Search
  • Follow NativePlanet
Share
» »ಚೆನ್ನೈನಿಂದ ಮೈಸೂರು -ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯ ಕಡೆಗೆ ಒಂದು ಐತಿಹಾಸಿಕ ಪ್ರಯಾಣ

ಚೆನ್ನೈನಿಂದ ಮೈಸೂರು -ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯ ಕಡೆಗೆ ಒಂದು ಐತಿಹಾಸಿಕ ಪ್ರಯಾಣ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಮೈಸೂರಿನ ನಂಬಲಾಗದ ಸೌಂದರ್ಯವನ್ನು ತನ್ನ ಹಳೆಯ ಅರಮನೆಗಳಲ್ಲಿ ಹುದುಗಿರುವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಇಂತಹ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಮನಸೋ

By Manjula Balaraj Tantry

ಮೈಸೂರು ವರ್ಷವಿಡೀ ಎಲ್ಲಾ ತರದ ಪ್ರವಾಸಿಗರನ್ನು ಆಕರ್ಷಿಸುವ ಒಂದು ಸ್ಥಳವಾಗಿದೆ. ಇದು ಹಿಂದೂ ಭಕ್ತರಿಂದ ಹಿಡಿದು ಇತಿಹಾಸ ಪ್ರಿಯರಿಗೆ ಮತ್ತು ಸಾಹಸ ಬಯಸುವ ಸಾಹಸಿಗಳಿಂದ ಹಿಡಿದು ಪ್ರಕೃತಿ ಪ್ರಿಯರಿಗೆ ಮೈಸೂರು ಎಲ್ಲಾ ತರಹದ ಪ್ರವಾಸಿಗರನ್ನೂ ತೃಪ್ತಿ ಪಡಿಸುವ ಒಂದು ಕೇಂದ್ರವಾಗಿದೆ. ಈ ಪಟ್ಟಣದ ಪಸಿದ್ದಿಯು ಇಲ್ಲಿಯ ಪ್ರಯಾಣಿಗರ ಭೇಟಿಗೆ ಸಾಕ್ಷಿಯಾಗಿದೆ. ಕರ್ನಾಟದದ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ಇದರ ಪ್ರಾಚೀನ ಅರಮನೆಗಳು ಮತ್ತು ಕಟ್ಟಡಗಳಲ್ಲಿ ಕಾಣಲಾಗುವ ಭವ್ಯವಾದ ಕಲೆಗಳಿಗಾಗಿ ಹೆಸರುವಾಸಿಯಾಗಿದೆ.

ಅಲ್ಲದೆ ಇಲ್ಲಿಯ ಮೈಸೂರು ಪಾಕ್ ಎನ್ನುವ ಸಿಹಿ ತಿಂಡಿಯು ಪ್ರಸಿದ್ದವಾಗಿದೆ ಅಲ್ಲದೆ ಮೈಸೂರ್ ಸ್ಯಾಂಡಲ್ ಕೂಡ ಹೆಸರು ವಾಸಿಯಾಗಿದೆ. ಈ ಪಾರಂಪರಿಕ ನಗರವು ದಕ್ಷಿಣ ಭಾರತದ ಹೃದಯವೆನಿಸಿದೆ. ಪ್ರವಾಸಿಗರು ದಕ್ಷಿಣಭಾರತದ ಪ್ರವಾಸ ಮಾಡಬೇಕೆಂದಿದ್ದು ಮೈಸೂರನ್ನು ಭೇಟಿ ಮಾಡದೇ ಇರಲು ಸಾಧ್ಯವೇ ಇಲ್ಲ. ಕೆಲವು ಸಮಯಗಳಿಂದ ಇದು ಭಾರತದ ಅತ್ಯಂತ ಸ್ವಚ್ಚವಾದ ನಗರವೆಂಬ ಖ್ಯಾತಿಯನ್ನು ಪಡೆದಿದೆ.

ಈ ಋತುವಿನಲ್ಲಿ ಮೈಸೂರು ಪ್ರವಾಸವನ್ನು ಯಾಕೆ ಯೋಜಿಸಬಾರದು ಮತ್ತು ಭಾರತದ ಈ ಪರಂಪರೆ ನಗರದ ಸೊಗಸಾದ ಸೌಂದರ್ಯದ ಅನುಭವನ್ನು ಏಕೆ ಪಡೆಯಬಾರದು

ಮೈಸೂರಿಗೆ ಭೇಟಿ ನೀಡಲು ಸೂಕ್ತ ಸಮಯ

ಮೈಸೂರಿಗೆ ಭೇಟಿ ನೀಡಲು ಸೂಕ್ತ ಸಮಯ

PC- Amitra Kar

ಮೈಸೂರು ಉಷ್ಣವಲಯದ ಸವನ್ನಾ ಹವಾಗುಣವನ್ನು ಅನುಭವಿಸುತ್ತದೆ ಮತ್ತು ಹೀಗಾಗಿ, ವರ್ಷವಿಡೀ ತಾಪಮಾನವನ್ನು ಒಳಗೊಂಡಿದೆ. ಆದರೂ ಇಲ್ಲಿ ಬೇಸಿಗೆಯು ಸ್ವಲ್ಪ ಬಿಸಿಯಾಗಿರುವುದರಿಂದ ಬೇಸಿಗೆಯಲ್ಲಿ ಇಲ್ಲಿ ಭೇಟಿ ನೀಡುವುದನ್ನು ತಪ್ಪಿಸುವುದು ಒಳ್ಳೆಯದು.ಮೈಸೂರಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಸೆಪ್ಟಂಬರ್ ತಿಂಗಳಿನಿಂದ ಮಾರ್ಚ್ ವರೆಗೆ ಈ ಸಮಯದಲ್ಲಿ ಹವಾಗುಣ ಅನುಕೂಲಕರವಾಗಿದ್ದು ಈ ನಗರದಲ್ಲಿ ಆರಾಮವಾಗಿ ಸುತ್ತಾಡಲು ಅನುಕೂಲವಾಗುವುದು.

ಮೈಸೂರಿಗೆ ತಲುಪುವುದು ಹೇಗೆ

ಮೈಸೂರಿಗೆ ತಲುಪುವುದು ಹೇಗೆ

PC:map

ವಾಯು ಮಾರ್ಗ: ಮೈಸೂರಿಗೆ ಚೆನ್ನೈ ನಿಂದ ನೇರವಾಗಿ ವಿಮಾನದಲ್ಲಿ ಪ್ರಯಾಣ ಮಾಡಬಹುದು.

ರೈಲು ಮಾರ್ಗ: ಮೈಸೂರಿನಿಂದ ಚೆನ್ನೈಗೆ ರೈಲು ಸಂಪರ್ಕ ಉತ್ತಮವಾಗಿದೆ ಮತ್ತು ಇನ್ನಿತರ ನಗರಗಳಿಗೂ ಇಲ್ಲಿಂದ ಸಂಪರ್ಕವಿದೆ. ನೀವು ಚೆನ್ನೈನಿಂದ ಮೈಸೂರು ನಿಲ್ದಾಣಕ್ಕೆ ರೈಲು ಹತ್ತಬಹುದು. ಇದು ಮೈಸೂರು ತಲುಪಲು ಸುಮಾರು 8 ತಾಸು ಬೇಕಾಗುವುದು.

ರಸ್ತೆಯ ಮೂಲಕ: ಸುಮಾರು 480 ಕಿ.ಮೀ ದೂರದಲ್ಲಿರುವ ಮೈಸೂರಿಗೆ ಚೆನ್ನೈ ಮತ್ತು ಇತರ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ನೀವು ಚೆನ್ನೈನಿಂದ ಮೈಸೂರಿಗೆ ಕ್ಯಾಬ್ ತೆಗೆದುಕೊಳ್ಳಬಹುದು ಅಥವಾ ಚೆನ್ನೈನಿಂದ ಮೈಸೂರಿಗೆ ನೇರವಾಗಿ ಬಸ್ ಅನ್ನು ಹಿಡಿಯಬಹುದು.

ನಿಮ್ಮ ಸ್ವಂತ ವಾಹನದ ಮೂಲಕ ಮೈಸೂರಿಗೆ ಪ್ರಯಾಣ ಮಾಡುವುದಾದಲ್ಲಿ ಈ ಕೆಳಗಿನ ಮಾರ್ಗ ಅನುಸರಿಸ ಬಹುದು.

ಮಾರ್ಗ 1: ಚೆನ್ನೈ - ಕಾಂಚೀಪುರಂ - ವೆಲ್ಲೂರು - ಬೆಂಗಳೂರು - ಮೈಸೂರು

ಮಾರ್ಗ 2: ಚೆನ್ನೈ - ತಿಂದಿವಣಂ - ​​ಕೃಷ್ಣಗಿರಿ - ಬೆಂಗಳೂರು - ಮೈಸೂರು

ಮಾರ್ಗ 3: ಚೆನ್ನೈ - ಕಾಂಚೀಪುರಂ - ಚಿತ್ತೂರು - ಬೆಂಗಳೂರು - ಮೈಸೂರು

ಆದರೂ, ಮಾರ್ಗ 1 ವೇಗವಾಗಿ ಮತ್ತು ಹೆಚ್ಚು ಆರಾಮದಾಯಕ ಮತ್ತು ಆದ್ದರಿಂದ, ಈ ಮಾರ್ಗದಲ್ಲಿ ಪ್ರಯಾಣ ಮಾಡುವುದಕ್ಕೆ ಹೆಚ್ಚಿನ ಆದ್ಯತೆ.

ನೀವು ನಿಮ್ಮ ಗಮ್ಯಸ್ಥಾನವನ್ನು ಕಡಿಮೆ ಸಮಯದಲ್ಲಿ ತಲುಪಬೇಕೆಂದಿದ್ದಲ್ಲಿ ನೀವು ಮಾರ್ಗ-1ನ್ನು ಆಯ್ಕೆ ಮಾಡಬಹುದು. ನೀವು ಮೈಸೂರಿನ ದಾರಿಯಲ್ಲಿ ಹೊರಟಾಗ ಈ ಕೆಳಗಿನ ಕೆಲವು ಸ್ಥಳಗಳ ಅನ್ವೇಷಣೆ ಮಾಡಬಹುದು ಮತ್ತು ಇಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬಹುದು.

1) ಕಾಂಚೀಪುರಂ

1) ಕಾಂಚೀಪುರಂ

PC- Richard Mortel

ವೇಗಾವತಿ ನದಿಯ ದಡದಲ್ಲಿರುವ ಕಾಂಚೀಪುರಂ ಪ್ರಾಚೀನ ದೇವಾಲಯಗಳಿಗೆ ಪ್ರಸಿದ್ದಿ ಪಡೆದಿದೆ ಈ ದೇವಾಲಯಗಳು ಸುಂದರ ವಾಸ್ತುಶಿಲ್ಪ ಕಲೆಗಳನ್ನು ಹೊಂದಿದ್ದು ಹಿಂದೆಂದೂ ನೋಡದ ಸುಂದರ ವಿನ್ಯಾಸಗಳು ಮತ್ತು ವಿಭಿನ್ನ ಮಾದರಿಗಳು ದೇವಾಲಯದ ಗೋಡೆಗಳನ್ನು ಅಲಂಕರಿಸಿರುವುದನ್ನು ಕಾಣಬಹುದಾಗಿದೆ.

ನಿಸ್ಸಂಶಯವಾಗಿ ಕಾಂಚೀಪುರಂ ರೇಷ್ಮೆ ಸೀರೆಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಈ ಸೀರೆಯು ದೇಶದ ಸೀರೆಗಳ ಮಾದರಿಗಳಲ್ಲೊಂದಾಗಿದೆ. ಶತಮಾನಗಳ ಹಳೆಯ ದೇವಾಲಯಗಳಿಂದ ಸಹಸ್ರಮಾನದ ಹಳೆಯ ಸಂಸ್ಕೃತಿಯವರೆಗೆ ಎಲ್ಲವನ್ನು ಹೊಂದಿರುವ ಈ ಸುಂದರವಾದ ಪಟ್ಟಣವು ಖಚಿತವಾಗಿಯೂ ದಕ್ಷಿಣ ಭಾರತದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ನೀವು ಆಧ್ಯಾತ್ಮಿಕತೆ ಮತ್ತು ಭಕ್ತಿ ತುಂಬಿದ ವಾತಾವರಣದ ಮೂಲಕ ನಡೆಯಲು ನೋಡಿದರೆ, ಕಾಂಚೀಪುರಂ ಮೈಸೂರಿಗೆ ಹೋಗುವ ಮಾರ್ಗದಲ್ಲಿ ನಿಮ್ಮ ಮೊದಲ ನಿಲುಗಡೆಯಾಗಿದೆ.

2) ವೆಲ್ಲೂರು

2) ವೆಲ್ಲೂರು

PC- Soham Banerjee

ತಮಿಳುನಾಡಿನಲ್ಲಿ ಅತಿ ಹೆಚ್ಚು ಭೇಟಿ ಕೊಡುವ ಸ್ಥಳಗಳಲ್ಲಿ ಒಂದಾದ ವೆಲ್ಲೂರು ತನ್ನ ಪ್ರಾಚೀನ ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಇಲ್ಲಿ ಆಕರ್ಷಣೀಯ ಭಕ್ತರು ಮತ್ತು ಇತಿಹಾಸ ಪ್ರಿಯರನ್ನು ಹೊರತುಪಡಿಸಿ, ಇದು ಕ್ಯಾಂಪರ್ಸ್ ಮತ್ತು ಪ್ರಕೃತಿ ಪ್ರಿಯರನ್ನು ಕೂಡಾ ಆಕರ್ಷಿಸುತ್ತದೆ.

ಒಂದು ಕಡೆಯಲ್ಲಿ ನೀವು ಈ ನಗರದ ಇತಿಹಾಸವನ್ನು ಇಲ್ಲಿಯ ದೇವಾಲಯಗಳ ಮೂಲಕ ಅನ್ವೇಷಿಸಿದರೆ ಇನ್ನೊಂದು ಬದಿಯಲ್ಲಿ ಪ್ರಾಚೀನ ಕಟ್ಟಡಗಳನ್ನು ಅನ್ವೇಷಿಸಬಹುದು. ಯಳಗಿರಿ ಬೆಟ್ಟಗಳ ಎಲ್ಲೆಡೆಯಲ್ಲೂ ಹರಡಿರುವ ಅದರ ಹಸಿರಿನ ಸೌಂದರ್ಯವನ್ನು ನೀವು ಆನಂದಿಸಬಹುದು ಕಾಲಾನಂತರದಲ್ಲಿ, ಅದರ ಮೋಡಿಯಿಂದಾಗಿ ಎಲ್ಲಾ ರೀತಿಯ ಪ್ರಯಾಣಿಕರಿಗೆ ಸಂಪೂರ್ಣ ಪ್ಯಾಕೇಜ್ ಆಗಿ ಮಾರ್ಪಟ್ಟಿದೆ.

3) ಬೆಂಗಳೂರು

3) ಬೆಂಗಳೂರು

PC- Bikashrd

ಮೈಸೂರಿನ ನಿಮ್ಮ ಮಾರ್ಗದಲ್ಲಿ ಸಿಲಿಕಾನ್ ವ್ಯಾಲಿ ಮತ್ತು ಗಾರ್ಡನ್ ಸಿಟಿಗೆ ಭೇಟಿ ನೀಡುವುದು ಹೇಗಿರುತ್ತದೆ? ಇದರ ಅಡ್ಡ ಹೆಸರೇ ಸೂಚಿಸುವಂತೆ ಬೆಂಗಳೂರಿನ ಪ್ರಾಮುಖ್ಯತೆಯನ್ನು ಪ್ರವಾಸಿಗರಲ್ಲಿ ಇದರ ಮಹತ್ವವನ್ನು ಸೂಚಿಸುತ್ತದೆ. ವಾಸ್ತು ಶಿಲ್ಪ ಸ್ಮಾರಕಗಳಿಂದ ಹಿಡಿದು ನಗರದಾದ್ಯಂತ ಹರಡಿರುವ ಸುಂದರವಾದ ತೋಟಗಳವರೆಗೆ ಈ ನಗರದಲ್ಲಿ ಕಾಣಸಿಗುತ್ತದೆ ಮತ್ತು ಇಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರೂ ಈ ಹೈ ಟೆಕ್ ನಗರದಲ್ಲಿ ಪ್ರತಿಯೊಂದು ನಿಮಿಷವನ್ನೂ ಆನಂದಿಸಬಹುದಾಗಿದೆ. ಇದು ಅನೇಕ ಬಹು ರಾಷ್ಟ್ರೀಯ ಕಂಪೆನಿಗಳು ಮತ್ತು ಅನೇಕ ಸಂಸ್ಥೆಗಳ ಪ್ರಧಾನ ಕಚೇರಿಗಳ ನೆಲೆಯಾಗಿದೆ. ಕಳೆದ ಕೆಲವು ವರ್ಷಗಳಿಂದಲೂ ಬೆಂಗಳೂರು ದೇಶದ ಪ್ರಮುಖ ಭಾಗವಾಗಿದೆ

1) ಮೈಸೂರು ಅರಮನೆ

1) ಮೈಸೂರು ಅರಮನೆ

PC- Ramnath Bhat

ಅಂಬಾವಿಲಾಸ ಅರಮನೆಯೆಂದೂ ಕರೆಯಲಾಗುವ ಮೈಸೂರು ಅರಮನೆಯು ಪ್ರವಾಸಿಗರಿಗೆ ಒಂದು ಪ್ರಮುಖ ಆಕರ್ಷಣೆಯಾಗಿದ್ದು ವರ್ಷದುದ್ದಕ್ಕೂ ಸಹಸ್ರಾರು ಜನ ಪ್ರವಾಸಿಗರು ಈ ಭವ್ಯ ಪರಂಪರೆಯ ನಗರಕ್ಕೆ ಹಾಗೂ ಈ ಅರಮನೆಯ ವೈವಿಧ್ಯತೆಯನ್ನು ನೋಡಲು ಭೇಟಿ ನೀಡುತ್ತಾರೆ. ಈ ಅರಮನೆಯು ಮೈಸೂರು ರಾಜರು ಅಧಿಕೃತ ಆಸ್ಥಾನವಾಗಿತ್ತು.

ಅಲ್ಲದೆ ಒಡೆಯರ್ ಸಂಸ್ಥಾನದ ಅಧಿಕೃತ ನಿವಾಸವಾಗಿದೆ. ಇಂದು ಪ್ರವಾಸಿಗರು ಈ ಅರಮನೆಯ ಬೆಲೆ ಕಟ್ಟಲಾಗದೆ ಇರುವ ಭಾಗಗಳನ್ನು ಅನ್ವೇಶಿಸುವುದನ್ನು ನೋಡಬಹುದಾಗಿದೆ ಮತ್ತು ಈ ಅರಮನೆಯ ಸೌಂದರ್ಯತೆಯನ್ನು ನೋಡಿ ಅಚ್ಚರಿಗೊಳಗಾಗುತ್ತಾರೆ.

ಒಂದು ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿದುಕೊಳ್ಳುವುದಕ್ಕಿಂತ ಉತ್ತಮವಾಗಿ ಏನು ಮಾಡಬಹುದು? ಅರಮನೆಯ ಅದ್ಭುತವಾದ ಕೆತ್ತನೆಗಳು ಮತ್ತು ವಾಸ್ತುಶಿಲ್ಪದ ವಿನ್ಯಾಸಗಳು ನಿಸ್ಸಂಶಯವಾಗಿ ನಿಮ್ಮನ್ನು ಬೆರಗುಗೊಳಿಸುತ್ತವೆ ಮತ್ತು ಅರಮನೆಯ ಮಹತ್ವವನ್ನು ಕೇಳಿ ನೀವು ಆಶ್ಚರ್ಯಪಡುವಿರಿ.

2) ಲಲಿತಾ ಮಹಲ್

2) ಲಲಿತಾ ಮಹಲ್

PC- Sreeraj PS

ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ , ಲಲಿತಾ ಮಹಲ್ ಎರಡನೆಯ ಅತಿ ದೊಡ್ಡ ಅರಮನೆಯಾಗಿದೆ ಮತ್ತು ಇದನ್ನು 1921 ರಲ್ಲಿ ಒಡೆಯರ್ ವಂಶದವರಿಂದ ನಿರ್ಮಿಸಲಾಯಿತು.ಇದರ ಅದ್ಭುತ ಸೌಂದರ್ಯ ಮತ್ತು ಸೊಬಗುಗಳೊಂದಿಗೆ, ಈ ಅರಮನೆಯು ಪ್ರತಿ ತಿಂಗಳು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಇದು ಪ್ರಾಚೀನ ವಾಸ್ತುಶಿಲ್ಪ ಮತ್ತು ಆಧುನಿಕ ವಿನ್ಯಾಸಗಳ ಅದ್ಭುತ ಮಿಶ್ರಣವಾಗಿದೆ.

ಲಲಿತಾ ಮಹಲ್ ಸಮೀಪದಲ್ಲಿರುವ ವರ್ಣರಂಜಿತ ಉದ್ಯಾನವು ಅರಮನೆಯ ಮೋಡಿ ಮತ್ತು ಗ್ಲಾಮರ್ ಅನ್ನು ಹೆಚ್ಚಿಸುತ್ತದೆ ಪ್ರಸ್ತುತ, ಇದು ಪಂಚತಾರಾ ಹೋಟೆಲ್ ಆಗಿ ವಿಐಪಿಗಳಿಗೆ ಸೇವೆ ಸಲ್ಲಿಸುತ್ತಿದೆ; ಇದು ಸಾಮಾನ್ಯ ನಾಗರಿಕರಿಗೂ ತೆರೆದಿರುತ್ತದೆ.

3.ಚಾಮುಂಡಿ ಬೆಟ್ಟ

3.ಚಾಮುಂಡಿ ಬೆಟ್ಟ

PC- Big Eyed Sol

ಚಾಮುಂಡಿ ಬೆಟ್ಟವು ಚಾಮುಂಡೇಶ್ವರಿ ದೇವಸ್ಥಾನವನ್ನು ಸುತ್ತುವರಿದ ಅತಿವಾಸ್ತವಿಕವಾದ ವಾತಾವರಣಕ್ಕೆ ಹೆಸರುವಾಸಿಯಾಗಿದ್ದು, ಮೈಸೂರು ರಾಜರ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಪುರಾತನ ದೇವಾಲಯವಾಗಿದೆ ಬಹಳ ಕಾಲದಿಂದಲೂ ಕೂಡ ಮೈಸೂರಿನ ಸೌಂದರ್ಯತೆಗೆ ಚಾಮುಂಡಿಬೆಟ್ಟವು ಮೆರುಗು ನೀಡುವಂತಿದೆ.ನಗರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸ್ವರೂಪದ ನಡುವೆ ಪ್ರಶಾಂತ ವಾತಾವರಣವು ಚಾಮುಂಡಿ ಬೆಟ್ಟಗಳ ಜನಪ್ರಿಯತೆಯ ಹಿಂದಿನ ಪ್ರಮುಖ ಕಾರಣವಾಗಿದೆ.

ಮೈಸೂರು ನಗರದಿಂದ 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟಗಳು ಪ್ರವಾಸಿಗರಿಗೆ ಇತಿಹಾಸ ಮತ್ತು ಪ್ರಕೃತಿಯ ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತದೆ.ಮೈಸೂರಿನಲ್ಲಿ ನೀವು ಬಂದಾಗ ಈ ಗಮನಾರ್ಹ ಸ್ಥಳಕ್ಕೆ ಭೇಟಿ ನೀಡಲು ಮರೆಯದಿರಿ.

4) ಬೃಂದಾವನ ಉದ್ಯಾನವನ

4) ಬೃಂದಾವನ ಉದ್ಯಾನವನ

PC- Joe Ravi

ಪ್ರಶಾಂತತೆ ಮತ್ತು ಶಾಂತಿಯ ಹಾದಿಗಳಲ್ಲಿ ನಡೆದಾಡುವುದು ಹೇಗಿರುವುದು?ನೈಸರ್ಗಿಕ ಆಕರ್ಷಣೆ ಮತ್ತು ಸಂಗೀತ ಕಾರಂಜಿ ಪ್ರದರ್ಶನದಿಂದ ಬೃಂದಾವನ ಉದ್ಯಾನವನಗಳು ಜನಪ್ರಿಯವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ ಈ ಅದ್ಭುತ ತೋಟವನ್ನು ನೀವು ಭೇಟಿ ಮಾಡಬಹುದು ಮತ್ತು ಅದರ ವರ್ಣರಂಜಿತ ಮತ್ತು ರೋಮಾಂಚಕ ವಾತಾವರಣವನ್ನು ಅನುಭವಿಸಬಹುದು.

5) ಸೇಂಟ್ ಫಿಲೋಮಿನಾ ಚರ್ಚ್

5) ಸೇಂಟ್ ಫಿಲೋಮಿನಾ ಚರ್ಚ್

PC- Soham Banerjee

ಏಷ್ಯಾದ ಅತ್ಯಂತ ಎತ್ತರವಾದ ಚರ್ಚುಗಳಲ್ಲಿ ಒಂದಾದ ಸೇಂಟ್ ಫಿಲೋಮಿನಾ ಚರ್ಚ್ ವಿಕ್ಟೋರಿಯನ್ ಗೋಥಿಕ್ ಶೈಲಿಯಲ್ಲಿರುವ ಸುಂದರ ವಾಸ್ತುಶಿಲ್ಪ ಮತ್ತು ನಿರ್ಮಾಣದ ಕಾರಣದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಭಾರತದ ಅತ್ಯಂತ ಹಳೆಯ ಚರ್ಚುಗಳಲ್ಲೊಂದಾಗಿದ್ದು ರೋಮನ್ ಕ್ಯಾಥೊಲಿಕ್ ಚರ್ಚಿನ ಹುತಾತ್ಮರಾದ ಫಿಲೋಮಿನಾಗೆ ಸಮರ್ಪಿಸಲಾಗಿದೆ.

ಈ ಚರ್ಚಿನ ಆವರಣದೊಳಗೆ ಪ್ರವೇಶಿಸಿದ ಕೂಡಲೆ ನೀವು ಸುಂದರವಾದ ಮನಮೋಹಕ ಹಾಗೂ ನೀವು ಕ್ರಿಸ್ತ ಶಕದಿಂದಲೂ ವಿಸ್ಮಯ ಹುಟ್ಟಿಸುವ ವರ್ಣಚಿತ್ರಗಳನ್ನು ಕಾಣಬಹುದು. ಕ್ರಿಸ್ತನ ಹುಟ್ಟಿನಿಂದ ಭೂಮಿಯಿಂದ ಅವನ ಆರೋಹಣದವರೆಗೆ, ಸೇಂಟ್ ಫಿಲೋಮಿನಾ ಚರ್ಚ್ ಪ್ರತಿಯೊಂದನ್ನು ಮತ್ತು ಕ್ರಿಸ್ತನ ಕಾಲಕ್ಕೆ ಸಂಬಂಧಿಸಿದ ಎಲ್ಲವನ್ನೂ ಸಾರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X