Search
  • Follow NativePlanet
Share
» »ಕರಕೊರಂ ಬಿಟ್ಟರೆ ಇಂತಹ ವಿಸ್ಮಯ ತಾಣವಿರುವುದು ನಮ್ಮ ರಾಜ್ಯದಲ್ಲಿ ಮಾತ್ರ!

ಕರಕೊರಂ ಬಿಟ್ಟರೆ ಇಂತಹ ವಿಸ್ಮಯ ತಾಣವಿರುವುದು ನಮ್ಮ ರಾಜ್ಯದಲ್ಲಿ ಮಾತ್ರ!

ಸಿಂಥೇರಿ ರಾಕ್ಸ್ ಅಥವಾ ಸಿಂಥೇರಿ ಬಂಡೆಕಲ್ಲು ದಾಂಡೇಲಿಯಿಂದ 31 ಕಿಮೀ ದೂರದಲ್ಲಿದೆ. ದಾಂಡೇಲಿಯ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಈ ಐತಿಹಾಸಿಕ ತಾಣವನ್ನು 20 ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಜನಸಂದಣಿಯಿಂದ ದೂರವಿರಲು ಇಷ್ಟಪಡುವ ಪ್ರವಾಸಿಗರಿಗೆ, ಒಂದು ದಿನದ ವಿಹಾರಕ್ಕೆ ಹೇಳಿ ಮಾಡಿಸಿದಂತಿದೆ ಈ ಸ್ಥಳ. ಛಾಯಾಗ್ರಹಣಕ್ಕೂ ಇದು ಸೂಕ್ತ ತಾಣವಾಗಿದೆ.

ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಸಿಂಥೇರಿ ರಾಕ್ಸ್ ಅನ್ನು ದಾಂಡೇಲಿಗೆ ಭೇಟಿ ನೀಡಿದಾಗ ನೋಡುವುದನ್ನು ಮರೆಯದಿರಿ. ಉತ್ತರ ಪಾಕಿಸ್ತಾನದ ಕಾರಕೊರಂ ಬಿಟ್ಟರೆ ಇಂತಹ ವಿಸ್ಮಯ ತಾಣವಿರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಅಂದಹಾಗೆ ಇದಕ್ಕೆ ಸಿಂಥೇರಿ ರಾಕ್ಸ್ ಎನ್ನಲು ಕಾರಣವೇನು? ಇಲ್ಲಿಗೆ ಬರುವುದು ಹೇಗೆ? ಹೀಗೆ ಮುಂತಾದವುಗಳ ಕುರಿತ ಎಲ್ಲಾ ವಿವರಗಳು ಇಲ್ಲಿವೆ.

ಸಿಂಥೇರಿ ರಾಕ್ಸ್ ಹೆಸರು ಬರಲು ಕಾರಣ…

ಸಿಂಥೇರಿ ರಾಕ್ಸ್ ಹೆಸರು ಬರಲು ಕಾರಣ…

ಇದರ ಬಗ್ಗೆ ಹಲವರು ಹಲವು ರೀತಿಯಲ್ಲಿ ಬಣ್ಣಿಸುತ್ತಾರೆ. ಸಿಂಥೇರಿ ಎಂಬುದು ಒಂದು ಬಗೆಯ ಶಿಲೆಯ ಹೆಸರು. ಇದು ಬಹೃತ್ ಗಾತ್ರದ ಏಕಶಿಲೆಯಾಗಿರುವುದರಿಂದ ಇದಕ್ಕೆ ಸಿಂಥೇರಿ ರಾಕ್ಸ್ ಎನ್ನುತ್ತಾರಂತೆ. ಕೆಲವು ಮೂಲಗಳ ಪ್ರಕಾರ, ಸಿಂಥೇರಿ ಒಂದು ಬೃಹತ್ ಗಾತ್ರದ ಲೈಮ್ ಸ್ಟೋನ್ ಬಂಡೆ ಆಗಿತ್ತು. ಕೆಲವು ಮಿಲಿಯನ್ ವರ್ಷಗಳ ಹಿಂದೆ ಜ್ವಾಲಾಮುಖಿ ಸ್ಫೋಟಗಳಿಂದ ಇದು ರೂಪುಗೊಂಡಿತಂತೆ. ಮಿಸ್ ಸಿಂಥೆರಾ ಎಂಬುವವರು ಈ ಸ್ಥಳವನ್ನು ಕಂಡುಹಿಡಿದಿದ್ದರಿಂದ ಇದಕ್ಕೆ ಈ ಹೆಸರನ್ನು ಇಡಲಾಗಿದೆ ಎಂದೂ ನಂಬಲಾಗಿದೆ. ಬಂಡೆಯು 300 ಅಡಿ ಎತ್ತರ ಮತ್ತು 400 ಅಡಿ ಉದ್ದದವಿದೆ.

ಕಾನೇರಿ ನದಿಯ ನೀರಿನಲ್ಲಿ ಇಳಿಯಬೇಡಿ

ಕಾನೇರಿ ನದಿಯ ನೀರಿನಲ್ಲಿ ಇಳಿಯಬೇಡಿ

ಕಾಳಿ ನದಿಯ ಉಪನದಿಯಾದ ಕಾನೇರಿ ನದಿ ಈ ಬಂಡೆಯ ಪಕ್ಕದಲ್ಲಿಯೇ ಹಾದು ಹೋಗುತ್ತದೆ. ಬಂಡೆಯ ಸಮೀಪವೇ ನದಿ ಹರಿಯುವುದರಿಂದ ಸವೆತಕ್ಕೆ ಬಂಡೆಗಳು ಟೊಳ್ಳಾಗಿದ್ದು, ಒಂದು ಕಲ್ಲಿನ ಗುಹೆ ಸಹ ನಿರ್ಮಾಣವಾಗಿದೆ. ಈ ಗುಹೆಯ ಮೂಲೆಯೊಳಗೆ ಹಲವಾರು ಕಾಡು ಪಾರಿವಾಳಗಳು ಮತ್ತು ಜೇನುಹುಳುಗಳು ವಾಸಿಸುತ್ತವೆ. ಬಂಡೆಗಳ ಮಧ್ಯೆ ಹಾಲಿನಂತೆ ಉಕ್ಕಿ ಹರಿಯುವ ಕಾನೇರಿ ನದಿಯನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಯಾವುದೇ ಕಾರಣಕ್ಕೂ ನೀರಿನಲ್ಲಿ ಇಳಿಯಲು ಅವಕಾಶ ಇರುವುದಿಲ್ಲ. ನೀರಿನ ಹರಿವು ಕಡಿಮೆಯಾದರೂ ಬಂಡೆಗಳ ಮೇಲೆ ವಿಪರೀತ ಪಾಚಿ ಕಟ್ಟಿರುವುದರಿಂದ ನದಿಯೊಳಗೆ ಆಟವಾಡಲು ಇಳಿಯಬೇಡಿ. ಅಲ್ಲದೇ ಇಲ್ಲಿ ಮೊಸಳೆಗಳು ಇವೆ ಎಂದು ಹೇಳಲಾಗುತ್ತದೆ. ಇದುವರೆಗೆ ಇಲ್ಲಿಗೆ ನದಿ ಬಿದ್ದವರ ಪೈಕಿ ಒಬ್ಬರೂ ಬದುಕಿಲ್ಲವಂತೆ. ಈ ಬಗ್ಗೆ ಎಚ್ಚರಿಕೆಯ ಫಲಕವನ್ನು ಹಾಕಿರುವುದನ್ನು ನೀವು ನೋಡಬಹುದು. ಆದರೆ ಬಂಡೆಗಲ್ಲುಗಳ ಮೇಲೆ ಕುಳಿತು ಪ್ರಕೃತಿ ವೀಕ್ಷಿಸಬಹುದು.

ಪ್ರವೇಶ ದ್ವಾರದಿಂದ 250 ಮೆಟ್ಟಿಲುಗಳಿವೆ

ಪ್ರವೇಶ ದ್ವಾರದಿಂದ 250 ಮೆಟ್ಟಿಲುಗಳಿವೆ

ಈ ಸ್ಥಳವನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಸಿಂಥೇರಿ ರಾಕ್ಸ್ ನೋಡಲು ಹೋಗುವವರಿಗೆ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸಿಂಥೇರಿ ರಾಕ್ಸ್ ಗೆ ಆತ್ಮೀಯ ಸುಸ್ವಾಗತ ಎಂದು ಬರೆದಿರುವ ಪ್ರವೇಶದ್ವಾರ ಸಿಗುತ್ತದೆ. ಇಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಾಹನಗಳನ್ನು ಪಾರ್ಕಿಂಗ್ ಪ್ರದೇಶಕ್ಕೆ ಬಿಡಬಹುದು. ಆದರೆ ವಾಹನ ನಿಲುಗಡೆಯಿಂದ ಸಿಂಥೇರಿ ರಾಕ್ಸ್ ತಲುಪಲು 15-20 ನಿಮಿಷಗಳ ಕಾಲ ನಡೆಯಬೇಕು. ಸಿಂಥೇರಿ ರಾಕ್ಸ್ ತಲುಪುವ ಮುನ್ನ 250 ಮೆಟ್ಟಿಲುಗಳು ಇಳಿದುಕೊಂಡು ಬರಬೇಕು.

ಮೆಟ್ಟಿಲು ಇಳಿದು ಕೆಳಗೆ ಬಂದರೆ ಸಿಂಥೇರಿ ರಾಕ್ಸ್ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಅಂದಹಾಗೆ ಅಲ್ಲಲ್ಲಿ ಬಂಡೆಗಳ ಮೇಲೆ ಮುತ್ತಿಕೊಂಡಿರುವ ಜೇನುನೋಣಗಳು ಪ್ರವಾಸಿಗರಿಗೆ ಯಾವುದೇ ರೀತಿ ಹಾನಿ ಮಾಡದೆ ಅಡ್ಡಾಡುತ್ತಿರುತ್ತವೆ. ಆದರೆ ಅವುಗಳಿಗೆ ನಾವು ಯಾವುದೇ ರೀತಿ ತೊಂದರೆ ಕೊಡಬಾರದಷ್ಟೇ. ಅಂದರೆ ನೀರು ಚಿಮ್ಮುವುದು, ಹೊಡೆಯುವುದು ಮಾಡಬಾರದು. ಹಾಗೆಯೇ ನೀರಿಗೆ ಪ್ಲಾಸ್ಟಿಕ್ ಎಸೆಯದೆ, ನಮ್ಮ ಪ್ರಕೃತಿಯನ್ನು ಕಾಳಜಿ ಮಾಡಬೇಕು.

ಬಂಡೆಗಳ ಬಗ್ಗೆ ಮಾಹಿತಿ

ಬಂಡೆಗಳ ಬಗ್ಗೆ ಮಾಹಿತಿ

ಇಲ್ಲಿನ ಮೆಟ್ಟಿಲುಗಳು ತುಂಬಾ ಕಡಿದಾಗಿವೆ. ಕಾಡಿನಲ್ಲಿ ಕಂಡುಬರುವ ವಿವಿಧ ರೀತಿಯ ಬಂಡೆಗಳನ್ನು ಮೆಟ್ಟಿಲುಗಳ ಉದ್ದಕ್ಕೂ ಪ್ರದರ್ಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ನಮಗೂ ಶಿಲೆಗಳ ಬಗ್ಗೆ ಮಾಹಿತಿ ಸಿಕ್ಕಂತಾಗುತ್ತದೆ. ದಾರಿಯುದ್ದಕ್ಕೂ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ಜೊತೆಗೆ ವಿಶ್ರಾಂತಿ ಪಡೆಯಲು ಕಲ್ಲಿನ ಆಸನಗಳನ್ನು ನಿರ್ಮಿಸಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಸಿಂಥೇರಿ ರಾಕ್ಸ್ ನೋಡಲು ಅವಕಾಶ ಮಾಡಿಕೊಡಲಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಪ್ರವಾಸಿಗರಿಗೆ ಸಿಂಥೇರಿ ರಾಕ್ಸ್‌ಗೆ ಹೋಗಲು ಸೂಕ್ತ ಸಮಯವಾಗಿದೆ.

ಸಿಂಥೇರಿ ರಾಕ್ಸ್’ಗೆ ಹೋಗುವುದು ಹೇಗೆ?

ಸಿಂಥೇರಿ ರಾಕ್ಸ್’ಗೆ ಹೋಗುವುದು ಹೇಗೆ?

ರಸ್ತೆ ಮಾರ್ಗ

ಈ ಅದ್ಭುತ ತಾಣವನ್ನು ನೋಡಲು ದಾಂಡೇಲಿಗೆ ತೆರಳಿ. ದಾಂಡೇಲಿಯು ಕರ್ನಾಟಕದ ರಾಜ್ಯದ ಪ್ರಮುಖ ಭಾಗಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ದಾಂಡೇಲಿಗೆ ರಸ್ತೆಯ ಮೂಲಕ ತಲುಪಲು ಸುಮಾರು 7.5 ಗಂಟೆಗಳು (462 ಕಿಮೀ) ತೆಗೆದುಕೊಳ್ಳುತ್ತದೆ. ದಾಂಡೇಲಿಯು ಗೋವಾ ಗಡಿಗೆ ಹತ್ತಿರದಲ್ಲಿದೆ. ಹಾಗಾಗಿ ಪಂಜಿಮ್‌ನಿಂದ ತಲುಪಲು ಸುಮಾರು 4 ಗಂಟೆಗಳು (134 ಕಿಮೀ) ತೆಗೆದುಕೊಳ್ಳುತ್ತದೆ.

ರೈಲು ಮಾರ್ಗ

ದಾಂಡೇಲಿಗೆ ಹತ್ತಿರದ ರೈಲು ಮಾರ್ಗವೆಂದರೆ 35 ಕಿಮೀ ದೂರದಲ್ಲಿರುವ ಅಳ್ನಾವರ. ಅಳ್ನಾವರದಿಂದ ದಾಂಡೇಲಿಗೆ ರಸ್ತೆಯ ಮೂಲಕ ಸುಮಾರು 1 ಗಂಟೆ 30 ನಿಮಿಷಗಳು (64 ಕಿಮೀ) ತೆಗೆದುಕೊಳ್ಳುತ್ತದೆ.

ವಿಮಾನ ಮಾರ್ಗ

ದಾಂಡೇಲಿಗೆ ತಲುಪಲು ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 90 ಕಿಮೀ ದೂರದಲ್ಲಿದೆ. ಇಲ್ಲಿಂದ ದಾಂಡೇಲಿಗೆ ಭೇಟಿ ನೀಡಲು ನೀವು ವಿಮಾನ ನಿಲ್ದಾಣದಿಂದ ಖಾಸಗಿ ವಾಹನವನ್ನು ಬಾಡಿಗೆಗೆ ಪಡೆಯಬಹುದು. ಸಿಂಥೇರಿ ರಾಕ್ಸ್ ಬೆಳಗಾವಿ ವಿಮಾನ ನಿಲ್ದಾಣದಿಂದ 124 ಕಿಮೀ ದೂರದಲ್ಲಿದೆ. ರಸ್ತೆಯ ಮೂಲಕ ತಲುಪಲು ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X