Search
  • Follow NativePlanet
Share
» »ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!

ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!

ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ನಗರವಾಗಿರುವ ಕೊಲ್ಕತ್ತಾದಲ್ಲಿ ಸ್ಥಿತವಿರುವ ಧರ್ಮತಲಾ ಎಂಬ ಪ್ರದೇಶದಲ್ಲಿರುವ ಧರ್ಮರಾಜನ ಮಂದಿರವು ಯಮರಾಜನಿಗೆ ಮುಡಿಪಾದ ವಿಶಿಷ್ಟ ದೇವಾಲಯವಾಗಿದೆ

By Vijay

ಭಾರತದಲ್ಲಿ ಹಿಂದು ಧರ್ಮದ ಭಕ್ತರ ಪ್ರಕಾರ, ಎಷ್ಟೊ ಅನೇಕ ಪವಾಡಗಳನ್ನು ಇಂದಿಗೂ ಮಾಡುತ್ತಿರುವ ಸಹಸ್ರಾರು ಸ್ಥಳಗಳಿವೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ, ಕುರುಡರಿಗೆ ಕಣ್ಣು ನೀಡುವ, ಜೀವನದಲ್ಲಿ ಸಾಕಷ್ಟು ತೊದರೆ ಅನುಭವಿರಿರುವವರಿಗೆ ಅದೃಷ್ಟ ಕಲ್ಪಿಸುವ, ಬಡವರಿಗೆ ಸಂಪತ್ತು ಕರುಣಿಸುವಂತಹ ಸಾಕಷ್ಟು ದೈವಿ ಸನ್ನಿಧಿಗಳಿವೆ.

ಇವೆಲ್ಲವು ಅವರವರ ಭಕ್ತಿ-ನಂಬಿಕೆಗಳಿಗೆ ಬಿಟ್ಟ ವಿಚಾರವಷ್ಟೆ. ಆದರೆ ಪ್ರಸ್ತುತ ಲೇಖನದಲ್ಲಿ ಇದೆ ರೀತಿಯ ಒಂದು ವಿಸ್ಮಯಕರ ದೇವಾಲಯದ ಕುರಿತು ತಿಳಿಯಿರಿ. ಇದರ ವಿಶೇಷತೆ ಎಂದರೆ ಇದು ಹಿಂದುಗಳು ನಂಬುವಂತೆ ಮೃತ್ಯು ದೇವತೆಯಾದ ಹಾಗೂ ಸಾಕಷ್ಟು ಜನರು ಇವನ ಹೆಸರನ್ನು ಕೇಳಿಯೆ ಭಯ ಪಡುವ ಒಬ್ಬ ಮಹಾನ್ ದೇವತೆಗೆ ಮುಡಿಪಾದ ದೇವಾಲಯವಾಗಿದೆ.

ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!

ಚಿತ್ರಕೃಪೆ: Biswarup Ganguly

ಹೌದು, ಇದು ಯಮಧರ್ಮರಾಯನಿಗೆ ಮುಡಿಪಾದ ವಿಶಿಷ್ಟ ದೇವಾಲಯವಾಗಿ ಜನರ ಗಮನ ಸೆಳೆಯುತ್ತದೆ. ಇಲ್ಲಿ ಯಮರಾಜನನ್ನು ಧರ್ಮದೇವತೆಯಾಗಿ ಆರಾಧಿಸಲಾಗುತ್ತದೆ. ಅಂದರೆ ಇದು ಧರ್ಮರಾಜನಿಗೆ ಮುಡಿಪಾದ ಧರ್ಮರಾಜ ಮಂದಿರ ಎಂದೆ ಹೆಸರುವಾಸಿಯಾಗಿದೆ.

ಈ ದೇವಾಲಯ ಸುಮಾರು ಮುನ್ನೂರು ವರ್ಷಗಳ ಅದ್ಭುತ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಶಿಬಪುರದ ಧರ್ಮತಲಾ ಎಂಬ ಸ್ಥಳದಲ್ಲಿ ಸ್ಥಿತವಿದೆ. ಧರ್ಮತಲಾ ಹೆಸರೂ ಸಹ ಈ ಧರ್ಮರಾಜನ ದೇವಾಲಯದಿಂದಲೆ ಬಂದುದಾಗಿದೆ. ಪ್ರಸ್ತುತ ದೇವಾಲಯವಿರುವ ಬೀದಿಯನ್ನು ಲೆನಿನ್ ಸರನ ಎಂಬ ಹೆಸರನ್ನೂ ಪಡೆದಿದ್ದರೂ ಈಗಲೂ ಸಹ ಜನಪ್ರೀಯವಾಗಿ ಧರ್ಮತಲಾ ಎಂಬ ಹೆಸರಿನಿಂದಲೆ ಗುರುತಿಸಲ್ಪಡುತ್ತದೆ.

ಕಾಲು ಬರೆಸುವ ಯಮಧರ್ಮರಾಜನ ಸನ್ನಿಧಿ!

ಚಿತ್ರಕೃಪೆ: Biswarup Ganguly

ಹೌರಾದ ಇತಿಹಾಸ, ಅರ್ಥಾತ್ ಐತಿಝ್ಯಾ ಪ್ರಕಾರ, ಅದರಲ್ಲೂ ವಿಶೇಷವಾಗಿ ಸ್ಥಳೀಯ ಇತಿಹಾಸಕಾರರಾದ ಸಿಬೆಂದು ಮನ್ನಾ ಅವರ ಪ್ರಕಾರ, ಈ ದೇವಾಲಯದಲ್ಲಿರುವ ಮೂಲ ವಿಗ್ರಹವು ಅರಳುತ್ತಿರುವ ಕಮಲದ ಹೂವಿನ ಮೇಲೆ ನಿಂತಿರುವ ವಿಷ್ಣುವಿನದ್ದಾಗಿದೆ.

ಈ ದೇವಾಲಯದ ಕುರಿತು ಸಾಕಷ್ಟು ಐತಿಹಾಸಿಕ ಮಾಹಿತಿ ಲಭ್ಯವಿಲ್ಲ. ಆದರೂ ಲಭ್ಯವಿರುವ ಕೆಲವು ಮಾಹಿತಿಯ ಪ್ರಕಾರ, ಈ ದೇವಾಲಯದ ನಿರ್ಮಾಣ ರಾಯ್ ಚೌಧುರಿ ಕುಟುಂಬವೊಂದರಿಂದ ನಿರ್ಮಿತವಾಗಿದೆ. ಆದರೆ ಇದು ಇಂದು ಧರ್ಮರಾಜನ ಮಂದಿರವಾಗಿಯೆ ಹೆಚ್ಚು ಜನಜನಿತವಾಗಿದೆ.

ಶಿವ ಮತ್ತು ಯಮನ ಕಥೆ ಹೇಳುವ ದೇವಾಲಯ!

ಇದರ ಪ್ರಧಾನ ವಿಶೇಷತೆ ಎಂದರೆ, ಯಾರು ತಮ್ಮ ಅಂಗವೈಕಲ್ಯತೆಯನ್ನು ಅನುಭವಿಸಿ ನರಳುತ್ತಿರುವವರೊ ಅವರಿಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಇಲ್ಲಿ ಮುಖ್ಯ ದೇವರ ವಿಗ್ರಹಗಳ ಜೊತೆ ಕುದುರೆಯ ವಿಗ್ರಹಗಳಿದ್ದು ಅದನ್ನು ಭಕ್ತಿಯಿಂದ ಪೂಜಿಸಿದರೆ ವಿಶೇಷವಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡವರು ಮತ್ತೆ ತಮ್ಮ ಕಾಲುಗಳ ಶಕ್ತಿಯನ್ನು ಮರಳಿ ಪಡೆಯುತ್ತಾರೆ ಎಂಬ ನಂಬಿಕೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X