Search
  • Follow NativePlanet
Share
» »ಮುಂಬೈನ ಚೌಪಟ್ಟಿ ಬೀಚ್‌ನಲ್ಲಿ ಚಾಟ್, ಹುಳಿ ಮಾವಿನಕಾಯಿ ತಿನ್ನೋದರ ಮಜಾ ಸೂಪರ್

ಮುಂಬೈನ ಚೌಪಟ್ಟಿ ಬೀಚ್‌ನಲ್ಲಿ ಚಾಟ್, ಹುಳಿ ಮಾವಿನಕಾಯಿ ತಿನ್ನೋದರ ಮಜಾ ಸೂಪರ್

ಕಡಲತೀರದಲ್ಲಿಆಕಾಶಬುಟ್ಟಿಗಳು, ಆಟಿಕೆಗಳು ಮತ್ತು ಮಸಾಲೆಯುಕ್ತ ಕಚ್ಚಾ ಮಾವಿನಕಾಯಿ, ಹುರಿದ ಕಡಲೆಕಾಯಿಗಳು ಮತ್ತು ಚಾಟ್ ಆಹಾರ, ಸ್ಥಳೀಯ ಭಕ್ಷ್ಯಗಳನ್ನು ಮಾರಾಟ ಮಾಡುತ್ತಾರೆ.

ಚೌಪಟ್ಟಿ ಬೀಚ್ ಮುಂಬೈನ ಅತ್ಯಂತ ಪ್ರಸಿದ್ಧ ಬೀಚ್‌ಗಳಲ್ಲಿ ಒಂದಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಬೀಚ್ ತನ್ನ ಸ್ಥಳೀಯ ಭಕ್ಷ್ಯಗಳಿಗೆ ಅತ್ಯಂತ ಜನಪ್ರಿಯವಾಗಿದೆ. ಚೌಪಟ್ಟಿ ಬೀಚ್‌ಗೆ ಭೇಟಿ ನೀಡಿದಾಗ ಹೆಚ್ಚಿನ ಜನರು ಇದನ್ನು ಆನಂದಿಸುತ್ತಾರೆ. ಈ ಕಡಲತೀರದಲ್ಲಿ ಅದ್ಭುತವಾದ ಸೂರ್ಯಾಸ್ತವನ್ನು ನೋಡುವುದು ನಿಜಕ್ಕೂ ಖುಷಿ ನೀಡುತ್ತದೆ. ಈ ಕಡಲತೀರವು ಬೇಸರವನ್ನು ಕಳೆಯಲು, ವಿಶ್ರಾಂತಿಯನ್ನು ಪಡೆಯಲು ಸೂಕ್ತವಾಗಿದೆ. ಹಾಗಾಗಿ ಹೆಚ್ಚಿನ ಜನರು ಸಂಜೆ ಸಮಯದಲ್ಲಿ ಈ ಕಡಲತೀರಕ್ಕೆ ಭೇಟಿ ನೀಡುತ್ತಾರೆ. ಎಲ್ಲಾ ವಯಸ್ಸಿನ ಜನರು ಕಡಲತೀರದ ಸೌಂದರ್ಯವನ್ನು ಆನಂದಿಸಲು ಇಲ್ಲಿಗೆ ಬರುತ್ತಾರೆ.

ಬೀಚ್‌ನಲ್ಲಿ ಚಾಟ್ ಸವಿಯಿರಿ

ಬೀಚ್‌ನಲ್ಲಿ ಚಾಟ್ ಸವಿಯಿರಿ

PC:McKay Savage
ರಾತ್ರಿಯ ಹೊತ್ತಿನಲ್ಲಿಈ ಕಡಲ ತೀರವು ಜಾತ್ರೆಯಂತೆ ಕಂಗೊಳಿಸುತ್ತದೆ. ಕಡಲತೀರದಲ್ಲಿಆಕಾಶಬುಟ್ಟಿಗಳು, ಆಟಿಕೆಗಳು ಮತ್ತು ಮಸಾಲೆಯುಕ್ತ ಕಚ್ಚಾ ಮಾವಿನಕಾಯಿ, ಹುರಿದ ಕಡಲೆಕಾಯಿಗಳು ಮತ್ತು ಚಾಟ್ ಆಹಾರ, ಸ್ಥಳೀಯ ಭಕ್ಷ್ಯಗಳನ್ನು ಮಾರಾಟ ಮಾಡುತ್ತಾರೆ. ಮುಂಬೈಗೆ ಭೇಟಿ ನೀಡುವ ಪ್ರವಾಸಿಗರು ಶಾಂತಿಯುತ ಮತ್ತು ಪ್ರಶಾಂತವಾದ ವಾತಾವರಣವನ್ನು ಅನುಭವಿಸಲು ಈ ಕಡಲ ತೀರಕ್ಕೆ ಭೇಟಿ ನೀಡುತ್ತಾರೆ. ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಇಲ್ಲಿ ಕಾಲ ಕಳೆಯಲು ಬರುತ್ತಾರೆ.

ಒಂಟೆ, ಕುದುರೆ ಸವಾರಿ

ಒಂಟೆ, ಕುದುರೆ ಸವಾರಿ

PC:Wen-Yan King
ಚೌಪಟ್ಟಿ ಬೀಚ್‌ಗೆ ಭೇಟಿ ನೀಡುವ ಜನರನ್ನು ಸಮುದ್ರತೀರದಲ್ಲಿರುವ ಮಂಗಗಳು ನೃತ್ಯ ಮಾಡುವ ಮೂಲಕ ಮನರಂಜಿಸುತ್ತವೆ. ಜ್ಯೋತಿಷ್ಯ ಹೇಳುವವರನ್ನು ನೀವು ಇಲ್ಲಿ ಕಾಣಬಹುದು. ಇಲ್ಲಿಗೆ ಬರುವ ಅನೇಕ ಪ್ರವಾಸಿಗರು ಇಲ್ಲಿ ಲಭ್ಯವಿರುವ ಒಂಟೆ ಮತ್ತು ಕುದುರೆಯ ಸವಾರಿಗಳನ್ನು ಅನುಭವಿಸುತ್ತಾರೆ.
ಈ ಕಡಲ ತೀರವು ಯೋಗಾಸನಗಳನ್ನು ಮಾಡಲು ಮತ್ತು ಜಾಗ್‌ಗಳಿಗೆ ಹೋಗಲು ಸೂಕ್ತ ಸ್ಥಳವಾಗಿದೆ.
ಮಕ್ಕಳಿಗೆ ಉತ್ತಮ ಸಮಯ ಕಳೆಯಲು ಅನೇಕ ಮೋಜಿನ ಆಟಗಳಿವೆ. ಈ ಅದ್ಭುತ ಬೀಚ್‌ನಲ್ಲಿ ಕೆಲವೊಮ್ಮೆ ಚಲನಚಿತ್ರ ಶೂಟಿಂಗ್ ಅಥವಾ ಬೀದಿ ನಾಟಕವನ್ನು ಸಹ ವೀಕ್ಷಿಸಬಹುದಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:McKay Savage

ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಚೌಪಟ್ಟಿ ಬೀಚ್‌ಗೆ ಭೇಟಿ ನೀಡಬಹುದು. ಮುಂಜಾನೆ ಅಷ್ಟೊಂದು ಪ್ರವಾಸಿಗರು ಇರೋದಿಲ್ಲ, ಆದರೆ ಸಂಜೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾ ಇರುತ್ತಾರೆ. ಮಳೆಗಾಲದ ಸಮಯದಲ್ಲಿ ಕಡಲ ತೀರಕ್ಕೆ ಭೇಟಿ ನೀಡುವುದು ಉತ್ತಮವಲ್ಲ. ಏಕೆಂದರೆ ಮಳೆಗಾಲದಲ್ಲಿ ಹೆಚ್ಚಿನ ಅಲೆಗಳು ಮತ್ತು ನೀರಿನ ಪ್ರಮಾಣ ಹೆಚ್ಚು ಇರುತ್ತದೆ. ಹಾಗಾಗಿ ಈ ಪ್ರದೇಶವು ಬಹಳ ಅಪಾಯಕಾರಿಯಾಗಿದೆ. ಚೌಪಾಟ್ಟಿ ಬೀಚ್ ಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ ಸೂಕ್ತವಾಗಿದೆ.

ಗಣೇಶ ಚತುರ್ಥಿ

ಗಣೇಶ ಚತುರ್ಥಿ

PC:McKay Savage
ನಿಮಗೆ ಸಾಧ್ಯವಾದರೆ, ಗಣೇಶ ಚತುರ್ಥಿಯ ಸಮಯದಲ್ಲಿಈ ಬೀಚ್‌ಗೆ ಭೇಟಿ ನೀಡಿ. ವಾಸ್ತವವಾಗಿ, ಈ ಕಡಲ ತೀರವು ಗಣೇಶ ವಿಸರ್ಜನೆಗೆ ಹೆಸರುವಾಸಿಯಾಗಿದೆ. ಅರಬ್ಬೀ ಸಮುದ್ರದಲ್ಲಿ ಗಣೇಶನ ವಿಗ್ರಹಗಳನ್ನು ಮುಳುಗಿಸಲು ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಸಮಯದಲ್ಲಿ ಮುಂಬೈನ ನೋಟವು ನಿಜಕ್ಕೂ ವಿಭಿನ್ನವಾಗಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Pradeep717
ಚೌಪಟ್ಟಿ ಬೀಚ್ ರಸ್ತೆಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕಡಲತೀರವನ್ನು ತಲುಪಲು ನಗರದಿಂದ ಒಂದು ಆಟೋ ಅಥವಾ ಟ್ಯಾಕ್ಸಿ ಅನ್ನು ಸುಲಭವಾಗಿ ಬಾಡಿಗೆಗೆ ಪಡೆಯಬಹುದು. ಅನೇಕ ಸ್ಥಳೀಯ ಬಸ್ಸುಗಳು ಸಹ ಲಭ್ಯವಿದೆ. ಚೌಪಟ್ಟಿ ಬೀಚ್ ಗೆ ಹತ್ತಿರದ ರೈಲು ನಿಲ್ದಾಣವೆಂದರೆ ಚರ್ಚ್ ಗೇಟ್. ಚರ್ಚ್ ಗೇಟ್ ನಿಲ್ದಾಣದಿಂದ, ಸ್ಥಳೀಯ ರೈಲುವೊಂದು ಚಾರ್ಣಿ ರಸ್ತೆಯಲ್ಲಿ ಸಾಗುತ್ತದೆ. ಅಲ್ಲಿಂದ ಬೀಚ್‌ಗೆ ನಡೆದುಕೊಂಡು ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X