ಪ್ರೀತಿ ಏಕೆ ಭೂಮಿ ಮೇಲಿದೆ....ಬೇರೆ ಎಲ್ಲೂ ಜಾಗವಿಲ್ಲವೆ...ಎಂದು ಒಂದು ಚಿತ್ರದಲ್ಲಿ ನಾಯಕ ನಾಯಕಿಯರಿಬ್ಬರೂ ಕೇಳಿ ಕೊಂಡಿರುವುದು ನಿಮಗೆಲ್ಲ ಗೊತ್ತಿರಬಹುದು. ಅದಕ್ಕೆ ಸಿಂಪಲ್ಲಾಗಿ ಒಂದು ಸಿಂಪಲ್ ಉತ್ತರವೆಂದರೆ ತಾಜ್ ಮಹಲ್ ನಂತಹ ಅತ್ಯದ್ಭುತ ಪ್ರೇಮದ ಕುರುಹು, ಸ್ಮಾರಕ ಇನ್ನೂ ಭೂಮಿಯ ಮೇಲಿರುವುದರಿಂದ. ಒಬ್ಬ ಪ್ರಿಯತಮ ತನ್ನ ಪ್ರಿಯತಮೆಗೋಸ್ಕರ ಇಂತಹ ಒಂದು ಅದ್ಭುತ ವಾಸ್ತು ಶಿಲ್ಪದ ರಚನೆಯನ್ನೆ ಮಾಡಿದನೆಂದರೆ ನೀವೆ ಉಹಿಸಿಕೊಳ್ಳಬಹುದು ಪ್ರಿತಿಯ ಮಧುರ ಬಂಧವನ್ನು. ಯಾವೋಬ್ಬ ವಿದೇಶಿಯನೆ ಆಗಲಿ ಅಥವಾ ದೇಶಿಯ ಯಾತ್ರಿಕನೆ ಆಗಲಿ ಉತ್ತರ ಭಾರತ ಪ್ರವಾಸ ಕೈಗೊಂಡರೆಂದರೆ ತಾಜ್ ಮಹಲ್ ಭೇಟಿಯು ಕೂಡ ಅವರ ಪಟ್ಟಿಯಲ್ಲಿ ಇದ್ದೆ ಇರುತ್ತದೆ.
ಈ ರೀತಿಯಾಗಿ ದೆಹಲಿಗೆ ಹತ್ತಿರವಿರುವ ಆಗ್ರಾ ಪಟ್ಟಣದ ಈ ತಾಜ್ ಮಹಲ್ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಪ್ರತಿ ವರ್ಷವು ಆಕರ್ಷಿಸುತ್ತದೆ. ಮತ್ತೊಂದು ವಿಶೇಷವೆಂದರೆ ಪ್ರತಿಯೊಬ್ಬರು ಕೂಡ ಬಿಳಿ ಅಮೃತಶಿಲೆಯ ಈ ಭವ್ಯವಾದ ಮಹಲ್ ಮುಂದೆ ನಿಂತು ಹಿಂದೆ ಹಿನ್ನಿಲೆಯಲ್ಲಿ ತಾಜ್ ಮಹಲ್ ಕಾಣುವ ಹಾಗೆ ಪೋಸ್ ನೀಡಿ ಛಾಯಾ ಚಿತ್ರ ತೆಗೆಸಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಅದರಲ್ಲೂ ಅಂತಾರಾಷ್ಟ್ರೀಯ ಖ್ಯಾತಿಯ ಅನೇಕ ಕಲಾವಿದರು, ಹೆಸರಾಂತ ಜನರು, ಚಿತ್ರ ತಾರೆಗಳು ತಾಜ್ ಮಹಲ್ ಮುಂದೆ ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ.
ಪ್ರಸ್ತುತ ಈ ಲೇಖನದಲ್ಲಿ ಯಾವೆಲ್ಲ ಹೆಸರಾಂತ ಜನರು ತಾಜ್ ಮಹಲ್ ಮುಂದೆ ಪೋಸ್ ನೀಡಿದ್ದಾರೆ ಹಾಗು ತಾಜ್ ಮಹಲ್ ನ ವಿವಿಧ ಆಯಾಮಗಳ ಮ್ಯಾರಾಥಾನ್ ಚಿತ್ರ ಸಫಾರಿಯನ್ನು ನೀಡಲಾಗಿದೆ.
ತಾಜ್ ಮಹಲ್:
ಪ್ರಖ್ಯಾತ ಆಸ್ಟ್ರೇಲಿಯನ್ ಕ್ರಿಕೆಟ್ ಪಟು ಮೈಕೆಲ್ ಕ್ಲಾರ್ಕ್ ಹಾಗು ಅವನ ಮಡದಿ.
ತಾಜ್ ಮಹಲ್:
ಪ್ರಖ್ಯಾತ ಆಸ್ಟ್ರೇಲಿಯನ್ ಕ್ರಿಕೆಟ್ ಪಟು ಬ್ರೆಟ್ ಲಿ ಹಾಗು ಅವನ ಮಡದಿ.
ತಾಜ್ ಮಹಲ್:
ಪ್ರಖ್ಯಾತ ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನಹಿವಾಲ್.
ತಾಜ್ ಮಹಲ್:
ಸುಪ್ರಸಿದ್ಧ ತಬಲಾವಾದಕ ಜಾಕೀರ್ ಹುಸೈನ್.
ತಾಜ್ ಮಹಲ್:
ಹಾಟ್ ಬೆಡಗಿ ಮಲ್ಲಿಕಾ ಶೇರಾವತ್.
ತಾಜ್ ಮಹಲ್:
ಭಾರತದ ಶ್ರೇಷ್ಠ ಉದ್ಯಮಿಗಳಲ್ಲೊಬ್ಬರಾದ ರತನ್ ಜಿ ಟಾಟಾ.
ತಾಜ್ ಮಹಲ್:
ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ಹಾಗು ಪ್ರಸ್ತುತ ಕಾಮೆಂಟೇಟರ್ ರಮೀಜ್ ರಾಜಾ.
ತಾಜ್ ಮಹಲ್:
ಪ್ರಖ್ಯಾತ ಮಾಜಿ ಟೆನ್ನಿಸ್ ತಾರೆ ಬೋರಿಸ್ ಬೇಕರ್ ಪತ್ನಿ ಸಮೇತರಾಗಿ ತಾಜ್ ಮಹಲ್ ನಲ್ಲಿ.
ತಾಜ್ ಮಹಲ್:
ರಷ್ಯಾ ದೇಶದ ಪ್ರಧಾನಿ ದಿಮಿತ್ರಿ ಮೆದ್ವೆದೇವ್.
ಚಿತ್ರಕೃಪೆ: Russavia
ತಾಜ್ ಮಹಲ್:
ಬೋನಿ ಕಪೂರ್ ಅವರ ಮಗ ಅರ್ಜುನ್ ಕಪೂರ್.
ತಾಜ್ ಮಹಲ್:
ನೀಲಿ ಬಾನಿನಲ್ಲಿ ತೇಲುತ್ತಿರುವ ಬಿಳಿ ತೆಪ್ಪದ ಹಾಗೆ ಕಾಣುವ ತಾಜ್.
ಚಿತ್ರಕೃಪೆ: Keshavrana00
ತಾಜ್ ಮಹಲ್:
ಮನಮೋಹಕ ಸೂರ್ಯಾಸ್ತದ ಸಮಯದಲ್ಲಿ ಪ್ರಶಾಂತವಾಗಿ ಗೋಚರಿಸುವ ತಾಜ್ ಮಹಲ್.
ತಾಜ್ ಮಹಲ್:
ಯಮುನಾ ನದಿ ತಟದಲ್ಲಿ ಭವ್ಯವಾಗಿ ನೆಲೆಸಿರುವ ತಾಜ್ ಮಹಲ್.
ಚಿತ್ರಕೃಪೆ: Steve Evans
ತಾಜ್ ಮಹಲ್:
ಕಮಾನಿನಂತೆ ತಾಜ್ ಮಹಲ್ ಗೆ ಸ್ವಾಗತ ಕೋರುತ್ತಿರುವ ತದ್ರೂಪಿ ಮರಗಳು.
ಚಿತ್ರಕೃಪೆ: Siva prabu raveendran
ತಾಜ್ ಮಹಲ್:
ಭೇದ ಭಾವವಿಲ್ಲದ ಪ್ರೇಮ ಸ್ಮಾರಕ ಕಂಡರೆ ಕಾಗೆಗೂ ಸಹ ಪ್ರಿತಿ.
ಚಿತ್ರಕೃಪೆ: Siva prabu raveendran
ತಾಜ್ ಮಹಲ್:
ಹಸಿರು ಸಸ್ಯಗಳು, ಸುಂದರ ಹೂಗಳ ನಡುವೆ ಮನಸೆಳೆವಂತೆ ನಿಂತಿರುವ ತಾಜ್ ಮಹಲ್.
ಚಿತ್ರಕೃಪೆ: Prakash1972 2000
ತಾಜ್ ಮಹಲ್:
ಅದ್ಭುತವಾಗಿ ಗೋಚರಿಸುವ ತಾಜ್ ಮಹಲ್ ನ ಮೀನಾರಿನ ನೋಟ.
ಚಿತ್ರಕೃಪೆ: Ankit2383
ತಾಜ್ ಮಹಲ್:
ತಾಜ್ ಮಹಲ್ ನ ಬಿಳಿ ಬಣ್ಣವೆ ಎಲ್ಲ ಕಡೆ ಪಸರಿಸಿದಾಗ....
ಚಿತ್ರಕೃಪೆ: Mukeshforest
ತಾಜ್ ಮಹಲ್:
ಆಗ್ರಾ ಕೋಟೆಯಿಂದ ನೋಡಿದಾಗ ಕಂಡುಬರುವ ತಾಜ್ ಮಹಲ್ ನೋಟ.
ಚಿತ್ರಕೃಪೆ: Addu2626
ತಾಜ್ ಮಹಲ್:
ಇಳಿ ವಯಸ್ಸಿನಲ್ಲೂ ಪ್ರೇಮಾಂಕುರವಾಗಲು ಕಾರಣವಾಗುವ ತಾಜ್ ಮಹಲ್.
ಚಿತ್ರಕೃಪೆ: Dibyendu
ತಾಜ್ ಮಹಲ್:
ಯಮುನಾ ನದಿ ತಟದಲ್ಲಿ, ತಾಜ್ ಮಹಲ್ ಹಿನ್ನಿಲೆಯಲ್ಲಿ ಪ್ರಾರ್ಥನೆಯಲ್ಲಿ ನಿರತವಾಗಿರುವ ಮಹಿಳೆ.
ಚಿತ್ರಕೃಪೆ: Neelanjan
ತಾಜ್ ಮಹಲ್:
ಪ್ರೇಮ ಸ್ಮಾರಕ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾದರೂ ನಿಲ್ಲದ ಕಾಯಕ ನಮಗೆ....
ಚಿತ್ರಕೃಪೆ: Narender9
ತಾಜ್ ಮಹಲ್:
ಮಳೆಯಾದರೇನು..ಬಿಸಿಲಾದರೇನು...ತಾಜ್ ಮಹಲ್ ನೋಡಲೇಬೇಕು.
ತಾಜ್ ಮಹಲ್:
ಮಂಜು ಮುಸುಕಿದ ವಾತಾವರಣದಲ್ಲಿ ತಾಜ್ ಮಹಲ್ ಅನ್ನು ಗುರುತಿಸುವುದೆ ಒಂದು ರೋಮಾಂಚಕ ಅನುಭವ.
ತಾಜ್ ಮಹಲ್:
ಯಮುನಾ ನದಿ ತಟದಲ್ಲಿ ವಿಧಿ ವಿಧಾನಗಳಲ್ಲಿ ನಿರತರಾದ ಜನ ಸಮೂಹ.
ತಾಜ್ ಮಹಲ್:
ಈದ್ ಉಲ್ ಜುಹಾ ಸಂದರ್ಭದಲ್ಲಿ ಪ್ರಾರ್ಥನೆಯಲ್ಲಿ ನಿರತರಾದ ಮುಸ್ಲಿಮ್ ಬಾಂಧವರು.
ತಾಜ್ ಮಹಲ್:
ಯಮುನಾ ನದಿ ಹರಿದಿರುವ ಆಗ್ರಾದಲ್ಲಿ ದುರ್ಗಾ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ತಾಜ್ ಮಹಲ್:
ತಾಜ್ ಮಹಲ್ ಬಳಿಯಲ್ಲಿ ಒಡಿಶಿ ನೃತ್ಯದಲ್ಲಿ ನಿರತರಾದ ನೃತ್ಯಗಾರರು.
ತಾಜ್ ಮಹಲ್:
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನ ವಿಗ್ರಹಗಳು ಯಮುನಾ ನದಿಯಲ್ಲಿ ವಿಸರ್ಜಿಸಲ್ಪಡುತ್ತವೆ.
ತಾಜ್ ಮಹಲ್:
ರತ್ನ ಗಂಬಳಿ ಹಾಸಿದಂತಿರುವ ಕಾರಂಜಿ ಕೊಳದಲ್ಲಿ ನೀರಾಟದಲ್ಲಿ ತಲ್ಲೀಣರಾದ ಪ್ರವಾಸಿ ಜನ ಸಮೂಹ.
ತಾಜ್ ಮಹಲ್:
ವಿಶ್ವ ಏಡ್ಸ್ ದಿನಾಚರಣೆ ಸಂದರ್ಭದಲ್ಲಿ ಮಕ್ಕಳಿಂದ ರಚಿಸಲಾದ ಕೆಂಪು ರಿಬ್ಬನ್ ಮಾದರಿ.
ತಾಜ್ ಮಹಲ್:
ಈ ಸುಂದರ ಸ್ಮಾರಕಕ್ಕೆ ರಕ್ಷಣೆಯು ಅಷ್ಟೆ ಅತ್ಯಗತ್ಯ.
ತಾಜ್ ಮಹಲ್:
ವಿದೇಶಿ ಪ್ರವಾಸಿಗರಿಂದ 2013 ಅನ್ನು ಸ್ವಾಗತಿಸಲಾದ ರೀತಿ.
ತಾಜ್ ಮಹಲ್:
ಪ್ರಖ್ಯಾತ ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರು ತಾಜ್ ಮಹಲ್ ಮುಂದೆ ನಿಂತು ತೆಗೆಸಿಕೊಂಡ ಚಿತ್ರ.
ತಾಜ್ ಮಹಲ್:
ಈ ಭವ್ಯವಾದ ಸ್ಮಾರಕದ ತುದಿಯನ್ನು ನಾನು ಸುಲಭವಾಗಿ ಮುಟ್ಟಬಲ್ಲೆ.
ಚಿತ್ರಕೃಪೆ: Nimit Kumar Makkar
ತಾಜ್ ಮಹಲ್:
ಸಂತೋಷದಿಂದ ಪೋಸು ಕೊಡುತ್ತಿರುವ ವಿದೇಶಿ ಪ್ರವಾಸಿಗ.
ಚಿತ್ರಕೃಪೆ: Dennis Jarvis
ತಾಜ್ ಮಹಲ್:
ಯಮುನಾ ನದಿಯಲ್ಲಿ ಪೂಜೆಯಲ್ಲಿ ನಿರತರಾದ ಮಹಿಳೆಯರು.
ಚಿತ್ರಕೃಪೆ: Sudiptorana
ತಾಜ್ ಮಹಲ್:
ಬಿಳಿ ಅಮೃತ ಶಿಲೆಯಲ್ಲಿ ಅತ್ಯದ್ಭುತ ವಾಸ್ತು ವಿನ್ಯಾಸ.
ಚಿತ್ರಕೃಪೆ: Roshanjf
ತಾಜ್ ಮಹಲ್:
ಭಾರತ ರಾಷ್ಟ್ರ ಧ್ವಜದ ಎಲ್ಲ ಬಣ್ಣಗಳೂ ಇಲ್ಲೆ ಸಮ್ಮಿಳಿತವಾಗಿವೆ.
ಚಿತ್ರಕೃಪೆ: Koshy Koshy
ತಾಜ್ ಮಹಲ್:
ತಾಜ್ ಮಹಲ್ ಗೆ ಮುತ್ತಿಕ್ಕುತ್ತಿರುವ ಕೆಂಪು ಹೂವುಗಳು.
ಚಿತ್ರಕೃಪೆ: Dennis Jarvis
ತಾಜ್ ಮಹಲ್:
ಸುಂದರ ಸಂಜೆಯ ವೇಳೆ ದಿನದ ಕೆಲಸ ಮುಗಿಸಿ ದಡ ಸೇರಿರುವ ದೋಣಿ.
ಚಿತ್ರಕೃಪೆ: Jhuma Datta
ತಾಜ್ ಮಹಲ್:
ತಾಜ್ ಮಹಲ್ ಗೆ ಹತ್ತಿರದಲ್ಲಿರುವ ಮಸೀದಿ ಹಾಗು ತಾಜ್ ಮಹಲ್.
ಚಿತ್ರಕೃಪೆ: Donelson
ತಾಜ್ ಮಹಲ್:
ನೀಲಿ ಬಾನಿನ ಹಿನ್ನಿಲೆಯಲ್ಲಿ ತಾಜ್ ಮಹಲ್ ಕಂಗೊಳಿಸುವ ರೀತಿ.
ಚಿತ್ರಕೃಪೆ: Amaninder
ತಾಜ್ ಮಹಲ್:
ಎಲ್ಲಿಗೆ ಪಯಣ...ತಾಜ್ ಮಹಲ್ ದಾರಿ....ಒಂಟೆಯ ಮೇಲೆ ಸವಾರಿ...
ಚಿತ್ರಕೃಪೆ: Koshy Koshy
ತಾಜ್ ಮಹಲ್:
ಹಸಿರು ಹುಲ್ಲು ಹಾಸಿನಿಂದ ತಾಜ್ ಮಹಲ್ ಅನ್ನು ಗಮನಿಸಿದಾಗ...
ಚಿತ್ರಕೃಪೆ: SandeepBansalExperiments
ತಾಜ್ ಮಹಲ್:
ಶುಭ್ರವಾದ ಹಸಿರಿನ ಉದ್ಯಾನದ್ಫ಼ಲ್ಲಿ ಹಾಯಾಗಿ ಕುಳಿತು ತಾಜ್ ಮಹಲ್ ಅನ್ನು ವೀಕ್ಷಿಸುವುದೆ ಒಂದು ಚೆಂದದ ಅನುಭವ.
ಚಿತ್ರಕೃಪೆ: Shikha Baranwal
ತಾಜ್ ಮಹಲ್:
ಪ್ರಶಾಂತವಾಗಿ ಕಂಗೊಳಿಸುವ ತಾಜ್ ಮಹಲ್.
ತಾಜ್ ಮಹಲ್:
ಆಗಸದಿ ಸೂರ್ಯ ಜಾರಿ ಹೋದ...ಚಂದ್ರ ಮೇಲೆ ಬಂದ...ಆದರೆ ತಾಜ್ ಮಹಲ್ ನ ಸುಂದರ ನೋಟ ಯಾವಾಗಲೂ ಚೆಂದ.
ಚಿತ್ರಕೃಪೆ: Peretz Partensky
ತಾಜ್ ಮಹಲ್:
ತಾಜ್ ಮಹಲ್ ನ ಮತ್ತೊಂದು ನೋಟ.
ಚಿತ್ರಕೃಪೆ: notnarayan
ತಾಜ್ ಮಹಲ್:
ಸೂರ್ಯನ ಹಿನ್ನಿಲೆಯಲ್ಲಿ ಕಂಗೊಳಿಸುವ ತಾಜ್ ಮಹಲ್.
ಚಿತ್ರಕೃಪೆ: Shefali11011
ತಾಜ್ ಮಹಲ್:
ಶುಭ್ರ ಶ್ವೇತ ವರ್ಣದಲ್ಲಿ ಭವ್ಯವಾಗಿ ಕಾಣುತ್ತಿರುವ ತಾಜ್ ಮಹಲ್.
ಚಿತ್ರಕೃಪೆ: Shobhit Gosain
ತಾಜ್ ಮಹಲ್:
ಬಣ್ಣಗಳ ಚಿತ್ತಾರದಲ್ಲಿ ನಳ ನಳಿಸುವ ತಾಜ್ ಮಹಲ್.
ಚಿತ್ರಕೃಪೆ: Narender9