India
Search
  • Follow NativePlanet
Share
» »ದಾರಾಸುರಂನ ಐರಾವತೇಶ್ವರ ದೇವಾಲಯದ ವಾಸ್ತುಶಿಲ್ಪ ಅದ್ಭುತ

ದಾರಾಸುರಂನ ಐರಾವತೇಶ್ವರ ದೇವಾಲಯದ ವಾಸ್ತುಶಿಲ್ಪ ಅದ್ಭುತ

ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳು ನಾಡಿನ ರಾಜಧಾನಿ ಚೆನೈನಿಂದ 380 ಕಿ.ಮೀ ದೂರದಲ್ಲಿದೆ.

ಐರಾವತೇಶ್ವರ ದೇವಾಲಯ

ಐರಾವತೇಶ್ವರ ದೇವಾಲಯ

PC:wikicommons
ಮೂಲತಃ ಇದನ್ನು ರಾಜರಾಜಪುರಂ ಎಂದು ಕರೆಯುತ್ತಿದ್ದರು. 2001ರಲ್ಲಿ ಈ ಪ್ರದೇಶದ ಜನಸಂಖ್ಯೆ ಸುಮಾರು 15000. ದಾರಾಸುರಂನ ಸುತ್ತಮುತ್ತಲ ಪ್ರವಾಸಿ ತಾಣಗಳು ದಾರಾಸುರಂನಲ್ಲಿನ ಪ್ರಮುಖ ಆಕರ್ಷಣೆ ಇಲ್ಲಿನ ಐರಾವತೇಶ್ವರ ದೇವಾಲಯ. ಇದನ್ನು ಚೋಳರ ದೊರೆ ಎರಡನೇ ರಾಜರಾಜ ಚೋಳನ ಕಾಲದಲ್ಲಿ ನಿರ್ಮಿಸಲಾಯಿತು.

ವಿಶ್ವಪಾರಂಪರಿಕ ತಾಣ

ವಿಶ್ವಪಾರಂಪರಿಕ ತಾಣ

PC: wikicommons
12 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ತಮಿಳು ದೇವಾಲಯ ವಾಸ್ತುಶಿಲ್ಪದ ಸುವರ್ಣಯುಗದ ಹೆಮ್ಮೆಯ ಕುರುಹಾಗಿ ನಿಂತಿದೆ. ಯುನೆಸ್ಕೋ ಇದನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಐರಾವತೇಶ್ವರ ದೇವಾಲಯವು ತಂಜಾವೂರಿನಿಂದ 35 ಕಿ.ಮೀ ದೂರದಲ್ಲಿದೆ. ತಂಜಾವೂರು ಮತ್ತು ದಾರಾಸುರಂನಲ್ಲಿನ ದೇವಾಲಯಗಳನ್ನು ಚೋಳರ ಕಾಲದಲ್ಲೇ ನಿರ್ಮಿಸಿರುವುದರಿಂದ ಇವುಗಳ ವಾಸ್ತುಶಿಲ್ಪವು ಒಂದೇ ರೀತಿಯಲ್ಲಿದೆ.

ರಾಜಾ ಗಂಭೀರಾ

ರಾಜಾ ಗಂಭೀರಾ

PC: Ssriram mt
ಆನೆ ರಥವನ್ನು ಎಳೆಯುವುದರಿಂದ ಮುಖ್ಯ ಮಂಟಪವನ್ನು ರಾಜಾ ಗಂಭೀರಾ ಎಂದು ಕರೆಯಲಾಗುತ್ತದೆ. ಸೀಲಿಂಗ್ ತೆರೆದ ಕಮಲದೊಳಗೆ ಶಿವ ಮತ್ತು ಪಾರ್ವತಿಯ ಸುಂದರವಾದ ಕೆತ್ತನೆಯನ್ನು ಹೊಂದಿದೆ. ಕೈಲಾಸವನ್ನು ಹೊತ್ತ ರಾವಣನ ಕಲ್ಲಿನ ಚಿತ್ರಣವು ಕಾರ್ಯವೈಖರಿಯ ಉತ್ತಮ ಮಾದರಿಯಾಗಿದೆ. ವೀಣೆ ಇಲ್ಲದೆ ಸರಸ್ವತಿ, ಬುದ್ಧ, ಭಿಕ್ಷಟನೆ, ಅರ್ಧನಾರೀಶ್ವರ, ಬ್ರಹ್ಮ ಮತ್ತು ಸೂರ್ಯನ ಶಿಲ್ಪವನ್ನು ನೋಡಬಹುದು.

ದಾರಾಸುರಂನ ಹವಾಮಾನ

ದಾರಾಸುರಂನ ಹವಾಮಾನ

PC: wikicommons

ದಾರಾಸುರಂನಲ್ಲಿ ಸೂರ್ಯರಶ್ಮಿಗಳು ತೀಕ್ಷ್ಣವಾಗಿದ್ದು, ಇಲ್ಲಿನ ಹವಾಮಾನವು ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಆದ್ದರಿಂದ ಧಗೆಯನ್ನು ಸಹಿಸುವುದು ಅಸಾಧ್ಯ. ಬೇಸಿಗೆಯಲ್ಲಿ ಇದು ಹೆಚ್ಚಾಗಿರುತ್ತದೆ. ಉಳಿದ ಸಮಯಗಳಲ್ಲಿ ಕೂಡ ಇಲ್ಲಿ ಧಗೆ ಇದ್ದೇ ಇರುತ್ತದೆ. ಆದ್ದರಿಂದ ನೀವೇನಾದರೂ ಇಲ್ಲಿಗೆ ಪ್ರವಾಸಕ್ಕೆಂದು ಹೋದರೆ ಹತ್ತಿಯ ಬಟ್ಟೆಗಳನ್ನು ಕೊಂಡೊಯ್ಯುವುದು ಉತ್ತಮ.

ದಾರಾಸುರಂ ತಲುಪುವುದು ಹೇಗೆ?

ದಾರಾಸುರಂ ತಲುಪುವುದು ಹೇಗೆ?

PC: Itsmalay
ರಸ್ತೆಯ ಮೂಲಕ ದಾರಾಸುರಂ ತಲುಪುದು ಅತ್ಯಂತ ಸುಲಭದ ಮಾರ್ಗ. ಕುಂಬಕೋಣಂನಿಂದ ಇಲ್ಲಿಗೆ ಬಸ್ ಸೌಕರ್ಯವಿದೆ. ಕುಂಬಕೋಣಂ ಇಲ್ಲಿಗೆ 30 ಕಿಮೀ ದೂರದಲ್ಲಿರುವುದರಿಂದ ಬಸ್ ದರಗಳು ದುಬಾರಿಯಲ್ಲ. ಅಲ್ಲದೆ ಸೇಲಂ ಮತ್ತು ತಂಜಾವೂರಿನಿಂದಲೂ ಇಲ್ಲಿಗೆ ಬಸ್ ಸೌಕರ್ಯವಿದೆ. ಇವುಗಳ ದರ ಕೂಡ ಹೆಚ್ಚೇನಲ್ಲ 200-300 ರೂಗಳ ನಡುವಿರುತ್ತದೆ.

ದಾರಾಸುರಂನಲ್ಲಿ ರೈಲು ನಿಲ್ದಾಣವಿದೆ. ಆದರೆ ಇಲ್ಲಿಗೆ ಎಲ್ಲ ಕಡೆಯಿಂದಲೂ ರೈಲುಗಳು ಬರುವುದಿಲ್ಲ. ಆದರೆ ಕುಂಬಕೋಣಂ ಮತ್ತು ತಂಜಾವೂರಿನಿಂದ ನಿಯಮಿತವಾಗಿ ರೈಲು ಸಂಚಾರವಿದೆ. ಕುಂಬಕೋಣಂ ಮತ್ತು ತಂಜಾವೂರಿನಿಂದ ಚೆನೈ, ಬೆಂಗಳೂರು, ತಿರುಚ್ಚಿ ಮತ್ತು ಮಧುರೈಗೆ ಹೋಗುವ ರೈಲುಗಳು ದಾರಾಸುರಂನ ಮೂಲಕ ಹಾದು ಹೋಗುತ್ತದೆ. ಹಾಗಾಗಿ ಇಲ್ಲಿಗೆ ರೈಲಿನ ಮೂಲಕ ತಲುಪಬಹುದು.

ದಾರಾಸುರಂಗೆ ಹತ್ತಿರದ ವಿಮಾನನಿಲ್ದಾಣ ತಿರುಚನಾಪಳ್ಳಿ. ಇಲ್ಲಿಂದ ದಾರಾಸುರಂಗೆ ಟ್ಯಾಕ್ಸಿ ಸೌಲಭ್ಯವಿದೆ. ಇಲ್ಲಿಂದ ದಾರಾಸುರಂ ತಲುಪಲು ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಚೆನೈಗೆ ವಿಮಾನದಲ್ಲಿ ಬಂದು ಅಲ್ಲಿಂದ ಕೂಡ ದಾರಾಸುರಂಗೆ ರಸ್ತೆಯ ಮಾರ್ಗವಾಗಿ ತಲುಪಬಹುದು. ಚೆನೈನಿಂದ ಇಲ್ಲಿಗೆ ತಲುಪಲು ಐದೂವರೆ ಗಂಟೆ ಕಾಲ ಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X