Search
  • Follow NativePlanet
Share
» »ಬಣ್ಣದ ಹಬ್ಬದ ಮತ್ತನ್ನು ರಂಗೇರಿಸುವ ಸ್ಥಳಗಳು

ಬಣ್ಣದ ಹಬ್ಬದ ಮತ್ತನ್ನು ರಂಗೇರಿಸುವ ಸ್ಥಳಗಳು

By Vijay

ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಹದಿ ಹರೆಯದವರಿಗೆ ಉತ್ಸಾಹ, ಹುರುಪನ್ನು ತುಂಬುವ ಹಬ್ಬಗಳ ಪೈಕಿ ಬಹುಶಃ ಮಂಚೂಣಿಯಲ್ಲಿ ನಿಲ್ಲುತ್ತದೆ ಹೋಳಿ ಅಥವಾ ಬಣ್ಣದ ಹಬ್ಬ. ಓಕಳಿ ಹಬ್ಬ ಎಂತಲೂ ಕರೆಯಲ್ಪಡುವ ಈ ಸುಂದರ ಬಣ್ಣಗಳ ಹಬ್ಬವು ರಂಗು ರಂಗಾದ ವಾತಾವರಣವನ್ನು ಸೃಷ್ಟಿಸಿ ಆಡುವವರಲ್ಲಿ ಮತ್ತೇರಿಸುತ್ತದೆ.

ಹೋಳಿ ಕೊಡುಗೆ : ಥಾಮಸ್ ಕುಕ್ ವಿಶೇಷ 6 ರಾತ್ರಿ 7 ದಿನಗಳ ಕಾಶ್ಮೀರ ಪ್ರವಾಸ ಕೇವಲ ರೂ. 26,499

ಈ ವಿಶಿಷ್ಟ ಹಬ್ಬಕ್ಕೆ ತನ್ನದೆ ಆದ ವೈವಿಧ್ಯಮಯ ಹಿನ್ನಿಲೆಯಿದ್ದು, ಇದು ಹೆಚ್ಚಾಗಿ ಉತ್ತರ ಭಾರತದಲ್ಲಿ ಅತಿ ಸಡಗರ, ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಸಾಮಾನ್ಯವಾಗಿ ಈ ಹಬ್ಬವು ಆಚರಿಸಲ್ಪಡುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ಉತ್ತರ ಭಾರತದ ಭಾಗಗಳಲ್ಲಿ ಇದು ಕಾಮದಹನದ ಹಬ್ಬವಾಗಿಯೂ ಸಹ ಗುರುತರವಾಗಿದೆ.

ವಿಶೇಷ ಲೇಖನ : ಏನೀದು ಕರಾವಳಿ ಕಂಬಳ

ಬಣ್ಣದ ಹಬ್ಬದ ಹಿಂದಿನ ದಿನವನ್ನು ಕಾಮದಹನವನ್ನಾಗಿ ಆಚರಿಸಲಾಗುತ್ತದೆ. ಪುರಾಣದಂತೆ ಹಿಂದೆ ತಾರಕಾಸುರನೆಂಬ ಅಸುರನಿದ್ದ. ಅತ್ಯಂತ ಬಲಶಾಲಿಯಾಗಿದ್ದ ಆತ ಕಠಿಣ ತಪಗೈದು ತನ್ನ ಮೃತ್ಯು ಶಿವನಿಗೆ ಜನಿಸುವ ಏಳು ದಿನಗಳ ಮಗುವಿನಿಂದಾಗಲಿ ಎಂಬ ವರ ಪಡೆದಿದ್ದ. ಈ ಸಂದರ್ಭದಲ್ಲಿ ಶಿವನು ಭೋಗಸಮಾಧಿಯಲ್ಲಿ ಲೀನನಾಗಿದ್ದ ಹಾಗೂ ಪಾರ್ವತಿಯೊಡನೆ ಸಮಾಗಮ ಹೊಂದಲಾಗದ ಸ್ಥಿತಿಯಲ್ಲಿದ್ದ. ಇದನ್ನರಿತಿದ್ದ ಆ ಅಸುರ ತನಗಿನ್ನೆಂದೂ ಮೃತ್ಯು ಬರಲಾಗದೆಂದು ಅಹಂಕಾರದಿಂದ ಮೆರೆಯುತ್ತ ಎಲ್ಲರನ್ನೂ ಹಿಂಸಿಸತೊಡಗಿದ.

ವಿಶೇಷ ಲೇಖನ : ಗಟ್ಟಿ ಗುಂಡಿಗೆಯಿರುವವರಿಗೆ ಮಾತ್ರ ಈ ಆಟ

ಇತ್ತ ದೇವಲೋಕದ ಎಲ್ಲ ದೇವತೆಗಳು ಬ್ರಹ್ಮ ಹಾಗೂ ವಿಷ್ಣು ಬಳಿ ತೆರಳಿ ಸಲಹೆ ಪಡೆದು ಕೊನೆಗೆ ರತಿ-ಮನ್ಮಥ ದಂಪತಿಗಳನ್ನು ಭೇಟಿ ಮಾಡಿ ಅವರನ್ನು ಕುರಿತು ತಮಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದರು. ಲೋಕ ಕಲ್ಯಾಣಾರ್ಥದ ಪ್ರಯುಕ್ತ ಆ ದಂಪತಿಗಳು ತಮ್ಮ ಸಮ್ಮತಿ ಸೂಚಿಸಿ ಶಿವನ ತಪಸ್ಸನ್ನು ತಮ್ಮ ಕಾಮದ ಬಾಣದಿಂದ ಭಂಗಗೊಳಿಸಿದರು. ಇದರಿಂದ ಕುಪಿತನಾದ ಶಿವ, ಮನ್ಮಥನನ್ನು ಅಲ್ಲಿಯೆ ದಹಿಸಿದನು. ನಂತರ ರತಿಯು ನಡೆದ ಘಟನೆ ವಿವರಿಸಿ ಶಿವನಲ್ಲಿ ತನ್ನ ಪತಿಯ ಪ್ರಾಣ ಭೀಕ್ಷೆ ಬೇಡಿ ಅದರ ಫಲ ಪಡೆದಳು. ಹೀಗೆ ಕಾಮದಹನವು ಹೋಳಿ ಹಬ್ಬದ ಒಂದು ಸಂಕೇತವಾಗಿದೆ.

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು. ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಬಲು ಜನಪ್ರಿಯವಾಗಿದೆ.

ಚಿತ್ರಕೃಪೆ: World Festival

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೇಲ್ಲ ಧರಿಸಿ ಗಣ್ಯರನ್ನೇಲ್ಲ ಕರೆದು, ಅವರ ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆಯಲ್ಲಿದೆ.

ಚಿತ್ರಕೃಪೆ: Ronaldo Lazzari

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ.

ಚಿತ್ರಕೃಪೆ: Ingo Mehling

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಹಬ್ಬದ ಸಡಗರ ಹೆಚ್ಚು ಕಮ್ಮಿ ಒಂದು ವಾರದ ಮುಂಚೆಯೆ ಪ್ರಾರಂಭವಾಗುತ್ತದೆ. ನಗರ ಪ್ರದೇಶಗಳ ವಿವಿಧ ಬಡಾವಣೆಗಳ ಹದಿಹರೆಯದ ಮಕ್ಕಳೆಲ್ಲರೂ ಸೇರಿ ಸೌದೆ, ಕುಳು ಮುಂತಾದವುಗಳನ್ನು ಶೇಖರಿಸುತ್ತಾರೆ. ಬಡಾವಣೆಯ ಎಲ್ಲ ಮನೆಗಳಿಗೆ ಹೋಗಿ ಕಾಮದಹನಕ್ಕಾಗಿ ಚಂದಾ ಪಡೆಯುತ್ತಾರೆ. (ಯಾರು ಕೊಡಲು ನಿರಾಕರಿಸುವರೋ ಅವರ ಮನೆ ಮುಂದೆ ನಿಂತು ಜೋರಾಗಿ ಬೊಬ್ಬೆ ಹೊಡೆಯುವ ವಾಡಿಕೆಯೂ ಇದೆ!). ನಂತರ ಬಣ್ಣದ ಹಬ್ಬದ ಹಿಂದಿನ ದಿನ ಕಾಮದಹನ ಮಾಡಿ ಮರುದಿನ ಬಣ್ಣದೊಡನೆ ಅದರ ಬೂಧಿಯನ್ನು ತೆಗೆದುಕೊಂಡು ಅಬ್ಬರದಿಂದ ಬಣ್ಣದಾಟ ಆಡುವರು.

ಚಿತ್ರಕೃಪೆ: julian correa

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಭಾರತದ ಕೆಲ ಪ್ರದೇಶಗಳಲ್ಲಿ ಇದನ್ನು ರಂಗ ಪಂಚಮಿ ಎಂದು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಬಾಗಲಕೋಟೆಯಲ್ಲಿ ಹಿಂದೆ ಇದನ್ನು ಐದು ದಿನಗಳ ಕಾಲ ಬಲು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಇಂದು ಆ ಸ್ಥಿತಿ ಇಲ್ಲದೆ ಹೋದರೂ ಒಂದಕ್ಕಿಂತ ಹೆಚ್ಚು ದಿನ ಹಬ್ಬವು ಆಚರಿಸಲ್ಪಡುತ್ತದೆ.

ಚಿತ್ರಕೃಪೆ: Pabak Sarkar

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಉತ್ತರ ಭಾರತದಲ್ಲಿ ಹೋಳಿ ಹಬ್ಬಕ್ಕೆ ಬೇರೆಯದೆ ಆದ ಹಿನ್ನಿಲೆಯಿದೆ. ಅದರಂತೆ, ಹಿಂದೆ ಹಿರಣ್ಯಕಶಿಪು ಎಂಬ ರಕ್ಕಸನು ಕಠೀಣವಾದ ತಪಗೈದು ಮೃತ್ಯು ಬರಲಾಗದಂತಹ ಪರಿಸ್ಥಿತಿಯ ವರವನ್ನು ಪಡೆದಿದ್ದ. ಇದರಿಂದ ತಾನು ಇನ್ನೂ ಅಮರನೆಂದು ಬಗೆದು ಅಹಂಕಾರದಿಂದ ಲೋಕವನ್ನು ಪೀಡಿಸತೊಡಗಿದ ಹಾಗೂ ಇನ್ಮುಂದೆ ಜನರು ದೇವರ ಬದಲು ತನ್ನನ್ನು ಪೂಜಿಸಬೇಕೆಂದು ಆಗ್ರಹಿಸತೊಡಗಿದ. ಆದರೆ ಇದನ್ನು ಆತನ ಮಗನಾದ ಪ್ರಹ್ಲಾದ ಪ್ರತಿರೋಧಿಸಿದ ಹಾಗೂ ವಿಷ್ಣುವೆ ಸರ್ವ ಎಂದು ವಾದಿಸಿದ.

ಚಿತ್ರಕೃಪೆ: FlickreviewR

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಇದರಿಂದ ಕುಪಿತನಾದ ಹಿರಣ್ಯಕಶಿಪು, ತನ್ನ ಮಗನನ್ನೆ ವಧಿಸಲು ಮುಂದಾಗಿ ಸಾಕಷ್ಟು ಅಸಫಲವಾದ ಪ್ರಯತ್ನ ಮಾಡುತ್ತಾನೆ. ಪ್ರಹ್ಲಾದನಿಗೆ ಯಾವ ರೀತಿಯಿಂದಲೂ ಸಾವು ಬರದಾದಾಗ ಹಿರಣ್ಯಕಶ್ಯಪುವಿನ ತಂಗಿ ಹೋಲಿಕಾ ಅವನ ಸಹಾಯಕ್ಕೆ ಬರುತ್ತಾಳೆ. ಇವಳಿಗೆ ಬೆಂಕಿಯಲ್ಲೂ ಏನೂ ಆಗದ ಹಾಗೆ ವರವಿರುತ್ತದೆ. ಅದರಂತೆ ಅವಳು ತನ್ನ ಅಳಿಯನಾಗಿದ್ದ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಸೌದೆಗಳ ಗುಡ್ಡೆಯ ಮೇಲೆ ಕೂಡುತ್ತಾಳೆ. ಬೆಂಕಿ ಹಚ್ಚಿದಾಗ ಆಶ್ಚರ್ಯವೆಂಬಂತೆ ಅವಳು ದಹಿಸಿ ಪ್ರಹ್ಲಾದ ಬದುಕುತ್ತಾನೆ. ಇದರ ಒಂದು ಸಂಕೇತವಾಗಿ ಹೋಳಿಯನ್ನು ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Sistak

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಇನ್ನೂ ಉತ್ತರ ಭಾರತದ ಕೃಷ್ಣನ ಜನ್ಮ ಸ್ಥಳವೆಂದು ಬಿಂಬಿತವಾಗಿರುವ ಬೃಜ್ ಪ್ರದೇಶದಲ್ಲಿ ಓಕುಳಿ ಹಬ್ಬವನ್ನು ರಂಗಪಂಚಮಿ ಬರುವವರೆಗೆ ಸುಮಾರು 17 ದಿನಗಳಷ್ಟು ದೀರ್ಘ ಕಾಲದವರೆಗೆ ಆಡಲಾಗುತ್ತದೆ. ಇದೊಂದು ಪ್ರೀತಿಯನ್ನು ಸೂಚಿಸುವ ಹಬ್ಬವಾಗಿದೆ. ಕಥೆಯ ಪ್ರಕಾರ, ಹಿಂದೆ ಕೃಷ್ಣನು ಮಗುವಾಗಿದ್ದಾಗ ಅವನನ್ನು ವಧಿಸುವ ದೃಷ್ಟಿಯಿಂದ ಪೂತನಾ ಎಂಬ ರಕ್ಕಸಿಯು ತನ್ನಲ್ಲಿರುವ ವಿಷಭರಿತ ಎದೆ ಹಾಲನ್ನುಣಿಸಿದ್ದರ ಪರಿಣಾಮ ಕೃಷ್ಣನ ಚರ್ಮದ ಬಣ್ಣವು ನೀಳ(ನೀಲಿ) ವಾಗಿರುತ್ತದೆ.

ಚಿತ್ರಕೃಪೆ: J.S. Jaimohan

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಮುಂದೆ ಕೃಷ್ಣನು ಯೌವನದಲ್ಲಿದ್ದಾಗ ರಾಧೆಯ ಪ್ರೀತಿಯಲ್ಲಿ ತಲ್ಲೀನನಾಗಿರುತ್ತಾನೆ ಹಾಗೂ ರಾಧೆಯ ಶ್ವೇತಮಯ ಚರ್ಮದ ಮುಂದೆ ತನ್ನ ಚರ್ಮದ ಬಣ್ಣವು ಸರಿಹೋಗದೆಂದು ದುಖಿತನಾಗಿರುತ್ತಾನೆ. ಇದಕ್ಕೆ ಕೃಷ್ಣನ ತಾಯಿಯು ಅವನನ್ನು ಕುರಿತು ರಾಧೆಗೆ ನಿನ್ನಿಷ್ಟದ ಬಣ್ಣವನ್ನು ಹಚ್ಚು ಎಂದು ಸಲಹೆ ನೀಡುತ್ತಾಳೆ. ಅದರಂತೆ ರಾಧೆಗೆ ಪ್ರೀತಿಯಿಂದ ಕೃಷ್ಣನು ಬಣ್ಣ ಹಚ್ಚಿ ನಂತರ ಜೋಡಿಗಳಾಗುತ್ತಾರೆ. ಇದರ ಸಂಕೇತವಾಗಿಯೆ ಮಥುರಾ ಮುಂತಾದ ಪ್ರದೇಶಗಳಲ್ಲಿ ಪ್ರೀತಿಯ ಸಂಕೇತವಾಗಿ ಹೋಳಿಯನ್ನು ಆಚರಿಸಲಾಗುತ್ತದೆ.

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಉತ್ತರ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮಥುರಾದಲ್ಲಿ "ಲಾಟ್ ಮಾರ್ ಹೋಲಿ" ಎಂಬ ವಿಶಿಷ್ಟ ಆಚರಣೆಯನ್ನು ಆಚರಿಸಲಾಗುತ್ತದೆ. ಇದು ಹೋಳಿ ಹಬ್ಬಕ್ಕಿಂತ ಮುಂಚಿತವಾಗಿಯೆ ಆಚರಿಸಲ್ಪಡುತ್ತದೆ. ಈ ಆಚರಣೆಯೂ ಕೂಡ ಹಿಂದೆ ನಡೆದ ಕೃಷ್ಣ ಒಂದು ಪ್ರಸಂಗದ ಮೇಲೆ ಆಧಾರಿತವಾಗಿದೆ.

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಕಥೆಯ ಪ್ರಕಾರ, ಒಂದೊಮ್ಮೆ ಕೃಷ್ಣನು ತನ್ನ ಗ್ರಾಮವಾದ ಮಥುರಾದ ನಂದಗಾಂವ್ ನಿಂದ ರಾಧೆಯಿದ್ದ ಬರ್ಸಾನಾ ಎಂಬ ಹಳ್ಳಿಗೆ ಹೋಗಿದ್ದನು. ಅಲ್ಲಿ ಕೃಷ್ಣನು ತನ್ನ ತುಂಟಾಟ ಮಾಡುತ್ತ ರಾಧಾ ಹಾಗೂ ಇತರೆ ಗೋಪಿಯರಿಗೆ ಛೇಡಿಸಿದ. ಇದರಿಂದ ಮಧುರವಾದ ಕಿರಿ ಕಿರಿ ಅನುಭವಿಸಿದ ಗೋಪಿಕೆಯರು ಕೃಷ್ಣನನ್ನು ಬೆನ್ನಟ್ಟಿಸಿಕೊಂಡು ಹೋದರು.

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಈ ಒಂದು ಘಟನೆಯನ್ನು ಬಿಂಬಿಸುವುದಕ್ಕೆ ಮಥುರಾದ ನಂದಗಾಂವ್ ಹಾಗೂ ಬರ್ಸಾನಾದಲ್ಲಿ ಇಂದಿಗೂ ಸಹ ಈ ಆಚರಣೆಯನ್ನು ಅತಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಈ ಒಂದು ಸಂದರ್ಭವನ್ನು ಕಣ್ಣಲ್ಲಿ ತುಂಬಿಕೊಳ್ಳಲು ದೇಶದ ವಿವಿಧೆಡೆಯಿಂದ ಕೃಷ್ಣ ಭಕ್ತರು ಹಾಗೂ ಪ್ರವಾಸಿಗರು ಇಲ್ಲಿ ನೆರೆಯುತ್ತಾರೆ.

ಚಿತ್ರಕೃಪೆ: Sreeram Nambiar

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಮೊದಲಿಗೆ ನಂದಗಾಂವ್ ನಿಂದ ಯುವಜನರು ಬರ್ಸಾನಾಗೆ ಭೇಟಿ ನೀಡುತ್ತಾರೆ. ಬರ್ಸಾನಾದಲ್ಲಿರುವ ದೇಶದ ಏಕೈಕ ರಾಧೆಗೆ ಮುಡಿಪಾದ ದೇವಾಲಯದಲ್ಲಿ ಪೂಜೆ ನಡೆದ ನಂತರ ಈ ಆಚರಣೆಗೆ ಚಾಲನೆ ಸಿಗುತ್ತದೆ. ಈ ಸಂದರ್ಭದಲ್ಲಿ ನಂದಗಾಂವ್ ಜನರು ತರುನಿಯರಿಗೆ ಛೇಡಿಸುವಂತಹ ಹಾಡುಗಳನ್ನು ಹಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಬರ್ಸಾನಾ ಹಳ್ಳಿಯ ಹುಡುಗಿಯರು/ಮಹಿಳೆಯರು ಬಡಿಗೆಗಳಿಂದ ಹುದುಗರನ್ನು ಬಡಿಯುತ್ತ ಈಡಿಸಲು ಪ್ರಾರಂಭಿಸುತ್ತಾರೆ. ಪುರುಷರು ಈ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕವಚ ಬಳಸುತ್ತಾರೆ. ಇದೊಂದು ಸಾಂದರ್ಭಿಕ ಸಂಕೇತವಾಗಿದ್ದು ಸಡಗರದಿಂದ ಆಚರಿಸಲ್ಪಡುತ್ತದೆ.

ಚಿತ್ರಕೃಪೆ: gkrishna38

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಈ ಮಧ್ಯದಲ್ಲಿ ಆವಾಗಾವಾಗ ವಿಶ್ರಾಂತಿ ಪಡೆದು "ಭಾಂಗ್" ಎಂಬ ಪಾನೀಯವನ್ನು ಸೇವಿಸಲಾಗುತ್ತದೆ. ಇದೊಂದು ಮತ್ತು ಬರಿಸುವ ಪಾನೀಯವಾಗಿರುವುದರಿಂದ ಸಾಕಷ್ಟು ಹುರುಪು, ಹುಮ್ಮಸ್ಸು ಉಂಟಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Scott Dexter

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಗುಜರಾತ್ ರಾಜ್ಯದಲ್ಲಿ ಹೋಳಿ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲನೆಯ ದಿನ ರಾತ್ರಿ ಕಾಮದಹನ ಅಥವಾ ಹೋಲಿಕಾ ದಹನ ಸಂಪನ್ನಗೊಂಡು ಮರುದಿನ ರಂಗದಾಟ ನೆರೆವೇರುತ್ತದೆ. ಹೋಲಿಕಾ ದಹನದಲ್ಲಿ ತೆಂಗಿನ ಹಸಿ ಕೊಬ್ಬರಿ ಹಾಗೂ ಮೆಕ್ಕೆಜೋಳವನ್ನು ಸಮರ್ಪಿಸಲಾಗುತ್ತದೆ.

ಚಿತ್ರಕೃಪೆ: anand patankar

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಉತ್ತರಾಖಂಡ್ ರಾಜ್ಯದಲ್ಲಿ ಬೈಠಕಿ ಹೋಲಿ, ಖಾರಿ ಹೋಲಿ ಹಾಗೂ ಮಹಿಳಾ ಹೋಲಿ ಎಂದು ಆಚರಿಸಲಾಗುತ್ತದೆ. ಮೊದಲೆರಡು ಹೋಳಿ ಹಬ್ಬಗಳು ಸಂಗೀತ ಹಾಗೂ ನೃತ್ಯಗಳಿಂದ ಕೂಡಿರುತ್ತವೆ. ಜನರು ಇಂಪಾದ ಸಂಗೀತ ಹಾಡುತ್ತ, ಕುಣಿಯುತ್ತ ಬಣ್ಣವನ್ನು ಒಬ್ಬರಿಗೊಬ್ಬರು ಹಚ್ಚುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Diganta Talukdar

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಬಿಹಾರದಲ್ಲಿ ಪ್ರಯಾಣಿಸಿದರೆ ಹೋಳಿಯನ್ನು ಸ್ಥಳೀಯವಾಗಿ ಫಗುವಾ ಎಂದು ಕರೆಯುವ ಉತ್ಸವವನ್ನಾಗಿ ಆಚರಿಸಲಾಗುತ್ತದೆಂದ್ಫ಼ು ತಿಳಿದುಬರುತ್ತದೆ. ಇಲ್ಲಿಯೂ ಸಹ ಎರಡು ದಿನಗಳ ಕಾಲ ಈ ಆಚರಣೆ ಜರುಗುತ್ತದೆ. ವಿಶೇಷವೆಂದರೆ ಇಲ್ಲಿ ಹೋಳಿ ಮೀಲನ ಎಂದು ವಿಶಿಷ್ಟ ಆಚರಣೆಯನ್ನೂ ಸಹ ಆಚರಿಸಲಾಗುತ್ತದೆ. ದಿನವೆಲ್ಲ ಹಸಿ ಬಣ್ಣದೊಂದಿಗೆ ಆಟವಾಡಿದ ನಂತರ ಸಾಯಂಕಾಲ ಗೆಳೆಯ, ನಂಟರಿಷ್ಟರ ಮನೆಗೆ ತೆರಳಿ ಒಣ ಬಣ್ಣವನ್ನು ಹಚ್ಚಿ ಸಂಭ್ರಮಿಸಲಾಗುತ್ತದೆ. ಹಿರಿಯರಿದ್ದಲ್ಲಿ ಕಾಲಿಗೆ ಬಣ್ಣ ಹಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಮನೆಯನ್ನು ಶುಚಿ ಹಾಗೂ ಸ್ವಚ್ಛ ಮಾಡಲಾಗುತ್ತದೆ.

ಚಿತ್ರಕೃಪೆ: FaceMePLS

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಇನ್ನುಳಿದಂತೆ ಕರ್ನಾಟಕ (ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ), ಮಹಾರಾಷ್ಟ್ರ, ತೆಲಂಗಾಣ, ಆಂಧ್ರಗಳಲ್ಲೂ ಈ ಬಣ್ಣದ ಹಬ್ಬವು ಸಮಾಧಾನಕರವಾಗಿ ಆಚರಿಸಲ್ಪಡುತ್ತದೆ. ಕೇರಳ, ತಮಿಳುನಾಡು, ಬೆಂಗಳೂರು ಹಾಗೂ ದ.ಕರ್ನಾಟಕದ ಕೆಲ ಭಾಗಗಳಲ್ಲಿ ಈ ಹಬ್ಬವೂ ಅಷ್ಟೊಂದು ಮಹತ್ವವನ್ನು ಪಡೆದಿಲ್ಲವೆಂದೇ ಹೇಳಬಹುದು. ಆದರೆ ಇಲ್ಲಿ ವಾಸವಿರುವ ಉತ್ತರ ಭಾರತೀಯರಿಂದ ಈ ಬಣ್ಣದ ಹಬ್ಬವು ಅಲ್ಲಲ್ಲಿ ಆಚರಿಸಲ್ಪಡುತ್ತದೆ.
ಬೆಂಗಳೂರಿನ ಕೆಂಪಾಪುರದಲ್ಲಿ ಹೋಳಿ ಹಬ್ಬದೊಂದು ಸಡಗರದ ದೃಶ್ಯ.

ಚಿತ್ರಕೃಪೆ: Harsha K R

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಆಗ್ರಾದಲ್ಲಿಯೂ ಸಹ ಬಣ್ಣದ ಹಬ್ಬದ ಕಿಚ್ಚು ಬಲು ಹೆಚ್ಚು. ವಿದೇಶಿ ಪ್ರವಾಸಿಗರೂ ಸಹ ಇದರಲ್ಲಿ ಪಾಲ್ಗೊಳ್ಳಲು ಹಾತೊರೆಯುತ್ತಾರೆ.

ಚಿತ್ರಕೃಪೆ: haithanh

ಬಣ್ಣದೋಕುಳಿ ಹಬ್ಬ:

ಬಣ್ಣದೋಕುಳಿ ಹಬ್ಬ:

ಉತ್ತರ ಕರ್ನಾಟಕದ ಬೆಳಗಾವಿಯಲ್ಲೂ ಸಹ ಹೋಳಿ ಹಬ್ಬವನ್ನು ಬಲು ವಿಜೃಂಭಣೆಯಿಂದ ಪ್ರತಿ ವರ್ಷ ಆಚರಿಸಲಾಗುತ್ತದೆ. ಹಿಂದಿನ ರಾತ್ರಿ ಕಾಮದಹನ ಮಾಡಿ ಮರುದಿನ ಯುವಕರು, ಯುವತಿಯರು ಒಗ್ಗೂಡಿ ಬಲು ಸಡಗರದಿಂದ ಬಣ್ಣವನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಚಿತ್ರಕೃಪೆ: julian correa

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X