Search
  • Follow NativePlanet
Share
» »ಚಿಮ್ಮಡದ ಕಿಚಡಿ ಜಾತ್ರೆಗೆ ಹೋಗಿದ್ದೀರಾ? ಕಿಚಡಿ ತಿಂದಿದ್ದೀರಾ?

ಚಿಮ್ಮಡದ ಕಿಚಡಿ ಜಾತ್ರೆಗೆ ಹೋಗಿದ್ದೀರಾ? ಕಿಚಡಿ ತಿಂದಿದ್ದೀರಾ?

ನಮ್ಮ ರಾಜ್ಯದಲ್ಲಿ ಎಷ್ಟೇಲ್ಲಾ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆ ಜಾತ್ರೆಗಳಿರುತ್ತವೆ, ಉತ್ಸವಗಳಿರುತ್ತವೆ. ನೀವು ಸಾಕಷ್ಟು ಜಾತ್ರೆಗಳನ್ನು ನೋಡಿರುವಿರಿ. ಆದರೆ ಕಿಚಡಿ ಜಾತ್ರೆಯನ್ನು ನೋಡಿದ್ದೀರಾ? ಈ ಬಗ್ಗೆ ಕೇಳಿದ್ದೀರಾ? ಈ ಕಿಚಡಿ ಜಾತ್ರೆಯ ಸ್ಪೆಶಾಲಿಟಿ ಏನು ಗೊತ್ತಾ?

ಎಲ್ಲಿ ನಡೆಯುತ್ತೆ ಈ ಜಾತ್ರೆ

ಎಲ್ಲಿ ನಡೆಯುತ್ತೆ ಈ ಜಾತ್ರೆ

PC: FaceBook

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿನ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಈ ಕಿಚಡಿ ಜಾತ್ರೆಯನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಬೇರೆ ಬೇರೆ ಊರುಗಳಲ್ಲಿ ದೇವರ ಜಾತ್ರೆ ನಡೆದ್ರೆ ಚಿಮ್ಮಡ ಗ್ರಾಮದಲ್ಲಿ ಕಿಚಡಿ ಜಾತ್ರೆ ನಡೆಯುತ್ತದೆ.

ಕಿಚಡಿಯೇ ಪ್ರಸಾದ

ಕಿಚಡಿಯೇ ಪ್ರಸಾದ

PC: FaceBook

ಈ ಜಾತ್ರೆಗೆ ಆಗಮಿಸುವ ಭಕ್ತರಿಗೆಲ್ಲಾ ಕಿಚಡಿಯೇ ಪ್ರಸಾದ. ಎಷ್ಟೇ ಶ್ರೀಮಂತನಾದ್ರೂ ಇಲ್ಲಿನ ಕಿಚಡಿ ಸ್ವೀಕರಿಸುತ್ತಾರೆ. ಒಂದೇ ದಿನದಲ್ಲಿ ಲಕ್ಷಾಂತರ ಜನರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಇಲ್ಲಿ.

ಸರ್ವರೋಗಕ್ಕೂ ಮದ್ದು

ಸರ್ವರೋಗಕ್ಕೂ ಮದ್ದು

PC: FaceBook
ಇಲ್ಲಿನ ಅನ್ನಪ್ರಸಾದವನ್ನು ಸ್ವೀಕರಿಸಿದ್ರೆ ಸರ್ವರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಇಲ್ಲಿನ ಕಿಚಡಿಯನ್ನು ಸೇವಿಸುವುದರ ಜೊತೆಗೆ ಪ್ರಸಾದವನ್ನು ತಮ್ಮ ಮನೆಗೂ ತೆಗೆದುಕೊಂಡು ಹೋಗುತ್ತಾರೆ. ಮಧ್ಯಾಹ್ನ ಕಿಚಡಿ ಪ್ರಸಾದ ಸಂತರ್ಪಣೆ ಪ್ರಾರಂಭವಾದರೆ, ರಾತ್ರಿ ವರೆಗೂ ನಡೆಯುತ್ತದೆ.

ಜಾತಿ, ಮತದ ಭೇದವಿಲ್ಲ

ಜಾತಿ, ಮತದ ಭೇದವಿಲ್ಲ

PC: FaceBook

ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲಾ ಜಾತಿಯವರು ಜಾತ್ರೆಗೆ ಬರುತ್ತಾರೆ. ಪ್ರಸಾದ ಸ್ವೀಕರಿಸುತ್ತಾರೆ. ಭಾವೈಕ್ಯತೆಯನ್ನು ಸಾರುವ ಉತ್ಸವ ಇದಾಗಿದೆ. ಚಿಮ್ಮಡದ ಕಿಚಡಿ ಜಾತ್ರೆಗೆ ನೆರೆ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.

ಎಲ್ಲಾ ಧರ್ಮದವರು ಸೇರಿ ನಡೆಸುವ ಜಾತ್ರೆ

ಎಲ್ಲಾ ಧರ್ಮದವರು ಸೇರಿ ನಡೆಸುವ ಜಾತ್ರೆ

PC: FaceBook
ಭಕ್ತರು ದಾನವಾಗಿ ನೀಡಿದ ಅನ್ನ ಹಾಗು ಬೇಳೆಯಿಂದ ಈ ಪ್ರಸಾದವನ್ನು ತಯಾರಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಇಚ್ಛಾನುಸಾರ ದೇಣಿಗೆಯನ್ನು ನೀಡುತ್ತಾರೆ. ಪ್ರತಿಯೊಬ್ಬರು ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಎಲ್ಲಾ ಧರ್ಮದ ಜನರು ಒಂದೇ ಕುಟುಂಬದವರಂತೆ ಸೇರಿ ಈ ಜಾತ್ರೆಯನ್ನು ಯಶಸ್ವಿಯಾಗಿಸುತ್ತಾರೆ.

ಪ್ರಭುಲಿಂಗೇಶ್ವರ

ಪ್ರಭುಲಿಂಗೇಶ್ವರ

PC: FaceBook

ಸಾಕಷ್ಟು ಜನರು ಇಲ್ಲಿಗೆ ಬಂದು ಪ್ರಭುಲಿಂಗೇಶ್ವರ ಕೃಪೆಗೆ ಪಾತ್ರರಾಗುತ್ತಾರೆ. ಈ ಬಾರಿ ಇದೇ ಸೋಮವಾರ ಸೆ.24ರಂದು ಕಿಚಡಿ ಜಾತ್ರೆ ನಡೆಯಲಿದೆ. ನೀವು ಈ ವರೆಗೆ ಈ ಕಿಚಡಿ ಜಾತ್ರೆಯಲ್ಲಿ ಪಾಲ್ಗೊಂಡಿಲ್ಲ, ಅಲ್ಲಿನ ಮಹಾ ಪ್ರಸಾದವನ್ನು ಸ್ವೀಕರಿಸಿಲ್ಲವೆಂದಾದಲ್ಲಿ ಈ ಬಾರಿ ನಡೆಯಲಿರುವ ಕಿಚಡಿ ಜಾತ್ರೆಯಲ್ಲಿ ಪಾಲ್ಗೊಂಡು ನಿಮ್ಮ ಕಣ್ಣಾರೆ ಕಿಚಡಿ ಜಾತ್ರೆಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X