Search
  • Follow NativePlanet
Share
» »ಕಬ್ಬನ್ ಪಾರ್ಕ್ : ಬೆಂಗಳೂರಿನ ಲ್ಯಾಂಡ್ ಮಾರ್ಕ್

ಕಬ್ಬನ್ ಪಾರ್ಕ್ : ಬೆಂಗಳೂರಿನ ಲ್ಯಾಂಡ್ ಮಾರ್ಕ್

By Vijay

ಸಾಮಾನ್ಯವಾಗಿ ಬೆಂಗಳೂರೇತರರಿಗೆ ಬೆಂಗಳೂರು ಎಂದಾಕ್ಷಣ ನೆನಪಾಗುವ ಹಲವಾರು ಆಕರ್ಷಣೆಗಳ ಪೈಕಿ ಕಬ್ಬನ್ ಪಾರ್ಕ್ ಕೂಡ ಪ್ರಮುಖವಾದುದು. ಬೆಂಗಳೂರಿನ ಪ್ರಮುಖ ಗುರುತರ ಪ್ರದೇಶವಾಗಿ ಕಬ್ಬನ್ ಪಾರ್ಕ್ ಖ್ಯಾತಿ ಪಡೆದಿದೆ. ಚಿಣ್ಣರಿಗಂತೂ ಕಬ್ಬನ್ ಪಾರ್ಕ್ ಒಂದು ಅದ್ಭುತವಾದ ಪಿಕ್ನಿಕ್ ತಾಣವೆಂದೇ ಹೇಳಬಹುದು.

ಬೆಂಗಳೂರಿನ ಹೃದಯ ಭಾಗದಲ್ಲಿ ಅದರಲ್ಲೂ ರಾಜ್ಯದ ಆಡಳಿತ ನಡೆಯುವ ಹೆಮ್ಮೆಯ ಕಟ್ಟಡವಾದ ವಿಧಾನ ಸೌಧದ ಬಳಿಯಲ್ಲೆ ನೆಲೆಸಿರುವ ಕಬ್ಬನ್ ಉದ್ಯಾನ ತನ್ನದೆ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಬಹುತೇಕರು ವಾರಾಂತ್ಯಗಳಲ್ಲಿ, ಕೆಲವರು ದಿನಂಪ್ರತಿ ಭೇಟಿ ನೀಡುವ ಈ ವಿಶಾಲವಾದ ಉದ್ಯಾನದ ಇತಿಹಾಸ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲ. ಆ ಒಂದು ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಈ ಸುಂದರ ಉದ್ಯಾನದ ಕುರಿತು ಕೆಲ ಮಾಹಿತಿ ತಿಳಿಸಲು ಒಂದು ಪ್ರಯತ್ನವಾಗಿದೆ.

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಹಿಂದಿನ ಮೈಸೂರು ರಾಜ್ಯದ ಮೇಜರ್ ಜನರಲ್ ಆಗಿದ್ದ ರಿಚರ್ಡ್ ಸ್ಯಾಂಕಿ ಎಂಬುವವರ ಕಾಲದಲ್ಲಿ ಅಂದರೆ ಸುಮಾರು 1870 ರ ಸಮಯದಲ್ಲಿ ಈ ಉದ್ಯಾನವು ಸ್ಥಾಪಿಸಲ್ಪಟ್ಟಿತು.

ಚಿತ್ರಕೃಪೆ: Anoop Kumar

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಮೊದ ಮೊದಲಿಗೆ 100 ಎಕರೆಗಳಷ್ಟು ವಿಶಾಲವಾಗಿ ಚಾಚಿದ್ದ ಈ ಉದ್ಯಾನ ಕ್ರಮೇಣವಾಗಿ ಮತ್ತಷ್ಟು ವಿಸ್ತಾರಗೊಳ್ಳುತ್ತ ಸಾಗಿತು. ಪ್ರಸ್ತುತ, ಕಬ್ಬನ್ ಉದ್ಯಾನವು ಸುಮಾರು 300 ಎಕರೆಗಳಷ್ಟು ವಿಶಾಲವಾಗಿ ಹರಡಿದೆ.

ಚಿತ್ರಕೃಪೆ: prashantby

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಇಂದಿಗೂ ಕಾಣಬಹುದಾಗಿದ್ದರೂ, ಹಿಂದಿನ ಸಮಯದಲ್ಲಿ ಸಸ್ಯ ಹಾಗೂ ಕೀಟ ಸಂಪತ್ತಿನ ಶ್ರೀಮಂತ ಇತಿಹಾಸವನ್ನು ಈ ಉದ್ಯಾನ ಹೊಂದಿದೆ. ಅಲ್ಲದೆ ಪ್ರಮುಖ ಆಡಳಿತಾತ್ಮಕ ಕಚೇರಿಗಳು ಇದರ ಅಕ್ಕ ಪಕ್ಕದಲ್ಲೆ ಇದ್ದಿದುದರಿಂದ ಸಾಕಷ್ಟು ಜನಪ್ರಿಯತೆಯನ್ನು ಈ ಉದ್ಯಾನ ಪಡೆದಿದೆ.

ಚಿತ್ರಕೃಪೆ: Senthil Kumar

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಬೆಂಗಳೂರು ನಗರ ಕೇಂದ್ರ ರೈಲು ಹಾಗೂ ಬಸ್ಸು ನಿಲ್ದಾಣಗಳಿಂದ ಕೇವಲ 4.5 ಕಿ.ಮೀ ಗಳಷ್ಟು ದೂರವಿರುವ ಈ ಉದ್ಯಾನಕ್ಕೆ ಪ್ರವಾಸಿಗರು ಸುಲಭವಾಗಿ ತೆರಳಬಹುದಾಗಿದೆ. ಬಹುಶಃ ನಗರಕ್ಕೆ ಪ್ರವೇಶಿಸಿದ ಮೇಲೆ ಎಲ್ಲರೂ ಇಷ್ಟಪಟ್ಟು ಹೋಗುವ ಸ್ಥಳ ಈ ಬೃಹತ್ ಉದ್ಯಾನವಾಗಿದ್ದರಿಂದಲೋ ಏನೋ, ಬೆಂಗಳೂರಿಗೆ "ಉದ್ಯಾನ ನಗರಿ" ಎಂಬ ಹೆಸರು ಬಂದಿರಬಹುದು.

ಚಿತ್ರಕೃಪೆ: fraboof

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಮೂಲತಃ ಈ ಉದ್ಯಾನ ಸ್ಥಾಪ್ನೆಗೊಂಡಾಗ ಅಂದಿನ ಮೈಸೂರು ರಾಜ್ಯದ ಕಮೀಷನರ್ ಆಗಿದ್ದ ಸರಿ ಜಾನ್ ಮೇಡ್ ಅವರ ಹೆಸರನ್ನು ಇದಕ್ಕೆ ಇಡಲಾಗಿತ್ತು ಹಾಗೂ ಈ ಉದ್ಯಾನವು ಮೇಡ್'ಸ್ ಪಾರ್ಕ್ ಎಂದೆ ಕರೆಸಿಕೊಳ್ಳುತ್ತಿತ್ತು.

ಚಿತ್ರಕೃಪೆ: fraboof

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ನಂತರದಲ್ಲಿ ದೀರ್ಘ ಕಾಲದವರೆಗೆ ಮೈಸೂರು ರಾಜ್ಯದ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ಅವರ ಗೌರವಾರ್ಥವಾಗಿ ಈ ಉದ್ಯಾನಕ್ಕೆ ಕಬ್ಬನ್ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು.

ಚಿತ್ರಕೃಪೆ: Lijo Jose

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಈ ಕಥೆ ಇಲ್ಲಿಗೆ ಮುಗಿಯೋಲ್ಲ. ಕಾಲಕ್ರಮೇಣ ಇತ್ತ ಮೈಸೂರಿನ ಒಡೆಯರಾಗಿದ್ದ ಚಾಮರಾಜೇಂದ್ರರ ಬೆಳ್ಳಿ ಹಬ್ಬದ ಗೌರವಾರ್ಥವಾಗಿ ಈ ಉದ್ಯಾನಕ್ಕೆ ಪುನಃ ಶ್ರೀ ಚಮರಾಜೇಂದ್ರ ಪಾರ್ಕ್/ಉದ್ಯಾನ ಎಂದು ನಾಮಕರಣ ಮಾಡಲಾಯಿತು. ಆದರೆ ಇಂದಿಗೂ ಈ ಉದ್ಯಾನ ಕಬ್ಬನ್ ಹೆಸರಿನಿಂದಲೆ ಜನಪ್ರಿಯವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Ajith Kumar

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಈ ಉದ್ಯಾನದ ದಟ್ಟವಾದ ಗಿಡ ಮರಗಳು, ಸಸ್ಯ ಸಂಪತ್ತು, ನೈಸರ್ಗಿಕ ಕಲ್ಲು ಬಂಡೆಗಳು, ಸಮತಟ್ಟಾಗಿರದ ಭೂ ಪ್ರದೇಶಗಳು ಕಾಡನ್ನೆ ನೆನಪಿಸುತ್ತವೆ. ಆದರೆ ಶಿಸ್ತು ಬದ್ಧವಾಗಿ ನಿರ್ಮಿಸಲ್ಪಟ್ಟ ನಡಿಗೆಯ ದಾರಿಗಳು, ಅಲ್ಲಲ್ಲಿ ನಿರ್ಮಿಸಲ್ಪಟ್ಟ ಸ್ಮಾರಕಗಳು, ಕಟ್ಟಡಗಳು ಇದನ್ನು ಒಂದು ಉದ್ಯಾನವನ್ನಾಗಿ ವ್ಯಾಖ್ಯಾನಿಸುತ್ತವೆ.

ಚಿತ್ರಕೃಪೆ: Gautam Dogra

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಈ ಉದ್ಯಾನವು ಬೆಂಗಳೂರಿನ ಪ್ರಮುಖ ಸ್ಥಳಗಳಾದ ಎಂಜಿ ರಸ್ತೆ, ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀದಿ, ವಿಧಾನಸೌಧ ಮುಂತಾದ ಸ್ಥಳಗಳಿಗೆ ಬಹು ಹತ್ತಿರದಲ್ಲಿದೆ. ಸಾರ್ವಜನಿಕರ ಅನುಕೂಲಕ್ಕೆಂದು ಪ್ರತಿ ದಿನ ಈ ಉದ್ಯಾನ ತೆರೆದಿರುತ್ತದೆ. ಆದರೆ ಮುಂಜಾನೆ ಬೆಳಿಗ್ಗೆ 5 ರಿಂದ 8 ಘಂಟೆಯವರೆಗೆ ಈ ಉದ್ಯಾನದ ಸುತ್ತಮುತ್ತಲಿನ ರಸ್ತೆಗಳು ವಾಹನಗಳಿಗೆ ಮುಕ್ತವಾಗಿರುವುದಿಲ್ಲ.

ಚಿತ್ರಕೃಪೆ: ไปไหนมา

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಉದ್ಯಾನದಲ್ಲಿ 6000 ದಷ್ಟು ಸಸ್ಯಗಳಿದ್ದು, ವೈವಿಧ್ಯಮಯ ಹೂವುಗಳು, ಗಿಡ ಮರಗಳು ಅದರಲ್ಲೂ ವಿಶೇಷವಾಗಿ ಬಿದಿರು ಮರಗಳಿದ್ದು ಉದ್ಯಾನಕ್ಕೆ ವಿಶೇಷವಾದ ಮೆರುಗನ್ನು ಕರುಣಿಸಿವೆ.

ಚಿತ್ರಕೃಪೆ: +rex

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಇಂದು ಕಾಣಬಹುದಾದ ಕರ್ನಾಟಕ ಉಚ್ಚ ನ್ಯಾಯಾಲಯ (ಹಿಂದೆ ಇದು ಅಟ್ಟಾರಾ ಕಚೇರಿಯಾಗಿತ್ತು), ಸಂಗ್ರಹಾಲಯ ಕಟ್ಟಡ ಎಲ್ಲವೂ ಉದ್ಯಾನದ ಭಾಗವಾಗಿದ್ದವು. ಅಲ್ಲದೆ ಉದ್ಯಾನದಲ್ಲಿ ಸಾಕಷ್ಟು ಐತಿಹಾಸಿಕ ಸ್ಮಾರಕಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Aranya Sen

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಉದ್ಯಾನದ ಮತ್ತೊಂದು ಆಕರ್ಷಣೆ ಚಿಣ್ಣರಿಗಾಗಿ ಪುಟಾಣಿ ರೈಲು. ಉದ್ಯಾನದ ಸುತ್ತಲೂ ಚಲಿಸುವ ಈ ರೈಲು ಪ್ರದೇಶದ ಸುಂದರತೆಯನ್ನು ಬಿಡಿ ಬಿಡಿಯಾಗಿ ಬಿಡಿಸಿಡುತ್ತದೆ. ಅಲ್ಲದೆ ಬಾಯಲ್ಲಿ ನೀರೂರಿಸುವಂತಹ ಕುರಕಲು ತಿಂಡಿಗಳು ಇಲ್ಲಿ ದೊರೆಯುತ್ತವೆ. ಆದ್ದರಿಂದ ಕುಟುಂಬದೊಡನೆ ಪಿಕ್ನಿಕ್ ಹೊರಡಲು ಈ ಉದ್ಯಾನ ಪ್ರಶಸ್ತ ಹಾಗೂ ಆದರ್ಶಮಯವಾಗಿದೆ.

ಚಿತ್ರಕೃಪೆ: Navaneeth KN

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಉದ್ಯಾನವೆ ಇರಲಿ, ಮಧ್ಯಾಹ್ನವೆ ಆಗಲಿ, ಮೊಬೈಲ್ ಫೋನಿನಲ್ಲಿ ಸಂದೇಶಗಳು ಬರುತ್ತಲೆ ಇರಲಿ...

ಚಿತ್ರಕೃಪೆ: Swaminathan

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಕಬ್ಬನ್ ಪಾರ್ಕ್ ನಲ್ಲಿ ಕುಟುಂಬದೊಡನೆ ಕಿಂಚಿತ್ತು ಆರಾಮ...ನಾಳೆಯಿಂದ ಕೆಲಸಕ್ಕೆ ಮತ್ತೆ ಆಗಬೇಕು ಗುಲಾಮ...

ಚಿತ್ರಕೃಪೆ: Joone Hur

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಕಬ್ಬನ ಉದ್ಯಾನದ ಈ ಮೆಟ್ಟಿಲುಗಳು ಕರೆದೊಯ್ಯುವುದೆಲ್ಲಿಗೊ..

ಚಿತ್ರಕೃಪೆ: Anoop Kumar

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಅಚ್ಚುಕಟ್ಟಾದ ಪಾದಚಾರಿ ಮಾರ್ಗಗಳು.

ಚಿತ್ರಕೃಪೆ: Bill Scott

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಕರ್ನಾಟಕ ಹೈಕೋರ್ಟ್ ಕಟ್ಟಡ (ಹಿಂದಿನ ಅಟ್ಟಾರಾ ಕಚೇರಿ).

ಚಿತ್ರಕೃಪೆ: Zigg-E

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಕಬ್ಬನ್ ಪಾರ್ಕ್ ಬ್ಯಾಂಡ್ ಸ್ಟ್ಯಾಂಡ್.

ಚಿತ್ರಕೃಪೆ: Samuel Jacob

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Soham Banerjee

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Sissssou

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಶೇಷಾದ್ರಿ ಅಯ್ಯರ್ ಕೇಂದ್ರ ಗ್ರಂಥಾಲಯ.

ಚಿತ್ರಕೃಪೆ: Kalakki

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ವಿಕ್ಟೋರಿಯಾ ರಾಣಿಯ ಸ್ಮಾರಕ.

ಚಿತ್ರಕೃಪೆ: Amol.Gaitonde

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಕಬ್ಬನ್ ಉದ್ಯಾನದಲ್ಲಿರುವ ಶೇಷಾದ್ರಿ ಅಯ್ಯರ್ ಅವರ ಸ್ಮಾರಕ.

ಚಿತ್ರಕೃಪೆ: Augustus Binu

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Augustus Binu

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Chris Conway, Hilleary Osheroff

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಉದ್ಯಾನ ಪ್ರದೇಶದಲ್ಲಿರುವ ಚಿಕ್ಕ ದೇಗುಲ.

ಚಿತ್ರಕೃಪೆ: Chris Conway, Hilleary Osheroff

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ. ಮಳೆಗಾಲದ ಒಂದು ಸಂದರ್ಭದಲ್ಲಿ.

ಚಿತ್ರಕೃಪೆ: Sissssou

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Sissssou

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Paul Branzburg

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Nagarjun Kandukuru

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Ajith Kumar

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್:

ಕಬ್ಬನ್ ಪಾರ್ಕ್ ಅಂದ ಸುಂದರವಾದ ಚಿತ್ರಗಳಲ್ಲಿ.

ಚಿತ್ರಕೃಪೆ: Chris Conway, Hilleary Osheroff

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X