Search
  • Follow NativePlanet
Share
» »ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್

ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್

ಮಳೆಗಾಲದಲ್ಲಿ ಮುಳುಗಿ ಬೇಸಿಗೆಯಲ್ಲಿ ನೈಜ ಸ್ಥಿತಿಗೆ ಬರುವ ಚರ್ಚ್ ಬಗ್ಗೆ ಕೇಳಿದ್ದೀರಾ? ಇಂತಹ ಒಂದು ಚರ್ಚ್ ಕರ್ನಾಟಕದಲ್ಲಿದೆ. ಅದೂ ಕೂಡಾ ಹಾಸನದಲ್ಲಿ. ಮಳೆಗಾಲದಲ್ಲಿ ಚರ್ಚ್ ಮುಳುಗುತ್ತದೆ. ಮಳೆಗಾಲದಲ್ಲಿ ಈ ಚರ್ಚ್ ನೋಡಲು ಸುಂದರವಾಗಿ ಕಾಣಿಸುತ್ತದೆ.

ವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನವರ್ಷವಿಡೀ ಚಂದನದ ಲೇಪದಲ್ಲೇ ಮುಳುಗಿರುತ್ತೆ ಈ ಮೂರ್ತಿ..ವರ್ಷದಲ್ಲೊಮ್ಮೆ ಸಿಗುತ್ತೆ ದರ್ಶನ

ಶೆಟ್ಟಿಹಳ್ಳಿ ರೋಸರಿ ಚರ್ಚ್

ಶೆಟ್ಟಿಹಳ್ಳಿ ರೋಸರಿ ಚರ್ಚ್

PC: ಪ್ರಶಸ್ತಿ
ಶೆಟ್ಟಿಹಳ್ಳಿ ರೋಸರಿ ಚರ್ಚ್ ಹಾಸನದಿಂದ 22 ಕಿ.ಮೀ ದೂರದಲ್ಲಿದೆ. ಈ ಚರ್ಚ್‌ನ್ನು 1860ರಲ್ಲಿ ಫ್ರೆಂಚ್ ಮಿಶನರಿಸ್ ನಿರ್ಮಿಸಿದ್ದರು. ನಂತರ 1960ರಲ್ಲಿ ಹೇಮಾವತಿ ನದಿಯ ಸದ್ಭಳಕೆಗಾಗಿ ಗೋರೂರ್ ಜಲಾಶಯವನ್ನು ನಿರ್ಮಿಸಲಾಯಿತು. ಈ ಪ್ರಕ್ರಿಯೆ ಸಂದರ್ಭ ಡ್ಯಾಮೇಜ್ ಆಗಿ ಅದರ ಸುತ್ತಲಿನ 28 ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.

ಸಂಶೋಧಕರಷ್ಟೇ ಹೋಗುತ್ತಾರೆ

ಸಂಶೋಧಕರಷ್ಟೇ ಹೋಗುತ್ತಾರೆ

PC:Gaurishukla24
ಆ ಹಳ್ಳಿಯ ಜನರನ್ನು ಪಕ್ಕದ ಹಳ್ಳಿಗೆ ಸ್ಥಳಾಂತರಿಸಲಾಯಿತು. ಈ ಚರ್ಚ್‌ನ್ನು ಕೈ ಬಿಡಲಾಯಿರು. ಮೇಲ್ಚಾವಣಿ ಇಲ್ಲದ ಈ ಚರ್ಚ್ ಬಂಜರು ಮೈದಾನದಲ್ಲಿತ್ತು. ಹಾಗಾಗಿ ಇಲ್ಲಿಗೆ ಹೆಚ್ಚಿನವರು ಯಾರೂ ಹೋಗುತ್ತಿರಲಿಲ್ಲ. ಕೇವಲ ಸಂಶೋಧಕರು ಹಾಗು ಆರ್ಕಿಟೆಕ್ಟರ್ ವಿದ್ಯಾರ್ಥಿಗಳಷ್ಟೇ ಹೋಗುತ್ತಿದ್ದರು. ಈಗ ಆ ಚರ್ಚ್ ಪಕ್ಷಿಗಳ ವಾಸಸ್ಥಾನವಾಗಿದೆ.

ಬೆಂಗಳೂರಿನಿಂದ ಶೆಟ್ಟಿಹಳ್ಳಿಗೆ ಹೋಗುವುದು ಹೇಗೆ?

ಬೆಂಗಳೂರಿನಿಂದ ಶೆಟ್ಟಿಹಳ್ಳಿಗೆ ಹೋಗುವುದು ಹೇಗೆ?

ಶೆಟ್ಟಿಹಳ್ಳಿ ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಬೆಂಗಳೂರು-ನೆಲಮಂಗಲ-ಕುಣಿಗಲ್-ಶಾಂತಿಗ್ರಾಮ-ಹಾಸನ. ಹಾಸನ ತಲುಪಿದ ತಕ್ಷಣ ಅಲ್ಲಿ ಯಾರಲ್ಲಾದರೂ ಕೇಳಿ. ಯಾಕೆಂದರೆ ಆ ಚರ್ಚ್ ಬಳಿ ಹೋಗಲು ಅಲ್ಲಿ ಯಾವುದೇ ಗುರುತುಗಳಿಲ್ಲ.

ಮಳೆಗಾಲದಲ್ಲಷ್ಟೇ ನೀರಿನಿಂದ ಆವೃತವಾಗಿರುತ್ತದೆ

ಮಳೆಗಾಲದಲ್ಲಷ್ಟೇ ನೀರಿನಿಂದ ಆವೃತವಾಗಿರುತ್ತದೆ

PC:Bikashrd
ಸ್ಥಳೀಯರಿಂದ ದಾರಿ ಕೇಳಿಕೊಂಡು ಅಲ್ಲಿಗೆ ತಲುಪಿದಾಗ ನಿಮಗೆ ನೀರಿನಿಂದ ಆವೃತವಾದ ಸ್ಥಳ ಸಿಗುತ್ತದೆ. ನೀವು ಅಲ್ಲಿಗೆ ಹೋಗಲು ಯಾವ ಸೀಸನ್ ಆಯ್ಕೆ ಮಾಡುತ್ತೀರಿ ಅದರ ಮೇಲೆ ಅವಲಂಭಿತವಾಗಿದೆ. ನೀವು ಮಳೆಗಾಲದಲ್ಲಿ ಹೋದರೆ ಅಲ್ಲಿ ನಿಮಗೆ ನೀರು ತುಂಬಿರುತ್ತದೆ.ಇಲ್ಲವಾದಲ್ಲಿ ಬರೀ ಬರಡು ಭೂಮಿ ಕಾಣಿಸುತ್ತದೆ. ಅಳೆದುದುಳಿದಿರುವ ಈ ಕಟ್ಟಡಗಳು ಈಗ ಫೋಟೋಗ್ರಾಫಿಗೆ ಸೂಕ್ತವಾಗಿದೆ.

ಪಿಕ್‌ನಿಕ್‌ ಸ್ಪಾಟ್

ಪಿಕ್‌ನಿಕ್‌ ಸ್ಪಾಟ್

PC:Bipin Khimasia
ಈ ಚರ್ಚ್ ಒಂದನ್ನು ಬಿಟ್ಟು ಶೆಟ್ಟಿ ಹಳ್ಳಿಯಲ್ಲಿ ಬೇರೇನೂ ಇಲ್ಲ. ಸಣ್ಣ ಪಿಕ್‌ನಿಕ್ ಸ್ಪಾಟ್‌ಗೆ ಇದು ಸೂಕ್ತವಾಗಿದೆ. ನೀವು ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಅಲ್ಲಿಗೆ ಹೋಗುವಾಗ ತಿಂಡಿಗಳನ್ನು ತೆಗೆದುಕೊಡು ಹೋಗಿ. ಯಾಕೆಂದರೆ ಅಲ್ಲಿ ಯಾವುದೇ ಹೋಟೇಲ್‌ಗಳಿಲ್ಲ. ಅಲ್ಲಿ ಪೆಟ್ರೋಲ್ ಬಂಕ್‌ಗಳೂ ಇಲ್ಲ. ಹಾಗಾಗಿ ನೀವು ಪ್ರಯಾಣ ಬೆಳೆಸುವ ಮೊದಲು ಟ್ಯಾಂಕ್ ಫುಲ್ ಮಾಡೋದು ಬೆಸ್ಟ್.

Read more about: hassan church
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X