Search
  • Follow NativePlanet
Share
» »ಚೆನ್ನೈನಿಂದ ಮೈಸೂರು - ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಗೊಂದು ಐತಿಹಾಸಿಕ ಪ್ರವಾಸ

ಚೆನ್ನೈನಿಂದ ಮೈಸೂರು - ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಗೊಂದು ಐತಿಹಾಸಿಕ ಪ್ರವಾಸ

By Lekhaka

ಮೈಸೂರು, ಕರ್ನಾಟಕದ ಸಾಂಸ್ಕೃತಿಕ ನಗರಿ ಎಂಬ ಹೆಚ್ಚಗಳಿಕ ಪಡೆದಿರುವ, ವರ್ಷಪೂರ್ತಿ ಎಲ್ಲಾ ವರ್ಗದ ಪ್ರವಾಸಿಗರನ್ನು ಆಕರ್ಷಿಸುವ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಹಿಂದೂ ಭಕ್ತರಿಂದ ಹಿಡಿದು ಇತಿಹಾಸ ಪ್ರಿಯರು, ಸಾಹಸ ಅನ್ವೇಷಕರು, ಪ್ರಕೃತಿ ಪ್ರಿಯರು, ಚಾರಣಿಗರು ಪಕ್ಷಿ ಪ್ರಿಯರು, ಕೊಳ್ಳುಬಾಕರು, ರೇಶ್ಮೆ ಖರೀದಿಸುವವರು, ಐತಿಹಾಸಿಕ ದಸರಾ ನೋಡಬಯಸುವವರು, ಮೊದಲಾದ ಎಲ್ಲಾ ಪ್ರವಾಸಿಗರಿಗೂ ಮೈಸೂರಿನಲ್ಲಿ ತಮ್ಮ ಅಗತ್ಯತೆಗಳನ್ನು ಪೂರೈಸುವ ಭಂಡಾರಗಳೇ ಇದೆ. . ಈ ಪಟ್ಟಣದ ಜನಪ್ರಿಯತೆಯೇ ಪ್ರವಾಸಿ ಸ್ಥಾನವಾಗಿ ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ಪ್ರಾಚೀನ ಅರಮನೆಗಳು ಮತ್ತು ನಂಬಲಾಗದ ಕಲಾ ಪ್ರಕಾರಗಳಿಗೆ ಹೆಸರುವಾಸಿಯಾಗಿದೆ.

ಸಿಹಿ ವಸ್ತುವಾದ, ಮೈಸೂರು ಪಾಕ್ ಮತ್ತು ಮೈಸೂರು ಸ್ಯಾಂಡಲ್‌ನಂತಹ ಬ್ರಾಂಡ್‌ಗಳಿಗೆ ಹೆಸರುವಾಸಿಯಾದ ಈ ಪಾರಂಪರಿಕ ನಗರ ದಕ್ಷಿಣ ಭಾರತದ ಹೃದಯಭಾಗವಾಗಿದೆ. ಪ್ರವಾಸಿಗರು ದಕ್ಷಿಣ ಭಾರತದ ಎಲ್ಲೇ ಸುತ್ತಾಡಿ ಮೈಸೂರನ್ನು ನೋಡಲಿಲ್ಲವೆಂದರೆ ಇವರ ಪ್ರವಾಸ ಅಪೂರ್ಣ. . ಕಾಲಾನಂತರದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಕೇವಲ ಪ್ರವಾಸಿ ಸೌಲಭ್ಯಗಳಿಗೆ ಮಾತ್ರವಲ್ಲ, ಭಾರತದ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಯನ್ನೂ ಮೈಸೂರು ನಗರ ಪಡೆದಿದೆ.

ಈ ಋತುವಿನಲ್ಲಿ ಮೈಸೂರು ಪ್ರವಾಸವನ್ನು ಏಕೆ ಯೋಜಿಸಬಾರದು ಮತ್ತು ಈ ಪಾರಂಪರಿಕ ನಗರದ ಭಾರತದ ಸೊಗಸಾದ ಸೌಂದರ್ಯದಲ್ಲಿ ಏಕೆ ಕಳೆದುಹೋಗಬಾರದು?

ಮೈಸೂರಿಗೆ ಭೇಟಿ ನೀಡಲು ಸೂಕ್ತ ಸಮಯ:

ಮೈಸೂರಿಗೆ ಭೇಟಿ ನೀಡಲು ಸೂಕ್ತ ಸಮಯ:

ಮೈಸೂರು ಉಷ್ಣವಲಯದ ಪ್ರಸ್ಥಭೂಮಿಯ ಅತಿ ಎತ್ತರವೂ ಅಲ್ಲದ ಅತಿ ತಗ್ಗೂ ಅಲ್ಲದ ಎತ್ತರದಲಿರುವ ಕಾರಣ ಸಮಶೀತೋಷ್ಣ ಹವಾಮಾನವನ್ನು ವರ್ಷವಿಡೀ ಹೊಂದಿರುತ್ತದೆ. ಆದರೂ, ಭಾರತದ ಯಾವುದೇ ಸ್ಥಳಂತೆ, ಬೇಸಿಗೆಯಲ್ಲಿ ಮಾತ್ರ ಕೊಂಚ ಸೆಖೆ ಇದ್ದರೂ ತಾಳಿಕೊಳ್ಳುವಷ್ಟೇ ಇದೆ. ಹಾಗಾಗಿ ಬೇಸಿಗೆಯಲ್ಲಿ ಮೈಸೂರು ಭೇಟಿ ಅಷ್ಟೊಂದು ಸೂಕ್ತವಲ್ಲ. ಮೈಸೂರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ನಿಂದ ಮಾರ್ಚ್ ಅಂತ್ಯದವರೆಗೆ, ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿದ್ದು, ನಗರದ ಸುತ್ತಲೂ ಆರಾಮವಾಗಿ ತಿರುಗಾಡಲು ಮೋಜು ಎನಿಸುತ್ತದೆ್

ಚೆನ್ನೈ ನಗರದಿಂದ ಮೈಸೂರಿಗೆ ತಲುಪುವುದು ಹೇಗೆ

ಚೆನ್ನೈ ನಗರದಿಂದ ಮೈಸೂರಿಗೆ ತಲುಪುವುದು ಹೇಗೆ

ವಿಮಾನದ ಮೂಲಕ: ನೀವು ಚೆನ್ನೈನಿಂದ ಮೈಸೂರು ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ನೇರ ವಿಮಾನವನ್ನು ತೆಗೆದುಕೊಳ್ಳಬಹುದು. ಆದರೆ ಈ ನಿಲ್ದಾಣ (ಜಿಗಣಿ) ನಗರದಿಂದ ಕೊಂಚ ಹೆಚ್ಚೇ ದೂರವಿರುವ ಕಾರಣ ವಿಮಾನ ಪ್ರಯಾಣದ ಮೂಲಕ ಉಳಿಸಿದ ಸಮಯ ಕಾರಿನ ಪ್ರಯಾಣದಲ್ಲಿ ಕೊಂಚ ವ್ಯಯವಾಗಬಹುದು.

ರೈಲಿನ ಮೂಲಕ: ಮೈಸೂರು ಚೆನ್ನೈ ಮತ್ತು ಇತರ ಪ್ರಮುಖ ಪಟ್ಟಣಗಳಿಗೆ ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ನೀವು ಚೆನ್ನೈ ನಿಲ್ದಾಣದಿಂದ ಮೈಸೂರಿಗೆ ನೇರ ರೈಲು ಹತ್ತಬಹುದು. ಈ ಪ್ರಯಾಣ ಸುಮಾರು 8 ಗಂಟೆಗಳದ್ದಾಗಿರುತ್ತದೆ.

ರಸ್ತೆಯ ಮೂಲಕ: ಸುಮಾರು 480 ಕಿ.ಮೀ ದೂರದಲ್ಲಿರುವ ಮೈಸೂರು ಚೆನ್ನೈ ಮತ್ತು ಇತರ ಪ್ರಮುಖ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ನೀವು ಚೆನ್ನೈನಿಂದ ಮೈಸೂರುಗೆ ಕ್ಯಾಬ್ ತೆಗೆದುಕೊಳ್ಳಬಹುದು ಅಥವಾ ಚೆನ್ನೈನಿಂದ ಮೈಸೂರುಗೆ ನೇರವಾಗಿ ಬಸ್ ಮೂಲಕವೂ ಪ್ರಯಾಣಿಸಬಹುದು.

ನೀವು ಸ್ವಂತ ಕಾರಿನಲ್ಲಿ ಪ್ರಯಾಣಿಸುವುದಾದರೆ, ನೀವು ಈ ಕೆಳಗಿನ ಮಾರ್ಗಗಳನ್ನು ಆಯ್ದುಕೊಳ್ಳಬಹುದು:

ಮಾರ್ಗ 1: ಚೆನ್ನೈ - ಕಾಂಚೀಪುರಂ - ವೆಲ್ಲೂರು - ಬೆಂಗಳೂರು - ಮೈಸೂರು

ಮಾರ್ಗ 2: ಚೆನ್ನೈ -ತಿಂಡಿವನಂ - ಕೃಷ್ಣಗಿರಿ - ಬೆಂಗಳೂರು - ಮೈಸೂರು

ಮಾರ್ಗ 3: ಚೆನ್ನೈ - ಕಾಂಚೀಪುರಂ - ಚಿತ್ತೂರು - ಬೆಂಗಳೂರು - ಮೈಸೂರು

ಇದರಲ್ಲಿ ಮೊದಲ ಮಾರ್ಗ ಅತಿ ಕಡಿಮೆ ಸಮಯ ತೆಗೆದುಕೊಳ್ಳುವ ಮಾರ್ಗವಾಗಿದ್ದು ಆರಾಮದಾಯಕವೂ ಆಗಿದೆ. ಹಾಗಾಗಿ ಈ ಮಾರ್ಗವೇ ಹೆಚ್ಚು ಸೂಕ್ತವಾಗಿದೆ.

ಈ ಮಾರ್ಗದಲ್ಲಿ ನೀವು ಮೈಸೂರಿಗೆ ಹೋಗುವಾಗ, ನೀವು ಈ ಕೆಳಗಿನ ಸ್ಥಳಗಳನ್ನೂ ಅನ್ವೇಷಿಸಬಹುದು ಮತ್ತು ನಡುವೆ ಕೊಂಚ ವಿರಾಮವನ್ನೂ ತೆಗೆದುಕೊಳ್ಳಬಹುದು.

1) ಕಾಂಚೀಪುರಂ

1) ಕಾಂಚೀಪುರಂ

ವೆಗವತಿ ನದಿಯ ದಡದಲ್ಲಿ ಸ್ಥಿತ ಐತಿಹಾಸಿಕ ನಗರ ಕಾಂಚೀಪುರಂ ತನ್ನ ಪ್ರಾಚೀನ ದೇವಾಲಯಗಳಿಗೆ ಜನಪ್ರಿಯವಾಗಿದೆ, ಇದು ಇನ್ನೆಲ್ಲೂ ಕಾಣದ ವಿನ್ಯಾಸಗಳು ಮತ್ತು ದೇವಾಲಯಗಳ ಗೋಡೆಗಳನ್ನು ಅಲಂಕರಿಸುವ ಮಾದರಿಗಳ ಮೂಲಕ ಪ್ರಾಚೀನ ವಾಸ್ತುಶಿಲ್ಪದ ಲಲಿತಕಲೆಯನ್ನು ಚಿತ್ರಿಸುತ್ತದೆ. ನಿಸ್ಸಂದೇಹವಾಗಿ, ಕಾಂಚೀಪುರಂ ದೇಶದ ಕಾಂಚಿಪುರಂ ರೇಷ್ಮೆಗೆ ಪ್ರಸಿದ್ಧವಾಗಿದ್ದು ಇವನ್ನು ಕೊಳ್ಳಲೆಂದೇ ಪ್ರವಾಸಿಗರು ಆಗಮಿಸುತ್ತಾರೆ. ಶತಮಾನಗಳಷ್ಟು ಹಳೆಯ ದೇವಾಲಯಗಳಿಂದ ಹಿಡಿದು ಸಹಸ್ರಮಾನದ ಹಳೆಯ ಸಂಸ್ಕೃತಿಯವರೆಗೆ, ಈ ಸುಂದರ ನಗರವು ದಕ್ಷಿಣ ಭಾರತದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಒಂದು ವೇಳೆ ನೀವು ಆಧ್ಯಾತ್ಮಿಕತೆ ಮತ್ತು ಭಕ್ತಿಯಿಂದ ತುಂಬಿದ ವಾತಾವರಣದಲ್ಲಿ ಕೊಂಚ ಕಾಲ ಕಳೆಯಬಯಸಿದರೆ, ಕಾಂಚೀಪುರಂ ಮೈಸೂರಿಗೆ ಹೋಗುವ ಮಾರ್ಗದಲ್ಲಿ ನಿಮ್ಮ ಮೊದಲ ನಿಲುಗಡೆಯಾಗಿದೆ.

2) ವೆಲ್ಲೂರು

2) ವೆಲ್ಲೂರು

ತಮಿಳುನಾಡಿನಲ್ಲಿ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿರುವ ವೆಲ್ಲೂರು ತನ್ನ ಪ್ರಾಚೀನ ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಮೂಲಕ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ. ದೈವಭಕ್ತರು ಮತ್ತು ಇತಿಹಾಸ ಪ್ರಿಯರ ಹೊರತಾಗಿ, ಇದು ಶಿಬಿರಾರ್ಥಿಗಳು ಮತ್ತು ಪ್ರಕೃತಿ ಪ್ರಿಯರನ್ನೂ ತನ್ನ ಕಡೆಗೆ ಆಕರ್ಷಿಸುತ್ತದೆ. ಒಂದು ಬದಿಯಲ್ಲಿ ನೀವು ಪಟ್ಟಣದ ಇತಿಹಾಸವನ್ನು ಅದರ ದೇವಾಲಯಗಳು ಮತ್ತು ಪ್ರಾಚೀನ ಕಟ್ಟಡಗಳ ಮೂಲಕ ಅನ್ವೇಷಿಸಬಹುದು ಮತ್ತು ಇನ್ನೊಂದು ಬದಿಯಲ್ಲಿ, ಯಲಗಿರಿ ಬೆಟ್ಟಗಳಾದ್ಯಂತ ಹರಡಿರುವ ಅದರ ಹಸಿರಿನ ಬಹುವಾರ್ಷಿಕ ಸೌಂದರ್ಯವನ್ನು ಚಾರಣದ ಮೂಲಕವೂ ಆಸ್ವಾದಿಸಬಹುದು. ಕಾಲಾನಂತರದಲ್ಲಿ, ಇದು ಎಲ್ಲಾ ರೀತಿಯ ಪ್ರಯಾಣಿಕರಿಗೆ ಅದರ ಸೊಗಸಾದ ಮೋಡಿಯಿಂದಾಗಿ ಸಂಪೂರ್ಣ ಪ್ಯಾಕೇಜ್ ಆಗಿ ಪರಿಗಣಿಸಲ್ಪಡುವ ಎಲ್ಲಾ ಅವಕಾಶಗಳೂ ಇವೆ.

3) ಬೆಂಗಳೂರು

3) ಬೆಂಗಳೂರು

ಮೈಸೂರಿಗೆ ಹೋಗುವಾಗ ಸಿಲಿಕಾನ್ ವ್ಯಾಲಿ ಮತ್ತು ಭಾರತದ ಉದ್ಯಾನಗಳ ನಗರಕ್ಕೆ ಭೇಟಿ ನೀಡಬಹುದು. ಈ ಅನ್ವರ್ಥನಾಮವೇ ಪ್ರವಾಸಿಗರಲ್ಲಿ ಬೆಂಗಳೂರಿನ ಮಹತ್ವವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸ್ಮಾರಕ ವಾಸ್ತುಶಿಲ್ಪಕ್ಕೆ ಭೇಟಿ ನೀಡುವುದರಿಂದ ಹಿಡಿದು ನಗರದಾದ್ಯಂತ ಇರುವ ಸುಂದರವಾದ ಉದ್ಯಾನವನಗಳವರೆಗೆ, ಭಾರತದ ಈ ಹೈಟೆಕ್ ನಗರದಲ್ಲಿ ನಿಮ್ಮ ಸಮಯದ ಪ್ರತಿ ಕ್ಷಣವನ್ನೂ ನೀವು ಆನಂದಿಸಬಹುದು. ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಹಲವಾರು ಹೆಸರಾಂತ ಸಂಸ್ಥೆಗಳ ಪ್ರಧಾನ ಕಛೇರಿಗಳಿಗೆ ನೆಲೆಯಾಗಿದೆ, ಬೆಂಗಳೂರು ಕಳೆದ ದಿನಗಳಲ್ಲಿ ದೇಶದ ಮಹತ್ವದ ಭಾಗವಾಗಿದೆ.

ಮೈಸೂರಿನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

1) ಮೈಸೂರು ಅರಮನೆ

1) ಮೈಸೂರು ಅರಮನೆ

ಅಂಬಾವಿಲಾಸ ಅರಮನೆ ಎಂದೂ ಕರೆಯಲ್ಪಡುವ ಮೈಸೂರು ಅರಮನೆಯು ವರ್ಷದ ಯಾವುದೇ ದಿನಗಳಲ್ಲಿ ಸಂದರ್ಶಿಸಬಹುದಾದ ಮೈಸೂರಿನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾದೆ. ಈ ಅದ್ಭುತ ಅರಮನೆಯ ದರ್ಶನ ಪಡೆಯಲು ಲಕ್ಷಾಂತರ ಜನರು ಈ ಪಾರಂಪರಿಕ ನಗರಕ್ಕೆ ಭೇಟಿ ನೀಡುತ್ತಾರೆ. ಇದು ಮೈಸೂರು ರಾಜನಿಗೆ ಅಧಿಕೃತ ಸ್ಥಾನ ಮತ್ತು ಒಡೆಯರ್ ರಾಜವಂಶದ ರಾಜ ನಿವಾಸವಾಗಿದೆ. ಇಂದು, ಪ್ರವಾಸಿಗರು ಅರಮನೆಯ ಅಮೂಲ್ಯವಾದ ಭಾಗಗಳನ್ನು ಅನ್ವೇಷಿಸುತ್ತಿದ್ದಾರೆ ಮತ್ತು ಅದರ ಅದ್ಭುತ ಸೌಂದರ್ಯದಿಂದ ಆಶ್ಚರ್ಯಚಕಿತರಾಗುತ್ತಾರೆ. ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಉತ್ತಮವಾದದ್ದು ಯಾವುದಿದೆ? ಅರಮನೆಯ ಅದ್ಭುತ ಕೆತ್ತನೆಗಳು ಮತ್ತು ವಾಸ್ತುಶಿಲ್ಪದ ವಿನ್ಯಾಸಗಳು ಖಂಡಿತವಾಗಿಯೂ ನಿಮ್ಮನ್ನು ಬೆರಗುಗೊಳಿಸುತ್ತದೆ ಮತ್ತು ಅರಮನೆಯ ಭವ್ಯತೆಯ ಬಗ್ಗೆ ನಿಮಗೆ ಹೆಮ್ಮೆಯನ್ನುಂಟುಮಾಡುತ್ತದೆ.

2) ಲಲಿತ ಮಹಲ್ ಅರಮನೆ

2) ಲಲಿತ ಮಹಲ್ ಅರಮನೆ

ಚಾಮುಂಡಿ ಬೆಟ್ಟಗಳ ತಪ್ಪಲಿನಲ್ಲಿರುವ ಲಲಿತ ಮಹಲ್ ಮೈಸೂರಿನ ಎರಡನೇ ಅತಿದೊಡ್ಡ ಅರಮನೆಯಾಗಿದೆ ಮತ್ತು ಇದನ್ನು ಒಡೆಯರ್ ರಾಜವಂಶದ ಆಡಳಿತದ ಕಾಲಾವಧಿಯಲ್ಲಿ 1921 ರಲ್ಲಿ ನಿರ್ಮಿಸಲಾಯಿತು. ಭವ್ಯವಾದ ಸೌಂದರ್ಯ ಮತ್ತು ಸೊಬಗು ಹೊಂದಿರುವ ಈ ಅರಮನೆಯು ಪ್ರತಿ ತಿಂಗಳೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಪ್ರಾಚೀನ ವಾಸ್ತುಶಿಲ್ಪ ಮತ್ತು ಆಧುನಿಕ ವಿನ್ಯಾಸಗಳ ನಂಬಲಾಗದ ಸಂಯೋಜನೆಯಾಗಿದೆ.. ಲಲಿತ ಮಹಲ್ ಸುತ್ತಮುತ್ತಲಿನ ವರ್ಣರಂಜಿತ ಉದ್ಯಾನವು ಅದರ ಮೋಡಿ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ದಿನಗಳಲ್ಲಿ, ಇದು ಅತಿ ಪ್ರತಿಷ್ಠಿತ ವ್ಯಕ್ತಿಗಳಿಗೆ ಪಂಚತಾರಾ ಹೋಟೆಲ್ ಆಗಿ ಕಾರ್ಯನಿರ್ವಹಿಸುತ್ತಿದೆ; ಆದರೂ ಈ ಅರಮನೆಯನ್ನು ಸಂದರ್ಶಿಸಲು ಜನಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..

3) ಚಾಮುಂಡಿ ಬೆಟ್ಟ:

3) ಚಾಮುಂಡಿ ಬೆಟ್ಟ:

ಮೈಸೂರು ನಗರದ ಯಾವುದೇ ಭಾಗದಲ್ಲಿದ್ದರೂ ಪಕ್ಕದಲ್ಲಿಯೇ ಇರುವಂತೆ ಕಾಣಿಸುವ ದೊಡ್ಡ ಬೆಟ್ಟವಾದ ಚಾಮುಂಡಿ ಬೆಟ್ಟ ಮೈಸೂರು ರಾಜರ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಪುರಾತನ ದೇವಾಲಯವಾದ ಚಾಮುಂಡೇಶ್ವರಿ ದೇವಾಲಯದ ಸುತ್ತಲಿನ ಅತಿವಾಸ್ತವಿಕ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಕಾಲಾನಂತರದಲ್ಲಿ, ಚಾಮುಂಡಿ ಬೆಟ್ಟ ಮೈಸೂರಿನ ಸೌಂದರ್ಯವನ್ನು ಹೆಚ್ಚಿಸುವ ಇನ್ನೊಂದು ಅಂಗವಾಗಿ ಗುರುತಿಸಲ್ಪಡುತ್ತದೆ.. ನಗರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಾತಾವರಣದ ಮಧ್ಯೆ ಪ್ರಶಾಂತ ವಾತಾವರಣವು ಚಾಮುಂಡಿ ಬೆಟ್ಟಗಳ ಜನಪ್ರಿಯತೆಯ ಹಿಂದಿನ ಪ್ರಮುಖ ಪಾತ್ರವಾಗಿದೆ. ಮೈಸೂರಿನಿಂದ 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟ ತನ್ನ ಪ್ರವಾಸಿಗರಿಗೆ ಇತಿಹಾಸ ಮತ್ತು ಪ್ರಕೃತಿಯ ಪರಿಪೂರ್ಣ ಸಂಯೋಜನೆಯ ಶಾಶ್ವತ ಅನುಭವವನ್ನು ನೀಡುತ್ತದೆ. ನೀವು ಒಮ್ಮೆ ಮೈಸೂರಿನಲ್ಲಿ ಹೆಜ್ಜೆ ಹಾಕಿದ ನಂತರ ಈ ಗಮನಾರ್ಹ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಡಿ.

4) ಕನ್ನಂಬಾಡಿ ಕಟ್ಟೆ (ಬೃಂದಾವನ್ ಗಾರ್ಡನ್ಸ್)

4) ಕನ್ನಂಬಾಡಿ ಕಟ್ಟೆ (ಬೃಂದಾವನ್ ಗಾರ್ಡನ್ಸ್)

ಪ್ರಶಾಂತ ಮತ್ತು ಶಾಂತಿಯ ಹಾದಿಗಳಲ್ಲಿ ನಡೆಯುವ ಅನುಭವವೇ ಅನನ್ಯ! ಕನ್ನಂಬಾಡಿ ಕಟ್ಟೆ ಅಥವಾ ಬೃಂದಾವನ್ ಗಾರ್ಡನ್ಸ್ ಎಂದೇ ಪ್ರವಾಸಿಗರಲ್ಲಿ ಹೆಚ್ಚು ಪ್ರಚಲಿತವಾದ ಈ ಸ್ಥಳ ಅದರ ನೈಸರ್ಗಿಕ ಆಕರ್ಷಣೆ ಮತ್ತು ಸಂಗೀತ ಕಾರಂಜಿ ಪ್ರದರ್ಶನಕ್ಕಾಗಿ ಹೆಚ್ಚು ಜನಪ್ರಿಯತೆ ಗಳಿಸಿದೆ. ನೀವು ಈ ಅದ್ಭುತ ಉದ್ಯಾನಕ್ಕೆ ಸಂಜೆಯ ಹೊತ್ತು ಭೇಟಿ ನೀಡಬಹುದು ಮತ್ತು ಅದರ ವರ್ಣರಂಜಿತ ಮತ್ತು ರೋಮಾಂಚಕ ವಾತಾವರಣವನ್ನು ಅನುಭವಿಸಬಹುದು.

5) ಸೇಂಟ್ ಫಿಲೋಮಿನಾ ಚರ್ಚ್

5) ಸೇಂಟ್ ಫಿಲೋಮಿನಾ ಚರ್ಚ್

ಮೈಸೂರು ನಗರದ ಯಾವುದೇ ಸ್ಥಳದಿಂದ ಎದ್ದು ಕಾಣುವಂತಿರುವ ಈ ಚರ್ಚು ಏಷ್ಯಾದ ಅತಿ ಎತ್ತರದ ಚರ್ಚುಗಳಲ್ಲಿ ಒಂದಾಗಿದೆ. ಸೇಂಟ್ ಫಿಲೋಮಿನಾ ಚರ್ಚ್ ವಿಲಕ್ಷಣ ವಾಸ್ತುಶಿಲ್ಪ ಮತ್ತು ವಿಕ್ಟೋರಿಯನ್ ಗೋಥಿಕ್ ಶೈಲಿಯ ನಿರ್ಮಾಣದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಮೈಸೂರಿನಲ್ಲಿರುವ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ. ಒಮ್ಮೆ ನೀವು ಈ ಸುಂದರವಾದ ಚರ್ಚ್‌ನ ಆವರಣದೊಳಗೆ ಬಂದಿರೋ, ಕ್ರಿಸ್ತನ ಯುಗದ ವಿಸ್ಮಯಕಾರಿ ವರ್ಣಚಿತ್ರಗಳು ನಿಮ್ಮನ್ನು ಆ ಯುಗಕ್ಕೇ ಕೊಂಡೊಯ್ಯುತ್ತದೆ. ಕ್ರಿಸ್ತನ ಜನನದಿಂದ ಭೂಮಿಯಿಂದ ಅವನ ಆರೋಹಣದವರೆಗೆ, ಸೇಂಟ್ ಫಿಲೋಮಿನಾ ಚರ್ಚ್ ಕ್ರಿಸ್ತನ ಅವಧಿಗೆ ಸಂಬಂಧಿಸಿದ ಎಲ್ಲವನ್ನೂ ಚಿತ್ರರೂಪದಲ್ಲಿ ವಿವರಿಸಲಾಗಿದ್ದು ಬಣ್ಣದ ಗಾಜುಗಳಲ್ಲಿ ವರ್ಣಚಿತ್ರಗಳನ್ನು ಬಿಡಿಸಿ ಹೊರಗಿನ ಬಿಸಿಲಿನಿಂದ ಪ್ರಜ್ವಲಗೊಳ್ಳುವಂತೆ ಮಾಡಲಾಗಿದ್ದು ಎಲ್ಲರ ಮನಸೂರೆಗೊಳ್ಳುತ್ತದೆ.

ಉಳಿದಂತೆ ಮೈಸೂರು ನಗರದಲ್ಲಿ ಇನ್ನೂ ಹಲವಾರು ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿವೆ ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣದ ಟಿಪ್ಪೂ ಅರಮನೆ, ಮೈಸೂರು ಪ್ರಾಣಿಸಂಗ್ರಹಾಲಯ, ಮೈಸೂರು ರೇಶ್ಮೆ, ಸೋಮನಾಥಪುರ ದೇವಾಲಯ, ಫೋರಂ ಸೆಂಟರ್, ಫ್ಯಾಂಟಸಿ ಪಾರ್ಕ್ ಮೊದಲಾದ ಹತ್ತು ಹಲವು ಆಧುನಿಕ ಮತ್ತು ಪುರಾತನ ಆಕರ್ಷಣೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X