Search
  • Follow NativePlanet
Share
» »ವೃಷಭ ರಾಶಿಯವರು ಸುತ್ತಾಡಲು ಈ ರೊಮ್ಯಾಂಟಿಕ್ ಸ್ಥಳಕ್ಕೆ ಹೋಗೋದು ಬೆಸ್ಟ್

ವೃಷಭ ರಾಶಿಯವರು ಸುತ್ತಾಡಲು ಈ ರೊಮ್ಯಾಂಟಿಕ್ ಸ್ಥಳಕ್ಕೆ ಹೋಗೋದು ಬೆಸ್ಟ್

ಪ್ರತಿಯೊಂದು ರಾಶಿಯವರಿಗೂ ಸೂಕ್ತವಾದ ಪ್ರವಾಸದ ಸ್ಥಳ ಅನ್ನೋದು ಇರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 20ರಿಂದ ಮೇ 20ರವರೆಗೆ ಜನಿಸಿದವರು ವೃಷಭ ರಾಶಿಯವರಾಗಿದ್ದಾರೆ. ಈ ವರ್ಷ ವೃಷಭ ರಾಶಿಯವರು ಯಾವ ಸ್ಥಳಕ್ಕೆ ಈ ವರ್ಷ ಪ್ರವಾಸ ಹೋದರೆ ಒಳ್ಳೆಯದು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ. ರುಚಿಕರವಾದ ಆಹಾರ ಮತ್ತು ಕೆಲವು ಅದ್ಭುತವಾದ ನೈಸರ್ಗಿಕ ದೃಷ್ಟಿಕೋನಗಳನ್ನು ವೃಷಭ ರಾಶಿಯ ವ್ಯಕ್ತಿಗಳು ಹುಡುಕುತ್ತಿರುತ್ತಾರೆ. ರಾಶಿಚಕ್ರದ ಪ್ರಕಾರ ಅತ್ಯಂತ ರೋಮ್ಯಾಂಟಿಕ್ ವ್ಯಕ್ತಿಗಳಾಗಿರುವ ಇವರು ಹೆಚ್ಚಾಗಿ ಸ್ನೇಹಶೀಲ, ಸ್ವಭಾವದ ಮತ್ತು ಪ್ರಕೃತಿಯ ಸ್ಪರ್ಶವನ್ನು ಹೊಂದಿರುವ ಸ್ಥಳಗಳನ್ನು ಪ್ರೀತಿಸುತ್ತಾರೆ.

ರಾಶಿಚಕ್ರಕ್ಕನುಗುಣವಾಗಿ ಮೇಷ ರಾಶಿಯವರು ಈ ತಾಣಗಳಿಗೆ ಪ್ರವಾಸಹೋಗುವುದು ಸೂಕ್ತರಾಶಿಚಕ್ರಕ್ಕನುಗುಣವಾಗಿ ಮೇಷ ರಾಶಿಯವರು ಈ ತಾಣಗಳಿಗೆ ಪ್ರವಾಸಹೋಗುವುದು ಸೂಕ್ತ

ಉತ್ತರ ಗೋವಾ

ಉತ್ತರ ಗೋವಾ

PC:Anshul24Sharma

ಪಶ್ಚಿಮ ಕರಾವಳಿಯ ಅತ್ಯದ್ಭುತ ಮತ್ತು ಅತಿಯಾಗಿ ಭೇಟಿ ನೀಡಲ್ಪಡುವ ಸ್ಥಳವೆಂದರೆ ಗೋವಾ. 'ಕಾಸ್ಮೊಪಾಲಿಟನ್' ನಗರವಾಗಿರುವ ಗೋವಾ ತನ್ನಲ್ಲಿರುವ ಅದ್ಭುತ ಬೀಚ್‌ಗಳಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಯುವಜನರು ಮಾತ್ರವಲ್ಲದೆ ಹಿರಿಯರಲ್ಲೂ ಕೂಡ ಗೋವಾ ಹೆಚ್ಚು ಜನಪ್ರಿಯವಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಮ್ ಅಥವಾ ಪಣಜಿ ರಸ್ತೆಗಳಲ್ಲಿ ಒಡಾಡುತ್ತ, ರಸ್ತೆ ಬದಿಯಿರುವ ಉಪಹಾರ ಗೃಹಗಳಲ್ಲಿ ಬೇಕಾದರೆ 'ಮೇಡಿಟರೇನಿಯನ್' ಅಥವಾ 'ಕಾಂಟಿನೆಂಟಲ್' ಸಾಂಪ್ರದಾಯಿಕ ಶೈಲಿಯ ಊಟವನ್ನು ಸವಿಯಬಹುದು.

ಬೀಚ್, ಜಲಕ್ರೀಡೆಗಳು

ಬೀಚ್, ಜಲಕ್ರೀಡೆಗಳು

PC:Vinayaraj

ರಜೆ ದಿನಗಳಲ್ಲಂತೂ ಬೀಚ್ ಗಳು ಕೈಬಿಸಿ ಆಹ್ವಾನಿಸುತ್ತವೆ. ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಕ್ಯಾಂಡೋಲಿಮ್ ಬಿಚ್, ಕಲಂಗುಟ್ ಬೀಚ್ ಮತ್ತು ಬಾಗಾ ಬೀಚ್ ಗಳನ್ನು ಕ್ಯಾಂಡೋಲಿಮ್ ಪ್ರದೇಶದಲ್ಲಿ ಕಾಣಬಹುದಾಗಿದೆ. ಬಹುತೇಕ ಎಲ್ಲ ಬೀಚ್ ಗಳಲ್ಲಿ ಬಗೆ ಬಗೆಯ ಜಲಕ್ರೀಡೆಗಳಾದ ಜೆಟ್ ಸ್ಕಿ, ಬನಾನಾ ರೈಡ್ ಮತ್ತು ಪ್ಯಾರಸೇಲಿಂಗ ನಂತಹ ಆಟಗಳು ಲಭ್ಯವಿರುವುದರಿಂದ ನೀರಾಯಾಸವಾಗಿ ದಲ್ಲಾಳಿಗಳ ಸಹಾಯದಿಂದ ಅವುಗಳ ಮಜಾ ಸವಿಯಬಹುದು.

'ಗಾಡ್ಸ್ ಒವ್ನ್ ಕಂಟ್ರಿ' ಕೇರಳ

'ಗಾಡ್ಸ್ ಒವ್ನ್ ಕಂಟ್ರಿ' ಕೇರಳ

PC: Balachand

'ಗಾಡ್ಸ್ ಒವ್ನ್ ಕಂಟ್ರಿ' ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ತಮ್ಮದೆ ಆದ ರೋಚಕ ಕಥೆಗಳು ಮತ್ತು ಸದ್ದಿಲ್ಲದ ಆಹ್ವಾನಗಳಿಂದ ಸದಭಿರುಚಿಯ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಕೇರಳದ ಹದಿನಾಲ್ಕು ಜಿಲ್ಲೆಗಳಾದ ಕಾಸರ್ಗೋಡ್, ಕಣ್ಣೂರ್, ವಾಯ್ನಾಡ್, ಕೋಳಿಕೋಡ್, ಮಲಪ್ಪುರಮ್, ಪಾಲಕ್ಕಾಡ್, ತ್ರಿಶ್ಶುರ್, ಎರ್ನಾಕುಲಮ್, ಇಡುಕ್ಕಿ, ಕೊಟ್ಟಾಯಮ್, ಆಲಪ್ಪುಳಾ (ಅಲ್ಲೆಪ್ಪಿ), ಪತ್ನಾಮತಿಟ್ಟಾ, ಕೊಲ್ಲಮ್, ತಿರುವನಂತಪುರಂ ಪ್ರಸಿದ್ಧ ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ಇವುಗಳಲ್ಲಿ, ಇತರೆ ಇನ್ನು ಹತ್ತು ಹಲವು ರೋಮಾಂಚಕ ಸ್ಥಳಗಳನ್ನು ವಿಕ್ಷೀಸಬಹುದಾಗಿದೆ.

ಮನಮೋಹಕ ಹಿನ್ನೀರಿನ ತಾಣಗಳು

ಮನಮೋಹಕ ಹಿನ್ನೀರಿನ ತಾಣಗಳು

PC:Robinhoodc26

ಇಲ್ಲಿರುವ ಮನಮೋಹಕ ಹಿನ್ನೀರಿನ ತಾಣಗಳೆಂದರೆ ಆಲಪ್ಪುಳಾ ಅಥವಾ ಅಲ್ಲೆಪ್ಪಿ, ಕುಮರಕಂ, ತಿರುವಲ್ಲಂ, ಕೊಲ್ಲಂ, ಕಾಸರ್ಗೋಡ್ ಮುಂತಾದವುಗಳು. ಈ ರೀತಿಯ ಹಿನ್ನೀರಿನಲ್ಲಿನ ದೋಣಿ ಪ್ರಯಾಣವು ಒಂದಿ ವಿಶಿಷ್ಟ ಬಗೆಯ ಉತ್ಸಾಹದ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ವರ್ಷಕ್ಕೊಮ್ಮೆ ಆಚರಿಸಲಾಗುವ 'ಸ್ನೇಕ್ ಬೋಟ್ ರೇಸ್' ಅತ್ಯಂತ ಜನಪ್ರಿಯವಾಗಿದ್ದು, ಬಹುಸಂಖ್ಯೆಯಲ್ಲಿ ಪ್ರವಾಸಿಗರನ್ನು ರಾಜ್ಯಕ್ಕೆ ಭೇಟಿ ನೀಡಲು ಆಕರ್ಷಿಸುತ್ತದೆ. ಈ ಸ್ಪರ್ಧೆಯು ಕೇರಳ ಪ್ರವಾಸೊದ್ಯಮದ ಒಂದು ಪ್ರಮುಖ ಅಂಗವಾಗಿದೆ.

ಎಲ್ಲದರಲ್ಲೂ ಭಿನ್ನತೆ

ಎಲ್ಲದರಲ್ಲೂ ಭಿನ್ನತೆ

PC: Ashcoounter

ಇಲ್ಲಿನ ಜನರ ಉಡುಗೆ ತೊಡುಗೆ, ಆಹಾರದಲ್ಲೂ ಭಿನ್ನತೆ ಇದೆ. ಇಲ್ಲಿನವರು ಲುಂಗಿ ಉಟ್ಟುಕೊಂಡಿರುತ್ತಾರೆ. ಕೇರಳದ ಸಾಂಪ್ರದಾಯಿಕ ಶೈಲಿಯ ರುಚಿಕತ ಆಹಾರವನ್ನು ಸವಿಯಲು ಕೇರಳಕ್ಕೆನೇ ಹೋಗಬೇಕು. ಇಡಿಯಪ್ಪ, ಮೀನು ಪದಾರ್ಥ ಇಲ್ಲಿ ಫೇಮಸ್.

Read more about: india travel kerala goa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X