Search
  • Follow NativePlanet
Share
» »ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?

ಕೂರ್ಗ್-ಕಬಿನಿ ಪ್ರವಾಸ: ಎಲ್ಲಿಂದ ಹೊರಡುವುದು, ಉಳಿಯುವುದೆಲ್ಲಿ ಗೊತ್ತಾ?

ಹಚ್ಚ ಹಸಿರು ಅರಣ್ಯ, ಅರಣ್ಯದ ಮಧ್ಯೆ ಪಕ್ಷಿಗಳ ಚಿಲಿಪಿಲಿ, ಪ್ರಶಾಂತ ವಾತವರಣದಲ್ಲಿ ಕೇಳಿ ಬರುವ ಜುಯ್ ಎನ್ನುವ ನಾದ, ಜುಳು ಜುಳು ಹರಿಯುವ ನೀರು ಇವೆಲ್ಲವನ್ನೂ ಆನಂದಿಸುವ ಪ್ರಕೃತಿ ಪ್ರಿಯರು ನೀವಾಗಿದ್ದರೆ ಕೂರ್ಗ್ (ಕೊಡಗು)-ಕಬಿನಿ ಪ್ರವಾಸ ಹಮ್ಮಿಕೊಳ್ಳಿ. ಇಲ್ಲಿನ ಸುತ್ತಮುತ್ತಲಿನ ಪ್ರಶಾಂತತೆ, ಪ್ರಕೃತಿಯ ಸೌಂದರ್ಯವನ್ನು ಪದಗಳಲ್ಲಿ ಬಣ್ಣಿಸುವುದು ಅಸಾಧ್ಯ. ಆದ್ದರಿಂದ ಸ್ವಲ್ಪ ದಿನಗಳ ಕಾಲ ಎಲ್ಲಿಯಾದರೂ ಹೊರಗಡೆ ಕಾಲ ಕಳೆದು ಬರಬೇಕೆಂದುಕೊಂಡವರು ಕೂರ್ಗ್-ಕಬಿನಿ ಪ್ರವಾಸ ಹಮ್ಮಿಕೊಳ್ಳಿ. ಕೂರ್ಗ್ ನಿಂದ ನೀವು ಕಬಿನಿಗೆ ಹೋಗಿ ಬರುವ ಪ್ಲಾನ್ ಇಲ್ಲಿ ಕೊಡಲಾಗಿದೆ.

ಮೊದಲನೆಯದಾಗಿ ಈ ಪ್ರವಾಸ ಸಮೃದ್ಧ ಹಸಿರಿನ ಮಧ್ಯೆಯಿರುವ ಕಬಿನಿಯಲ್ಲಿ ಕಾಲ ಕಳೆಯುವುದಾಗಿರುತ್ತದೆ. ಆ ನಂತರ ಪಕ್ಷಿ ವೀಕ್ಷಣೆ. ದೇಶದ 1/4 ರಷ್ಟು ಪಕ್ಷಿ ಪ್ರಭೇದಗಳನ್ನು ನಾವಿಲ್ಲಿ ಕಾಣಬಹುದು. ನೀವು ಕಬಿನಿ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿ, ಸ್ಥಳೀಯ ಬುಡಕಟ್ಟುಗಳ ಅನ್ವೇಷಣೆ ಮಾಡಬಹುದು. ಒಟ್ಟಾರೆ ಈ ಪ್ರವಾಸವು ಪ್ರವಾಸಿಗರಿಗೆ ಜೀವನದ ಏಕತಾನತೆಯಿಂದ ಹೊರಬರುವಂತೆ ಮಾಡುತ್ತದೆ, ಸಂತೋಷ ಸಿಗುತ್ತದೆ. ಮೈಂಡ್ ರಿಫ್ರೆಶ್ ಆಗುತ್ತದೆ. ಹಾಗಾದರೆ ಕೂರ್ಗ್-ಕಬಿನಿಯ ಪ್ರವಾಸ ಹಮ್ಮಿಕೊಂಡರೆ ನೀವು ಏನೆಲ್ಲಾ ಮಾಡಬಹುದು ಎಂಬುದನ್ನು ಮುಂದೆ ನೋಡೋಣ ಬನ್ನಿ...

ಬೆಂಗಳೂರು ಮೂಲಕ ಬರುವವರಿಗೆ

ಬೆಂಗಳೂರು ಮೂಲಕ ಬರುವವರಿಗೆ

ಬೆಂಗಳೂರಿಗೆ ಬಂದು ಕೂರ್ಗ್-ಕಬಿನಿ ಹೊರಡಲು ಪ್ರವಾಸ ಹಮ್ಮಿಕೊಂಡಿದ್ದರೆ ನೀವು ಈ ಮಧ್ಯೆ ಬೆಂಗಳೂರನ್ನು ನೋಡಬಹುದು. ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 900 ಮೀ (3,000 ಅಡಿ) ಎತ್ತರದಲ್ಲಿ ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ನಗರವು ವರ್ಷಪೂರ್ತಿ ತನ್ನ ಆಹ್ಲಾದಕರ ಹವಾಮಾನದಿಂದಾಗಿ ಜನಪ್ರಿಯತೆ ಪಡೆದಿದೆ. ಬೆಂಗಳೂರಿಗೆ ಬಂದು ಬೆಳಗ್ಗೆ ಉಪಹಾರದ ನಂತರ ವಿಧಾನ ಸೌಧ, ಲಾಲ್ ಬಾಗ್, ಟಿಪ್ಪು ಅರಮನೆ, ಬೆಂಗಳೂರು ಅರಮನೆ ಇತ್ಯಾದಿಗಳನ್ನು ನೋಡಿ ರಾತ್ರಿ ತಂಗಲು ಹೋಟೆಲ್ ಗೆ ಮರಳಿ ಬನ್ನಿ.

ಬೆಂಗಳೂರಿನಿಂದ ಹೊರಟ ಮೇಲೆ…

ಬೆಂಗಳೂರಿನಿಂದ ಹೊರಟ ಮೇಲೆ…

ಕೂರ್ಗ್ ಕಾಫಿ ತೋಟ, ಜಲಪಾತಗಳು ಮತ್ತು ಹಿತವಾದ ಹವಮಾನಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈಗ ನೀವು ಕಬಿನಿಗೆ ಹೊರಡಲು ಸಿದ್ಧರಾಗಿದ್ದರೆ ಬೆಂಗಳೂರಿನಿಂದ ಕೂರ್ಗ್ ಗೆ ಬಂದು ಆ ನಂತರ ಕಬಿನಿಯತ್ತ ಪ್ರಯಾಣಿಸುವುದು ನೋಡೋಣ. ನೀವು ರಸ್ತೆಯ ಮೂಲಕ ನಿಮ್ಮ ಸ್ವಂತ ವಾಹನದಲ್ಲಿ ಕೂರ್ಗ್‌ಗೆ ಹೊರಡಿ. ಬೆಂಗಳೂರಿನಿಂದ ಕೊಡಗಿಗೆ ಪ್ರಯಾಣ ಸುಮಾರು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕೂರ್ಗ್ ತಲುಪಿದ ಮೇಲೆ ನೀವು ಬುಕ್ ಮಾಡಿರುವ ಹೋಟೆಲ್‌ ಅಥವಾ ರೆಸಾರ್ಟ್ ನಲ್ಲಿ ಉಳಿಯಿರಿ.

ರಾತ್ರಿ ಕೂರ್ಗ್ ನಲ್ಲಿ ಉಳಿಯಿರಿ

ರಾತ್ರಿ ಕೂರ್ಗ್ ನಲ್ಲಿ ಉಳಿಯಿರಿ

ನೀವು ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವಷ್ಟರಲ್ಲಿ ಹೇಗಿದ್ದರೂ ಸಂಜೆಯಾಗಿರುತ್ತದೆ. ಸಂಜೆಯ ಸಮಯ ನೀವು ನಿಮ್ಮ ಬಿಡುವಿನ ವೇಳೆಯಲ್ಲಿ, ನಿಮ್ಮ ವಿಶಾಲವಾದ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಾ ನಿಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಹರಟೆ ಹೊಡೆಯಬಹುದು. ಇಲ್ಲದಿದ್ದಲ್ಲಿ ಹೋಟೆಲ್‌ನ ಆಧುನಿಕ ಸೌಕರ್ಯಗಳನ್ನು ಆನಂದಿಸಬಹುದು. ನೀವು ಈ ರಾತ್ರಿ ಹೋಟೆಲ್‌ನಲ್ಲಿ ತಂಗಬೇಕಾಗುತ್ತದೆ.

ಕೂರ್ಗ್ - ಕಬಿನಿ

ಕೂರ್ಗ್ - ಕಬಿನಿ

ಬೆಳಗ್ಗೆ ಎದ್ದು ಹೋಟೆಲ್‌ನಲ್ಲಿ ಉಪಹಾರ ಸೇವಿಸಿದ ನಂತರ ನೀವು ಕಬಿನಿಯನ್ನು ನೋಡಲು ರೆಡಿಯಾಗಿ. ಕಬಿನಿಗೆ ಇಲ್ಲಿಂದ ಸುಮಾರು ಎರಡೂವರೆ ಗಂಟೆಗಳ ಪ್ರಯಾಣ. ನೀವು ರಾತ್ರಿ ತಂಗಿದ ಹೋಟೆಲ್ ಅಥವಾ ರೆಸಾರ್ಟ್ ನಿಂದ ಚೆಕ್ ಇನ್ ಮಾಡಿ. ನಂತರ, ಕಬಿನಿಯ ಪ್ರಮುಖ ಆಕರ್ಷಣೆಗಳಾದ ಕಬಿನಿ ನದಿ, ಕಬಿನಿ ಅಣೆಕಟ್ಟು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಇರ್ಪು ಜಲಪಾತ, ರಾಮೇಶ್ವರ ದೇವಸ್ಥಾನ ಇತ್ಯಾದಿಗಳನ್ನು ಅನ್ವೇಷಿಸಲು ಸಿದ್ಧರಾಗಿ. ಕಬಿನಿ ನೋಡಲು ಇಡೀ ದಿನ ಬೇಕಾಗುತ್ತದೆ. ಅಲ್ಲಿ ನೀವು ಹೆಚ್ಚಿನ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಬಹುದು. ದಿನವಿಡೀ ಈ ಸ್ಥಳಗಳನ್ನು ನೋಡಿದ ನಂತರ ಸಂಜೆ ಹೋಟೆಲ್‌ಗೆ ಹಿಂತಿರುಗಿ. ಇಲ್ಲಿ ರಾತ್ರಿಯ ತಂಗುವಿಕೆ ಅದ್ಭುತವಾಗಿರುತ್ತದೆ. ಏಕೆಂದರೆ ಕಬಿನಿಯು ಕುಟುಂಬ, ದಂಪತಿಗಳು ಮತ್ತು ಪ್ರವಾಸಿ ಪ್ರಿಯರಿಗೆ ಅತ್ಯಂತ ಆದ್ಯತೆಯ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಸಮೃದ್ಧ ಅರಣ್ಯ ಪ್ರದೇಶ, ಜಲಪಾತಗಳು ಮತ್ತು ಕಣಿವೆಗಳಿಂದ ಕೂಡಿದ್ದು, ಇದು ಹೇರಳವಾದ ಸಸ್ಯವರ್ಗವನ್ನೂ ಒಳಗೊಂಡಿದೆ.

ಬುಡಕಟ್ಟು ಜನಾಂಗದವರ ಜೀವನಶೈಲಿ ನೋಡಿ

ಬುಡಕಟ್ಟು ಜನಾಂಗದವರ ಜೀವನಶೈಲಿ ನೋಡಿ

ಬೆಳಗಿನ ಉಪಹಾರ ಮಗಿಸಿದ ನಂತರ, ಸ್ಥಳೀಯರ ಜೀವನಶೈಲಿಯನ್ನು ಅನ್ವೇಷಿಸಲು ಬುಡಕಟ್ಟು ಜನಾಂದವರು ವಾಸಿಸುವ ಹಳ್ಳಿಗೆ ಭೇಟಿ ನೀಡಿ. ಈ ಗ್ರಾಮವನ್ನು ತಲುಪಿದಾಗ ಸ್ಥಳೀಯರ ವಿಶಿಷ್ಟ ಸಂಸ್ಕೃತಿ ಮತ್ತು ಜೀವನಶೈಲಿಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಹಳ್ಳಿಯಲ್ಲಿ ಸ್ಥಳೀಯರೊಂದಿಗೆ ಊಟ ಮಾಡಿದ ನಂತರ, ಆ ಸ್ಥಳದ ನೈಜ ನೈಸರ್ಗಿಕ ಸೌಂದರ್ಯವನ್ನು ಅನ್ವೇಷಿಸಲು ಎಲಿಫೆಂಟ್ ಜಂಗಲ್ ಸಫಾರಿಗೆ ತೆರಳಿ. ನಂತರ ರಾತ್ರಿ ಕಳೆಯಲು ಹೋಟೆಲ್‌ಗೆ ಮರಳಿ.

ಪುನಃ ಕಬಿನಿಯಿಂದ ಬೆಂಗಳೂರಿಗೆ

ಪುನಃ ಕಬಿನಿಯಿಂದ ಬೆಂಗಳೂರಿಗೆ

ನಿಮ್ಮ ಪ್ರವಾಸದ ಕೊನೆಯ ದಿನದಂದು ಬೆಳಗ್ಗೆ ಉಪಹಾರವನ್ನು ಸೇವಿಸಿದ ನಂತರ ಬೆಂಗಳೂರಿಗೆ ಹಿಂತಿರುಗಲು ಹೋಟೆಲ್‌ನಿಂದ ಚೆಕ್ ಔಟ್ ಮಾಡಿ. ನೀವು ಸ್ವಂತ ವಾಹನದಲ್ಲಿ ಬಂದಿದ್ದರೆ ಬೆಂಗಳೂರಿಗೆ ಹೊರಡಲು ಕಾರು ಹತ್ತಿ. ಸಾರ್ವಜನಿಕ ಸಾರಿಗೆಯಲ್ಲಿ ಬಂದಿದ್ದರೆ ನೇರವಾಗಿ ನಿಲ್ದಾಣದತ್ತ ನಡೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X