Search
  • Follow NativePlanet
Share
» »ವೃಶ್ಚಿಕ ರಾಶಿಯವರ ವ್ಯಕ್ತಿತ್ವಕ್ಕೆ ಹೊಂದುವ ಪ್ರವಾಸಿ ತಾಣ ಇದು

ವೃಶ್ಚಿಕ ರಾಶಿಯವರ ವ್ಯಕ್ತಿತ್ವಕ್ಕೆ ಹೊಂದುವ ಪ್ರವಾಸಿ ತಾಣ ಇದು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 23ರಿಂದ ನವಂಬರ್ 21 ರವರೆಗೆ ಜನಿಸಿದವರು ವೃಶ್ಚಿಕ ರಾಶಿಯವರಾಗಿರುತ್ತಾರೆ. ಇವರು ಆಕರ್ಷಕ ಮತ್ತು ಬಲವಾದ ಇಚ್ಛಾಶಕ್ತಿಯುಳ್ಳ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಜೀವನವನ್ನು ಉತ್ಸಾಹದಿಂದ ಕಳೆಯುತ್ತಾರೆ. ಇವರಲ್ಲಿರುವಷ್ಟು ಉತ್ಸಾಹ ಬೇರೆ ಯಾವ ರಾಶಿಯವರಲ್ಲೂ ಕಾಣಸಿಗುವುದಿಲ್ಲ. ವೃಶ್ಚಿಕ ರಾಶಿಯವರು ಪ್ರಕೃತಿ ಸೌಂದರ್ಯವನ್ನು ಆನಂದಿಸುವುದರ ಜೊತೆಗೆ ಸಾಹಸಮಯ ಚಟುವಟಿಕೆಯನ್ನೂ ಇಷ್ಟಪಡುವವರಾಗಿರುತ್ತಾರೆ.

ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...

ಸಾಂಪ್ರದಾಯಿಕ ಅರಮನೆಗಳಿಂದ ಕಂಗೊಳಿಸುವ ಉದಯಪುರ

ಸಾಂಪ್ರದಾಯಿಕ ಅರಮನೆಗಳಿಂದ ಕಂಗೊಳಿಸುವ ಉದಯಪುರ

PC: Geri

ಉದಯಪುರವು ಅದ್ಭುತವಾದುದು. ಸಾಂಪ್ರದಾಯಿಕ ಅರಮನೆಗಳು, ವಸ್ತು ಸಂಗ್ರಹಾಲಯಗಳು ಮತ್ತು ಹೊಳೆಯುವ ಸರೋವರಗಳು ಉದಯಪುರ್‌ನ ಸೊಬಗು ಭಾರತದ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ಉದಯ್‍ಪುರಗಳ ಬೀದಿಗಳ ಮೂಲಕ ಬಣ್ಣಗಳನ್ನು ನೆನೆಸುವ ಮತ್ತು ಸಂಸ್ಕøತಿಯ ವೈವಿದ್ಯತೆಯ ಮೂಲಕ ನಿಮ್ಮ ಪ್ರೀತಿಪಾತ್ರರ ಜೊತೆ ಕಾಲ ಕಳೆಯಿರಿ. ಇಲ್ಲಿ ಮುಖ್ಯವಾಗಿ ದೋಣಿ ಸವಾರಿಯನ್ನು ಆನಂದಿಸಿ. ಮಧುಚಂದ್ರಕ್ಕೆ ಸೂಕ್ತವಾದ ಸ್ಥಳ ಎಂದೇ ಹೇಳಬಹುದು.

ಪೂರ್ವದ ವೆನಿಸ್

ಪೂರ್ವದ ವೆನಿಸ್

PC: ArishG

ಉದಯ್‌ಪುರ್‌ನ್ನು ಬಿಳಿ ಬಣ್ಣದ ನಗರ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಲೆಕ್ಕವೇ ಇಲ್ಲದಷ್ಟು ನದಿಗಳು ಮತ್ತು ಸುಂದರವಾದ ಅಮೃತಶಿಲೆಯಿಂದ ನಿರ್ಮಾಣ ಮಾಡಿದ ಕಟ್ಟಡಗಳಿಗೆ ಪ್ರತೀತಿ. ಇಲ್ಲಿ ಹೆಚ್ಚಾಗಿ ನದಿಗಳು ಇದ್ದ ಕಾರಣದಿಂದ ಈ ಪ್ರದೇಶವನ್ನು "ಪೂರ್ವದ ವೆನಿಸ್" ಎಂದು ಮತ್ತು "ನದಿಗಳ ನಗರ" ಎಂದು ಕೂಡ ಕರೆಯುತ್ತಾರೆ. ರಾಜಸ್ಥಾನದಲ್ಲಿರುವ ಅನೇಕ ನಗರಗಳಲ್ಲಿ ಉದಯ್‍ಪುರ ಕೂಡ ಒಂದು. ಆದರೆ ಉದಯ್‍ಪುರದಲ್ಲಿರುವ ದೊಡ್ಡ-ದೊಡ್ಡ ಕೋಟೆಗಳು, ವರ್ಷದಾದ್ಯಂತ ಜನರನ್ನು ಆಕರ್ಷಿಸುವ ಪ್ರಧಾನವಾದ ಆಕರ್ಷಣೆಗಳು ಇಲ್ಲಿವೆ.

ಉದಯ ಸಿಂಗ್‌ ಸ್ಥಾಪಿಸಿದ ಉದಯಪುರ

ಉದಯ ಸಿಂಗ್‌ ಸ್ಥಾಪಿಸಿದ ಉದಯಪುರ

1570 ರಲ್ಲಿ ಮಹಾರಾಣಾ ಉದಯಸಿಂಹ ಈ ನಗರಸ್ಥಾಪನೆ ಮಾಡಿದ. ಹಾಗಾಗಿ ಇದಕ್ಕೆ ಉದಯಪುರ ಎಂಬ ಹೆಸರು ಬಂದಿದೆ. ಪಿಚೋಡಾ ಸರೋವರದ ಪೂರ್ವ ದಂಡೆಯ ಮೇಲೆ ಆತ ಈ ನಗರವನ್ನು ಸ್ಥಾಪಿಸಿ ಸುತ್ತ ಭದ್ರವಾದ 30 ಮೀ. (100) ಎತ್ತರದ ಕೋಟೆ ಕಟ್ಟಿಸಿದ. ಇಲ್ಲಿರುವ ಅರಮನೆ ಇಡೀ ರಾಜಾಸ್ತಾನದಲ್ಲೇ ಅತ್ಯಂತ ದೊಡ್ಡದು. 1571ರಲ್ಲಿ ಕಟ್ಟಿಸಲಾದ ಈ ಅರಮನೆಯನ್ನು ಮುಂದೆ ಪದೇ ಪದೇ ವಿಸ್ತರಿಸಲಾಗಿದ್ದು ಇದು ಹಲವುಬಗೆಯ ಶಿಲ್ಪಶೈಲಿಗಳನ್ನೊಳಗೊಂಡಿದೆ.

ಷಾ ಜಹಾನ್ ಇಲ್ಲಿ ವಾಸಿಸುತ್ತಿದ್ದನಂತೆ

ಷಾ ಜಹಾನ್ ಇಲ್ಲಿ ವಾಸಿಸುತ್ತಿದ್ದನಂತೆ

PC: S Ballal,

ಪಿಚೋಡಾ ಸರೋವರದಲ್ಲಿನ ಎರಡು ದ್ವೀಪಗಳೂ ಅವುಗಳ ಮೇಲೆಅಮೃತಶಿಲೆಯಿಂದ ನಿರ್ಮಿತವಾದ ಜಗಮಂದಿರ ಮತ್ತು ಜಗನಿವಾಸ ಅರಮನೆಗಳೂ ಇತಿಹಾಸ ಪ್ರಸಿದ್ಧ. ಮೊಗಲ್ ಚಕ್ರವರ್ತಿ ಜಹಾಂಗೀರ ಮಗ ಷಾ ಜಹಾನ್ ತನ್ನ ತಂದೆಯ ವಿರುದ್ಧ ಬಂಡಾಯವೆದ್ದಾಗ ಈ ದ್ವೀಪಗಳಲ್ಲೊಂದರಲ್ಲಿ ವಾಸಿಸುತ್ತಿದ್ದನೆಂದು ಹೇಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X