Search
  • Follow NativePlanet
Share
» »ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ

ಜುಳು ಜುಳು ನೀರಲಿ ನಳನಳಿಸುವ ದಾಲ್ ಸರೋವರ

ಕೆರೆಗಳು, ಅದರಲ್ಲಿರುವ ಶುದ್ಧವಾದ ಹಾಗೂ ತಂಪಾದ ನೀರು, ಜುಳು ಜುಳು ಎನ್ನುವ ಮಿಂಚಿನ ಅಲೆಗಳು, ಅಬ್ಬರ -ಏರಿಳಿತವಿಲ್ಲದ ಹರಿವು, ಶಾಂತ ಪರಿಸರ, ಸುತ್ತಲೂ ಅದ್ಭುತವಾದ ಹಿಮಚ್ಛಾದಿತ ಗಿರಿ ಪರ್ವತಗಳು, ಅಲ್ಲಲ್ಲಿ ಕಂಡುಬರುವ ಹಸಿರಿನ ವರ್ಣ ಸಂಪತ್ತು, ಸುಂದರವಾದ ದೋಣಿ....ಅದರಲ್ಲಿ ಹಾಯಾಗಿ ಕುಳಿತಿರಲು...ಅಬ್ಬಾ ಇದು ಯಾವ ಸ್ವರ್ಗಕ್ಕಿಂತಲೂ ಕಡಿಮೆ ಇಲ್ಲ ಎನ್ನುತ್ತದೆ ಮನವು.

ಇಂತಹ ಒಂದು ಸುಂದರ ಕಲ್ಪನೆಯ ಚಿತ್ತಾರ ನಿಜವೆ ಎಂದೆನಿಸಿದರೆ...ಅದಕ್ಕುತ್ತರ ಹೌದೆನ್ನುತ್ತದೆ ಈ ಲೇಖನ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿರುವ ದಾಲ್ ಸರೋವರ ದೇಶದಲ್ಲೆ ಪ್ರವಾಸಿ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದ ಸರೋವರವಾಗಿದೆ. ಇಲ್ಲಿ ಕಂಡುಬರುವ ದೋಣಿಗಳು ಹಾಗೂ ದೋಣಿ ಮನೆಗಳನ್ನು ಶಿಕಾರಾ ಎಂದು ಕರೆಯಲಾಗುತ್ತದೆ. ಈ ಶಿಕಾರಾಗಳು ಪ್ರವಾಸೋದ್ಯಮದ ದೃಷ್ಟಿಯಿಂದ ತಮ್ಮದೆ ಆದ ವಿಶಿಷ್ಟ ಕೊಡುಗೆಯನ್ನು ಕರುಣಿಸಿವೆ. ಇಂತಹ ಶಿಕಾರಾಗಳಲ್ಲಿ ಹಾಯಾಗಿ ವಿಹರಿಸುತ್ತ ತಾಜಾ ಹಾಗೂ ಕಲ್ಮಶರಹಿತ ಪರಿಸರದ ಆನಂದವನ್ನು ಭೋಗಿಸುವುದಕ್ಕೆಂದೆ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ದಾಲ್ ಸರೋವರ:

ದಾಲ್ ಸರೋವರ:

ಕಾಶ್ಮೀರ ಕಿರೀಟ ರತ್ನ ಅಥವಾ ಶ್ರೀನಗರದ ಆಭರಣ ಎಂಬ ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ದಾಲ್ ಸರೋವರವು ರಾಜ್ಯದ ಎರಡನೆಯ ದೊಡ್ಡ ಸರೋವರವಾಗಿದೆ.

ಚಿತ್ರಕೃಪೆ: Basharat Alam Shah

ದಾಲ್ ಸರೋವರ:

ದಾಲ್ ಸರೋವರ:

ಜಲಸಸ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಮೀನುಗಾರಿಕೆಯಂತಹ ಮುಂತಾದ ವಾಣಿಜ್ಯ ಚಟುವಟಿಕೆಗಳಿಗೆ ಮೂಲ ಆಗರವಾಗಿದೆ ಈ ದಾಲ್ ಸರೋವರ.

ಚಿತ್ರಕೃಪೆ: Basharat Alam Shah

ದಾಲ್ ಸರೋವರ:

ದಾಲ್ ಸರೋವರ:

ದಾಲ್ ಕೆರೆಯ 15.5 ಕಿ.ಮೀ ಉದ್ದನೆಯ ತೀರವು ಮುಘಲ್ ಆಳ್ವಿಕೆಯಲ್ಲಿ ನಿರ್ಮಿಸಲ್ಪಟಂತಹ ಸುಂದರವಾದ, ಹಸಿರು ಸಂಪತ್ತಿನಿಂದ ಕಂಗೊಳಿಸುವ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿಕೊಂಡಿರುವ ಉದ್ಯಾನಗಳಿಂದ ಕೂಡಿದೆ.

ಚಿತ್ರಕೃಪೆ: Soumyadeep Paul

ದಾಲ್ ಸರೋವರ:

ದಾಲ್ ಸರೋವರ:

ಇದರ ದಂಡೆಯಗುಂಟ ಕಂಡುಬರುವ ಸುಂದರ ಉದ್ಯಾನಗಳಲ್ಲಿ ಶಾಲಿಮಾರ್ ಬಾಗ್, ನಿಶಾಂತ್ ಬಾಗ್ ಉದ್ಯಾನಗಳು ಪ್ರಮುಖವಾದವುಗಳಾಗಿವೆ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಸಿಗರನ್ನು ಸೆಳೆಯುತ್ತವೆ. ನಿಶಾಂತ್ ಬಾಗ್ ಉದ್ಯಾನ.

ಚಿತ್ರಕೃಪೆ: McKay Savage

ದಾಲ್ ಸರೋವರ:

ದಾಲ್ ಸರೋವರ:

ಚಳಿಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಇಲ್ಲಿ ವಾತಾವರಣದ ತಾಪಮಾನವು ಅತ್ಯಂತ ಕಡಿಮೆಯಿರುತ್ತದೆ. ಒಮ್ಮೊಮ್ಮೆಯಂತೂ ತಾಪಮಾನವು ಶೂನ್ಯಕ್ಕಿಂತಲೂ ಕಡಿಮೆಯಾಗಿ ದಾಲ್ ಸರೋವರದ ನೀರು ಹಿಮಗಟ್ಟುವುದನ್ನು ಕಾಣಬಹುದು.

ಚಿತ್ರಕೃಪೆ: Colin Tsoi

ದಾಲ್ ಸರೋವರ:

ದಾಲ್ ಸರೋವರ:

21.1 ಚಕಿ.ಮೀ ವಿಸ್ತೀರ್ಣ ಹೊಂದಿರುವ ನೈಸರ್ಗಿಕ ಜೌಗು ಪ್ರದೇಶದ ಭಾಗವಾಗಿರುವ ದಾಲ್ ಕೆರೆಯು 18 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಇದರ ಮೇಲ್ಮೈ ಮೇಲೆ ಅಲ್ಲಲ್ಲಿ ತೇಲುವ ಉದ್ಯಾನಗಳನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Basharat Alam Shah

ದಾಲ್ ಸರೋವರ:

ದಾಲ್ ಸರೋವರ:

ಇತಿಹಾಸವನ್ನು ಕೆದಕಿದಾಗ ಪುರಾತನ ಸಂಸ್ಕೃತ ಲೇಖನಗಳ ಮಹಾಸರಿತದಲ್ಲಿ ದಾಲ್ ಕೆರೆಯ ಉಲ್ಲೇಖವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Basharat Alam Shah

ದಾಲ್ ಸರೋವರ:

ದಾಲ್ ಸರೋವರ:

ಪುರಾತನ ದಾಖಲೆಯೊಂದರ ಪ್ರಕಾರ, ಸರೋವರದ ಪೂರ್ವ ದಿಕ್ಕಿಗೆ ಇಸಾಬಾರ್ ಎಂದೊಂದು ಪ್ರದೇಶವಿತ್ತು ಹಾಗೂ ಆ ಸ್ಥಳವು ಮಾತೆ ದುರ್ಗೆಯ ಆವಾಸ ಸ್ಥಾನವಾಗಿತ್ತೆಂದು ಹೇಳಲಾಗಿದೆ. ಅಂದು ಆ ಸ್ಥಳವನ್ನು ಸುರೇಶ್ವರಿ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ.

ಚಿತ್ರಕೃಪೆ: Basharat Alam Shah

ದಾಲ್ ಸರೋವರ:

ದಾಲ್ ಸರೋವರ:

ಮುಘಲರ ಆಳ್ವಿಕೆಯ ಸಂದರ್ಭದಲ್ಲಿ ಶ್ರೀನಗರವನ್ನು ಅವರ ಬೇಸಿಗೆಯ ರಜಾ ತಾಣವನ್ನಾಗಿ ಪರಿಗಣಿಸಲಾಯಿತು ಹಾಗೂ ಮುಘಲ್ ಶೈಲಿಯಲ್ಲಿ ಸರೋವರದ ಆಸು ಪಾಸಿನಲ್ಲಿ ಸುಂದರವಾದ ಉದ್ಯಾನಗಳನ್ನು ನಿರ್ಮಿಸಲಾಯಿತು.

ಚಿತ್ರಕೃಪೆ: Varun Shiv Kapur

ದಾಲ್ ಸರೋವರ:

ದಾಲ್ ಸರೋವರ:

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸ್ಥಳೀಯ ಹಂಜಿ ಸಮುದಾಯದವರು ಇಲ್ಲಿ ದೋಣಿ ಮನೆಗಳನ್ನು, ತೇಲುವ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ವಾಣಿಜ್ಯೀಕವಾಗಿ ಅವುಗಳನ್ನು ಬಳಸಿಕೊಂಡು ತಮ್ಮ ಜೀವನ ಸಾಗಿಸತೊಡಗಿದರು.

ಚಿತ್ರಕೃಪೆ: Basharat Alam Shah

ದಾಲ್ ಸರೋವರ:

ದಾಲ್ ಸರೋವರ:

ಸಮುದ್ರ ಮಟ್ಟದಿಂದ 1583 ಮೀ ಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಈ ಸರೋವರವು ಕನಿಷ್ಠ 8.2 ಅಡಿಗಳಷ್ಟು ಆಳವನ್ನು ಹೊಂದಿದ್ದು ಗರಿಷ್ಠ 20 ಅಡಿಗಳಷ್ಟು ಆಳವನ್ನು ಹೊಂದಿದೆ.

ಚಿತ್ರಕೃಪೆ: Fulvio Spada

ದಾಲ್ ಸರೋವರ:

ದಾಲ್ ಸರೋವರ:

ಮತ್ತೊಂದು ವಿಷಯವೆಂದರೆ ಇಲ್ಲಿ ಹಲವರು ದೋಣಿ ಮನೆಗಳಲ್ಲೆ ವಾಸವಿದ್ದು, ದೈನಂದಿನ ಜೀವನದ ಚಟುವಟಿಕೆಗಳಾದ ವ್ಯಾಪಾರ, ಸಾಮಗ್ರಿ ಖರೀದಿಗಳೂ ಸಹ ದೋಣಿಯಲ್ಲೆ ಸಾಗುತ್ತ ಮಾಡಲಾಗುತ್ತದೆ.

ಚಿತ್ರಕೃಪೆ: Basharat Alam Shah

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more