Search
  • Follow NativePlanet
Share
» »ಇದು ಕೂಚ್ ಬಿಹಾರ್ ಅರಮನೆ... ನೀವು ನೋಡಿದ್ದೀರಾ?

ಇದು ಕೂಚ್ ಬಿಹಾರ್ ಅರಮನೆ... ನೀವು ನೋಡಿದ್ದೀರಾ?

ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯಿಂದ ಗುರುತಿಸಿಕೊಂಡ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದು. ಇಲ್ಲಿರುವ ಪ್ರತಿಯೊಂದು ತಾಣವು ತನ್ನದೇ ಆದ ಸುಂದರ ಇತಿಹಾಸವನ್ನು ತೆರೆದಿಡುತ್ತವೆ.

By Divya

ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯಿಂದ ಗುರುತಿಸಿಕೊಂಡ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದು. ಇಲ್ಲಿರುವ ಪ್ರತಿಯೊಂದು ತಾಣವು ತನ್ನದೇ ಆದ ಸುಂದರ ಇತಿಹಾಸವನ್ನು ತೆರೆದಿಡುತ್ತವೆ. ಕೂಚ್ ರಾಜವಂಶದವರು ಆಳಿರುವ ಈ ನಾಡಲ್ಲಿ ಸುಂದರವಾದ ದೇಗುಲಗಳು, ಪುರಾತತ್ವ ಕಟ್ಟಡಗಳು ಹಾಗೂ ಅರಮನೆಗಳನ್ನು ಕಾಣಬಹುದು.

ಬೇಸಿಗೆ ರಜೆಯಲ್ಲಿ ದೀರ್ಘಾವದಿ ರಜೆಯ ಮಜಕ್ಕೆ ಇದೊಂದು ಸೂಕ್ತ ತಾಣ. ರಾಜರ ಕಾಲದ ಇತಿಹಾಸವನ್ನು ಮಕ್ಕಳಿಗೆ ತೋರಿಸುವುದರಿಂದ ಶೈಕ್ಷಣಿಕವಾಗಿಯೂ ಮಾಹಿತಿಯನ್ನು ಪಡೆಯಬಹುದು. ಬೆಂಗಳೂರಿನಿಂದ ರೈಲ್ವೆ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರೆ ಕಡಿಮೆ ಸಮಯದಲ್ಲಿಯೇ ದೂರದ ಊರನ್ನು ತಲುಪಬಹುದು.

ಇಲ್ಲಿರುವ ಕೂಚ್ ಬಿಹಾರ್ ಅರಮನೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಇದರ ಸುತ್ತಲ ವಾತಾವರಣ, ರಚನೆ ಹಾಗೂ ಅರಮನೆಯ ವೈಭವದ ಬಗ್ಗೆ ಅರಿಯೋಣ.

ಅರಮನೆಯ ವಾಸ್ತುಶಿಲ್ಪ

ಅರಮನೆಯ ವಾಸ್ತುಶಿಲ್ಪ

ಅರಮನೆಯ ಮುಖ್ಯ ಆಕರ್ಷಣೆಯೇ ಇದರ ವಾಸ್ತು-ಶಿಲ್ಪ ಹಾಗೂ ರಚೆನೆ. ಇದು ಲಂಡನ್‍ನ ಬಕಿಂಗ್ಹ್ಯಾಮ್ ಅರಮನೆಯನ್ನು ಹೋಲುತ್ತದೆ. ಎರಡು ಅಂತಸ್ತಿನ ಈ ಅರಮನೆಯ ಹೊರಾಂಗಣ ಹಾಗೂ ಒಳಾಂಗಣದ ನೋಟ ನಯನ ಮನೋಹರವಾಗಿವೆ.
PC: wikipedia.org

ಅರಮನೆಯ ಒಳಗೆ

ಅರಮನೆಯ ಒಳಗೆ

ಅರಮನೆಯ ಒಳಗೆ ವಿಶಾಲವಾದ ಕೊಠಡಿಗಳು, ಊಟದ ಕೋಣೆ, ಗೃಂಥಾಲಯ, ಬಿಲಿಯರ್ಡ್ ಸಭಾಂಗಣ, ಮಹಿಳೆಯರ ವಿಶೇಷ ಗೃಂಥಾಲಯ ಹಾಗೂ ಇನ್ನಿತರ ವಿಶೇಷ ಕೊಠಡಿಗಳಿರುವುದನ್ನು ಕಾಣಬಹುದು.
PC: wikipedia.org

ವಿಸ್ತೀರ್ಣ

ವಿಸ್ತೀರ್ಣ

ಅರಮನೆಯು 51,309 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ನಿಂತಿದೆ. 395 ಫೀಟ್ ಉದ್ದ ಹಾಗೂ 296 ಫೀಟ್ ಅಗಲವನ್ನು ಹೊಂದಿದೆ. ಅರಮನೆಯ ಮಧ್ಯ ಭಾಗದಲ್ಲಿ ದೊಡ್ಡದಾದ ಗೋಪುರ ಹಾಗೂ ಸುತ್ತಲೂ ಚಿಕ್ಕ-ಚಿಕ್ಕ ಗೋಪುರಗಳಿಂದ ಕೂಡಿದೆ.
PC: wikipedia.org

ವಸ್ತುಸಂಗ್ರಹಾಲಯ

ವಸ್ತುಸಂಗ್ರಹಾಲಯ

ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ವಸ್ತು ಸಂಗ್ರಹಾಲಯ. ರಾಜ ಮನೆತನದವರು ಬಳಸಿದ ವಸ್ತುಗಳನ್ನು ಇಲ್ಲಿ ಇಡಲಾಗಿದೆ. ಸುಂದರವಾದ ತೈಲ ವರ್ಣ ಚಿತ್ರಗಳು, ಮಣ್ಣಿನಲ್ಲಿ ಮಾಡಿದ ಮೂರ್ತಿ ಹಾಗೂ ಕರಕುಶಲ ವಸ್ತುಗಳು, ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು.
PC: wikipedia.org

ಸುತ್ತ-ಮುತ್ತ

ಸುತ್ತ-ಮುತ್ತ

ಅರಮನೆಯ ಸುತ್ತ ವಿಶಾಲವಾದ ಜಾಗ, ಹಸಿರು ಉದ್ಯಾನವನ ಹಾಗೂ ಒಂದು ಸುಂದರವಾದ ಕೆರೆ ಇರುವುದನ್ನು ಕಾಣಬಹುದು. ಇವು ಅರಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲಿ ಕಾಣುವ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೊಬಗು ನಯನ ಮನೋಹರ.
PC: wikipedia.org

ಇತಿಹಾಸ

ಇತಿಹಾಸ

ನರೇಂದ್ರ ನಾರಾಯಣ ಅರಸರ ಅರಮನೆ ಇದು. ಇವರ ಮಗ ನೃಪೇಂದ್ರ ನಾರಾಯಣ. ಮಗ ಹತ್ತು ತಿಂಗಳು ಶಿಶುವಿರುವಾಗಲೇ ನರೇಂದ್ರ ನಾರಾಯಣ ಅರಸರು ಮರಣ ಹೊಂದಿದರು. ಅದೇ ವರ್ಷದಲ್ಲಿ ಮಗನಿಗೆ ಪಟ್ಟಾಭಿಷೇಕ ಮಾಡಲಾಯಿತು. ನೃಪೇಂದ್ರನು ಬಹಳ ಚಿಕ್ಕವನಾಗಿರುವುದರಿಂದ ಬ್ರಿಟಿಷ್ ಗವರ್ನರ್ ಜನರಲ್ ಆಯುಕ್ತರನ್ನು ನೇಮಿಸಿ ಅವರಿಗೆ ಹಸ್ತಾಂತರಿಸಿದರು. ವಿದ್ಯಾಭ್ಯಾಸದ ನಂತರ ಪುನಃ ಅರಮನೆಯ ಅಧಿಕಾರವನ್ನು ನೃಪೇಂದ್ರ ಅರಸರೇ ನೋಡಿಕೊಂಡರು ಎನ್ನಲಾಗುತ್ತದೆ.
PC: wikimedia.org

ಬರುವ ಮಾರ್ಗ

ಬರುವ ಮಾರ್ಗ

ಅರಮನೆ ಕೂಚ್ ಬಿಹಾರ್ ನಗರ ಪ್ರದೇಶದಿಂದ 3 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಆಟೋ ಅಥವಾ ಟ್ಯಾಕ್ಸಿ ಮೂಲಕ ಹೂಗಬಹುದು. ಅರಮನೆಗೆ ಹತ್ತಿರ ಇರುವ ಬನೇಶ್ವರ ಶಿವ ದೇವಾಲಯ, ಕಮಟೇಶ್ವರಿ ದೇಗುಲ, ಮದನ್ ಮೋಹನ್ ದೇಗುಲಗಳಿಗೆ ಹೋಗಬಹುದು.
PC: wikimedia.org

Read more about: west bengal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X