Search
  • Follow NativePlanet
Share
» »ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಗುಜರಾತ್‌ನಲ್ಲಿರುವ ಪ್ರಸಿದ್ಧ ವೈಷ್ಣವ ತೀರ್ಥ ಡಾಕೋರ್ ಮಂದಿರವು ಭಾರತದ ಪ್ರಸಿದ್ಧ ತೀರ್ಥ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿರುವ ರಣಚೋಡ್‌ ಜೀ ಮಂದಿರವು ಕೇವಲ ತನ್ನ ಶಿಲ್ಪ ಕಲೆಗೆ ಪ್ರಸಿದ್ಧವಾಗಿರುವುದು ಮಾತ್ರವಲ್ಲ. ಕೃಷ್ಣನ ಸುಂದರ ಸ್ವರೂಪಕ್ಕೂ ಹೆಸರುವಾಸಿಯಾಗಿದೆ. ಈ ಮಂದಿರಕ್ಕೆ ಸಂಬಂಧಿಸಿದ ಒಂದು ವಿಶೇಷ ಕಥೆಯೂ ಇದೆ. ಅದೇನೆಂದರೆ ಈ ದೇವಸ್ಥಾನದಲ್ಲಿರುವ ಶ್ರೀ ಕೃಷ್ಣನ ಮೂರ್ತಿಯನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ.

ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ಮಂದಿರಕ್ಕೆ ಸಂಬಂಧಿಸಿದ ಕಥೆ

ಮಂದಿರಕ್ಕೆ ಸಂಬಂಧಿಸಿದ ಕಥೆ

PC:Aditya Mahar

ಪ್ರಾಚೀನ ಮಾನ್ಯತೆಯ ಪ್ರಕಾರ ಡಾಕೋರ್‌ಜೀ ಮಂದಿರಲ್ಲಿರುವ ಶ್ರೀ ಕೃಷ್ಣನ ಮೂರ್ತಿಯನ್ನು ದ್ವಾರಕಾದಿಂದ ತರಲಾಗಿದೆ. ಬಾಜೇ ಸಿಂಗ್ ಎನ್ನುವ ರಜಪೂತ ಡಾಕೋರ್‌ನಲ್ಲಿ ನೆಲೆಸಿದ್ದನು. ಆತನು ರಣಚೋಡ್‌ನ ದೊಡ್ಡ ಭಕ್ತನಾಗಿದ್ದನು. ಈತ ಎನ್ನ ಕೈಯಾರೆ ತುಳಸಿಗಿಡಗಳನ್ನು ಬೆಳೆಸುತ್ತಿದ್ದನು. ವರ್ಷದಲ್ಲಿ ಎರಡು ಸಲ ದ್ವಾರಕಾಕ್ಕೆ ತೆರಳಿ ತುಳಸಿ ಎಲೆಯನ್ನು ಅರ್ಪಿಸುತ್ತಿದ್ದನು. ಹಲವು ವರ್ಷಗಳ ವರೆಗೆ ಆತ ಇದನ್ನೇ ಮಾಡುತ್ತಿದ್ದನು. ಆದರೆ ಆತನಿಗೆ ವಯಸ್ಸಾದಂತೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.

ಕದ್ದು ತಂದ ಕೃಷ್ಣನ ವಿಗ್ರಹ

ಕದ್ದು ತಂದ ಕೃಷ್ಣನ ವಿಗ್ರಹ

PC: youtube

ಒಂದು ದಿನ ಶ್ರೀ ಕೃಷ್ಣನು ಆತನ ಕನಸಿನಲ್ಲಿ ಬಂದು ಇನ್ನು ದ್ವಾರಕಾಕ್ಕೆ ಹೋಗುವ ಅಗತ್ಯವಿಲ್ಲ. ಅಲ್ಲಿನ ಮೂರ್ತಿಯನ್ನೇ ಇಲ್ಲಿ ತರುವಂತೆ ಸೂಚಿಸಿದನು. ಶ್ರೀ ಕೃಷ್ಣನ ಸೂಚನೆಯಂತೆ ಡಾಕೋರ್‌ ಮಧ್ಯರಾತ್ರಿ ದ್ವಾರಕೆಯ ಗರ್ಭಗ್ರಹದೊಳಗೆ ಪ್ರವೇಶಿಸಿ ದೇವರ ಮೂರ್ತಿಯನ್ನು ಅಲ್ಲಿಂದ ಕದ್ದು ಡಾಕೋರ್‌ನಲ್ಲಿ ಪ್ರತಿಷ್ಠಾಪಿಸುತ್ತಾನೆ.

ಇಂದಿಗೂ ಇದೆ ಈಟಿಯ ಗುರುತು

ಇಂದಿಗೂ ಇದೆ ಈಟಿಯ ಗುರುತು

PC: Dore chakravarty

ಬೆಳಗ್ಗೆ ಮಂದಿರದ ಬಾಗಿಲು ತೆರೆದಾಗ ಅಲ್ಲಿ ಮೂರ್ತಿ ಇರಲಿಲ್ಲ. ಎಲ್ಲೆಡೆ ಮೂರ್ತಿಯನ್ನು ಹುಡುಕಲು ಪ್ರಾರಂಭಿಸಿದರು. ಈ ವಿಷ್ಯ ತಿಳಿಯುತ್ತಲೇ ಬಾಜೆ ಸಿಂಗ್ ಈ ಮೂರ್ತಿಯನ್ನು ಕೆರೆಯೊಳಗೆ ಅಡಗಿಸಿಟ್ಟನು. ಕೃಷ್ಣನ ಮೂರ್ತಿಯನ್ನು ಹುಡುಕುತ್ತಾ ಆ ಕೆರೆಯಲ್ಲೂ ಈಟಿಯ ಮೂಲಕ ಕೆರೆಯನ್ನು ಚುಚ್ಚುತ್ತಾ ಹುಡುಕಾಡಲಾಯಿತು. ಆ ಸಂದರ್ಭ ಈಟಿಯ ತುದಿಯು ಮೂರ್ತಿಗೆ ಚುಚ್ಚಿದ್ದವು. ಆ ಗುರುತು ಇಂದಿಗೂ ಇಲ್ಲಿನ ಮೂರ್ತಿಯಲ್ಲಿ ಕಾಣಬಹುದಾಗಿದೆ.

ಕಪ್ಪು ಕಲ್ಲಿನಿಂದ ಮಾಡಲಾಗಿದೆ ಈ ಮೂರ್ತಿ

ಕಪ್ಪು ಕಲ್ಲಿನಿಂದ ಮಾಡಲಾಗಿದೆ ಈ ಮೂರ್ತಿ

PC: youtube

ರಣಚೋಡ್‌ಜಿಯ ಈ ಮೂರ್ತಿ ದ್ವಾರಕಾಧೀಶನ ಮೂರ್ತಿಯಂತೆಯೇ ಇದೆ. ಮೂರ್ತಿಯ ಕೆಳಗಿನ ಕೈಯಲ್ಲಿ ಶಂಖ ಹಾಗೂ ಮೇಲಿನ ಕೈಯಲ್ಲಿ ಚಕ್ರವಿದೆ. ಕಪ್ಪು ಕಲ್ಲಿನಿಂದ ಕೆತ್ತಲಾಗಿರುವ ಈ ಮೂರ್ತಿಯು ನಿಂತಿರುವ ರೂಪದಲ್ಲಿದ್ದು ನೋಡಲೂ ಬಹಳ ಸುಂದರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X