Search
  • Follow NativePlanet
Share
» »ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ

ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ

By Vijay

ಇಂದಿನ ಕಾಲಮಾನದಲ್ಲಿ ಕರೆಯಲಾಗುವ ಹಿಂದು ಧರ್ಮವು ಮುಲತಃ ಒಂದು ಸನಾತನ ಧರ್ಮವಾಗಿದ್ದು ವೇದ, ಉಪನಿಷತ್ತುಗಳನ್ನೊಳಗೊಂಡಿರುವ, ಧರ್ಮ ಮಾರ್ಗ, ನೀತಿಗಳನ್ನು ಭೋದಿಸುವಂತಹ ಭಗವದ್ಗೀತೆ, ರಾಮಾಯಣ, ಮಹಾಭಾರತಗಳಂತಹ ಗ್ರಂಥಗಳನ್ನು ಹೊಂದಿರುವ ಅದ್ಭುತ ವ್ಯವಸ್ಥೆಯಾಗಿದೆ.

ಭಾರತದಲ್ಲಿ ಇಂದು ಕಂಡುಬರುವ ಅದೆಷ್ಟೊ ಪುರಾತನ ರಚನೆಗಳು ವೇದಗಳ ಕಾಲದೊಂದಿಗೆ ನಂಟನ್ನು ಹೊಂದಿವೆ. ಇಂತಹ ರಚನೆಗಳು ಕೇವಲ ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರಿಗೆ ಮಾತ್ರವಲ್ಲದೆ ಸಹಸ್ರಾರು ಹಿಂದು ಭಕ್ತರನ್ನೂ ಸಹ ಆಕರ್ಷಿಸುತ್ತವೆ. ಅಂತಹ ಕೆಲವು ಆಕರ್ಷಣೆಗಳ ಪೈಕಿ ಒಂದಾಗಿದೆ ಧೋಸಿ ಬೆಟ್ಟ ಅಥವಾ ಧೋಸಿ ಗುಡ್ಡ.

ನಿಮಗಿಷ್ಟವಾಗಬಹುದಾದ : ಅದ್ಭುತ ದಂತಕಥೆಯ ರಾಜಗೀರ್ ಬೆಟ್ಟ

ಅರಾವಳಿ ಪರ್ವತ ಶ್ರೇಣಿಗಳ ವಾಯವ್ಯ ದಿಕ್ಕಿನ ಕೊನೆಯಲ್ಲಿ, ಬಟಾನು ಬಯಲಾದ ಭೂಮಿಯ ಮೇಲೆ ಅತ್ಯಂತ ಗಾಂಭೀರ್ಯದಿಂದ ನೆಲೆಸಿರುವ ಈ ಧೋಸಿ ಬೆಟ್ಟವು ಸಾವೈರಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇಂದು ಅನೇಕ ಪ್ರವಾಸಿಗರ ಆಕರ್ಷಣೀಯ ಕೆಂದ್ರವಾಗಿ ಹೊರಹೊಮ್ಮಿದೆ. ಈ ಬೆಟ್ಟದ ಕುರಿತು ಕೆಲ ಮಾಹಿತಿ, ಈ ಲೇಖನದ ಮೂಲಕ ನಿಮಗಾಗಿ.

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಧೋಸಿ ಬೆಟ್ಟವು ಭಾರ್ತದ ರಾಜ್ಯಗಳಾದ ಹರಿಯಾಣ ಹಾಗೂ ರಾಜಸ್ಥಾನಗಳ ಗಡಿಗಳಲ್ಲಿ ಚಾಚಿರುವ ಅರಾವಳಿ ಪರ್ವತ ಶ್ರೇಣಿಗಳ ವಾಯವ್ಯಕ್ಕೆ ಅದರ ಕೊನೆಯ ಭಾಗದಲ್ಲಿ ಸಮತಟ್ಟಾದ ಭೂಮಿಯೊಂದರ ಮೆಲೆ ಸ್ಥಿತವಿದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಹರಿಯಾಣದ ಮಹೇಂದ್ರಗಡ್ ಜಿಲ್ಲೆಯ ನರ್ನೌಲ್ ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿ ಈ ಬೆಟ್ಟವನ್ನು ಕಾಣಬಹುದು. ಅದೇ ರೀತಿಯಾಗಿ ರಾಜಸ್ಥಾನ ಭಾಗದಲ್ಲಿರುವ ಈ ಬೆಟ್ಟವು ಝುಂಝುನು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಮೂಲತಃ ಇದೊಂದು ಗತಿಸಿ ಹೋದ ಅಥವಾ ನಂದಿ ಹೋದ ಜ್ವಾಲಾಮುಖಿಯ ಬೆಟ್ಟವಾಗಿದೆ. ಇದೊಂದು ವಿಶಿಷ್ಟ ಬೆಟ್ಟವೆಂದೆ ಹೇಳಬಹುದು, ಏಕೆಂದರೆ ಇಂದಿಗೂ ಲಾವಾ ರಸದಿಂದುಂಟಾದ ಶಿಲಾ ಪದರಗಳನ್ನು ಹೊಂದಿದ್ದು ಲವಲವಿಕೆ ಅಥವಾ ಸೂಪ್ತವಾಗಿರುವ ಲಾವಾ ರಸವನ್ನು ಹೊಂದಿದೆ ಎನ್ನಲಾಗುತ್ತದೆ. ಧೋಸಿ ಬೆಟ್ಟ ಆಗಸದಿಂದ ನೋಡಿದಾಗ...

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಅಷ್ಟೆ ಅಲ್ಲದೆ, ನೀರಿನ ಕೊಳ, ಸುತ್ತಮುತ್ತಲು ಕಾಡು, ನೀರಿನ ತೊರೆ, ಮೂರು ಶಿಖರಗಳು ಹಾಗು ದೇವಾಲಯವನ್ನು ಹೊಂದಿದ್ದು ಸಾಕಷ್ಟು ಕುತೂಹಲ ಕೆರಳಿಸುತ್ತದೆ ಪ್ರವಾಸಿಗರಲ್ಲಿ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಮಹಾಭಾರತ, ಪುರಾಣ ಮುಂತಾದ ಮಹಾ ಗ್ರಂಥಗಳಲ್ಲಿ ಈ ಬೆಟ್ಟದ ಕುರಿತು ಉಲ್ಲೇಖಿಸಲಾಗಿದೆ. ಹೀಗಾಗಿ ವೈದಿಕ ಸಂಸ್ಕೃತಿ ಅಥವಾ ಸನಾತನ ಧರ್ಮದ ಕುರಿತು ಹೆಚ್ಚಿನ ಅಧ್ಯಯನ ಬಯಸುವವರಿಗೆ ಇದೊಂದು ಸೂಕ್ತ ತಾಣವಾಗಬಹುದು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಮಹಾಭಾರತದಲ್ಲಿ ಹೇಳಿರುವಂತೆ ಇದೊಂದು "ಮೂರು ಶಿಖರಗಳ", "ಮೂರು ಜಲಪಾತಗಳ" ತಾಣವಾಗಿದೆ ಹಾಗೂ ಈ ಸ್ಥಳದಲ್ಲಿಯೆ ಚ್ಯವನ ಮಹಾ ಮುನಿಗಳು (ಆರೋಗ್ಯವರ್ಧಕ ಚ್ಯವನಪ್ರಾಶವನ್ನು ಮೊದಲ ಬಾರಿಗೆ ತಯಾರಿಸಿದ್ದ ಋಷಿಗಳು ಇವರು) ತ್ರೇತಾ ಹಾಗೂ ದ್ವಾಪರ ಯುಗಗಳು ಸಂಧಿಸುವ ಸಮಯದಲ್ಲಿ ಪ್ರತ್ಯಕ್ಷರಾಗಿದ್ದೆರೆನ್ನಲಾಗಿದೆ. ಚ್ಯವನ ಮಹಾಮುನಿಗಳು.

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಈ ಬೆಟ್ಟವು ಪ್ರಮುಖವಾಗಿ ಸ್ಥಿತವಿರುವ ಗ್ರಾಮದ ಕಚೇರಿಯ ಇತಿಹಾಸದ ದಾಖಲೆಗಳಲ್ಲಿ ಇದನ್ನು ಪಹಾಡಿ ಧುಂಸ್ರನ್ ಎಂದು ಕರೆಯಲಾಗಿದೆ. ಅಂದರೆ ಧುಂಸರರ ಗುಡ್ಡ ಎಂದು ಇದನ್ನು ಕರೆಯಲಾಗಿದೆ. ಧುಂಸರರು ಮೂಲತಃ ವೈಷ್ಯರಾಗಿದ್ದು, ಕ್ರಮೇಣ ವೇದಾಧ್ಯನಗಳ ಮೂಲಕ ಬ್ರಾಹ್ಮಣರ ಸ್ಥಾನಮಾನಗಳನ್ನು ಪಡೆದರು ಎಂದು ಇತಿಹಾಸದ ಮೂಲಕ ತಿಳಿದುಬರುತ್ತದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಚ್ಯವನ ಮಹಾ ಮುನಿಗಳು ಧುಂಸರರಿಗೆ ಉಪದೇಶ ಹಾಗು ಭೋದನೆ ನೀಡಿ ಅವರನ್ನು ಭಾರ್ಗವ ಸಮುದಾಯವರನ್ನಾಗಿ ಪರಿವರ್ತಿಸಿದರು ಎನ್ನಲಾಗುತ್ತದೆ. ಹೀಗಾಗಿ ಇಂದು ಧುಂಸರರು ಭಾರ್ಗವರಾಗಿ ಗುರುತಿಸಿಕೊಳ್ಳುತ್ತಾರೆನ್ನಲಾಗಿದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಪ್ರಸ್ತುತ ಬೆಟ್ಟದ ನಿರ್ವಹಣೆಯು ಮೂರು ಗ್ರಾಮಗಳ ಪಂಚಾಯತಿಗಳ ಅಡಿಯಲ್ಲಿದೆ. ಅವುಗಳೆಂದರೆ ಧೋಸಿ, ಥಾನಾ ಹಾಗೂ ಕುಲ್ತಜಪುರ. ಈ ಮೂರು ಗ್ರಾಮಗಳು ನೆಲೆಸಿರುವ ದಿಕ್ಕಿನಲ್ಲಿ ಬೆಟ್ಟದ ಮೂರು ತಾತ್ಕಾಲಿಕ ಜಲಪಾತಗಳನ್ನು ಮಹಾಭಾರತದಲ್ಲಿ ಉಲ್ಲೇಖಿಸಿದಂತೆ ಕಾಣಬಹುದಾಗಿದೆ. ಅದು ಕೂಡ ಮಳೆಗಾಲದ ಸಮಯದಲ್ಲಿ ಮಾತ್ರ. ಬೆಟ್ಟ ತಾಣದಲ್ಲಿರುವ ಅತಿಥಿಗೃಹ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಪ್ರಸ್ತುತ, ಮೂರೂ ಗ್ರಾಮಗಳಲ್ಲಿ ಪುರಾತನವಾದ ಜಲಾಶಯವಿದ್ದು ಅಲ್ಲಿನ ಜನರ ನಿರಿನ ಬೇಡಿಕೆಯನ್ನು ಪೂರೈಸುತ್ತದೆ. ಬೆಟ್ಟವು ಭೂಮಟ್ಟದಿಂದ ಸುಮಾರು 900 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಹೇಮಚಂದ್ರ ವಿಕ್ರಮಾದಿತ್ಯ ಅಥವಾ ಹೇಮು ಎಂಬ ರಾಜನಿಂದ ಸುಮಾರು 500 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಕೋಟೆಯ ಅಳಿದುಳಿದ ಅವಶೇಷಗಳನ್ನು ಇಲ್ಲಿ ಕಾನಬಹುದಾಗಿದೆ. ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು 25 ಅಡಿಗಳಷ್ಟು ದಪ್ಪದಾದ ಗೋಡೆಗಳನ್ನು ಈ ಕೋಟೆಗಳಿಗಿದ್ದುದ್ದನ್ನು ಗಮನಿಸಬಹುದು.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಗುಡ್ಡದ ಮೇಲೆ ಚ್ಯವನ ಮಹಾಋಷಿಗಳಿಗೆ ಮುಡಿಪಾದ ದೇವಾಲಯವು ಕೋಟೆಯಂತಹ ರುಪದಲ್ಲೆ ನಿರ್ಮಿಸಲಾಗಿದೆ. ಭಾರ್ಗವ ಸಮುದಾಯದವರು ಈ ದೇವಾಲಯದ ನಿರ್ಮಾತೃಗಳು.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಕುಟ್ಲಜಪುರದಿಂದ ಈ ಗುಡ್ಡ ಏರುತ್ತ ಅರ್ಧ ದಾರಿ ಕ್ರಮಿಸಿದಾಗ ಶಿವಕುಂಡ ಎಂಬ ಕೊಳವು ಸಿಗುತ್ತದೆ. ಇಲ್ಲಿ ಸಂಸ್ಕೃತ ವಿದ್ಯಾಲಯವಿತ್ತು ಹಾಗು ಪ್ರತಿ ದಿನ ನಿರಂತರವಾಗಿ ವೈದಿಕ ರಿಚಗಳು ಅಥವಾ ಶ್ಲೋಕಗಳು ಇಲ್ಲಿ ಉಚ್ಛರಿಸಲ್ಪಡುತ್ತಿದ್ದವು. ಹೀಗಾಗಿ ಮಹಾಭಾರತದಲ್ಲಿ ಇದನ್ನು ರಿಚಾ ಪರ್ವತ ಎಂದು ಕರೆಯಲಾಗಿದೆ. ಮೂರು ದಶಕಗಳ ಹಿಂದಷ್ಟೆ ಈ ಉಚ್ಛಾರಣೆ ರೂಢಿಯು ನಿಂತು ಹೋಗಿದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಮಳೆಗಾಲದ ಸಮಯದಲ್ಲಿ ನೀರನ್ನು ಸಂಗ್ರಹಿಸಲೆಂದು ನಿರ್ಮಿಸಲಾದ ಜಲಾಶಯವೊಂದಿದೆ. ಈ ಬೆಟ್ಟದಲ್ಲಿರುವ ಅಪಾರ ಪ್ರಮಾಣದ ತಾಮ್ರದಾಂಶ ಹಾಗೂ ಇಲ್ಲಿ ಅಪರೂಪವಾಗಿ ಬೇಳೆಯುವ ಔಷಧೀಯ ಗುಣವುಳ್ಳ ಗಿಡ ಮೂಲಿಕೆಗಳ ಪ್ರಭಾವದಿಂದಾಗಿ ಇಲ್ಲಿ ಸಂಗ್ರಹಿತ ನೀರು ಔಷಧಿಯುಕ್ತವಾಗಿದ್ದು ಚರ್ಮ ವ್ಯಾಧಿಗಳ ನಿವಾರಣೆಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಈ ಧಾರ್ಮಿಕ ಮಹತ್ವ ಪಡೆದಿರುವ ಬೆಟ್ಟಕ್ಕೆ ಬರುವ ಭಕ್ತಾದಿಗಳು ಪ್ರದಕ್ಷಿಣೆಯನ್ನು ಹಾಕುತ್ತಾರೆ. ಈ ಪ್ರದಕ್ಷಿಣೆಯು 9 ಕಿ.ಮೀ ಉದ್ದವಾಗಿದ್ದು, ಮಧ್ಯದಲ್ಲಿ ಗುಹೆಯೊಂದನ್ನು ಹೊಂದಿದೆ. ಸ್ಥಳ ಪುರಾಣದ ಪ್ರಕಾರ ಈ ಗುಹೆಯಲ್ಲಿ ಚ್ಯವನ ಮಹಾಮುನಿಗಳು ತಪಗಿಐದಿದ್ದರು. ಬಿಸಿಲಿನ ಶಾಖ ಹೆಚ್ಚಿರುವ ಸಂದರ್ಭದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಈ ಗುಹೆಯು ಪರಿಕ್ರಮಿಸುವವರಿಗೆ ವಿಶ್ರಾಂತಿ ನೀಡುತ್ತದೆ.

ಚಿತ್ರಕೃಪೆ: Sudhirkbhargava

ವಿಶಿಷ್ಟ ಧೋಸಿ ಬೆಟ್ಟ:

ವಿಶಿಷ್ಟ ಧೋಸಿ ಬೆಟ್ಟ:

ಮಹೇಂದ್ರಗಡ್ ಜಿಲ್ಲೆಯ ನರ್ನೌಲ್ ಹಾಗೂ ರಾಜಸ್ಥಾನ ಝುಂಝುನುವಿನಿಂದ ಈ ಬೆಟ್ಟಕ್ಕೆ ಸುಲಭವಾಗಿ ತಲುಪಬಹುದು. ಚ್ಯವನ ಮುನಿಗಳ ದೇವಾಲಯದ ಹೊರತಾಗಿ ಇಲ್ಲಿ ರಾಮ, ಶಿವ ಹಾಗೂ ದೇವಿಯ ದೇವಾಲಯಗಳೂ ಸಹ ಉಪಸ್ಥಿತವಿದೆ. ಸೋಮವತಿ ಅಮವಾಸ್ಯೆಯ ದಿನದಂದು ಇಲ್ಲಿ ಅದ್ದೂರಿಯಾಗಿ ಉತ್ಸವವನ್ನು ಏರ್ಪಡಿಸಲಾಗುತ್ತದೆ.

ಚಿತ್ರಕೃಪೆ: Sudhirkbhargava

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X