Search
  • Follow NativePlanet
Share
» »ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ "ಚಂಡಿ ದೇವಿ"ಯನ್ನು ದರ್ಶಿಸಿದರೆ...

ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ "ಚಂಡಿ ದೇವಿ"ಯನ್ನು ದರ್ಶಿಸಿದರೆ...

ಭಾರತ ದೇಶದಲ್ಲಿನ ಹಿಮಾಲಯಗಳು ಪುಣ್ಯಕ್ಷೇತ್ರಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಅಂಥಹ ಒಂದು ಪುಣ್ಯಕ್ಷೇತ್ರ ಹಾಗು ಶಕ್ತಿಪೀಠವಿದೆ. ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣ ಕಥೆಗಳು ಅನೇಕವಿವೆ. ಇಲ್ಲಿನ ಒಂದು ಸ್ಥಳದಲ್ಲಿ ದಾಕ್ಷಾಯ

ಭಾರತ ದೇಶದಲ್ಲಿನ ಹಿಮಾಲಯಗಳು ಪುಣ್ಯಕ್ಷೇತ್ರಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಅಂಥಹ ಒಂದು ಪುಣ್ಯಕ್ಷೇತ್ರ ಹಾಗು ಶಕ್ತಿಪೀಠವಿದೆ. ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣ ಕಥೆಗಳು ಅನೇಕವಿವೆ. ಇಲ್ಲಿನ ಒಂದು ಸ್ಥಳದಲ್ಲಿ ದಾಕ್ಷಾಯಣಿ ತಲೆ ಇಲ್ಲಿ ಬಿದ್ದು, ಪುಣ್ಯಕ್ಷೇತ್ರವಾಗಿ ಮಾರ್ಪಟಾಯಿತು ಎಂದು ಹೇಳಲಾಗುತ್ತದೆ.

ಮತ್ತೊಂದು ಕಥನದ ಪ್ರಕಾರ ಮಾತ ಕಾಳಿ ದೇವಿಯು ತನ್ನ ಶಿರಸ್ಸನ್ನು ಖಂಡಿಸಿ ರಾಕ್ಷಸರ ದಾಹವನ್ನು ತೀರಿಸಿದಳು ಎಂದು ಹೇಳಲಾಗುತ್ತದೆ. ಯಾವುದು ಏನೇ ಆಗಿದ್ದರು, ಪುರಾಣ ಕಾಲದಿಂದಲೂ ಈ ಕ್ಷೇತ್ರದಲ್ಲಿನ ದೇವಿಯು ಪ್ರಜೆಗಳ ಕೋರಿಕೆಗಳನ್ನು ತೀರಿಸುತ್ತಾ ಬರುತ್ತಿದ್ದಾಳಂತೆ. ಇಲ್ಲಿ ನೆಲೆಸಿರುವ ತಾಯಿಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ.

ಈ ಮಹಿಮಾನ್ವಿತವಾದ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,117 ಅಡಿ ಎತ್ತರಲ್ಲಿದೆ. ಈ ಕ್ಷೇತ್ರದ ದರ್ಶನಕ್ಕಾಗಿ ವಿದೇಶಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿಯೇ ಭೇಟಿ ನೀಡುತ್ತಿರುತ್ತಾರೆ. ಇಷ್ಟು ವಿಶೇಷತೆಗಳನ್ನು ಹೊಂದಿರುವ ಈ ಕ್ಷೇತ್ರದ ಬಗ್ಗೆ ಲೇಖನದ ಮೂಲಕ ಮಾಹಿತಿ ನಿಮಗಾಗಿ....

1.ಶಕ್ತಿ ಪೀಠಗಳಲ್ಲಿ ಒಂದು

1.ಶಕ್ತಿ ಪೀಠಗಳಲ್ಲಿ ಒಂದು

PC:YOUTUBE

ಹಿಮಾಲಯದಲ್ಲಿನ ಪವಿತ್ರವಾದ ಆಧ್ಯಾತ್ಮಿಕ ಧಾಮದಲ್ಲಿ ಚಿನ್ತಾಪೂರ್ಣಿ ಕೂಡ ಒಂದು. ಹಿಂದೂ ಪುರಾಣಗಳ ಪ್ರಕಾರ ಭಾರತ ದೇಶದಲ್ಲಿನ 52 ಶಕ್ತಿ ಪೀಠಗಳಲ್ಲಿ ಈ ಚಿನ್ತಪೂರ್ಣಿ ಕೂಡ ಇದೆ. ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾದ ದಾಕ್ಷಾಯಣಿಯು ಪರಮಶಿವನನ್ನು ಪ್ರೇಮಿಸಿ ವಿವಾಹ ಮಾಡಿಕೊಳ್ಳುತ್ತಾಳೆ.

2.ದಕ್ಷಪ್ರಜಾಪತಿ

2.ದಕ್ಷಪ್ರಜಾಪತಿ

PC:YOUTUBE

ಆದರೆ ಈ ವಿವಾಹ ದಕ್ಷಪ್ರಜಾಪತಿಗೆ ಇಷ್ಟವಿರುವುದಿಲ್ಲ. ಆದ್ದರಿಂದಲೇ ತನ್ನ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಕೂಡ ತನ್ನ ಮಗಳಾದ ದಾಕ್ಷಾಯಣಿಗೇ ಆಗಲಿ ಆಳಿಯನಾದ ಪರಮಶಿವನಿಗೆ ಆಗಲಿ ಕರೆಯುತ್ತಿರುವುದಿಲ್ಲ.

3.ಯಾಗ

3.ಯಾಗ

PC:YOUTUBE

ಈ ಕ್ರಮದಲ್ಲಿಯೇ ಒಮ್ಮೆ ದಕ್ಷನು ಒಂದು ದೊಡ್ಡ ಯಾಗವನ್ನು ಮಾಡಬೇಕು ಎಂದು ಭಾವಿಸುತ್ತಾನೆ. ಈ ವಿಷಯವನ್ನು ತಿಳಿದುಕೊಂಡ ದಾಕ್ಷಾಯಣಿಯು ತನಗೆ ಆಹ್ವಾನ ಇಲ್ಲದೆ ಇದ್ದರು, ಪತಿಯು ಬೇಡ ಎಂದು ಹೇಳಿದರೂ ಕೇಳದೆ ತವರು ಮನೆಯ ಮೇಲೆ ಮಮಕಾರದಿಂದಾಗಿ ಯಾಗ ನಡೆಯುತ್ತಿರುವ ಸ್ಥಳಕ್ಕೆ ತೆರಳುತ್ತಾಳೆ. ದಕ್ಷಪ್ರಜಾಪತಿಯು ಆಕೆಯನ್ನು ಹಾಗು ಪರಮಶಿವನನ್ನು ಅವಮಾನಿಸುತ್ತಾನೆ. ಇದರಿಂದ ಅವಮಾನಿತಳಾಗಿ ಆತ್ಮಹೂತಿ ಮಾಡಿಕೊಳ್ಳುತ್ತಾಳೆ.

4.ವೀರಭದ್ರ

4.ವೀರಭದ್ರ

PC:YOUTUBE

ಈ ವಿಷಯಯನ್ನು ತಿಳಿದುಕೊಂಡ ಪರಮೇಶ್ವರನು ಅತ್ಯಂತ ಕೋಪದಿಂದ ರುದ್ರನಾಗಿ ತನ್ನ ಜಠಾಜೂಟದಿಂದ ವೀರಭದ್ರನನ್ನು ಸೃಷ್ಟಿಸಿ ಆತನ ಮೂಲಕ ಯಾಗವನ್ನು ಧ್ವಂಸಗೊಳಿಸುತ್ತಾನೆ. ತನ್ನ ಪತ್ನಿಯಾದ ದಾಕ್ಷಾಯಣಿಯ ಪಾರ್ಥಿವ ಶರೀರವನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಪ್ರಳಯ ತಾಂಡವ ಮಾಡುತ್ತಾನೆ.

5.ಸುದರ್ಶನ ಚಕ್ರ

5.ಸುದರ್ಶನ ಚಕ್ರ

PC:YOUTUBE

ಇದರಿಂದಾಗಿ ಸೃಷ್ಟಿ ಕಾರ್ಯವು ಅಲ್ಲೊಲ-ಕಲ್ಲೊಲವಾಗುತ್ತದೆ. ಸಮಸ್ಯೆ ಪರಿಷ್ಕಾರಕ್ಕಾಗಿ ವಿಷ್ಣುವು ತನ್ನ ಸುದರ್ಶನ ಚಿಕ್ರದಿಂದ ದಾಕ್ಷಾಯಣಿ ಶರೀರವನ್ನು 52 ಭಾಗಗಳಾಗಿ ಕತ್ತರಿಸುತ್ತಾನೆ. ಹೀಗೆ ಕತ್ತರಿಸಿ ಬಿದ್ದ ಶರೀರ ಭಾಗಗಳೇ ಶಕ್ತಿ ಪೀಠಗಳು. ಆ ಶಕ್ತಿಪೀಠಗಳು ಭಾರತ ದೇಶದ ಅಲ್ಲಲ್ಲಿ ಪುಣ್ಯಕೇತ್ರವಾಗಿವೆ.

6.ತಲೆ ಬಿದ್ದ ಪ್ರದೇಶವೇ

6.ತಲೆ ಬಿದ್ದ ಪ್ರದೇಶವೇ

PC:YOUTUBE

ಹೀಗೆ ಬಿದ್ದ ಶರೀರದ ಭಾಗಗಳೇ ಶಕ್ತಿಪೀಠವಾಗು ಮಾರ್ಪಟಾಗಿ ಪ್ರಜೆಗಳಿಂದ ಆ ಪಾರ್ವತಿ ದೇವಿಯು ಆರಾಧಿಸಲ್ಪಡುತ್ತಿದ್ದಾಳೆ. ಈ ಕ್ರಮದಲ್ಲಿಯೇ ದಾಕ್ಷಾಯಣಿಯ ತಲೆ ಬಿದ್ದ ಪ್ರದೇಶವೇ ಚಿನ್ತಪೂರ್ಣಿ ಶಕ್ತಿಪೀಠವಾಗಿ ಮಾರ್ಪಟಾಯಿತು ಎಂದು ಪುರಾಣ ಕಾಲದಿಂದಲೂ ಪ್ರಜೆಗಳು ಆರಾಧಿಸುತ್ತಿದ್ದಾರೆ.

7.ಶ್ರದ್ಧಾ-ಭಕ್ತಿಯಿಂದ ಕೋರಿಕೊಂಡರೆ

7.ಶ್ರದ್ಧಾ-ಭಕ್ತಿಯಿಂದ ಕೋರಿಕೊಂಡರೆ

PC:YOUTUBE

ಅಷ್ಟೇ ಅಲ್ಲ, ಇಲ್ಲಿನ ದೇವಿಯನ್ನು ಚಿನ್ಮಸಿಕ್ತ ದೇವಿ ಎಂಬ ಹೆಸರಿನಿಂದ ಕರೆಯುತ್ತಾರೆ. ಮುಖ್ಯವಾಗಿ ಆತ್ಮ ಶುದ್ಧಿಯಿಂದ ತಮ್ಮ ಕೋರಿಕೆಗಳನ್ನು ಕೋರಿಕೊಂಡರೆ ಇಲ್ಲಿನ ದೇವಿಯು ತಪ್ಪದೇ ಭಕ್ತರ ಆಸೆಗಳನ್ನು ನೇರವೇರಿಸುತ್ತಾಳಾಂತೆ. ಮಾರ್ಕಂಡೇಯ ಪುರಾಣದ ಪ್ರಕಾರ ರಾಕ್ಷಸರೊಂದಿಗೆ ಕಾಳಿಯ ರೂಪವಾದ ಚಂಡಿ ದೇವಿಯೊಂದಿಗೆ ಯುದ್ಧ ನಡೆಯುತ್ತದೆ.

8.ಚಂಡಿ

8.ಚಂಡಿ

PC:YOUTUBE

ಈ ಯುದ್ಧದಲ್ಲಿ ಚಂಡಿ ವಿಜಯವನ್ನು ಸಾಧಿಸುತ್ತಾಳೆ. ಆದರೆ ಈ ಯುದ್ಧದಲ್ಲಿ ಆಕೆಗೆ ಸಹಾಯವನ್ನು ಮಾಡಿದ ಜಯ ಹಾಗು ವಿಜಯ ಎಂಬ ರಾಕ್ಷಸರ ದಾಹ ಮತ್ತು ಹಸಿವು ತೀರುವುದಿಲ್ಲ. ಇದರಿಂದಾಗಿ ಚಂಡಿಯೇ ತನ್ನ ತಲೆಯನ್ನು ಖಂಡಿಸಿಕೊಳ್ಳುತ್ತಾಳೆ.

9.ಚಿನ್ಮಸಿಕ್ತಾ ದೇವಿ

9.ಚಿನ್ಮಸಿಕ್ತಾ ದೇವಿ

PC:YOUTUBE

ಆಕೆಯ ತಲೆಯಿಂದ ಚಿಮ್ಮುತ್ತಿದ್ದ ರಕ್ತವು ಜಯ, ವಿಜಯರ ಹಸಿವನ್ನು ತೀರಿಸಿತು ಎಂದು ಪುರಾಣಗಳು ಹೇಳುತ್ತವೆ. ಈ ಘಟನೆಯಿಂದಾಗಿಯೇ ಇಲ್ಲಿನ ದೇವಿಯನ್ನು ಚಿನ್ಮಸಿಕ್ತಾ ದೇವಿ ಎಂಬ ಹೆಸರಿನಿಂದ ಭಕ್ತರು ಆರಾಧಿಸುತ್ತಾರೆ. ಚಿನ್ ಎಂದರೆ ಇಲ್ಲದೇ ಇರುವುದು ಎಂಬ ಅರ್ಥವೇ ಅಲ್ಲದೇ ಮಸ್ತಿಕ ಎಂದರೆ ತಲೆ ಎಂಬ ಅರ್ಥ ನೀಡುತ್ತದೆ. ಈ ದೇವತೆಯನ್ನು ಹೆಚ್ಚಾಗಿ ಅಘೋರಿಗಳು ಪೂಜಿಸುತ್ತಾರೆ.

10.ರುದ್ರ ದೇವನು ನಾಲ್ಕು ದಿಕ್ಕಿನಲ್ಲಿ

10.ರುದ್ರ ದೇವನು ನಾಲ್ಕು ದಿಕ್ಕಿನಲ್ಲಿ

PC:YOUTUBE

ಈ ಶಕ್ತಿಪೀಠವನ್ನು ರುದ್ರ ದೇವನು ನಾಲ್ಕು ದಿಕ್ಕುಗಳಲ್ಲಿಯೂ ಕಾವಲು ಕಾಯುತ್ತಿರುತ್ತಾನೆ ಎಂಬುದು ಸ್ಥಳ ಪುರಾಣ ಹೇಳುತ್ತದೆ. ಅದ್ದರಿಂದಲೇ ಈ ಶಕ್ತಿ ಪೀಠವನ್ನು ಪೂರ್ವದಲ್ಲಿ ಕಾಳೇಶ್ವರ್ ಮಹಾದೇವ ದೇವಾಲಯ, ಪಶ್ಚಿಮದಲ್ಲಿ ನಾರಾಯಣ್ ಮಹದೇವ್ ದೇವಾಲಯ, ಉತ್ತರದಲ್ಲಿ ಮಚ್ ಕುಂಡ್ ಮಹದೇವ್, ದಕ್ಷಿಣದಲ್ಲಿ ಶಿವ್ ಬಾರಿ ದೇವಾಲಯಗಳು ಇರುತ್ತವೆ.

11.ಸಂಪ್ರದಾಯ ವಸ್ತ್ರಗಳು

11.ಸಂಪ್ರದಾಯ ವಸ್ತ್ರಗಳು

PC:YOUTUBE

ಚಿನ್ತಪೂರ್ಣಿ ದೇವಾಲಯಕ್ಕೆ ಪ್ರವೇಶಿಸುವ ಮುಂಚೆ ಪ್ರತಿಯೊಬ್ಬರು ತಮ್ಮ ತಮ್ಮ ತಲೆಯ ಮೇಲೆ ಷಾಲ್ ಅಥವಾ, ಟೋಪಿಯನ್ನಾಗಲಿ ಧರಿಸಿಕೊಂಡು ತೆರಳಬೇಕು. ಸ್ತ್ರೀಗಳು ಕೂಡ ತಮ್ಮ ತಲೆಯ ಮೇಲೆ ಸೆರಗಿನಿಂದ ಹೋದಿಸಿಕೊಳ್ಳಬೇಕು. ಅಷ್ಟೇ ಅಲ್ಲ, ಸಂಪ್ರದಾಯಿಕ ವಸ್ತ್ರಗಳನ್ನೇ ಧರಿಸಬೇಕು.

12.ಪಂಡಿತ್ ಮಾಯಿ ದಾಸ್ ಸಂತತಿ

12.ಪಂಡಿತ್ ಮಾಯಿ ದಾಸ್ ಸಂತತಿ

PC:YOUTUBE

ಚಿನ್ತಪೂರ್ಣಿ ಮಾತೆಗೆ ಕಲಿಯಾ ಸರಸ್ವತಿ ಬ್ರಾಹ್ಮಣ ವಂಶಕ್ಕೆ ಸೇರಿದ ಪಂಡಿತ್ ಮಾಯಿ ದಾಸ್ ಸಂತತಿಯವರೇ ಸುಮಾರು 26 ತಲಾಂತರದಿಂದ ಪೂಜಾರಿಗಳಾಗಿದ್ದಾರೆ. ಪಂಡಿತ್ ಮಾಯಿ ದಾಸ್‍ಗೆ ಚಿನ್ಮಸ್ತಿಕಾ ದೇವಿಯು ಕನಸ್ಸಿನಲ್ಲಿ ಕಾಣಿಸಿ ಚಿನ್ತಪೂರ್ಣಿಯಾಗಿ ನೆಲೆಸಿರುವ ಪ್ರದೇಶದ ಬಗ್ಗೆ ತಿಳಿಸಿದಳು ಎಂದು ಪೂಜಾರಿಗಳು ಹೇಳುತ್ತಾರೆ.

13.ಸಾವನಾಷ್ಟಮಿ

13.ಸಾವನಾಷ್ಟಮಿ

PC:YOUTUBE

ಪ್ರತಿ ವರ್ಷ ಜುಲೈ ಹಾಗು ಆಗಸ್ಟ್ ತಿಂಗಳ ಮಧ್ಯೆ ಸಾವನಾಷ್ಟಮಿಯ ಹೆಸರಿನಿಂದ ಪ್ರತ್ಯೇಕವಾದ ಪೂಜೆಗಳು ನಡೆಯುತ್ತವೆ. ಆ ಪೂಜೆಗೆ ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭಕ್ತರು ಭೇಟಿ ನೀಡುತ್ತಾರೆ. ಅದೇ ವಿಧವಾಗಿ ದಸರಾ ನವರಾತ್ರಿ, ಕಾರ್ತಿಕ ಮಾಸ, ಪೌರ್ಣಮಿ ದಿನದಂದು ಕೂಡ ಇಲ್ಲಿ ಹೆಚ್ಚು ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಲು ಬರುತ್ತಾರೆ.

14.ಸಮುದ್ರ ಮಟ್ಟದಿಂದ 3,117 ಅಡಿ ಎತ್ತರದಲ್ಲಿದೆ

14.ಸಮುದ್ರ ಮಟ್ಟದಿಂದ 3,117 ಅಡಿ ಎತ್ತರದಲ್ಲಿದೆ

PC:YOUTUBE

ಹಿಮಾಲಯ ಪರ್ವತ ಪಂಕ್ತಿಯಲ್ಲಿರುವ ಈ ಪುಣ್ಯಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,117 ಅಡಿ ಎತ್ತರದಲ್ಲಿದೆ. ಹಿಮಾಚಲ್ ಪ್ರದೇಶದಲ್ಲಿನ ಉನಾಯಿಂದ ಇಲ್ಲಿಗೆ ಕೇವಲ 47 ಕಿ.ಮೀ ದೂರದಲ್ಲಿದೆ. ಬಸ್ಸು, ರೈಲುಗಳ ಸಂಪರ್ಕ ನಿತ್ಯವು ಕೂಡ ಇರುತ್ತದೆ.

15.ಕಾಲ್ನಡಿಗೆ

15.ಕಾಲ್ನಡಿಗೆ

PC:YOUTUBE

ದೇವಾಲಯಕ್ಕೆ 1.2 ಕಿ.ಮೀ ದೂರದಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಅಲ್ಲಿಂದ ದೇವಾಲಯಕ್ಕೆ ತೆರಳಬೇಕಾದರೆ ಕಾಲ್ನಡಿಗೆಯ ಮೂಲಕವೇ ತೆರಳಬೇಕು. ಮಂಗಳ, ಶುಕ್ರ, ಶನಿ, ಭಾನುವಾರದಂದು ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಸಾಧಾರಣವಾಗಿ ಭಕ್ತರು ದೇವಿಗೆ ಸಿಹಿಯಾದ ಪದಾರ್ಥಗಳನ್ನು ನೈವೇದ್ಯವಾಗಿ ಇಡುತ್ತಾರೆ.

16.ಪರಿಸರ ಪ್ರದೇಶ

16.ಪರಿಸರ ಪ್ರದೇಶ

PC:YOUTUBE

ಅಲ್ಲಿನ ಪರಿಸರ ಪ್ರದೇಶಗಳು ಕೂಡ ಅತ್ಯಂತ ರಮಣೀಯವಾಗಿರುತ್ತದೆ. ಚಿಯಾಸ್ ನದಿ, ಸ್ವಾನ್ ನದಿಯ ಸೌಂದರ್ಯವನ್ನು ಕೂಡ ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ, ಟ್ರೆಕ್ಕಿಂಗ್‍ಗೆ ಕೂಡ ಅನುಕೂಲಕರವಾದ ಪ್ರದೇಶವಿದು ಎಂದೇ ಹೇಳಬಹುದು. ಅದ್ದರಿಂದಲೇ ಯುವಕರು ಕೂಡ ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X