Search
  • Follow NativePlanet
Share
» »ಮನಾಲಿಯಲ್ಲಿ ನಡೆಯೋ ವಿಶಿಷ್ಟ ಉತ್ಸವ ಧುಂಗ್ರಿ ಮೇಳದ ಬಗ್ಗೆ ಕೇಳಿದ್ದೀರಾ?

ಮನಾಲಿಯಲ್ಲಿ ನಡೆಯೋ ವಿಶಿಷ್ಟ ಉತ್ಸವ ಧುಂಗ್ರಿ ಮೇಳದ ಬಗ್ಗೆ ಕೇಳಿದ್ದೀರಾ?

By Manjula Balaraj Tantry

ಒಂದೇ ದೇಶದಲ್ಲಿ ಅನೇಕ ವಿಭಿನ್ನ ಜಾತಿಯ ಅನೇಕ ಜನರೊಂದಿಗೆ ವಾಸಿಸುತ್ತಿರುವ, ಪ್ರತಿ ಗುಂಪಿನ ಜನರಿಗೂ ತಮ್ಮದೇ ಆದ ಉತ್ಸವಗಳು ಮತ್ತು ಆಚರಣೆಗಳನ್ನು ಹೊಂದಿರುವುದು ಆಶ್ಚರ್ಯವಲ್ಲ.ಇದಕ್ಕೆ ಅನುಗುಣವಾಗಿ ಪ್ರತೀ ಗುಂಪಿನ ಜನರೂ ವಿಭಿನ್ನ ರೀತಿಯ ಧಾರ್ಮಿಕ ಹಿನ್ನೆಲೆ, ಜಾತಿ ಅಥವಾ ಜನಾಂಗೀಯತೆ ತಮ್ಮ ಸ್ವಂತ ಆಚರಣೆಗಳನ್ನು ಆಚರಿಸಲು ತಮ್ಮದೇ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಹೊಂದಿರುತ್ತಾರೆ. ಇಡೀ ದೇಶವು ಭಾರಿ ಉತ್ಸಾಹದಿಂದ ಕೆಲವು ಹಬ್ಬಗಳು, ಮೇಳಗಳು ಮತ್ತು ಸಮಾರಂಭಗಳನ್ನು ಆಚರಿಸುತ್ತದೆ. ಅಂತಹವುಗಳಲ್ಲಿ ಒಂದು ಉತ್ಸವವನ್ನು ಅತ್ಯಂತ ಸುಂದರ ಸ್ಥಳ ಮನಾಲಿಯಲ್ಲಿ, ಧುಂಗ್ರಿ ಮೇಳ ಎನ್ನುವ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇದು ಮೂರು ದಿನಗಳ ಉತ್ಸವವಾಗಿದ್ದು, ಧುಂಗ್ರಿ ಮೇಳವನ್ನು ಆಚರಿಸಲು ಎಲ್ಲಾ ಹತ್ತಿರದ ಹಳ್ಳಿಗಳ ಜನರು ಒಗ್ಗೂಡುತ್ತಾರೆ.

1. ಧುಂಗ್ರಿ ಮೇಳದ ಬಗ್ಗೆ ಸ್ವಲ್ಪ ಮಾಹಿತಿ

1. ಧುಂಗ್ರಿ ಮೇಳದ ಬಗ್ಗೆ ಸ್ವಲ್ಪ ಮಾಹಿತಿ

PC- Ashwin Kumar

ಧುಂಗ್ರಿ ಮೇಳವು ಮೂರು ದಿನದ ಉತ್ಸವವಾಗಿದ್ದು, ಹಿಡಿಂಬಾ ದೇವಿಯ ಹುಟ್ಟುಹಬ್ಬದಂದು ಪ್ರತಿ ವರ್ಷವೂ ನಡೆಸಲಾಗುತ್ತದೆ.ಈ ಮೂರು ದಿನಗಳ ಉತ್ಸವವು ಮೇ 14 ರಿಂದ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಮೇ 16ರ ವರೆಗೆ ನಡೆಯುತ್ತದೆ. ಆದುದರಿಂದ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ನೀವು ಯೋಜಿಸುತ್ತಿದ್ದರೆ, ಈ ಉತ್ಸಾಹಭರಿತ ಆಚರಣೆಯನ್ನು ತಪ್ಪಿಸಿಕೊಳ್ಳಬೇಡಿ.

2. ಹಿಡಿಂಬಾ ದೇವಿ ದೇವಾಲಯ

2. ಹಿಡಿಂಬಾ ದೇವಿ ದೇವಾಲಯ

PC- Ashwin Kumar

ಹಿಡಿಂಬಾ ದೇವಿ ದೇವಾಲಯವು ಈ ಪ್ರದೇಶದ ಅತ್ಯಂತ ಪ್ರಮುಖ ದೇವಾಲಯವೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಇತರ ದೇವರುಗಳು ಮತ್ತು ದೇವತೆಗಳು ಹಿಡಿಂಬಾ ದೇವಿಯ ಜನ್ಮದಿನದ ಸಂದರ್ಭದಲ್ಲಿ ಅಲ್ಲಿ ಹಾಜರಾಗುತ್ತಾರೆಂದು ನಂಬಲಾಗಿದೆ. ಹಾಗಾಗಿ, ಹತ್ತಿರದ ಎಲ್ಲಾ ಹಳ್ಳಿಗಳ ದೇವರುಗಳು ಮತ್ತು ದೇವತೆಗಳ ವಿಗ್ರಹಗಳು ಈ ಜಾತ್ರೆಯ ಮೆರವಣಿಗೆಯಲ್ಲಿ ತರಲಾಗುವುದು.

3. ಧುಂಗ್ರಿ ಮೇಳದ ಇತಿಹಾಸ ಬಗ್ಗೆ ಸ್ವಲ್ಪ

3. ಧುಂಗ್ರಿ ಮೇಳದ ಇತಿಹಾಸ ಬಗ್ಗೆ ಸ್ವಲ್ಪ

PC- hermesmarana

ಮಹಾಭಾರತ ಮಹಾಕಾವ್ಯದ ಪ್ರಮುಖ ಪಾತ್ರವಾದ ಪಾಂಡವ ಸಹೋದರರಲ್ಲಿ ಮೂರನೇ ಸಹೋದರ ಭೀಮನ ಪತ್ನಿ ಹಿಡಿಂಬಾ ದೇವಿಯು ಅತ್ಯಂತ ಶಕ್ತಿಯುತ ರಾಕ್ಷಸಿಯಾಗಿದ್ದು, ಘಟೋಟ್ಕಚನ ತಾಯಿ. ಹಿಡಿಂಬೆಗೆ ಭೀಮನನ್ನು ಸೆಳೆಯಲು ಆಕೆಯ ಸಹೋದರ ಆದೇಶಿಸಿಸುತ್ತಾನೆ.

4. ಭೀಮನ ಪ್ರೇಮದಲ್ಲಿ ಬಿದ್ದ ಹಿಡಿಂಬಿ

4. ಭೀಮನ ಪ್ರೇಮದಲ್ಲಿ ಬಿದ್ದ ಹಿಡಿಂಬಿ

ಆದುದರಿಂದ ರಾಕ್ಷಸರು ಅವನ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಹೊಂದಿರುತ್ತಾರೆ. ಹಿಡಿಂಬೆಯು ಭೀಮನ ಪ್ರೇಮದಲ್ಲಿ ಬೀಳುತ್ತಾಳೆ ಮತ್ತು ತನ್ನ ಸಹೋದರನ ಉದ್ದೇಶಗಳನ್ನು ಭೀಮನಿಗೆ ತಿಳಿಸಿದ ನಂತರ ಭೀಮನು ಅವಳ ಸಹೋದರರನನ್ನು ಕೊಲ್ಲುತ್ತಾನೆ. ಹೀಗೆ ಹಿಡಿಂಬೆಯು ಪಾಂಡವರ ಜೀವವನ್ನು ಉಳಿಸಿ ಭೀಮನ ಮಡದಿಯಾಗುತ್ತಾಳೆ.

5. ದುಂಗ್ರಿ ಬೆಟ್ಟದಲ್ಲಿ ವಾಸಿಸಿದ್ದ ಭೀಮ ಹಾಗೂ ಆತನ ಪತ್ನಿ

5. ದುಂಗ್ರಿ ಬೆಟ್ಟದಲ್ಲಿ ವಾಸಿಸಿದ್ದ ಭೀಮ ಹಾಗೂ ಆತನ ಪತ್ನಿ

ಭೀಮ ಮತ್ತು ಅವನ ಪತ್ನಿ ಧುಂಗರ್ ಬೆಟ್ಟಗಳಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಇಂದು, ಅವರು ವಾಸಿಸುತ್ತಿದ್ದ ದುಂಗ್ರಿ ಬೆಟ್ಟಗಳಲ್ಲಿರುವ ಧುಂಗ್ರಿವನ್ ವಿಹಾರ್ ಎಂಬ ಕಾಡಿನಲ್ಲಿ ಹಿಡಿಂಬಾ ದೇವಸ್ಥಾನವು ನೆಲೆಗೊಂಡಿದೆ. ಬೆಟ್ಟದ ಮೇಲೆ ವಾಸಿಸುವ ಎಲ್ಲಾ ನಿವಾಸಿಗಳ ಮನಸ್ಸನ್ನು ವಶಪಡಿಸಿಕೊಂಡಿದ್ದರಿಂದ ಅವರ ಜನ್ಮದಿನವನ್ನು, ಅತೀ ಪ್ರೇಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿತ್ತು. ಆಕೆಯ ಮರಣದ ನಂತರ,ಈ ಆಚರಣೆಯು ವಾರ್ಷಿಕ ಉತ್ಸವವಾಗಿ ಸಂತೋಷದಿಂದ ಆಚರಿಸಲಾಗುತ್ತದೆ.

6. ಧುಂಗ್ರಿ ಮೇಳಕ್ಕೆ ಏಕೆ ಭೇಟಿ ನೀಡಬೇಕು?

6. ಧುಂಗ್ರಿ ಮೇಳಕ್ಕೆ ಏಕೆ ಭೇಟಿ ನೀಡಬೇಕು?

ಧುಂಗ್ರಿ ಮೇಳವು ಕೇವಲ ಒಂದೇ ಒಂದು ಹಳ್ಳಿಯ ಉತ್ಸವವಲ್ಲ. ಇದು ಹಿಡಿಂಬಾ ದೇವಿಯ ಹುಟ್ಟುಹಬ್ಬವನ್ನು ಆಚರಿಸಲು ಅನೇಕ ಸಮೀಪದ ಹಳ್ಳಿಗಳಿಂದ ಸೇರಿ ಆಚರಿಸುವ ಒಂದು ಪ್ರಮುಖ ಉತ್ಸವವಾಗಿದೆ. ಇಲ್ಲಿಯ ನಿವಾಸಿಗಳು ಹಿಡಿಂಬಾ ದೇವಿಯನ್ನು ಆರಾಧಿಸುತ್ತಾ, ಹಾಡುವುದರ ಮೂಲಕ ಮತ್ತು ನೃತ್ಯ ಇತ್ಯಾದಿಗಳ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಈ ಜಾತ್ರೆಯ ಸಮಯದಲ್ಲಿ ನಡೆಸಲಾಗುವ ಅತ್ಯಂತ ಸಾಮಾನ್ಯ ನೃತ್ಯ ಪ್ರಕಾರವೆಂದರೆ ಕುಲ್ಲು ನಾಟಿ ಜಾನಪದ ನೃತ್ಯ. ವಿವಿಧ ಸಂಸ್ಕೃತಿಗಳನ್ನು ಕಲಿಯಲು ಮತ್ತು ಮನಾಲಿಯ ಜನರು ತಮ್ಮ ಉತ್ಸವಗಳನ್ನು ಮತ್ತು ಆಚರಣೆಗಳನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ನೋಡಲು ಧುಂಗ್ರಿ ಮೇಳಾ ಉತ್ತಮ ಅವಕಾಶವಾಗಿದೆ. ಶ್ರೀಮಂತ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರಶಂಸಿಸಲು ಇದು ಒಂದು ಉತ್ತಮ ಸಮಯ. ಹಾಗಾದರೆ, ಇಂತಹ ಶಾಶ್ವತ ಅನುಭವವನ್ನು ಪಡೆದುಕೊಳ್ಳುವುದರಿಂದ ದರವಿರುವುದು ಏಕೆ?

7. ಮನಾಲಿ ತಲುಪುವುದು ಹೇಗೆ?

7. ಮನಾಲಿ ತಲುಪುವುದು ಹೇಗೆ?

ವಿಮಾನದ ಮೂಲಕ: ಹತ್ತಿರದ ಪ್ರಮುಖ ವಿಮಾನ ನಿಲ್ದಾಣವು ಕುಲು-ಮನಾಲಿ ವಿಮಾನ ನಿಲ್ದಾಣ. ನೀವು ವಿಮಾನ ನಿಲ್ದಾಣವನ್ನು ತಲುಪಿದ ನಂತರ, ನೀವು ಹಿಡಿಂಬಾ ದೇವಿ ದೇವಸ್ಥಾನಕ್ಕೆ ಕ್ಯಾಬ್ ಮೂಲಕ ಪ್ರಯಾಣ
ಮಾಡಬಹುದು.

ರೈಲು ಮಾರ್ಗ: ಜೋಗಿಂದರ್ ನಗರ ರೈಲು ನಿಲ್ದಾಣವು ಸಮೀಪದ ರೈಲು ನಿಲ್ದಾಣವಾಗಿದೆ. ಇದು ದೇವಸ್ಥಾನದಿಂದ 170 ಕಿ.ಮೀ ದೂರದಲ್ಲಿದೆ.

ರಸ್ತೆಯ ಮೂಲಕ: ಮನಾಲಿಯನ್ನು ತಲುಪಲು ಉತ್ತಮ ಮಾರ್ಗವೆಂದರೆ ರಸ್ತೆಯ ಮೂಲಕ, ಈ ಸ್ಥಳವು ಹಚ್ಚ ಹಸಿರಿನಿಂದ ತುಂಬಿದೆ. ಇದು ಲೇಹ್, ಶಿಮ್ಲಾ, ಕುಲ್ಲು, ಧರ್ಮಶಾಲಾ ಮತ್ತು ನವ ದೆಹಲಿಗಳಂತಹ ಉತ್ತಮ ಸ್ಥಳಗಳಿಗೆ ಉತ್ತಮ ಸಂಪರ್ಕ ಹೊಂದಿದ ರಸ್ತೆ ಜಾಲವನ್ನು ಹೊಂದಿದೆ.

ದೆಹಲಿಯಿಂದ ಮನಾಲಿಗೆ ಒಟ್ಟು 559 ಕಿ.ಮೀ. ಆದ್ದರಿಂದ ದೆಹಲಿಯಿಂದ ಮನಾಲಿಯನ್ನು ತಲುಪಲು ಸುಮಾರು 12 ರಿಂದ 14 ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X