Search
  • Follow NativePlanet
Share
» »1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

ದೇಖಿಯಾಖೋವಾ ಬೊರ್ನಮ್ ಘರ್ ಅಸ್ಸಾಮಿನ ಜೊರಹಾತ್ ನಗರದಲ್ಲಿರುವ ಏಕಸರನ ಧರ್ಮದ ಪ್ರಾರ್ಥನಾ ಮಂದಿರವಾಗಿದ್ದು ಇಲ್ಲಿರುವ ದಿಪವೊಂದು ಸುಮಾರು 1461 ರಿಂದಲೂ ಉರಿಯುತ್ತಿದೆ ಎನ್ನಲಾಗಿದೆ

By Vijay

ಭಾರತದ ಸಾವಿರಾರು ಸ್ಥಳಗಳಲ್ಲಿ ನೂರಾರು ಅಚ್ಚರಿಗಳಿರುವುದನ್ನು ಕಾಣಬಹುದು. ಅದೆಷ್ಟೊ ಸ್ಥಳಗಳು ಅಮೋಘವಾದ ಪವಾಡಗಳ ಹಿನ್ನೆಲೆಯನ್ನು ಹೊಂದಿದ್ದರೆ ಇನ್ನೆಷ್ಟೊ ಸ್ಥಳಗಳು ತಮ್ಮ ಅಭೂತಪೂರ್ವ ದಂತಕಥೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.

1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

ಸಾಂದರ್ಭಿಕ, ಚಿತ್ರಕೃಪೆ: Arne Hückelheim

ಕೆಲವು ಸ್ಥಳಗಳು ತಮ್ಮ ವಿಚಿತ್ರತೆಯಿಂದಲೆ ಜನರನ್ನು ತಮ್ಮೆಡೆಗೆ ಆಕರ್ಷಿಸುತ್ತವೆ. ಇಂದಿಗೂ ಸಾಕಷ್ಟು ಸ್ಥಳಗಳು ತಮ್ಮಲ್ಲಿರುವ ವಿಶೇಷವಾದ ಶಕ್ತಿಗಳಿಂದ ಜನರನ್ನು ಸೆಳೆಯುತ್ತಿವೆ. ಈ ಸ್ಥಳಗಳಲ್ಲಿನ ವಿಚಿತ್ರತೆ, ಪವಾಡಗಳ ಹಿಂದಿನ ರಹಸ್ಯ ಏನೆ ಇದ್ದರೂ ಇವು ಜನರ ಆಸ್ಥಿಕತೆ ಹಾಗೂ ಭಕ್ತಿಗೆ ಬಿಟ್ಟ ವಿಚಾರ.

ಪ್ರಸ್ತುತ ಇಲ್ಲಿ ಹೇಳಲಾಗಿರುವ ಒಂದು ದೇವಾಲಯದ ಕುರಿತು ನೀವು ತಿಳಿಯಲೇಬೇಕು. ಇದೊಂದು ನಾಮ್ಘರ್. ಅಂದರೆ ಪ್ರಾರ್ಥನಾ ಮಂದಿರ. ಅಸ್ಸಾಮಿ ಭಾಷೆಯಲ್ಲಿ ನಾಮ್ ಎಂದರೆ ಪ್ರಾರ್ಥನೆ ಎಂತಲೂ ಘರ್ ಅಂದರೆ ಮಂದಿರ ಎಂತಲೂ ಅರ್ಥವಿದೆ. ಹೀಗಾಗಿ ಇದೊಂದು ನಾಮ್ಘರ್ ಆಗಿದೆ.

1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

ಚಿತ್ರಕೃಪೆ: Suraj Kumar Das

ಅಷ್ಟೆ ಅಲ್ಲ, ಈ ನಾಮ್ಘರ್ ಅಸ್ಸಾಮಿನ ಏಕಸರನ ಎಂಬ ಅನನ್ಯ ಧರ್ಮವೊಂದರ ಜನರು ಭೇಟಿ ನೀಡುವ ಮಂದಿರ. ಈ ಲೇಖನದಲ್ಲಿ ತಿಳಿಸಲಾದ ಈ ನಾಮ್ಘರ್ ಹೆಸರು ದೇಖಿಯಾಖೋವಾ ಬೊರ್ನಮ್ ಘರ್ ಎಂದು. ಅಸ್ಸಾಂನ ಜೊರಹಾತ್ ಜಿಲ್ಲೆಯ ಜೊರಹಾತ್ ನಗರದಲ್ಲಿ ಈ ಮಂದಿರವಿದೆ.

ಅಸ್ಸಾಂ ಸಂಸ್ಕೃತಿಯ ಪವಿತ್ರ ಗುರುಗಳಾದ ಮಾಧವದೇವ ಎಂಬುವವರು ಈ ಮಂದಿರದ ನಿರ್ಮಾತೃ. ಇವರು ತಮ್ಮ ಶಿಷ್ಯರೊಂದಿಗೆ ಏಕಸರನ ಧರ್ಮವನ್ನು ಪ್ರಚಾರಿಸುತ್ತಿದ್ದರು ಹಾಗೂ ತಮ್ಮ ಗುರುಗಳಾದ ಸ್ರೀಮಂತ ಶಂಕರದೇವರ ಅತ್ಯಂತ ನಂಬುಗೆಯ ಶಿಷ್ಯರಾಗಿ ಹೆಸರು ಪಡೆದಿದ್ದರು.

1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

ಚಿತ್ರಕೃಪೆ: Homen Biswas

ಒಂದೊಮ್ಮೆ ಇವರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾಗ ಮಂದಿರ ನಿರ್ಮಾಣದ ಕುರಿತು ಆಲೋಚನೆ ಬಂದು ಅದಕ್ಕಾಗಿ ಸಾಲ್ ಮರದ ದಿಣ್ಣೆಯೊಂದನ್ನು ತರಿಸಿದ್ದರು. ಆ ದಿನ ರಾತ್ರಿ ಅವರಿಗೆ ಪಕ್ಕದಲ್ಲೆ ಹರಿಯುತ್ತಿದ್ದ ದೇಖಿಯಾಖೋವಾ ನದಿಯು ವಿರುದ್ಧ ದಿಕ್ಕಿನಲ್ಲಿ ಹರಿಯುತ್ತ ಇವರು ಸೇರಿಸಿದ್ದ ಸಾಲ್ ಮರದ ದಿಣ್ಣೆಯನ್ನು ಹೊತ್ತೊಯ್ಯುತ್ತಿರುವ ಕನಸು ಬಿದ್ದಿತು.

ಮಾಟ,ಮಂತ್ರ ಶಕ್ತಿಗಳ ತವರು ಮಯಾಂಗ್

ಪವಾಡವೆಂಬಂತೆ ಮರುದಿನ ಅದೆ ರೀತಿಯ ಘಟನೆ ಜರುಗಿ ಎಲ್ಲರೂ ಆಶ್ಚರ್ಯಚಕಿತರಾದರು. ಇದರಿಂದ ಏನನ್ನೊ ಅರಿತ ಮಾಧವದೇವ ಅವರು ಮರದ ದಿಣ್ಣೆಯನ್ನು ಶಿಷ್ಯರ ಸಹಾಯದಿಂದ ಹೊರ ತೆಗೆದು ತಡಮಾಡಎ ಅಲ್ಲಿಯೆ ಒಂದು ಪ್ರಾರ್ಥನಾ ಮಂದಿರವನ್ನು ನಿರ್ಮಿಸಿ ಅದಕ್ಕೆ ಖಂಬಗಳಾಗಿ ಆ ಮರದ ದಿಣ್ಣೆಯನ್ನು ಬಳಸಿದರು ಹಾಗೂ ಅಲ್ಲಿಯೆ ಒಂದು ನಂದಾ ದೀಪವನ್ನು ಹಚ್ಚಿದರು.

ಭಾರತದ ಅತಿ ಉದ್ದ ರೈಲುಮಾರ್ಗದ ರೈಲು!

ಅವರು ದಿಪ ಉರಿಸಿದ್ದ ಕಾಲ 1461. ಅಂದು ಬೆಳಗಲು ಪ್ರಾರಂಭಿಸಿದ ಆ ದೀಪ ಸತತವಾಗಿ ಇಂದಿಗೂ ಉರಿಯುತ್ತ ಬಂದಿದೆ ಎನ್ನಲಾಗುತ್ತದೆ. ಗುರುಗಳ ನಂತರ ಕಾಲ ಕಾಲಕ್ಕೆ ಬಂದ ಮಂದಿರದ ಅರ್ಚಕರು ಅತ್ಯಂತ ಭಕ್ತಿ-ಶೃದ್ಧೆಗಳಿಂದ ಆ ದೀಪವು ಎಂದಿಗೂ ನಂದದಂತೆ ಇಂದಿಗೂ ನೋಡಿಕೊಳ್ಳುತ್ತ ಬರಿತ್ತಿದ್ದಾರೆನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X