Search
  • Follow NativePlanet
Share
» »ಚಿತ್ರಕೂಟದಲ್ಲಿದೆ ಈ ಅದ್ಭುತವಾದ ಸ್ಥಳಗಳು...ಒಮ್ಮೆ ಭೇಟಿ ನೀಡಲೇಬೇಕು....

ಚಿತ್ರಕೂಟದಲ್ಲಿದೆ ಈ ಅದ್ಭುತವಾದ ಸ್ಥಳಗಳು...ಒಮ್ಮೆ ಭೇಟಿ ನೀಡಲೇಬೇಕು....

ಹಚ್ಚಹಸಿರಿನ ಪರ್ವತಗಳು, ಆ ಪರ್ವತದ ಮೇಲೆ ಮುಗಿಲೆತ್ತರದ ವೃಕ್ಷಗಳು, ಕಣ್ಣಿಗೆ ಕಾಣಿಸದ ಹಾಗೂ ಕಿವಿಗಳಿಗೆ ಮಾತ್ರವೇ ಕೇಳಿಸುವ ಗುಪ್ತ ಗೋದಾವರಿಗಳು, ಬೆಟ್ಟಗಳ ನಡುವೆ ಬರುವ ಸಪ್ತಸ್ವರಗಳು ಹೀಗೆ ಪ್ರಕೃತಿ ಸೌಂದರ್ಯವನ್ನು ಚಿತ್ರಕೂಟವು ತನ್ನಲ

By Sowmyabhai

ಹಚ್ಚಹಸಿರಿನ ಪರ್ವತಗಳು, ಆ ಪರ್ವತದ ಮೇಲೆ ಮುಗಿಲೆತ್ತರದ ವೃಕ್ಷಗಳು, ಕಣ್ಣಿಗೆ ಕಾಣಿಸದ ಹಾಗೂ ಕಿವಿಗಳಿಗೆ ಮಾತ್ರವೇ ಕೇಳಿಸುವ ಗುಪ್ತ ಗೋದಾವರಿಗಳು, ಬೆಟ್ಟಗಳ ನಡುವೆ ಬರುವ ಸಪ್ತಸ್ವರಗಳು ಹೀಗೆ ಪ್ರಕೃತಿ ಸೌಂದರ್ಯವನ್ನು ಚಿತ್ರಕೂಟವು ತನ್ನಲ್ಲಿ ಅಡಗಿಸಿಕೊಂಡಿದೆ.

ಈ ಚಿತ್ರಕೂಟ ಕ್ಷೇತ್ರಕ್ಕೆ ಒಂದು ಸ್ಥಳ ಪುರಾಣವಿದೆ. ಅದೇನೆಂದರೆ ಶ್ರೀರಾಮಚಂದ್ರನು ತನ್ನ ತಂದೆಗೆ ನೀಡಿದ ಭಾಷೆಯ ಪ್ರಕಾರ, ತನ್ನ ತಮ್ಮ ಲಕ್ಷ್ಮಣ ಹಾಗೂ ತನ್ನ ಪತ್ನಿ ಸೀತೆ ಮಾತೆಯೊಂದಿಗೆ ಹದಿನಾಲ್ಕು ವರ್ಷ ವನವಾಸದ ಸಮಯದಲ್ಲಿ ಇಲ್ಲಿ ಕೆಲವು ಕಾಲ ಇದ್ದರು ಎಂದು ಹೇಳುತ್ತವೆ. ಪರಮ ಪಾವನನಾದ ಶ್ರೀರಾಮಚಂದ್ರನ ಪಾದಧೂಳಿನಿಂದ ತನ್ನಲ್ಲಿ ನಿಕ್ಷಿಪ್ತ ಮಾಡಿಕೊಂಡ ಚಿತ್ರಕೂಟವು ಪ್ರಸ್ತುತ ಆಧ್ಯಾತ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ. ಈ ಪವಿತ್ರ ಸ್ಥಳದಲ್ಲಿ ಅನೇಕ ತಾಣಗಳಿವೆ. ತಾಣಗಳ ಬಗ್ಗೆ ಈ ಲೇಖನದ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

1. ರಾಮ್ ಘಾಟ್

1. ರಾಮ್ ಘಾಟ್

PC:YOUTUBE

ಮಂದಾಕಿನಿ ನದಿ ತೀರದಲ್ಲಿರುವ ಘಾಟ್ ನಲ್ಲಿ ಶ್ರೀರಾಮಚಂದ್ರನು ಪ್ರತಿದಿನವೂ ಸ್ನಾನವನ್ನು ಮಾಡುತ್ತಿದ್ದನು ಎಂದು ಹೇಳುತ್ತಾರೆ. ರಾಮಲಕ್ಷ್ಮಣರು ಸ್ನಾನವನ್ನು ಮಾಡುತ್ತಿದ್ದ ಸನ್ನಿವೇಶವನ್ನು ತುಳಸಿ ದಾಸ್ ತನ್ನ ಮನೋನೇತ್ರಗಳಿಂದ ದರ್ಶಿಸಿದರು ಎಂದು ಹೇಳುತ್ತಾರೆ. ಈ ವಿವರದ ಬಗ್ಗೆ ತುಳಸಿದಾಸ್ ತನ್ನ ರಾಮಚರಿತ ಮಾನಸ ದಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ. ಘಾಟ್ ನಿಂದ ಸ್ವಲ್ಪ ದೂರದಲ್ಲಿ ಸೀತಾದೇವಿ ಸ್ನಾನವನ್ನು ಮಾಡುತ್ತಿದ್ದ ಜಾನಕಿ ಕುಂಡವನ್ನು ಕೂಡ ದರ್ಶಿಸಿಕೊಳ್ಳಬಹುದು.

2. ಭರತ ಮಿಲಾಪ್

2. ಭರತ ಮಿಲಾಪ್

PC:YOUTUBE

ತನ್ನ ಅಣ್ಣಂದಿರ ಚಿತ್ರಕೂಟದಲ್ಲಿ ಇದ್ದಾರೆ ಎಂದು ತಿಳಿದುಕೊಂಡ ಭರತನು ಸಾವಿರಾರು ಮಂದಿ ಸೈನಿಕ ಪರಿವಾರದ ಜೊತೆಗೆ ಇದೇ ಪ್ರದೇಶದಲ್ಲಿ ರಾಮನನ್ನು ಭೇಟಿ ಮಾಡಿದನು. ರಾಮನು ತನ್ನ ವನವಾಸ ದೀಕ್ಷೆಯನ್ನು ಬಿಡಬೇಕು ಎಂದು ಹೇಳುತ್ತಾ ಆತನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಕ್ಕೆ ತಿರುಗಿ ಹೋಗಿ ಆ ಪಾದುಕೆಗಳಿಗೆ ಪಟ್ಟಾಭಿಷೇಕವನ್ನು ಮಾಡಿ ರಾಜ್ಯಪಾಲನೆ ಮಾಡುತ್ತಾನೆ. ಅದರ ನೆನಪಿಗೆ ಭರತನ ಚಿಕ್ಕ ದೇವಾಲಯವನ್ನು ಕೂಡ ಇಲ್ಲಿ ನಾವು ಕಾಣಬಹುದು.

3. ಹನುಮಾನ್ ಧಾರ್

3. ಹನುಮಾನ್ ಧಾರ್

PC:YOUTUBE

ಚಿತ್ರಕೂಟದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ ಹಾಗೂ ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಮೀಟರ್ ಎತ್ತರದಲ್ಲಿ ಹನುಮಾನ್ ಧಾರ್ ಇದೆ. ಸುಮಾರು ಎರಡು ಸಾವಿರ ಮೆಟ್ಟಿಲುಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಹನುಮಂತನ ದೊಡ್ಡದಾದ ವಿಗ್ರಹ ಕಾಣಿಸುತ್ತದೆ. ಆ ವಿಗ್ರಹಕ್ಕೆ ನಿತ್ಯವೂ ಒಂದು ನೀರಿನ ಧಾರೆಯು ಅಭಿಷೇಕಿಸುತ್ತಿರುತ್ತದೆ. ಆ ಜಲಧಾರೆಯು ಎಲ್ಲಿಂದ ಬರುತ್ತಿದೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿರುವ ಪ್ರಶ್ನೆಯಾಗಿದೆ. ಆ ಜಲವನ್ನು ಪವಿತ್ರವಾದ ತೀರ್ಥವೆಂದು ಸ್ವೀಕರಿಸುತ್ತಾರೆ.

4.ರಾಮಶಯ್ಯ

4.ರಾಮಶಯ್ಯ

PC:YOUTUBE

ಸೀತಾರಾಮರು ಶಯನಿಸುವುದಕ್ಕೆ ಒಂದು ದೊಡ್ಡದಾದ ವೃಕ್ಷದ ಕೆಳಗೆ ಒಂದು ಕಲ್ಲಿನ ಪ್ರದೇಶವನ್ನು ಒಂದು ಮಂಚವಾಗಿ ಬಳಸಿಕೊಳ್ಳುತ್ತಿದ್ದರು. ಇದನ್ನೇ ರಾಮಶಯ್ಯ ಎಂದು ಕರೆಯುತ್ತಾರೆ. ಇನ್ನು ಸೀತಾರಾಮರು ಕುಳಿತುಕೊಳ್ಳುತ್ತಿದ್ದ ಶಿಲೆಯ ಮೇಲೆ ಇಂದಿಗೂ ಅವರ ಕಾಲಿನ ಮುದ್ರೆಗಳನ್ನು ಕಂಡು ಧಾನ್ಯರಾಗಬಹುದು.

5.ಉತ್ಸವಗಳು

5.ಉತ್ಸವಗಳು

PC:YOUTUBE

ಚಿತ್ರಕೂಟದಲ್ಲಿ ಪ್ರತಿ ಅಮಾವಸ್ಯೆಗೆ ದೊಡ್ಡದಾದ ಉತ್ಸವ ನಡೆಯುತ್ತದೆ. ಮುಖ್ಯವಾಗಿ ದೀಪಾವಳಿ ದಿನದಂದು ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಯಾತ್ರಿಕರಿಗಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸರ್ಕಾರದ ಶಾಖೆಗಳು ಕಡಿಮೆ ಬೆಲೆಯಲ್ಲಿ ಭೋಜನವನ್ನು, ವಸತಿ ಸೌಲಭ್ಯವನ್ನು ಕಲ್ಪಿಸುತ್ತದೆ. ಇನ್ನು ಇಲ್ಲಿ ಖಾಸಗಿ ಹೋಟೆಲ್‍ಗಳು ಕೂಡ ಇವೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನಿಂದ ಈ ಅದ್ಭುತವಾದ ಸ್ಥಳಕ್ಕೆ ಸುಮಾರು 500 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X