Search
  • Follow NativePlanet
Share
» » 30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ

30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ

ಭಾರತ ದೇಶದಲ್ಲಿ ಜನರು ಅನೇಕ ನಂಬಿಕೆಯನ್ನು ಅನೇಕ ಸಂಪ್ರದಾಯಗಳನ್ನು, ಆಚರಣೆಗಳನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಈ ಆಚರಣೆಗಳನ್ನು ಮೂಢನಂಬಿಕೆಗಳು ಎನ್ನಬೇಕೋ ಅಥವಾ ಜನರ ಭಕ್ತಿ ಎನ್ನಬೇಕೋ ತಿಳಿಯುತ್ತಿಲ್ಲ. ಆ ಆಚರಣೆಗಳನ್ನು ಯಾರು ಪ್ರಾರಂಭಿಸಿದರು , ಯಾವಾಗ ಪ್ರಾರಂಭಿಸಿದರು ಎನ್ನುವುದು ಯಾರಿಗೂ ತಿಳಿದಿರೋದಿಲ್ಲ. ಒಟ್ಟಾರೆಯಾಗಿ ತಲತಲಾಂತರದಿಂದ ನಡೆದುಕೊಂಡು ಬಂದಿರುತ್ತದೆ.

ವಿಚಿತ್ರ ಆಚರಣೆ

ವಿಚಿತ್ರ ಆಚರಣೆ

ಅಂತಹ ವಿಚಿತ್ರ ಆಚರಣೆಗಳಲ್ಲಿ ಕರ್ನಾಕಟದ ಒಂದು ಆಚರಣೆಯೂ ಸೇರಿದೆ. ಕರ್ನಾಟಕದ ಬಾಗಲಕೋಟೆಯಲ್ಲಿ ಒಂದು ವಿಚಿತ್ರ ಆಚರಣೆಯನ್ನು ಜನರು ಅನುಸರಿಸುತ್ತಾ ಬಂದಿದ್ದಾರೆ. ಅದರ ಬಗ್ಗೆ ಕೇಳಿದರೆ ಆಶ್ಚರ್ಯವಾಗುವದಂತೂ ಖಂಡಿತ.

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ಬಾಗಲಕೋಟೆ

ಬಾಗಲಕೋಟೆ

PC: youtube

ಇಲ್ಲಿ ಮಗುವಿನ ಆರೋಗ್ಯಕ್ಕಾಗಿ ಹಾಗೂ ಒಳಿತಿಗಾಗಿ ಮಗುವನ್ನು 30ಫೀಟ್ ಎತ್ತರದಿಂದ ಕೆಳಕ್ಕೆ ಎಸೆಯಲಾಗುತ್ತದೆ. ಪೂಜಾರಿ ಮಗುವನ್ನು ಕೆಳಕ್ಕೆ ಎಸೆಯುತ್ತಾರೆ. ಕೆಳಗೆ ನಿಂತವರು ಬೆಡ್ಶೀಟ್‌ ಬಿಡಿಸಿಟ್ಟುಕೊಂಡು ಮೇಲಿನಿಂದ ಕೆಳಕ್ಕೆ ಬೀಳುವ ಮಗುವನ್ನು ಹಿಡಿಯುತ್ತಾರೆ.

ಎಲ್ಲಿ ನಡೆಯುತ್ತಿದೆ ಈ ಆಚರಣೆ

ಎಲ್ಲಿ ನಡೆಯುತ್ತಿದೆ ಈ ಆಚರಣೆ

PC: youtube

ಇಂತಹ ವಿಚಿತ್ರ ಆಚರಣೆ ನಡೆಯುತ್ತಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಬಾಗಲಕೋಟೆ ಜಿಲ್ಲೆಯಿಂದ 30 ಕಿ.ಮೀ ದೂರದಲ್ಲಿರುವ ನಗರಾಲ ಹಳ್ಳಿಯಲ್ಲಿರುವ ದಿಂಗಂಬೇಶ್ವರ ದೇವಾಲಯದಲ್ಲಿ .

ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?<br /> ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ಜನರ ನಂಬಿಕೆ

ಜನರ ನಂಬಿಕೆ

ಜನರ ಪ್ರಕಾರ ಹೀಗೆ ಮಾಡುವುದರಿಂದ ಮಗುವಿಗೆ ಒಳಿತಾಗುತ್ತದೆ. ಹಾಗಾಗಿ ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಜನರು ತಮ್ಮ ಮಗುವಿನೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ.

ಮಕ್ಕಳು ಹೆದರುತ್ತವೆ

ಮಕ್ಕಳು ಹೆದರುತ್ತವೆ

PC: youtube

ಎತ್ತರದಿಂದ ಕೆಳಕ್ಕೆ ಎಸೆಯುವಾಗ ಯಾರಿಗಾದರೂ ಭಯವಾಗಿಯೇ ಆಗುತ್ತೆ. ಇನ್ನು ಪುಟ್ಟ ಮಕ್ಕಳನ್ನು ಎತ್ತರದಿಂದ ಎಸೆಯುವಾಗ ಭಯಭೀತರಾಗದೇ ಇರಲಾರರು. ಹೆದರಿದ ಮಕ್ಕಳು ಕಿರುಚಾಡಲು ಪ್ರಾರಂಭಿಸುತ್ತವೆ.

ಆಚರಣೆ ನಿಲ್ಲಿಸಲು ಪ್ರಯತ್ನ

ಆಚರಣೆ ನಿಲ್ಲಿಸಲು ಪ್ರಯತ್ನ

PC: youtube
ಈ ಆಚರಣೆಯನ್ನು ನಿಲ್ಲಿಸಲು ಬಹಳಷ್ಟು ಪ್ರಯತ್ನಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ತಮ್ಮ ನಂಬಿಕೆಯನ್ನು ಅಲ್ಲಗಳೆಯಲು ಸಿದ್ಧರಿಲ್ಲ. ಮಕ್ಕಳ ಹಕ್ಕು ಕಲ್ಯಾಣ ಇಲಾಖೆಯು ಈ ಆಚರಣೆಯನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದೆ.

ಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆ

ಸಾಕಷ್ಟು ಮಂದಿ ಆಗನಿಸುತ್ತಾರೆ

ಸಾಕಷ್ಟು ಮಂದಿ ಆಗನಿಸುತ್ತಾರೆ

PC: youtube

ಇಷ್ಟಕ್ಕೂ ಅಲ್ಲಿ ನಡೆಯುವ ಈ ವಿಚಿತ್ರ ಆಚರಣೆಯನ್ನು ನೋಡಲು ಸಾಕಷ್ಟು ಮಂದಿ ಅಲ್ಲಿ ನೆರೆದಿರುತ್ತಾರೆ. ಇಲ್ಲಿನ ಈ ಆಚರಣೆಯನ್ನು ನೋಡುವಾಗ ಒಮ್ಮೆಲೆ ಎದೆ ಝಲ್ ಎನ್ನುವುದಂತೂ ಸತ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X