Search
  • Follow NativePlanet
Share
» »ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಬೆಂಗಳೂರಿನಿಂದ ಕೇವಲ 65 ಕಿ.ಮೀ ಗಳಷ್ಟು ದೂರದಲ್ಲಿರುವ ದೇವರಾಯನದುರ್ಗವು ಒಂದು ರೋಮಾಂಚನಕಾರಿ ಚಾರಣ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತದೆ

By Divya Pandit

ಟ್ರೆಕ್ಕಿಂಗ್ ಮಾಡುವ ಹುಮ್ಮಸ್ಸಲ್ಲಿದ್ದರೆ ಒಂದು ದಿನದ ದೇವರಾಯನ ದುರ್ಗಕ್ಕೆ ಭೇಟಿ ನೀಡಬೇಕು. ಎಷ್ಟು ದೂರ ಕಣ್ಣು ಹಾಯಿಸಿದರೂ ಹಸಿರು ಸಿರಿಯ ನಡುವೆ ತಲೆ ಎತ್ತಿರುವ ದೊಡ್ಡ ದೊಡ್ಡ ಬಂಡೆಗಳು ಗೋಚರಿಸುತ್ತವೆ. ಆ ನುಣುಪಾದ ಬಂಡೆಗಳೇ ಈ ಪ್ರದೇಶದ ವಿಶೇಷ. ಬೆಟ್ಟದ ಮೇಲಿರುವ ನರಸಿಂಹ ದೇವರ ದರ್ಶನ ಮಾಡಿ ಉತ್ಸಾಹ ಇದ್ದರೆ ನಂತರ ಟ್ರೆಕ್ಕಿಂಗ್‍ಗೆ ತೆರಳಬಹುದು.

ದೇವರಾಯನದುರ್ಗ

ಬೆಂಗಳೂರಿನಿಂದ ದೇವರಾಯನ ದುರ್ಗ 65 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 16 ಕಿ.ಮೀ. ತುಮಕೂರಿನಿಂದ 10. ಕಿ.ಮೀ. ದೂರ ದಾಟುತ್ತಿದ್ದಂತೆ ದೇವರಾಯನ ದುರ್ಗದ ಕಾಡು ಕಾಣಲು ಪ್ರಾರಂಭವಾಗುತ್ತದೆ. ಹಾಗೇ ಮುಂದುವರಿದರೆ ದೇವರಾಯನ ದುರ್ಗದ ಬೆಟ್ಟ ಸಿಗುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದದ್ದು.

ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಚಿತ್ರಕೃಪೆ: wikimedia

ದುರ್ಗದಲ್ಲಿ ನೋಡಬೇಕಾದ ಸ್ಥಳ

ಭೋಗ ನರಸಿಂಹ, ಯೋಗ ನರಸಿಂಹ ಹಾಗೂ ಲಕ್ಷ್ಮೀ ನರಸಿಂಹ ಎನ್ನುವ ಮೂರು ದೇವಾಲಯವಿದೆ. ಭೋಗ ನರಸಿಂಹ ಬೆಟ್ಟದ ಬುಡದಲ್ಲಿದ್ದರೆ, ಯೋಗ ನರಸಿಂಹ ಬೆಟ್ಟದ ತುದಿಯಲ್ಲಿದೆ. ಲಕ್ಷ್ಮೀನರಸಿಂಹ ಬೆಟ್ಟದ ಮೊದಲ ಭಾಗದಲ್ಲಿ ಸಿಗುತ್ತದೆ.

ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಚಿತ್ರಕೃಪೆ: wikimedia

ನಾಮದ ಚಿಲುಮೆ

ಇದು ಇಲ್ಲಿಯ ಇನ್ನೊಂದು ಆಕರ್ಷಣೆ. ಪುರಾಣದ ಪ್ರಕಾರ ರಾಮನು ತನ್ನ ಬಿಲ್ಲಿನಿಂದ ಚಿಮ್ಮಿಸಿದ ಚಿಲುಮೆ ಎಂದು ಹೇಳುತ್ತಾರೆ. ಭಕ್ತಾಧಿಗಳ ಪ್ರಕಾರ ಚಿಲುಮೆಯ ಹತ್ತಿರ ಶ್ರೀರಾಮನ ಹೆಜ್ಜೆ ಗುರುತಿದೆ ಎಂದು ಹೇಳುತ್ತಾರೆ. ಈ ಕಾಡಿನಲ್ಲಿ ಅಪರೂಪದ ಆಯುರ್ವೇದದ ಸಸ್ಯಗಳನ್ನು ಬೆಳೆಸಲಾಗಿದೆ. ಪ್ರತಿ ವರ್ಷ ಶ್ರೀನರಸಿಂಹ ಜಯಂತಿ ಮತ್ತು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.

ಹತ್ತಿರದಲ್ಲಿ ಏನೇನು ನೋಡಬಹುದು?

ಅಲ್ಲಿಯ ದುರ್ಗದಹಳ್ಳಿಯಲ್ಲಿ ಶಂಕರಾಚಾರ್ಯರು ಕಟ್ಟಿಸಿರುವ ಸುಂದರವಾದ ದೇವಾಲಯವಿದೆ. ಇನ್ನೂ ಸ್ವಲ್ಪ ದೂರ ಹೋದರೆ ನಾಯಕನ ಕೆರೆಯಿದೆ. ಬೆಟ್ಟದ ಮೇಲೆ ಯೋಗ ನರಸಿಂಹ ಹಾಗೂ ಭೋಗ ನರಸಿಂಹ ದೇವಾಲಯವಿದೆ. ಹಳೆಯ ಕೋಟೆ, ಸೂರ್ಯಾಸ್ತ ನೋಡಲು ಸನ್ ಸೆಟ್ ಪಾಯಿಂಟ್ ಇದೆ.

ಧೈರ್ಯ ಇದ್ದರೆ ಒಮ್ಮೆ ದೇವರಾಯನದುರ್ಗ ಹತ್ತಿ!

ಚಿತ್ರಕೃಪೆ: wikipedia

ಕಾಡಿನೊಳಗೆ

ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಇವೆ. ಆದರೆ ಹತ್ತಿರದಲ್ಲಿ ಅಭಯಾರಣ್ಯವಿಲ್ಲದ ಕಾರಣ ಇವು ನೋಡಲು ಸಿಗುವುದು ಅಪರೂಪ. ಹುಲಿ ಕಾಣಿಸಿಕೊಂಡ ದಾಖಲೆಯಿದೆ.

ಸುಂದರ ದೃಶ್ಯ

ಬೆಟ್ಟದ ಮೇಲೆ ನಿಂತು ನೋಡಿದರೆ ಸುಮಾರು 25.ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X