Search
  • Follow NativePlanet
Share
» »ದಿನಕ್ಕೆ ಲಕ್ಷಾಂತರ ಬಟ್ಟೆ ಒಗೆಯುವ ಧೋಬಿ ಘಾಟ್‌ಗೆ ಭೇಟಿ ನೀಡಿದ್ದೀರಾ?

ದಿನಕ್ಕೆ ಲಕ್ಷಾಂತರ ಬಟ್ಟೆ ಒಗೆಯುವ ಧೋಬಿ ಘಾಟ್‌ಗೆ ಭೇಟಿ ನೀಡಿದ್ದೀರಾ?

ಧೋಬಿ ಘಾಟ್ ಪ್ರಪಂಚದ ಅತಿದೊಡ್ಡ ಹೊರಾಂಗಣ ಲಾಂಡ್ರಿ ಎಂದು ಜನಪ್ರಿಯವಾಗಿದೆ. ಅಲ್ಲಿ ನಗರದ ಹಲವು ಕಡೆಗಳಲ್ಲಿ ಧೋಬಿಸ್ ಬಟ್ಟೆ ಒಗೆಯುತ್ತಿದ್ದಾರೆ.

ಮುಂಬೈನ ಪ್ರಮುಖ ನಗರದಿಂದ 12 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಧೋಬಿ ಘಾಟ್ ವಿದೇಶಿ ಪ್ರಯಾಣಿಕರಿಗೆ ಮತ್ತು ಮುಂಬೈಗೆ ಭೇಟಿ ನೀಡುವ ಭಾರತೀಯರಿಗೆ ಅತ್ಯಂತ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಧೋಬಿಗಳೂ ಸಾಮೂಹಿಕವಾಗಿ ದಿನಕ್ಕೆ ಲಕ್ಷಾಂತರ ಬಟ್ಟೆ ಒಗೆಯುವುದನ್ನು ಕಣ್ಣಾರೆ ಕಾಣಲು ಧೋಬಿ ಘಾಟ್‌ಗೆ ಹೋಗಬೇಕು.

ಹೊರಾಂಗಣ ಲಾಂಡ್ರಿ

ಹೊರಾಂಗಣ ಲಾಂಡ್ರಿ

PC:Dennis Jarvis
ಧೋಬಿ ಘಾಟ್ ಪ್ರಪಂಚದ ಅತಿದೊಡ್ಡ ಹೊರಾಂಗಣ ಲಾಂಡ್ರಿ ಎಂದು ಜನಪ್ರಿಯವಾಗಿದೆ. ಅಲ್ಲಿ ನಗರದ ಹಲವು ಕಡೆಗಳಲ್ಲಿ ಧೋಬಿಸ್ ಬಟ್ಟೆ ಒಗೆಯುತ್ತಿದ್ದಾರೆ. 1890 ರಲ್ಲಿ ರಚನೆಯಾದ ಧೋಬಿ ಘಾಟ್ ಮುಂಬೈ ಜನರಿಗೆ ನೆರವಾಗುವಂತೆ ಕಾರ್ಯನಿರ್ವಹಿಸುತ್ತಿದೆ.

ಬಟ್ಟೆ ಒಗೆಯುವುದೇ ಕಾಯಕ

ಬಟ್ಟೆ ಒಗೆಯುವುದೇ ಕಾಯಕ

PC: Siddhartha Kandoi
ಘಾಟ್‌ನ ಒಳಭಾಗದಲ್ಲಿ ಕೆಳ ಮಧ್ಯಮ ವರ್ಗದ ಪರಿಸ್ಥಿತಿ ನಿಮಗೆ ತಿಳಿದಿದೆ ಮತ್ತು ಮುಂಬೈ ಪ್ರತಿಯೊಂದು ಮೂಲೆಗಳಿಂದ ಬರುವ ಕೊಳಕು ಬಟ್ಟೆಗಳನ್ನು ತೊಳೆಯುವಲ್ಲಿ ಧೋಬಿಗಳು ನಿರತರಾಗಿರುವುದನ್ನು ನೀವು ನೋಡಬಹುದು. ವಾಸ್ತವವಾಗಿ, ಹಲವಾರು ವರ್ಷಗಳಿಂದಲೂ ಬಟ್ಟೆ ಒಗೆಯುವುದನ್ನೇ ತಮ್ಮ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಹಲವಾರು ಕುಟುಂಬಗಳು ಇಲ್ಲಿವೆ. ಈ ಧೋಬಿ ಘಾಟ್ ಈಗ ಮುನ್ಸಿಪಲ್ ಕೌನ್ಸಿಲ್ ಒಡೆತನದಲ್ಲಿದೆ.

ಮಹಾಲಕ್ಷ್ಮಿನಿಲ್ದಾಣದ ಧೋಬಿ ಘಾಟ್

ಮಹಾಲಕ್ಷ್ಮಿನಿಲ್ದಾಣದ ಧೋಬಿ ಘಾಟ್

PC: Clayton Tang
ಈ ಪ್ರಪಂಚದ ಪ್ರಸಿದ್ಧ ಧೋಬಿ ಘಾಟ್ ಮುಂಬೈನ ಮಹಾಲಕ್ಷ್ಮಿ ನಿಲ್ದಾಣದ ಹತ್ತಿರ ಇದೆ. ಅಲ್ಲಿ ಪ್ರತಿ ದಿನವೂ ಲಕ್ಷಾಂತರ ಬಟ್ಟೆಗಳನ್ನು ತೊಳೆಯಲಾಗುತ್ತದೆ. ಮುಂಬೈನ ವಿವಿಧ ಭಾಗಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ, ತೆರೆದ-ಏರ್ ಲಾಂಡ್ರೋಮ್ಯಾಟ್ ನಲ್ಲಿ ಅವುಗಳನ್ನು ತೊಳೆದು, ಅವುಗಳನ್ನು ಒಣಗಿಸಿ ಕೊಡಲಾಗುತ್ತದೆ.

 200 ಧೋಬಿ ಕುಟುಂಬಗಳು

200 ಧೋಬಿ ಕುಟುಂಬಗಳು

PC: MM
ಸುಮಾರು 200 ಧೋಬಿ ಕುಟುಂಬಗಳು ಈ 1 ಚದರ ಕಿಲೋಮೀಟರಿನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ತಮ್ಮ ದೈನಂದಿನ ಹೊಟ್ಟೆಪಾಡಿಗಾಗಿ ಬೆಳಿಗ್ಗೆ ವಿವಿಧ ಸ್ಥಳಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ತಂದು, ಸೋಪ್‌ ನೀರು / ವಾಷಿಂಗ್ ಸೋಡಾ ತುಂಬಿ‌ದ ಬೇಸಿನ್‌ಗೆ ಬಟ್ಟೆಗಳನ್ನು ಹಾಕಿ ತೊಳೆಯುತ್ತಾರೆ. ಬಟ್ಟೆಯಲ್ಲಿನ ಕೊಳೆ ಹೋಗಲು ಕಲ್ಲುಗಳ ಮೇಲೆ ಹೊಡೆಯುತ್ತಾರೆ. ತೊಳೆದ ನಂತರ ತಂತಿಗಳ ಜಾಲಬಂಧದಲ್ಲಿ ಘಾಟ್‌ನ ಉದ್ದಕ್ಕೂ ಒಣಗಲು ಹಾಕುತ್ತಾರೆ.

ಗಿನ್ನೆಸ್ ಬುಕ್‌ನಲ್ಲಿ ಧೋಬಿ ಘಾಟ್

ಗಿನ್ನೆಸ್ ಬುಕ್‌ನಲ್ಲಿ ಧೋಬಿ ಘಾಟ್

PC: Dennis Jarvis
ಮಾರ್ಚ್ 2011 ರಲ್ಲಿ, ಧೋಬಿ ಘಾಟ್ ತನ್ನ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ನೋಂದಾಯಿಸಿದೆ. ಧೋಬಿ ಕಲ್ಯಾಣ್ ಮತ್ತು ಔಡಿಯಾಗ್ಕ್ ವಿಕಾಸ್ ಸಹಕಾರ ಸಂಘ ಎಂದು ಹೆಸರುವಾಸಿಯಾದ ಸಂಸ್ಥೆಯಾಗಿ ಇದು ಪ್ರಸಿದ್ಧವಾಗಿದೆ. ಈ ಪ್ರಪಂಚದ ಪ್ರಸಿದ್ಧ ತಾಣವು ಕೇವಲ ಲಾಂಡ್ರಿ ಸೇವೆಗಳಿಗೆ ಮಾತ್ರ ಹೆಸರುವಾಸಿಯಾಗಿಲ್ಲ, ಈ ಸ್ಥಳದ ವಿಭಿನ್ನ ಸ್ಥಳೀಯ ಮಾರುಕಟ್ಟೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುವ ಸೀರೆಗಳು ಮತ್ತು ಇತರ ಉಡುಪುಗಳನ್ನು ಮರುಬಳಕೆ ಮಾಡಲು ಸಹ ಬಳಸಲಾಗುತ್ತದೆ.

 ಧೋಬಿಘಾಟ್ ಸಿನಿಮಾ

ಧೋಬಿಘಾಟ್ ಸಿನಿಮಾ

PC:Rudolph.A.furtado
ಅಮೀರ್‌ ಖಾನ್‌ರ ಧೋಬಿಘಾಟ್ ಸಿನಿಮಾದಲ್ಲಿ ಇಲ್ಲಿನ ಪ್ರತಿಯೊಂದು ಚಿತ್ರಣವನ್ನು ನೀಡಲಾಗಿದೆ. ಇಲ್ಲಿನ ಧೋಬಿಗಳ ದೈನಂದಿನ ಜೀವನದ ಬಗ್ಗೆ ತಿಳಿಸಲಾಗಿದೆ. ಮುಂಬೈನಲ್ಲಿರುವ ಕೋಟ್ಯಾಧಿಪತಿ ಕೂಡಾ ಬಟ್ಟೆ ಒಗೆಯಲು ಇವರನ್ನೇ ಅವಲಂಭಿತವಾಗಿದ್ದಾರೆ ಎಂದರೆ ಆಶ್ವರ್ಯಪಡಬೇಕಿಲ್ಲ.

ಮಾರ್ಗದರ್ಶಿ ಶುಲ್ಕ

ಮಾರ್ಗದರ್ಶಿ ಶುಲ್ಕ

PC: François Zeller
ಈ ಸ್ಥಳವು ರಸ್ತೆ ಛಾಯಾಗ್ರಹಣ ಉತ್ಸಾಹಿಗಳಿಗೆ ಉತ್ತಮ ವೇದಿಕೆಯಾಗಿದೆ. ಇದರೊಳಗೆ ಹೋಗಿ ಸಂಪೂರ್ಣ ಮಾಹಿತಿ ಪಡೆಯಬೇಕಾದರೆ ನೀವು ಮಾರ್ಗದರ್ಶಿಗೆ 100-200 ರೂ.ಯನ್ನು ನೀಡಬೇಕು. ಆಗ ಧೋಬಿಘಾಟ್‌ನ ಸಂಪೂರ್ಣ ಚಿತ್ರಣವ್ನು ಕಣ್ಣಾರೆ ನೋಡಬಹುದು. ಮಾಹಿತಿ ಪಡೆಯಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: لا روسا

ಧೋಬಿ ಘಾಟ್ ತಲುಪಲು ಹತ್ತಿರದ ನಿಲ್ದಾಣವೆಂದರೆ ಪಶ್ಚಿಮದ ಸಾಲಿನಲ್ಲಿರುವ ಮಹಾಲಕ್ಷ್ಮಿ ನಿಲ್ದಾಣ. ಮಹಾಲಕ್ಷ್ಮೀಯಲ್ಲಿ ನೀವು ಇಳಿದು ಒಮ್ಮೆ ನಿಲ್ದಾಣದ ಹೊರಗಿನಿಂದ ಹೊರಟು ಸೇತುವೆಯ ಮೇಲೆ ಎಡಕ್ಕೆ ಹೋಗಿ. ಇದು ಫ್ಲೈಓವರ್‌ನ್ನು ಸಂಪರ್ಕಿಸುತ್ತದೆ. ಅದು ಧೋಬಿ ಘಾಟ್ ಇರುವ ರಸ್ತೆಗೆ ನಿಮ್ಮನ್ನು ಕರೆದೊಯ್ಯುತ್ತದೆ.

ಕೇಂದ್ರೀಯ ಅಥವಾ ಬಂದರಿನ ಮಾರ್ಗದಿಂದ ಬರುವವರಿಗೆ, ಬೈಕುಲ್ಲಾ ನಿಲ್ದಾಣವು ಧೋಬಿ ಘಾಟ್ ಕೇವಲ 10 ನಿಮಿಷಗಳ ನಡಿಗೆ ಇರುವ ಅತ್ಯಂತ ಅನುಕೂಲಕರ ಆಯ್ಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X