Search
  • Follow NativePlanet
Share
» »ಮೋಕ್ಷಕ್ಕೆ ಸಂಬಂಧಿಸಿದ ರಹಸ್ಯ; ಏನೀ ಧೇನುಪುರೇಶ್ವರ ದೇವಾಲಯದ ಕಥೆ

ಮೋಕ್ಷಕ್ಕೆ ಸಂಬಂಧಿಸಿದ ರಹಸ್ಯ; ಏನೀ ಧೇನುಪುರೇಶ್ವರ ದೇವಾಲಯದ ಕಥೆ

ತಮಿಳುನಾಡು, ಕೇರಳದಂತಹ ರಾಜ್ಯಗಳು ತಮ್ಮ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಆಧ್ಯಾತ್ಮಿಕತೆಗೂ ವಿಶ್ವದಾದ್ಯಂತ ಪ್ರಸಿದ್ಧಿಹೊಂದಿವೆ. ಇಲ್ಲಿ ಸಾವಿರಾರು ವರ್ಷ ಪುರಾತನ ದೇವಾಲಯಗಳು ಇಲ್ಲಿವೆ. ಅಷ್ಟೇ ಅಲ್ಲದೆ ಇತಿಹಾಸಕ್ಕೆ ಸಂಬಂಧಿಸಿದಂತಹ ಹಲವಾರು ತಾಣಗಳು ಇಲ್ಲಿವೆ.

ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ

ಮಧ್ಯಕಾಲದ ಇತಿಹಾಸದತ್ತ ಗಮನಹರಿಸಿದರೆ ದಕ್ಷಿಣದ ಹಿಂದೂ ರಾಜರುಗಳು ಇಲ್ಲಿ ಅನೇಕ ಭವ್ಯ ಮಂದಿರಗಳನ್ನು ನಿರ್ಮಾಣ ಮಾಡಿದ್ದಾರೆ. ಉತ್ತರ ಭಾರತಕ್ಕೆ ಹೋಲಿಸಿದರೆ ಇಲ್ಲಿನ ಮಂದಿರಗಳು ಎತ್ತರವಾಗಿದೆ. ಇವುಗಳು ಕೇವಲ ಧಾರ್ಮಿಕವಾಗಿ ಮಾತ್ರ ಮುಖ್ಯವಾಗಿಲ್ಲ ಬದಲಾಗಿ ವಾಸ್ತುಕಲೆ, ಶಿಲ್ಪಕಲೆಗೂ ಪ್ರಸಿದ್ಧಿ ಹೊಂದಿದೆ.

ಸಿ.ಎಂ ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?ಸಿ.ಎಂ ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ವಿಶೇಷವಾಗಿ ತಮಿಳುನಾಡು , ಕೇರಳದಲ್ಲಿ ನಿಮಗೆ ಶೈವ, ವೈಷ್ಣವ ಎರಡು ರೀತಿಯ ಮಂದಿಗಳು ಕಾಣಸಿಗುತ್ತವೆ. ಈ ಲೇಖನದಲ್ಲಿ ನಾವು ನಿಮಗೆ ತಮಿಳುನಾಡಿನಲ್ಲಿರುವ ವಿಶೇಷ ಶಿವಮಂದಿರದ ಬಗ್ಗೆ ತಿಳಿಸಲಿದ್ದೇವೆ.

ಧೇನುಪುರೇಶ್ವರ ಮಂದಿರ

ಧೇನುಪುರೇಶ್ವರ ಮಂದಿರ

PC- Booradleyp1

ಈ ಮಂದಿರವು ಶಿವನಿಗೆ ಸಮರ್ಪಿತವಾಗಿರುವುದು. ಇದು ಭಾರತದ ಅತ್ಯಂತ ಪ್ರಾಚೀನ ಶಿವ ಮಂದಿರವಾಗಿದೆ. ಇದು ಚೆನ್ನೈನ ತಂಬರಮ್‌ನ ಸಮೀಪದಲ್ಲಿದೆ. ಧೇನುಪುರೇಶ್ವರ್‌ನ ಹೆಸರಿನ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಧೇನುಪುರೇಶ್ವರ್ ದೇವರು ಒಂದು ಹಸುವಿಗೆ ಮೋಕ್ಷ ಪ್ರಧಾನ ಮಾಡಿದ್ದಾರೆ ಎನ್ನಲಾಗುತ್ತದೆ.

ಹಸುವಾಗಿ ಜನ್ಮತಾಳಿದ ಋಷಿ

ಹಸುವಾಗಿ ಜನ್ಮತಾಳಿದ ಋಷಿ

PC- Booradleyp1

ಕಪಿಲ ಋಷಿಯ ಇನ್ನೊಂದು ಜನ್ಮ ಹಸುವಿನ ರೂಪದಲ್ಲಿ ಆಗಿತ್ತು ಯಾಕೆಂದರೆ ಋಷಿಯು ಶಿವ ಪೂಜೆಯನ್ನು ಸರಿಯಾಗಿ ಮಾಡಿರಲಿಲ್ಲ ಎನ್ನಲಾಗುತ್ತದೆ. ಶಿವಲಿಂಗದ ಪೂಜೆಯ ಸಂದರ್ಭ ಅವರು ತಮ್ಮ ಎಡಗೈಯನ್ನು ಬಳಸಿದ್ದರು ಹಾಗಾಗಿ ಈ ಪಾಪದಿಂದಾಗಿ ಅವರ ಪುನರ್ಜನ್ಮ ಹಸುವಿನ ರೂಪದಲ್ಲಿ ಆಗಿದೆ ಎನ್ನಲಾಗುತ್ತದೆ.

ಹಸುವಿಗೆ ಮೋಕ್ಷವಿತ್ತ ಶಿವ

ಹಸುವಿಗೆ ಮೋಕ್ಷವಿತ್ತ ಶಿವ

ಹಸುವಿನ ರೂಪದಲ್ಲಿರುವ ಋಷಿಯು ನೆಲದಲ್ಲಿ ಹುದುಗಿದ್ದ ಶಿವ ಲಿಂಗನಿಗೆ ಹಾಲನ್ನು ಸುರಿದು ಅಭಿಷೇಕ ಮಾಡುತ್ತಿತ್ತು. ಇದನ್ನು ನೋಡಿದ ಹಸುವಿನ ಒಡೆಯ ಹಸುವು ಹಾಲನ್ನು ನೆಲಕ್ಕೆ ಸುರಿಯುತ್ತಿರುವುದನ್ನು ಕಂಡು ಹಾಲು ಪೋಲುಮಾಡುತ್ತಿರುವುದಾಗಿ ಕ್ರೋಧಿತಗೊಂಡು ಹಸುವಿಗೆ ಶಿಕ್ಷೆ ವಿಧಿಸುತ್ತಾನೆ. ಆದರೂ ಹಸು ಶಿವಭಕ್ತಿಯನ್ನು ಮರೆಯುವುದಿಲ್ಲ ಇದರಿಂದ ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಋಷಿಗೆ ಮುಕ್ತಿ ನೀಡುತ್ತಾನೆ ಎನ್ನುತ್ತದೆ ಪುರಾಣ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಈ ಮಂದಿರವು ಚೆನ್ನೈನ ತಂಬರಮ್ ಬಳಿಯ ಮಂಡಬಕ್ಕಮ್ ಬಳಿ ಇದೆ. ಇಲ್ಲಿಗೆ ನೀವು ವಿಮಾನದಲ್ಲಿ ಬರುವುದಾದರೆ ಚೆನ್ನೈ ಏರ್‌ಪೋರ್ಟ್ ಸಮೀಪದ ವಿಮಾನ ನಿಲ್ದಾಣವಾಗಿದೆ. ರೈಲಿನ ಮೂಲಕ ಬರುವುದಾದರೆ ತಂಬರಮ್ ರೈಲ್ವೆ ಸ್ಟೇಶನ್ ಸಮೀಪದಲ್ಲಿದೆ. ಇನ್ನೂ ಚೆನ್ನೈಯಿಂದ ಇಲ್ಲಿಗೆ ಬೇಕಾದಷ್ಟು ಬಸ್ ಸೌಲಭ್ಯಗಳೂ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X