದಲ್ಲಿರುವುದು ಮಲಿಕ್ ಮೈದಾನ್ ಎಂಬ ತೋಪು.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಆದರೆ ಇಂದು, ನಗರಕ್ಕೆ ಭೇಟಿ ನೀಡುವ ಯಾವ ಪ್ರವಾಸಿಗನೆ ಆಗಲಿ ಅದರ ಕುರಿತು ತಿಳಿದು ಭೇಟಿ ನೀಡಲೆಂದು ತೆರಳಿದರೆ ನೋಡಿದ ಆನಂದಕ್ಕಿಂತ, ಯಾಕಾದರೂ ಅಲ್ಲಿಗೆ ಹೋದೆನೋ ಎಂಬ ಭಾವನೆ ಮೂಡುವ ಸಾಧ್ಯತೆಯಿದೆ. ಏಕೆಂದರೆ ಆ ಬುರುಜಿನ ಕೆಳಗಿನ ಪ್ರದೇಶವು ಬಯಲು ಶೌಚಾಲಯವಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ಕಸ, ಮಲ ಮೂತ್ರಗಳ ವಾಸನೆ ನಿಮ್ಮನ್ನು ಹಿಂಬಾಲಿಸುತ್ತದೆ. ಹಿನ್ನಿಲೆಯಲ್ಲಿರುವ ಉಪ್ಪಲಿ ಬುರುಜ.

ಚಿತ್ರಕೃಪೆ: fraboof

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Abhijit Shylanath

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಆದರೆ ಇತ್ತೀಚಿನ ಕೆಲ ವರುಷಗಳಲ್ಲಿ ಹೆಚ್ಚುತ್ತಿರುವ ವಿದೇಶಿ ಪ್ರವಾಸಿಗರ ಅದರಲ್ಲೂ ನಶೆಯ ವಸ್ತುಗಳನ್ನು ಸೇವಿಸುವವರಿಂದಾಗಿ ಗೋಕರ್ಣ ಕಡಲ ತೀರಗಳು ಕಲುಶಿತಗೊಳ್ಳುತ್ತಿರುವುದು ಆತಂಕ ಪಡಬೇಕಾದ ವಿಷಯವಾಗಿದೆ.

Miran Rijavec

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಅಲ್ಲದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಗುಗಳು ಹಾಗೂ ಇತರೆ ತ್ಯಾಜ್ಯ ವಸ್ತುಗಳು ಹೆಚ್ಚುತ್ತಿರುವುದರಿಂದ ಕಡಲ ತೀರದ ಅಂದ ಚೆಂದವು ಕ್ಷಿಣಿಸುತ್ತಿದೆ. ಕುಡ್ಲೆ ಕಡಲ ತೀರದಲ್ಲಿ ಬಿಸಾಡಲಾದ ಪ್ಲಾಸ್ಟಿಕ್ ಬಾಟಲಿಗಳು.

ಚಿತ್ರಕೃಪೆ: Miran Rijavec

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ ತೆರೆದುಕೊಂಡಿರುವ ಭೂಭಾಗದಿಂದ ಸುತ್ತುವರೆದಿದೆ. "ಮುನ್ನಾರ್" ಎಂದರೆ "ಮೂರು ನದಿಗಳು" ಎಂದರ್ಥ. ಆದರೆ ಇದರ ಸೌಂದರ್ಯಕ್ಕೆ ತದ್ವಿರುದ್ಧ ಎಂಬಂತೆ ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಸುಂದರ ಗಿರಿಧಾಮವು ಕಲುಶಿತ್ಗೊಳ್ಳುತ್ತಿರುವುದು ಆತಂಕದ ವಿಷಯವೆ ಸರಿ. ಚರಂಡಿಯಂತೆ ಮಾರ್ಪಾಟಾಗಿರುವ ನೀರಿನ ಒಂದು ತೊರೆ.

ಚಿತ್ರಕೃಪೆ: Riyas Rasheed Ravuthar‎

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಕೊಳಚೆಗೆ ಪ್ರಖ್ಯಾತವಾಗಿರುವ ಪ್ರವಾಸಿ ಸ್ಥಳಗಳು:

ಗಿರಿಧಾಮದ ಎಲ್ಲೆಂದರಲ್ಲಿ ಬಿಸಾಕಿದ ಕಸದ ರಾಶಿ. ಹಸಿರಿನ ಸಮೃದ್ಧತೆಯಿಂದ ಕೂಡಿರುವ ಈ ಗಿರಿಧಾಮವು ಇಂದು ಇಂತಹ ಪರಿಸ್ಥಿತಿಯನ್ನು ತಲುಪಿರುವುದು ದುರದೃಷ್ಟಕರ.

ಚಿತ್ರಕೃಪೆ: Riyas Rasheed Ravuthar‎

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X