Search
  • Follow NativePlanet
Share
» »ಈ ವಿವಿಧ ಪ್ರಕಾರದ ರೈಲುಗಳಲ್ಲಿ ಪ್ರವಾಸ ಮಾಡಿದ್ದೀರಾ?

ಈ ವಿವಿಧ ಪ್ರಕಾರದ ರೈಲುಗಳಲ್ಲಿ ಪ್ರವಾಸ ಮಾಡಿದ್ದೀರಾ?

By Vijay

ತಾರ್ಕಿಕವಾಗಿ ಹೇಳಬೆಕೆಂದರೆ ಎಂದಿಗೂ ಮರೆಯಲಾಗದ, ಸಂತಸ ಕರುಣಿಸುವ, ಹುರುಪು ತುಂಬುವ ಅನುಭವ ನೀಡುವ "ಪ್ರವಾಸ" ಎಂಬ ಚಟುವಟಿಕೆಯು ಪ್ರಾಥಮಿಕವಾಗಿ ಯಾವುದಾದರೊಂದು ಸಂಚಾರಿ ಮಾಧ್ಯಮವನ್ನೊಳಗೊಂಡಿರಲೇಬೇಕು. ಹೀಗಾಗಿ ಎತ್ತಿನ ಬಂಡಿಗಳಿಂದ ಹಿಡಿದು ಆಗಸದೆತ್ತರದಲ್ಲಿ ಹಾರಾಡುವ ವಿಮಾನಗಳವರೆಗೆ ಸಾಕಷ್ಟು ಸಂಚಾರಿ ಮಾಧ್ಯಮಗಳಿರುವುದನ್ನು ಕಾಣಬಹುದು.

ಆದರೆ ನಿಮಗಿದು ತಿಳಿದಿದೆಯೆ, ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಚಾರಿ ಮಾಧ್ಯಮ ಯಾವುದೆಂದು. ಹೌದು, ರೈಲು ಪ್ರಯಾಣವೆ ದೇಶದ ಅತಿ ದೊಡ್ಡ ಹಾಗೂ ಪ್ರಮುಖ ಸಂಚಾರಿ ಮಾಧ್ಯಮವಾಗಿದೆ. ಭಾರತೀಯ ರೈಲು ದೇಶದಲ್ಲೆ ಅತಿ ಹೆಚ್ಚು ಸಿಬ್ಬಂದಿವರ್ಗವನ್ನೊಳಗೊಂಡ ಇಲಾಖೆಯಾಗಿದೆ. ಪ್ರತಿ ದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಊರಿಂದೂರಿಗೆ ಪ್ರವಾಸ ಹೊರಡುತ್ತಾರೆ.

ನಿಮಗಿಷ್ಟವಾಗಬಹುದಾದ : ಭಾರತದ ಮೊದಲ 8 ವೇಗದ ರೈಲುಗಳು

ಕೇವಲ ಊರು, ಸ್ಥಳ, ಆಕರ್ಷಣೆಗಳು ಮಾತ್ರವಲ್ಲದೆ ಪ್ರವಾಸದ ಸಮಗ್ರ ಅವಶ್ಯಕತೆಗಳಿಗೆ ಸ್ಪಂದಿಸುವಂತಿರಬೇಕು ಪ್ರವಾಸಿ ಲೇಖನ. ಆ ನಿಟ್ಟಿನಲ್ಲಿ ಈ ಪ್ರಸ್ತುತ ಲೇಖನವು ಭಾರತೀಯ ರೈಲು ಜನರ ಅವಶ್ಯಕತೆಗಳಿಗೆ ತಕ್ಕ ಹಾಗೆ ಪ್ರವಾಸ ಮಾಡಲು, ಪ್ರಯಾಣಿಸಲು ಹಲವಾರು ಸೇವೆಗಳನ್ನು ಯಾವೆಲ್ಲ ರೀತಿಯಲ್ಲಿ ಒದಗಿಸುತ್ತಿದೆ ಎಂಬುದನ್ನು ತಿಳಿಸುತ್ತದೆ.

ಪ್ರಸ್ತುತ ಭಾರತೀಯ ರೈಲಿನಲ್ಲಿ ಪ್ರಯಾಣಿಕರಿಗೆ ಯಾವೆಲ್ಲ ರೀತಿಯ ಪ್ರಯಾಣಕ್ಕೆ ಸಂಬಂಧಿಸಿದ ಸೇವೆಗಳನ್ನು ಯಾವ ರೀತಿಯ ರೈಲುಗಳ ಮೂಲಕ ಒದಗಿಸಲಾಗುತ್ತಿದೆ ಎಂಬುದರ ಕುರಿತು ಚುಟುಕಾಗಿ ತಿಳಿಯಿರಿ. ಮುಂದೆ ಪ್ರವಾಸ ಮಾಡಲು ಯೋಜಿಸುವಾಗ ಈ ದಿಸೆಯಲ್ಲಿ ಈ ಲೇಖನ ನಿಮಗೆ ಅನುಕೂಲಕರವಾಗಬಹುದು.

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ದುರೊಂಟೊ ರೈಲುಗಳು : ಪ್ರಾರಂಭದ ಸ್ಥಳದಿಂದ ಅಂತಿಮ ಸ್ಥಳದವರೆಗೆ ನೇರವಾಗಿ ಚಲಿಸುವ ಮಧ್ಯದಲ್ಲಿ ಯಾವುದೆ ನಿಲುಗಡೆ ಹೊಂದಿರದ ರೈಲುಗಳು ಇವಾಗಿವೆ. ಕೆಲವು ರೈಲುಗಳಿಗೆ ತಾಂತ್ರಿಕ ಅವಶ್ಯಕತೆಗಳನುಸಾರವಾಗಿ ಒಂದು ನಿಲುಗಡೆಯನ್ನು ಹೊಂದಿರಬಹುದಷ್ಟೆ ಹೊರತು ಬೇರಾವ ನಿಲುಗಡೆಗಳನ್ನೂ ಈ ರೈಲುಗಳು ಹೊಂದಿರುವುದಿಲ್ಲ. ಮುಂಬೈನಿಂದ ಪಶ್ಚಿಮ ಬಂಗಾಳದ ಹೌರಾದವರೆಗೆ ಯಾವುದೆ ನಿಲುಗಡೆಯಿಲ್ಲದೆ ಸಾಗುವ ದುರೊಂಟೊ.

ಚಿತ್ರಕೃಪೆ: Pratik12951

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ರಾಜಧಾನಿ ಎಕ್ಸ್ ಪ್ರೆಸ್ : ದೇಶದ ಪ್ರತಿ ರಾಜ್ಯದ ರಾಜಧಾನಿ ಹಾಗೂ ಇತರೆ ಪ್ರಮುಖ ನಗರಗಳನ್ನು ದೇಶದ ರಾಜಧಾನಿಗೆ ಸಂಪರ್ಕ ಬೆಸೆಯುವ ರೈಲುಗಳು ಇವಾಗಿವೆ. ಹವಾ ನಿಯಂತ್ರಿತ ಹಾಗೂ ಸಾಮಾನ್ಯವಾದ ಬೋಗಿಗಳನ್ನು ಹೊಂದಿರುವ ಈ ರೈಲುಗಳು ಕನಿಷ್ಠ ನಿಲುಗಡೆಗಳನ್ನು ಹೊಂದಿರುತ್ತವೆ ಹಾಗೂ ಇತರೆ ರೈಲುಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಈ ರೈಲುಗಳಿಗೆ ನೀಡಲಾಗುತ್ತದೆ.

ಚಿತ್ರಕೃಪೆ: Hpcos

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಎ ಸಿ ಎಕ್ಸ್ ಪ್ರೆಸ್ : ಈ ಪ್ರಕಾರದ ರೈಲುಗಳೂ ಸಹ ಹೆಚ್ಚಿನ ಜೇಷ್ಠತೆಯನ್ನು ಪಡೆದಿರುತ್ತವೆ. ಕನಿಷ್ಠ ನಿಲುಗಡೆಗಳನ್ನು ಹೊಂದಿರುತ್ತವೆ. ದೇಶದ ಪ್ರಮುಖ ನಗರಗಳ ಮಧ್ಯೆ ಚಲಿಸುವ ಈ ಪ್ರಕಾರದ ರೈಲಿನ ಎಲ್ಲ ಬೋಗಿಗಳು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿರುತ್ತವೆ. 130 ಪ್ರತಿ ಘಂಟೆಯ ಆಸು ಪಾಸಿನ ವೆಗದಲ್ಲಿ ಈ ರೈಲುಗಳು ಚಲಿಸುತ್ತವೆ.

ಚಿತ್ರಕೃಪೆ: Anirudh Emani

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಶತಾಬ್ದಿ ಎಕ್ಸ್ ಪ್ರೆಸ್ : ದಿನದ ಸಮಯದಲ್ಲಿ ಪ್ರಮುಖ ನಗರಗಳ ಮಧ್ಯೆ ಸಂಚರಿಸಲು ಅನುವು ಮಾಡಿ ಕೊಡುವಂತೆ ಈ ರೈಲುಗಳನ್ನು ಹೊರತರಲಾಗಿದೆ. ಒಂದೆ ದಿನದಲ್ಲಿ ನಿಗದಿತ ಸ್ಥಳ ತಲುಪಿ ಮತ್ತು ಅದೆ ದಿನ ಅಲ್ಲಿಂದ ಮರಳುತ್ತದೆ ಈ ರೀತಿಯ ರೈಲುಗಳು. ಹೆಚ್ಚಿನ ವೇಗ ಹಾಗೂ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಹವಾ ನಿಯಂತ್ರಿತ ಬೋಗಿಗಳನ್ನು ಹೊಂದಿರುವ ಶತಾಬ್ದಿಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಅತಿ ಹೆಚ್ಚಿನ ವೇಗ ಹೊಂದಿರುವ ಭೋಪಾಲಶತಾಬ್ದಿ ರೈಲು. ಗರಿಷ್ಠ ವೇಗ : 150 ಕಿ.ಮೀ/ಘಂಟೆ.

ಚಿತ್ರಕೃಪೆ: Ayushrocks6

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಡಬಲ್ ಡೆಕ್ಕರ್ : ಕನಿಷ್ಠ ನಿಲುಗಡೆಗಳು, ಹೆಚ್ಚಿನ ಜೇಷ್ಠತೆ, ವೇಗ ಈ ರೈಲಿನ ಲಕ್ಷಣಗಳು. ಇವೂ ಸಹ ಹೆಚ್ಚು ಕಡಿಮೆ ಶತಾಬ್ದಿಗಳ ಹಾಗೆಯೆ ಕೆಲಸ ನಿರ್ವಹಿಸಿದರೂ ಒಂದು ವಿಶೇಷತೆಯನ್ನು ಒಳಗೊಂಡಿದೆ. ಅದೆ ಎರಡು ಮಳಿಗೆಯುಳ್ಳ ಬೋಗಿಗಳು. ಸಂಪೂರ್ಣವಾಗಿ ಹವಾ ನಿಯಂತ್ರಿತ ರೈಲು ಇದಾಗಿದೆ. ದೇಶದ ಕೆಲವು ಪ್ರಮುಖ ನಗರಗಳ ಮಧ್ಯೆ ಮಾತ್ರವೆ ಪ್ರಸ್ತುತ ಚಲಿಸುತ್ತಿವೆ.

ಚಿತ್ರಕೃಪೆ: Superfast1111

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಜನಶತಾಬ್ದಿ : ಇದು ಶತಾಬ್ದಿಯಲ್ಲೆ ಮಿತವ್ಯಯವಾಗಿರುವ ರೈಲಾಗಿದೆ. ಹವಾನಿಯಂತ್ರಿತ ಹಾಗೂ ಸಾಮಾನ್ಯ ಎರಡೂ ರೀತಿಯ ಬೋಗಿಗಳನ್ನು ಒಳಗೊಂಡಿದ್ದು ಸಾಕಷ್ಟು ಜನ ಕೆಳ ಮಧ್ಯಮವರ್ಗದವರಿಗೂ ಕೈಗೆಟುಕುವ ದರಗಳನ್ನು ಹೊಂದಿರುತ್ತದೆ.

ಚಿತ್ರಕೃಪೆ: Amolnaik3k

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಗರೀಬ್ ರಥ : ಹೆಸರೆ ಸೂಚಿಸುವಂತೆ ಬಡವರ ಪಾಲಿನ ರಥದಂತಿರುವ ರೈಲು ಇದಾಗಿದೆ. ಸಾಮಾನ್ಯವಾಗಿ ಇತರೆ ರೈಲುಗಳ ಹವಾ ನಿಯಂತ್ರಿತ ಬೋಗಿಗಳ ಟಿಕೆಟ್ ದರಗಳು ಹೆಚ್ಚಾಗಿದ್ದು ಬಡವರಾಗಲಿ ಅಥವಾ ಆರ್ಥಿಕವಾಗಿ ಅಷ್ಟೊಂದು ಸಬಲವಲ್ಲದವರು ಅದರಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಇವರಿಗೂ ಸಹ ಕಡಿಮೆ ದರದಲ್ಲಿ ಅದೆ ರೀತಿಯ ಐಷಾರಾಮಿ ಪ್ರಯಾಣ ದೊರಕುವಂತೆ ಅನುವು ಮಾಡಿಕೊಡಲು ವಿಶೇಷವಾಗಿ ರೂಪಿಸಲಾದ ಸಂಪೂರ್ಣವಾಗಿ ಹವಾ ನಿಯಂತ್ರಿತವಾದ ರೈಲು ಇದಾಗಿದೆ. ಆದರೆ ಈ ರೈಲಿನ ಬೋಗಿಗಳಲ್ಲಿರುವ ಪ್ರತಿ ಆಸನದ ಮಧ್ಯದ ಅಂತರವು ಕಡಿಮೆಯಾಗಿದ್ದು ಸಾಮಾನ್ಯ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿರುವ ಆಸನಗಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಸನಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Superfast1111

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ : ಭಾರತದ ಹಲವು ಮಹಾ ನಗರಗಳಿಂದ ರಾಜಧಾನಿ ದೆಹಲಿಗೆ ವೇಗವಾಗಿ ಸಂಪರ್ಕ ಕಲ್ಪಿಸುವ ರೈಲು ಇದಾಗಿದೆ. ಕನಿಷ್ಠ ನಿಲುಗಡೆಗಳು, ಗರಿಷ್ಠ ವೇಗ ಹಾಗೂ ಇತರೆ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗಿಂತ ಹೆಚ್ಚಿನ ಪ್ರಾಶಸ್ತ್ಯ ಈ ರೈಲಿಗೆ ನೀಡಲಾಗುತ್ತದೆ. ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್.

ಚಿತ್ರಕೃಪೆ: Adityamadhav83

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಯುವಾ ಎಕ್ಸ್ ಪ್ರೆಸ್ : 18-45 ವಯಸ್ಸಿನೊಳಗಿನ ಜನರನ್ನು ಗಮದಲ್ಲಿರಿಸಿ ಪ್ರಾರಂಭಿಸಲಾದ ರೈಲು ಇದಾಗಿದೆ. ದುರೊಂಟೊ ರೈಲು ಪ್ರಾರಂಭದ ಜೊತೆಗೆ ಪ್ರಾರಂಭವಾದ ಈ ಸರಣಿಯ ರೈಲುಗಳಲ್ಲಿ 60% ರಷ್ಟು ಆಸನಗಳನ್ನು 18-45 ವಯಸ್ಸಿನೊಳಗಿನ ಜನರಿಗಾಗಿಯೆ ಮೀಸಲಿಡಲಾಗಿತ್ತು. ಆದರೆ ಅಷ್ಟೊಂದು ಸಫಲತೆಯನ್ನು ಪಡೆಯಲಿಲ್ಲ. ಪ್ರಸ್ತುತ ಕೇವಲ ದೆಹಲಿ-ಹೌರಾ ಹಾಗೂ ದೆಹಲಿ-ಮುಂಬೈಗಳ ಮಧ್ಯೆ ಇ ರೈಲು ಚಲಿಸುತ್ತದೆ.

ಚಿತ್ರಕೃಪೆ: Superfast1111

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಕಾವಿ ಗುರು ಎಕ್ಸ್ ಪ್ರೆಸ್ : ಪಶ್ಚಿಮ ಬಂಗಾಳದ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಗೌರವಾರ್ಥವಾಗಿ ಭಾರತೀಯ ರೈಲ್ವೆ ಇಲಾಖೆಯು 2011 ರಲ್ಲಿ ಈ ರೀತಿಯ ರೈಲುಗಳನ್ನು ಪ್ರಾರಂಭಿಸಿತು. ವಿಶೆಷವೆಂದರೆ ಈ ರೈಲುಗಳು ಕಡಿಮೆ ವೇಗದಲ್ಲಿ ಚಲಿಸುತ್ತವೆ ಹಾಗೂ ವೇಗದ ಹೆಚ್ಚಿನ ದರದಿಂದ ವಿನಾಯಿತಿ ಪಡೆದಿದ್ದು ಟಿಕೆಟ್ ದರಗಳು ಕಡಿಮೆಯಿರುತ್ತದೆ. ಪ್ರಸ್ತುತ ಪೋರಬಂದರ್-ಸಂತ್ರಾಗಾಚಿ ಕಾವಿ ಗುರು, ಹೌರಾ-ಬೋಲ್ಪುರ್ ಕಾವಿಗುರು, ಹೌರಾ-ಅಜೀಮ್ಗಂಜ್ ಕಾವಿ ಗುರು ಹಾಗೂ ಕಾಮಾಖ್ಯಾ-ಜೈಪುರ ಕಾವಿಗುರು ಎಕ್ಸ್ ಪ್ರೆಸ್ ರೈಲುಗಳು ಚಾಲ್ತಿಯಲ್ಲಿವೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Vishalkh

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ವಿವೇಕ್ ಎಕ್ಸ್ ಪ್ರೆಸ್ : 2013 ರಲ್ಲಿ ಭಾರತದ ಯುವ ಸಂತ ಸ್ವಾಮಿ ವಿವೇಕಾನಂದರ 150 ನೇಯ ಜನ್ಮ ದಿನದ ಗೌರವಾರ್ಥವಾಗಿ ಭಾರತೀಯ ರೈಲ್ವೆಯಿಂದ ಆರಂಭಿಸಲಾದ ರೈಲು ಇದಾಗಿದೆ. ಪ್ರಸ್ತುತ ದಿಬ್ರುಘರ್-ಕನ್ಯಾಕುಮಾರಿ, ಓಖಾ-ತೂತುಕುಡಿ, ಬಾಂದ್ರಾ-ಜಮ್ಮು ತಾವಿ ಹಾಗೂ ಸಂತ್ರಾಗಚ್ಚಿ-ಮಂಗಳೂರು ವಿವೇಕ್ ಎಕ್ಸ್ ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ.

ಚಿತ್ರಕೃಪೆ: Abhinav Phangcho Choudhury

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಇಂಟರ್ಸಿಟಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ : ಇದು ಇಂಟರ್ಸಿಟಿ ರೈಲಿನ ಹಾಗೆಯೆ ಇದ್ದರೂ ಸಹ ಇದರ ವೇಗ ಮಾತ್ರ ಅಧಿಕವಾಗಿದ್ದು ಕಡಿಮೆ ಸಮಯದಲ್ಲಿ ನಿಗದಿತ ಸ್ಥಳ ತಲುಪುವಂತೆ ಕಾರ್ಯನಿರ್ವಹಿಸುತ್ತವೆ. ಈ ಶ್ರೇಣಿಯ ರೈಲಿನ ವೇಗ 100-120 ಕಿ.ಮೀ/ಪ್ರತಿ ಘಂಟೆಯಷ್ಟಿರುತ್ತದೆ. ದರಗಳು ಸ್ವಲ್ಪ ದುಬಾರಿ.

ಚಿತ್ರಕೃಪೆ: Prateek Karandikar

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ರಾಜ್ಯರಾಣಿ ಎಕ್ಸ್ ಪ್ರೆಸ್ : ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡುವ ದ್ರುಷ್ಟಿಯಿಂದ ಪ್ರಾರಂಭಿಸಲಾದ ರೈಲು ಶ್ರೇಣಿ ಇದಾಗಿದೆ. ಇದರ ವಿಶಿಷ್ಟತೆಯೆಂದರೆ ಇದು ಆಯಾ ರಾಜ್ಯಗಳ ರಾಜಧಾನಿ ನಗರವನ್ನು ಅದೆ ರಾಜ್ಯದ ಪ್ರಮುಖ ನಗರಗಳೊಂದಿಗೆ ಬೆಸೆಯುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Smeet Chowdhury

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಎಕ್ಸ್ ಪ್ರೆಸ್ ರೈಲು : ಇವು ಭಾರತೀಯ ರೈಲ್ವೆಯ ಸಾಮಾನ್ಯ ಶ್ರೇಣಿಯ ರೈಲುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿರುವ ರೈಲುಗಳು. ಹವಾ ನಿಯಂತ್ರಿತ, ಎರಡನೆಯ ದರ್ಜೆ, ಸಾಮಾನ್ಯ ದರ್ಜೆ ಹೀಗೆ ಎಲ್ಲ ರೀತಿಯ ಬೋಗಿಗಳನ್ನು ಒಳಗೊಂಡಿರುವ, ದೇಶದ ಪ್ರಮುಖ ನಗರಗಳನ್ನು ಒಂದಕ್ಕೊಂದು ಬೆಸೆಯುವ ರೈಲು. ಸೂಪರ್ ಫಾಸ್ಟ್ ರೈಲುಗಳಿಗೆ ಹೋಲಿಸಿದರೆ ಈ ಶ್ರೇಣಿಯ ರೈಲುಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಲುಗಡೆ ಹೊಂದಿರುತ್ತದಾದರೂ ಮುಖ್ಯವಾದ ನಗರಗಳಲ್ಲಿ ಮಾತ್ರ ತಂಗುತ್ತದೆ.

ಚಿತ್ರಕೃಪೆ: Mikhail Esteves

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಫಾಸ್ಟ್ ಪ್ಯಾಸೆಂಜರ್ ಅಥವಾ ಪ್ಯಾಸೆಂಜರ್ ಶ್ರೇಣಿ : ಅತಿ ಕಡಿಮೆ ದರಗಳ, ನಿಧಾನಗತಿಯಲ್ಲಿ ಚಲಿಸುವ ಭಾರತೀಯ ರೈಲ್ವೆಯ ಮುಖ್ಯ ರೈಲು ಶ್ರೇಣಿ ಇದಾಗಿದೆ. ಈ ಶ್ರೇಣಿಯ ರೈಲುಗಳು ತನ್ನ ಮಾರ್ಗದಲ್ಲಿ ಬರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಲುಗಡೆ ಹೊಂದಿರುತ್ತವೆ. ಹೀಗಾಗಿ ಗ್ರಾಮೀಣ ಭಾಗ, ಎರಡು ಹಾಗೂ ಮೂರನೆಯ ಶ್ರೇಣಿಯ ನಗರಗಳ ಪ್ರಯಾಣಿಕರಿಗೆ ಅತ್ಯಂತ ಉಪಯುಕ್ತವಾಗಿದೆ. ಈ ರೀತಿಯ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿರುವುದು ಸಾಮಾನ್ಯ.

ಚಿತ್ರಕೃಪೆ: Viswa Chandra

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಸಬ್ ಅರ್ಬನ್ ರೈಲುಗಳು : ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಅಹ್ಮದಾಬಾದ್, ಪುಣೆ ಹಾಗೂ ಕಾನ್ಪುರ ಮತ್ತು ಲಖನೌ ಮಧ್ಯೆ ಸಂಚರಿಸುತ್ತಿವೆ. ವಿಶಿಷ್ಟತೆ ಎಂದರೆ ಮಹಾನಗರಗಳ ವ್ಯಾಪ್ತಿಯಲ್ಲೆ ಇರುವ ಇತರೆ ಉಪನಗರಗಳೊಂದಿಗೆ ಇವು ಸಂಪರ್ಕ ಕಲ್ಪಿಸುತ್ತವೆ. ಮಹಾನಗರಗಳ ಉದ್ಯೋಗಸ್ಥ ನಾಗರೀಕರಿಗೆ ಇದು ಹೆಚ್ಚು ಉಪಯೋಗಿ. ಇದರಲ್ಲಿ ಆಸನಗಳನ್ನು ಕಾಯ್ದಿರಿಸಲು ಬರುವುದಿಲ್ಲ. 2016 ರ ರೈಲು ಬಜೆಟ್ ನಲ್ಲಿ ಬೆಂಗಳೂರಿಗೂ ಈ ರೀತಿಯ ಸಬ್ ಅರ್ಬನ್ ರೈಲು ಯೋಜನೆಗೆ ಹಸಿರು ನಿಶಾನೆ ದೊರೆತಿದ್ದು ಸಂತೋಷಕರ ವಿಷಯವಾಗಿದೆ.

ಚಿತ್ರಕೃಪೆ: Arne Hückelheim

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಸಬ್ ಅರ್ಬನ್ ರೈಲು ಬೋಗಿಗಳ ಒಳನೋಟ.

ಚಿತ್ರಕೃಪೆ: Nikkul

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಮೆಟ್ರೊ ರೈಲುಗಳು : ಮಹಾನಗರಗಳ ವ್ಯಾಪ್ತಿಯಲ್ಲೆ ವಿವಿಧ ಬಡಾವಣೆಗಳನ್ನು, ಸ್ಥಳಗಳನ್ನು ಸಂಪರ್ಕಿಸುವ ರೈಲು ಶ್ರೇಣಿ ಇದಾಗಿದೆ. ದೆಹಲಿ, ಕೊಲ್ಕತ್ತಾ, ಬೆಂಗಳೂರು ಮುಂತಾದೆಡೆ ಇಂತಹ ರೈಲುಗಳು ಚಾಲ್ತಿಯಲ್ಲಿವೆ. ಸಮಯದ ಉಳಿತಾಯ, ಬೇಗ ನಿಲ್ದಾಣಗಳನ್ನು ತಲುಪುವುದು ಇದರ ವೈಶಿಷ್ಟ್ಯ ಹಾಗೂ ಮಹಾನಗರಗಳ ನೌಕರರ ಪಾಲಿಗೆ ತೃಪ್ತಕರ ಸಂಚಾರಿ ಮಾಧ್ಯಮ.

ಚಿತ್ರಕೃಪೆ: WillaMissionary

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಪ್ರವಾಸಿ ವಿಶೇಷ ರೈಲುಗಳು : ಭಾರತವು ಪ್ರವಾಸಿ ದೃಷ್ಟಿಯಿಂದ ಪ್ರಪಂಚದಲ್ಲಿ ಪ್ರಖ್ಯಾತಿಗಳಿಸಿದ ದೇಶಗಳ ಪೈಕಿ ಒಂದಾಗಿದೆ. ಇಲ್ಲಿರುವ ಐತಿಹಾಸಿಕ ಶ್ರೀಮಂತಿಕೆ, ಶ್ರೀಮಂತ ಸಂಸ್ಕೃತಿ ಸಂಪ್ರದಾಯ, ಅದ್ಭುತ ಶಿಲ್ಪಕಲೆ ಮುಂತಾದ ಅಂಶಗಳನ್ನು ಅನಾವರಣಗೊಳಿಸುವ ದೃಷ್ಟಿಯಿಂದ ಪ್ರಖ್ಯಾತ ಪ್ರವಾಸಿ ಸ್ಥಳಗಳ ಪ್ರವಾಸವನ್ನು ಭಾರತೀಯ ರೈಲ್ವೆ ಕೆಲವು ವಿಶೇಷ, ಅತಿ ಐಷಾರಾಮಿಯುಳ್ಳ ರೈಲುಗಳನ್ನು ಹೊರತರುವುದರ ಮೂಲಕ ಚಾಲ್ತಿಯಲ್ಲಿರಿಸಿದೆ.

ಚಿತ್ರಕೃಪೆ: Simon Pielow

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಪ್ಯಾಲೆಸ್ ಆನ್ ವ್ಹೀಲ್ಸ್ : ರಾಜಸ್ಥಾನ ಪ್ರವಾಸೋದ್ಯಮ ಇಲಾಖೆಯ ಸಹಯೊಂಗದೊಂದಿಗೆ ಭಾರತೀಯ ರೈಲ್ವೆಯ ಪ್ರತಿಷ್ಠಿತ ರೈಲು ಸೇವೆ ಇದಾಗಿದೆ. ಇದರ ಮುಖ್ಯ ಉದ್ದೇಶ ಪ್ರವಾಸಿಗರಿಗೆ ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರಿಗೆ ರಾಜಸ್ಥಾನದ ಪ್ರವಾಸಿ ಸ್ಥಳಗಳ ಶ್ರೀಮಂತಿಕೆಯನ್ನು ಅನಾವರಣ ಮಾಡಿ ತೊರಿಸಿವುದು. ಪಂಚತಾರಾ ಹೋಟೆಲುಗಳ ಹಾಗೆಯೆ ಈ ರೈಲಿನ ಒಳಾಂಗಣವು ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿದೆ. ದರಗಳು ಅತಿ ದುಬಾರಿ.

ಚಿತ್ರಕೃಪೆ: erteile ich mir

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಮಹಾರಾಜಾ ಎಕ್ಸ್ ಪ್ರೆಸ್ : ವಾಯವ್ಯ ಭಾರತ ವಿಶೇಷವಾಗಿ ರಾಜಸ್ಥಾನ ಹಾಗೂ ಮಧ್ಯ ಭಾರತದ 12 ಅದ್ಭುತ ಪ್ರವಾಸಿ ಸ್ಥಳಗಳ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಸುಂದರ ರೈಲು ಪ್ರವಾಸ ಇದಾಗಿದೆ. ರಾಜ ಶೈಲಿಯಲ್ಲೆ ಬೋಗಿಯ ಒಳಾಂಗಣ ವಿನ್ಯಾಸಗೊಳಿಸಲಾಗಿದೆ. ಯೋಗ್ಯವಾದ ಕಾಲದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುವ ಪ್ರವಾಸಿ ರೈಲು ಇದಾಗಿದ್ದು ಸುಂದರ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: Simon Pielow

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಭಾರತೀಯ ರೈಲ್ವೆಯ ವಿವಿಧ ರೈಲುಗಳು:

ಗೋಲ್ಡನ್ ಚಾರಿಯಟ್ : ಕರ್ನಾಟಕ, ಗೋವಾ, ತಮಿಳುನಾಡು ಹಾಗೂ ಕೇರಳದ ಪ್ರಖ್ಯಾತ ಹಾಗೂ ಆಯ್ದ ಪ್ರವಾಸಿ ಸ್ಥಳಗಳ ಪ್ರವಾಸ ಮಾಡಿಸುವರೈಲು ಇದಾಗಿದೆ. ನಿರ್ದಿಷ್ಟ ಋತುಮಾನದಲ್ಲಿ ಈ ರೈಲಿನ ಸುಂದರ ಪ್ರವಾಸಾನುಭವವನ್ನು ಪಡೆಯಬಹುದು.

ಚಿತ್ರಕೃಪೆ: Ichattopadhyaya

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X