Search
  • Follow NativePlanet
Share
» »ಭಾರತ ದೇಶದ ಮಿನಿ "ಸ್ವಿಜರ್ ಲ್ಯಾಂಡ್" ಯಾವುದು ಗೊತ್ತ?

ಭಾರತ ದೇಶದ ಮಿನಿ "ಸ್ವಿಜರ್ ಲ್ಯಾಂಡ್" ಯಾವುದು ಗೊತ್ತ?

ಚುಪ್ತ ಗ್ರಾಮವೇ ಆಗಿದ್ದರೂ ಕೂಡ ನೋಡುವುದಕ್ಕೆ ಹಾಗು ಆನಂದಿಸುವುದಕ್ಕೆ ಎಷ್ಟೊ ಅಂಶಗಳಿವೆ. ಕೇವಲ ವಿಶ್ರಾಮ ಪಡೆದುಕೊಳ್ಳುತ್ತಾ ಇಲ್ಲಿನ ಟ್ರೆಕ್ಕಿಂಗ್ ಅನ್ನು ಆನಂದಿಸಬಹುದಾಗಿದೆ. ಸಾಹಸ ಕ್ರೀಡೆ ಆನಂದಿಸುವವರು ಕೂಡ ಈ ಪ್ರದೇಶಕ್ಕೆ ತೆರಳಬಹುದು. ಅವ

ಚುಪ್ತ ಗ್ರಾಮವೇ ಆಗಿದ್ದರೂ ಕೂಡ ನೋಡುವುದಕ್ಕೆ ಹಾಗು ಆನಂದಿಸುವುದಕ್ಕೆ ಎಷ್ಟೊ ಅಂಶಗಳಿವೆ. ಕೇವಲ ವಿಶ್ರಾಮ ಪಡೆದುಕೊಳ್ಳುತ್ತಾ ಇಲ್ಲಿನ ಟ್ರೆಕ್ಕಿಂಗ್ ಅನ್ನು ಆನಂದಿಸಬಹುದಾಗಿದೆ. ಸಾಹಸ ಕ್ರೀಡೆ ಆನಂದಿಸುವವರು ಕೂಡ ಈ ಪ್ರದೇಶಕ್ಕೆ ತೆರಳಬಹುದು. ಅವಕಾಶವಿದ್ದರೆ ನಿಮ್ಮ ವಾರಾಂತ್ಯದಲ್ಲಿ ಒಮ್ಮೆ ನಿಮ್ಮ ಕುಟುಂಬಿಕರೊಂದಿಗೆ ಅಥವಾ ಸ್ನೇಹಿತರೊಂದಿಗೆ ಭೇಟಿ ನೀಡಿ ಬನ್ನಿ.

ಇಲ್ಲಿಗೆ ಭೇಟಿ ನೀಡುವವರು 4 ದಿನಗಳ ಕಾಲ ಟೂರ್ ಪ್ಲಾನ್ ಮಾಡಿಕೊಂಡಿರಬೇಕು. ಈ ಚುಪ್ತ ಗ್ರಾಮದಲ್ಲಿ ಹಚ್ಚ ಹಸಿರಿನ ಮೈದಾನ, ಗಗನಕ್ಕೆ ಏಣಿ ಹಾಕಿರುವ ವೃಕ್ಷಗಳು, ಕಲುಶಿತವಿಲ್ಲದ ವಾತಾವರಣವನ್ನು ಆನಂದಿಸಬಹುದು.

ಹಾಗಾದರೆ ಉತ್ತರಾಖಂಡದಲ್ಲಿರುವ ಚುಪ್ತ ಗ್ರಾಮಕ್ಕೆ ತೆರಳಿ. ವಾಹನಗಳ ಶಬ್ಧಗಳು, ಬಿಸಿ ವಾತಾವರಣ ಇಂಥಹ ಯಾವುದು ಕಲುಶಿತ ನಿಮ್ಮ ಬಳಿ ಸುಳಿಯಬಾರದು ಎಂದಾದರೇ ಪರ್ವತಗಳ ಮಧ್ಯೆ ಇರುವ ಚುಪ್ತ ಗ್ರಾಮಕ್ಕೆ ತಪ್ಪದೇ ಭೇಟಿ ನೀಡಿ.

ಭಾರತ ದೇಶದ ಮಿನಿ "ಸ್ವಿಜರ್ ಲ್ಯಾಂಡ್" ಯಾವುದು ಗೊತ್ತ?

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಉತ್ತರಖಂಡ್‍ನ ಚುಪ್ತದಲ್ಲಿ ತುಂಗನಾಥ ದೇವಾಲಯ, ಕಲ್ಪೇಶ್ವರ ದೇವಾಲಯ, ಮಧ್ಯೆಯಲ್ಲಿ ಮಹೇಶ್ವರ ದೇವಾಲಯಗಳಿಗೆ ಭೇಟಿ ನೀಡಬಹುದು. ಇಲ್ಲ ಸಮೀಪದಲ್ಲಿ ಕಸ್ತೂರಿ ಜಿಂಕೆಗಳ ಅಭಯಾರಣ್ಯ ಚಂದ್ರಶೀಲವನ್ನು ಕೂಡ ಕಾಣಬಹುದಾಗಿದೆ.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಅರ್ಜುನ ನಿರ್ಮಾಣ ಮಾಡಿರುವ ತುಂಗನಾಥ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3500 ಮೀಟರ್ ಎತ್ತರದಲ್ಲಿದೆ. ಈ ದೇವಾಲಯದಲ್ಲಿ ಪರಮಶಿವನು ನೆಲೆಸಿದ್ದಾನೆ. ಪ್ರಪಂಚದಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಶಿವಾಲಯ ಎಂದು ಪ್ರಸಿದ್ಧಿ ಪಡೆದಿದೆ. ಪ್ರಧಾನವಾದ ದೇವಾಲಯದಲ್ಲಿ ನಂದಿ ವಿಗ್ರಹಗಳನ್ನು, ಪಾಂಡವರ ವಿಗ್ರಹವನ್ನು ಮತ್ತು ಸುತ್ತ ಮುತ್ತ ಆನೇಕ ಚಿಕ್ಕ ಚಿಕ್ಕ ದೇವಾಲಯಗಳಿಗೆ ಭೇಟಿ ನೀಡಬಹುದು.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಮಧ್ಯೆ ಮಹೇಶ್ವರ ದೇವಾಲಯ ಚುಪ್ತದ ಸಮೀಪದಲ್ಲಿನ ಇನ್ನೊಂದು ಗ್ರಾಮ. ಈ ದೇವಾಲಯವು ಕೂಡ ಶಿವನಿಗೆ ಅಂಕಿತವಾದ ದೇವಾಲಯವಾಗಿದೆ. ಈ ಪ್ರದೇಶದಲ್ಲಿ ಪರಮಶಿವನ ಉದರ (ಹೊಟ್ಟೆ)ಯ ಭಾಗ ಎಂದು ನಂಬುತ್ತಾರೆ. ಭಕ್ತರು ಕೂಡ ಶಿವನ ಉದರಕ್ಕೆ ಆರಾಧನೆ ಮಾಡುತ್ತಾರೆ.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಚುಪ್ತಗೆ ಸಮೀಪದಲ್ಲಿ ಉರ್ಗ ಎಂಬ ಕಣಿವೆಯು ಇದೆ. ಸಮುದ್ರ ಮಟ್ಟದಿಂದ ಸುಮಾರು 2134 ಮೀಟರ್ ಎತ್ತರದಲ್ಲಿ ಕಲ್ಪೇಶ್ವರ ದೇವಾಲಯವಿದೆ. ಅದು ಕಲ್ಲಿನಿಂದ ನಿರ್ಮಾಣ ಮಾಡಿರುವ ಕಟ್ಟಡವಾಗಿದೆ. ಆ ಚಿಕ್ಕದಾದ ಕಲ್ಲಿನ ದೇವಾಲಯವನ್ನು ಒಂದು ಗುಹಾ ಮಾರ್ಗವಾಗಿ ಸೇರಿಕೊಳ್ಳಬೇಕು. ಈ ದೇವಾಲಯದಲ್ಲಿ ಶಿವನ ಕೂದಲನ್ನು ಆರಾಧಿಸುತ್ತಾರೆ.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಚುಪ್ತದಲ್ಲಿ ಎತ್ತರವಾದ ಪ್ರದೇಶವೆಂದರೆ ಅದು ಚಂದ್ರಶೀಲ. ಈ ಚಂದ್ರಶೀಲ ಸಮುದ್ರ ಮಟ್ಟಕ್ಕೆ ಸುಮಾರು 4 ಸಾವಿರ ಮೀಟರ್ ಎತ್ತರದಲ್ಲಿ ಇದೆ. ಇಲ್ಲಿಗೆ ಟ್ರೆಕ್ಕಿಂಗ್ ಮುಖಾಂತರ ತಲುಪಬಹುದು. ಈ ಟ್ರೆಕ್ಕಿಂಗ್ ಚುಪ್ತದಿಂದ ಪ್ರಾರಂಭವಾಗಿ ತುಂಗನಾಥ ದೇವಾಲಯದವರೆಗೆ ಸುಮಾರು 5 ಕಿ.ಮೀ ಇರುತ್ತದೆ. ನಂತರ ಈ ಶಿಖರದ ಮೇಲೆ ಒಂದು ದೇವಾಲಯವು ಕೂಡ ಇದೆ.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಪ್ರಕೃತಿ ಪ್ರಿಯರಿಗೆ ಚುಪ್ತ ಕ್ಯಾಂಪಿಂಗ್ ಅದ್ಭುತವಾದ ಪ್ರವಾಸ. ಈ ಹಿಲ್ ಸ್ಟೇಷನ್‍ಗೆ ಸಮೀಪದಲ್ಲಿ ಟೆಂಟ್ ಹಾಕಿಕೊಂಡು ಪ್ರಕೃತಿಯ ಮಡಿಲಲ್ಲಿ ಕೆಲವು ದಿನಗಳ ಕಾಲ ಕಳೆಯಬಹುದಾಗಿದೆ. ಸುಂದರವಾದ ಹೊಸ ಹೊಸ ಅನುಭವಗಳನ್ನು ಇಲ್ಲಿ ಪಡೆಯಬಹುದು. ಇಲ್ಲಿ ನಿಮಗೆ ಯಾವುದೇ ಅಸೌಕರ್ಯವಿರದು. ಪ್ರದೇಶವೆಲ್ಲಾ ನಿರ್ಮಲವಾಗಿ ಪ್ರಶಾಂತವಾಗಿರುತ್ತದೆ.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಚುಪ್ತನಿಂದ ಗೋಪೇಶ್ವರಕ್ಕೆ ತೆರಳುವ ಮಾರ್ಗದಲ್ಲಿ ಒಂದು ಅಭಯಾರಣ್ಯವಿದೆ. ಇದು ದಟ್ಟವಾದ ಅರಣ್ಯ ಪ್ರದೇಶ. ಸುಮಾರು 5 ಚ.ಕಿ.ಮೀ ವಿಸ್ತಾರವಾಗಿದೆ. ಇಲ್ಲಿ ನೀವು ವಿಶೇಷವಾದ ಕಸ್ತೂರಿ ಜಿಂಕೆಗಳನ್ನು ಕಾಣಬಹುದು. ಇದು ಸುಗಂಧಯುತವಾಗಿರುವ ಕಸ್ತೂರಿ ದ್ರವ್ಯವನ್ನು ಉತ್ಪತ್ತಿ ಮಾಡುತ್ತದೆ.

ಮಿನಿ ಸ್ವಿಜರ್ ಲ್ಯಾಂಡ್

ಮಿನಿ ಸ್ವಿಜರ್ ಲ್ಯಾಂಡ್

ಚುಪ್ತದ ಒಂದು ಪ್ರವಾಸ ತಾಣದಲ್ಲಿ ಗೆಸ್ಟ್ ಹೌಸ್, ಟೂರಿಸ್ಟ್ ರೆಸ್ಟ್ ರೂಮ್‍ಗಳ ಸೌಕರ್ಯವಿದೆ. ಇಲ್ಲಿ ಲಾಡ್ಜ್‍ಗಳು ಹಾಗು ಹೋಟೆಲ್‍ಗಳಲ್ಲಿಯೂ ಕೂಡ ತಂಗಬಹುದಾಗಿದೆ.

ಸಮೀಪದಲ್ಲಿ ನೋಡಬೇಕಾಗಿರುವ ತಾಣಗಳು

ಸಮೀಪದಲ್ಲಿ ನೋಡಬೇಕಾಗಿರುವ ತಾಣಗಳು

ಚುಪ್ತದ ಸಮೀಪದಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಇಲ್ಲಿ ಕೇದಾರನಾಥ ದೇವಾಲಯವು 43 ಕಿ.ಮೀ ದೂರದಲ್ಲಿದೆ. ರುದ್ರ ಪ್ರಯಾಗ 24 ಕಿ.ಮೀ ದೂರದಲ್ಲಿದೆ. ಇಂತಹ ಪವಿತ್ರ ಕ್ಷೇತ್ರಕ್ಕೂ ಕೂಡ ಭೇಟಿ ನೀಡಬಹುದಾಗಿದೆ.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಚುಪ್ತಗೆ ಸುಮಾರು 202 ಕಿ.ಮೀ ದೂರದಲ್ಲಿ ಡೆಹ್ರಾಡೂನ್ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವಿದೆ. ಇದು ದೆಹಲಿ, ಹೈದ್ರಾಬಾದ್, ಮುಂಬೈ, ಬೆಂಗಳೂರು ವಿವಿಧ ಪ್ರದೇಶಗಳಿಂದ ದೇಶಿಯ ವಿಮಾನಗಳು ಭೇಟಿ ನೀಡುತ್ತಿರುತ್ತದೆ. ಟ್ಯಾಕ್ಸಿ ಅಥವಾ ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಂಡು ಚುಪ್ತಗೆ ತಲುಪಬಹುದು.

ರಸ್ತೆ ಮಾರ್ಗ

ರಸ್ತೆ ಮಾರ್ಗ

ರೈಲ್ವೆ ಮಾರ್ಗದ ಮೂಲಕ
ಚುಪ್ತಗೆ ಸಮೀಪವಾದ ರೈಲ್ವೆ ನಿಲ್ದಾಣ ಇದೆ. ಅಲ್ಲಿಂದ ಚುಪ್ತಗೆ ತೆರಳಲು ಬಸ್ಸಿನಲ್ಲಿ ಪ್ರಯಾಣಿಸಬೇಕು.

ರಸ್ತೆ ಮಾರ್ಗವಾಗಿ ಎಂದರೆ ನವ ದೆಹಲಿಯಿಂದ ಚುಪ್ತಕ್ಕೆ ರಸ್ತೆ ಮಾರ್ಗದ ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X