Search
  • Follow NativePlanet
Share
» »50 ಸಾವಿರ ರೂ. ಇದ್ರೆ ಸಾಕು ಈ ದೇಶಗಳಲ್ಲಿ ಜಮ್ ಅಂತ ಸುತ್ತಾಡಬಹುದು!  

50 ಸಾವಿರ ರೂ. ಇದ್ರೆ ಸಾಕು ಈ ದೇಶಗಳಲ್ಲಿ ಜಮ್ ಅಂತ ಸುತ್ತಾಡಬಹುದು!  

ಯಾರಿಗೆ ತಾನೆ ವಿದೇಶ ಪ್ರವಾಸ ಮಾಡಲು ಇಷ್ಟವಿರುವುದಿಲ್ಲ ಹೇಳಿ, ಆದರೆ ಅನೇಕರು ಇಲ್ಲಿಗೆಲ್ಲಾ ಹೋಗಬೇಕೆಂದರೆ ಲಕ್ಷಗಟ್ಟಲೇ ದುಡ್ಡು ಬೇಕು ಎಂದು ಹಿಂದೆ ಸರಿಯುತ್ತಾರೆ. ಆದರೆ ಸಿಹಿ ಸುದ್ದಿ ಏನೆಂದರೆ ಹೊರ ದೇಶಗಳನ್ನು ನೋಡಲು ನೀವು ನೀರಿನಂತೆ ದುಡ್ಡು ಖರ್ಚು ಮಾಡಬೇಕಿಲ್ಲ. ಮೊದಲನೆಯದಾಗಿ, ನಾವು ನಮ್ಮ ಬಜೆಟ್ ಅನ್ನು ನೋಡಿಕೊಳ್ಳಬೇಕು. ಆ ನಂತರ, ನಾವು ಎಲ್ಲಿ, ಏನು ನೋಡಬೇಕು ಎಂಬುದಕ್ಕೆ ಪ್ರತ್ಯೇಕ ಬಜೆಟ್ ಅನ್ನು ಇಡಬೇಕು. ಹೀಗೆ ಲೆಕ್ಕ ಹಾಕುವ ಹೊತ್ತಿಗೆ ಕೆಲವು ಜನರು ವಿದೇಶಕ್ಕೆ ಹೋಗುವ ಯೋಜನೆಯನ್ನು ಬಿಟ್ಟು ಬಿಡುತ್ತಾರೆ.

ಆದರೆ ಕೇವಲ 50 ಸಾವಿರ ರೂಪಾಯಿಯಲ್ಲಿಯೂ ನೀವು ಕೆಲವು ದೇಶಗಳನ್ನು ನೋಡಬಹುದು ಎಂಬ ವಿಚಾರ ಗೊತ್ತಾ, ನಿಮ್ಮ ಖಾತೆಯಲ್ಲಿ ನೀವು ಕೇವಲ 50 ಸಾವಿರವನ್ನು ಹೊಂದಿದ್ದರೆ ಅಥವಾ ವಿದೇಶ ಪ್ರವಾಸ ಹೊರಡಲು ಬಯಸಿದರೆ, ನೀವು ಈ ದೇಶಗಳಿಗೆ ಹೋಗಬಹುದು. ಅಷ್ಟೇ ಅಲ್ಲ, ಅಲ್ಲಿ ನೀವು ನಮ್ಮ ದೇಶದಲ್ಲಿಯಂತೆ ಆರಾಮಾಗಿ ತಿರುಗಾಡಬಹುದು. ಇಷ್ಟು ಹೇಳಿದ ತಕ್ಷಣ ನಿಮಗೆ ನಾವು ಯಾವೆಲ್ಲಾ ದೇಶ ಸುತ್ತಬಹುದು ಎಂಬ ಪಟ್ಟಿಯನ್ನು ನೋಡುತ್ತಿರಬೇಕು ಅಲ್ಲವೇ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...

ಮಾಲ್ಡೀವ್ಸ್‌ಗೆ 5 ದಿನಗಳ ಪ್ರವಾಸ

ಮಾಲ್ಡೀವ್ಸ್‌ಗೆ 5 ದಿನಗಳ ಪ್ರವಾಸ

ಏಪ್ರಿಲ್ ಸಮಯದಲ್ಲಿ ಮಾಲ್ಡೀವ್ಸ್‌ಗೆ ವಿಮಾನ ಟಿಕೆಟ್‌ ದರ ಕಡಿಮೆ ಇರುತ್ತದೆ. ನೀವು ಚೆನ್ನೈ, ಕೊಚ್ಚಿ ಮತ್ತು ಬೆಂಗಳೂರಿನಿಂದ ಅಗ್ಗದ ದರದಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಬಹುದು. ಮಾಲ್ಡೀವ್ಸ್‌ನಲ್ಲಿ ನೀವು ಸಾಕಷ್ಟು Airbnbs ಮತ್ತು ಬಜೆಟ್ ಸ್ನೇಹಿ ಅತಿಥಿಗೃಹಗಳನ್ನು ಬಾಡಿಗೆ ಪಡೆಯಬಹುದು. ಇದರ ಬಾಡಿಗೆ ಒಂದು ರಾತ್ರಿಗೆ 1,500 ರೂಪಾಯಿ ಇರುತ್ತದೆ. ಒಂದು ವೇಳೆ 5,000 ರೂ. ಕೊಟ್ಟರೆ ನೀವು ಹೋಟೆಲ್ ಅಥವಾ ಅತಿಥಿಗೃಹದಲ್ಲಿ ಐಷಾರಾಮಿ ಕೋಣೆಯನ್ನು ಪಡೆಯಬಹುದು.

ಊಟ ಮತ್ತು ಬೀಚ್ ಚಟುವಟಿಕೆಗಳಿಗೆ ಸಾಮಾನ್ಯವಾಗಿ ರೂ 15,000 - 20,000 ವೆಚ್ಚವಾಗುತ್ತದೆ. ಕೊಠಡಿಯನ್ನು ಬಾಡಿಗೆ ತೆಗೆದುಕೊಂಡ ನಂತರ, ಅತಿಥಿಗೆ ಆಹಾರ ಮತ್ತು ಪಾನೀಯದ ಸೌಲಭ್ಯವೂ ಸಿಗುತ್ತದೆ. ನೀವು ಪ್ರವಾಸಿ ಚಟುವಟಿಕೆಗಳನ್ನು ಮಾಡಲು ಬಯಸಿದರೆ, ಸ್ನಾರ್ಕ್ಲಿಂಗ್ ಮತ್ತು ದ್ವೀಪ ಪ್ರವಾಸ ಮತ್ತು ಡೈವಿಂಗ್ ಪ್ರವಾಸಗಳಿಗೆ ನಿಮಗೆ ರೂ 5,000 ರಿಂದ ರೂ 10,000 ವರೆಗೆ ವೆಚ್ಚವಾಗುತ್ತದೆ.

ಯುರೋಪ್’ನಲ್ಲಿ 5 ದಿನಗಳನ್ನು ಕಳೆಯಬಹುದು

ಯುರೋಪ್’ನಲ್ಲಿ 5 ದಿನಗಳನ್ನು ಕಳೆಯಬಹುದು

ನೀವು ಐದು ದಿನಗಳಲ್ಲಿ ಪ್ಯಾರಿಸ್ - ಬ್ರಸೆಲ್ಸ್ - ಆಂಸ್ಟರ್‌ಡ್ಯಾಮ್ ಪ್ರವಾಸ ಮಾಡಬಹುದು. ವಿಮಾನ ದರ 30,000 ರೂ, ಸ್ಟೇ ಮಾಡಲು 6,000 ರೂ, ಸುತ್ತಾಡಲು (ಸಾರಿಗೆ ಖರ್ಚು) 6,000 ರೂ. ಇದ್ದರೆ ಸಾಕು. ಆಹಾರ ಮತ್ತು ಪಾನೀಯದ ವೆಚ್ಚ ಹೆಚ್ಚೆಂದರೂ 4000 ರೂ. ಆಗುತ್ತದೆ. ಈಗ ಇದನ್ನು ಹೇಗೆ ಬಳಸಿಕೊಳ್ಳಬೇಕೆಂದು ನೋಡೋಣ...

ನೀವು ಮೇ ಅಥವಾ ಜೂನ್ ತಿಂಗಳಲ್ಲಿ ಚೆನ್ನೈ ಅಥವಾ ದೆಹಲಿಯಿಂದ ಹೊರಟರೆ, ಪ್ಯಾರಿಸ್‌'ಗೆ ನಿಮ್ಮ ರಿಟರ್ನ್ ಟಿಕೆಟ್‌ನ ಬೆಲೆ 30,000 ರೂ.ಗಿಂತ ಕಡಿಮೆ ಇರುತ್ತದೆ. ಸ್ಟೇ ಮಾಡಲು ಯುರೋಪಿನ ಅತ್ಯುತ್ತಮ ಹೋಟೆಲ್‌'ಗಳು ವಿಶೇಷವಾಗಿ ದೊಡ್ಡ ನಗರಗಳಲ್ಲಿ ಅತ್ಯಂತ ದುಬಾರಿಯಾಗಬಹುದು. ಆದ್ದರಿಂದ ನೀವು ಒಂದು ರಾತ್ರಿ ಹಾಸ್ಟೆಲ್ ಅಥವಾ Airbnb ಬಾಡಿಗೆ ತೆಗೆದುಕೊಳ್ಳಬಹುದು. ಇದರಿಂದ ನಿಮಗೆ 1200 ರೂಪಾಯಿ ವೆಚ್ಚವಾಗುತ್ತದೆ. ಓಡಾಡಲು ಯುರೋಲೈನ್ಸ್, ಫ್ಲಿಕ್ಸ್‌ಬಸ್ ಮತ್ತು ಓಬಸ್‌ನಂತಹ ಬಜೆಟ್ ಸ್ನೇಹಿ ಬಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಕೇವಲ 5,000 ರೂ. ಖರ್ಚು ಬರುತ್ತದೆ. ಆಹಾರ ಮತ್ತು ಪಾನೀಯದ ವೆಚ್ಚ 4000 ರೂ. ಆಗುತ್ತದೆ ಅಷ್ಟೇ.

ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ 4 ದಿನಗಳು

ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ 4 ದಿನಗಳು

ಜಪಾನ್‌ನಲ್ಲಿ ಒಸಾಕ, ಕ್ಯೊಟೊ, ಟೋಕ್ಯೊ ನೋಡಲು ನಿಮಗೆ ನಾಲ್ಕು ದಿನಗಳು ಬೇಕಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಒಸಾಕಾಗೆ ಹಿಂತಿರುಗುವ ವಿಮಾನಗಳು 25,000 ರೂ.ಗಿಂತ ಕಡಿಮೆ ದರದಲ್ಲಿ ಲಭ್ಯವಿವೆ. ನೀವು ನವದೆಹಲಿ ಮತ್ತು ಕೊಚ್ಚಿಯಿಂದ ತೆರಳಿದರೆ ಅಗ್ಗವಾಗುತ್ತದೆ. ಉಳಿಯಲು ಜಪಾನ್‌ನಲ್ಲಿ ಹಲವು ಆಯ್ಕೆಗಳಿವೆ. ಒಂದು ರಾತ್ರಿ ತಂಗಲು ಕೇವಲ 2 ಸಾವಿರಕ್ಕೆ ಹಾಸ್ಟೆಲ್‌ಗಳು ಮತ್ತು Airbnbs ಅನ್ನು ಸುಲಭವಾಗಿ ಪಡೆಯಬಹುದು.

ಹೈ-ಸ್ಪೀಡ್ ಬುಲೆಟ್ ರೈಲುಗಳು ದುಬಾರಿಯಾಗಿರುತ್ತವೆ. ಆದರೆ ಇವುಗಳು ತಮ್ಮದೇ ಆದ ಆಕರ್ಷಣೆ ಹೊಂದಿವೆ. ಆಹಾರವು ಜಪಾನ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಸರಿಯಾದ ರೆಸ್ಟೋರೆಂಟ್‌ನಲ್ಲಿ ರುಚಿಕರವಾದ ಊಟವು ನಿಮಗೆ 500 ರೂ.ಗೆ ಸಿಗುತ್ತದೆ.

ಸಿಡ್ನಿಯಲ್ಲಿ ಕಳೆಯಿರಿ 4 ದಿನಗಳು

ಸಿಡ್ನಿಯಲ್ಲಿ ಕಳೆಯಿರಿ 4 ದಿನಗಳು

ಸಿಡ್ನಿಗೆ ತೆರಳಲು ಸೆಪ್ಟೆಂಬರ್ ತಿಂಗಳು ಆರಿಸಿಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ವಿಮಾನ ದರದ ಬೆಲೆ ಕಡಿಮೆ ಇರುತ್ತದೆ. ಕೊಚ್ಚಿ, ದೆಹಲಿ ಮತ್ತು ಕೋಲ್ಕತ್ತಾದಿಂದ ಅಗ್ಗದ ದರದಲ್ಲಿ ವಿಮಾನದ ಟಿಕೆಟ್ ಸಿಗುತ್ತದೆ. ಸಿಡ್ನಿ ನಗರದಲ್ಲಿ ಅನೇಕ ಹಾಸ್ಟೆಲ್'ಗಳು ಮತ್ತು ಮನೆಗಳಿವೆ. ಸಿಡ್ನಿಯಲ್ಲಿ ತಂಗಲು ಪ್ರತಿ ರಾತ್ರಿ 2,000 ರೂ. ಬೇಕಾಗಬಹುದು. ಕೂಗೀ ಬೀಚ್‌ಗಿಂತ ಸ್ವಲ್ಪ ಮುಂದೆ ಹೋಗಲು ನೀವು ಸಿದ್ಧರಿದ್ದರೆ, ರೂ.

1,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಉಳಿಯಲು ಅವಕಾಶ ಸಿಗುತ್ತದೆ. ನೀವು ಇಲ್ಲಿ ಪ್ರವೇಶಿಸಿದ ತಕ್ಷಣ ಓಪಲ್ ಕಾರ್ಡ್ ಅನ್ನು ಪಡೆಯುತ್ತೀರಿ. ಇದು ನಗರದಾದ್ಯಂತ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಲು ಟಾಪ್-ಅಪ್ ಕಾರ್ಡ್ ಆಗಿ ಕಾರ್ಯನಿರ್ವಹಿಸುತ್ತದೆ. ಓಪಲ್ ಕಾರ್ಡ್‌'ನಲ್ಲಿ ಒಬ್ಬರಿಗೆ ಸುಮಾರು 200 ರೂ.ಗಳಷ್ಟು ವೆಚ್ಚವಾಗುತ್ತದೆ. ಆಹಾರ ಮತ್ತು ಪಾನೀಯಕ್ಕೆ 8,000 ರೂ. ಖರ್ಚಾಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X