Search
  • Follow NativePlanet
Share
» »ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ

ಚಾರ್ ಧಾಮದ ಯಾತ್ರೆ - ಆಧ್ಯಾತ್ಮಿಕತೆಯತ್ತ ಒಂದು ಪ್ರಯಾಣ

ಭಾರತವು ಅತೀಂದ್ರಿಯತೆ, ಆಧ್ಯಾತ್ಮಿಕತೆ, ಧರ್ಮ ಮತ್ತು ನಂಬಿಕೆಗಳ ಭೂಮಿಯಾಗಿದೆ. ಶತಮಾನಗಳಿಂದ, ಜನರು ದೇವಾಲಯಗಳು, ಮತ್ತು ಇತರ ಪೂಜಾ ಸ್ಥಳಗಳನ್ನು ನಿರ್ಮಿಸುತ್ತಿದ್ದಾರೆ, ಭೇಟಿ ನೀಡುತ್ತಾರೆ ಮತ್ತು ಪ್ರಾರ್ಥಿಸುತ್ತಾ ಬಂದಿದ್ದಾರೆ. ಭಾರತದಲ್ಲಿ ಅಸಂಖ್ಯಾತ ದೇವಾಲಯಗಳಿವೆ ಮತ್ತು ಅವುಗಳಲ್ಲಿ ಕೆಲವು ಶತಮಾನಗಳ ಹಿಂದಿನದ್ದಾಗಿದ್ದು, ಇವುಗಳ ಮೂಲಗಳು, ಕೆಲವರಿಗೆ ತಿಳಿದಿಲ್ಲ. ಅಂತಹ ಕೆಲವು ಪುರಾತನ ದೇವಾಲಯಗಳು ಉತ್ತರಾಖಂಡದಲ್ಲಿವೆ, ಇಲ್ಲಿ ವಾರ್ಷಿಕ ಚಾರ್ ಧಾಮ್ ಯಾತ್ರೆಯು ವರ್ಷದ ಈ ಸಮಯದಲ್ಲಿ ನಡೆಯುತ್ತದೆ.

ಚಾರ್ ಧಾಮ್ ಯಾತ್ರೆಯು ಭಾರತದ ಅತ್ಯಂತ ದೊಡ್ಡ ತೀರ್ಥಯಾತ್ರೆಯಾಗಿದೆ. ಚಾರ್ ಧಾಮ್ ಹಿಂದೂ ದೇವತೆಗಳ ನಾಲ್ಕು ಪವಿತ್ರ ಸ್ಥಳಗಳು ಅಥವಾ ವಾಸಸ್ಥಾನಗಳನ್ನು ಸೂಚಿಸುತ್ತದೆ. ನಾಲ್ಕು ಧಾಮಗಳು ಕೇದಾರನಾಥ - ಶಿವ ದೇವರಿಗೆ ಸಮರ್ಪಿತವಾಗಿದೆ, ಬದರಿನಾಥ್ - ವಿಷ್ಣುವಿಗೆ ದೇವರಿಗೆ ಸಮರ್ಪಿತವಾಗಿದೆ, ಗಂಗೋತ್ರಿ ಮತ್ತು ಯಮುನೋತ್ರಿ - ಕ್ರಮವಾಗಿ ಗಂಗಾ ಮತ್ತು ಯಮುನಾ ದೇವತೆಗಳಿಗೆ ಸಮರ್ಪಿತವಾಗಿದೆ.

ಈ ದೇವಾಲಯಗಳ ಪವಿತ್ರ ಸ್ಥಳಗಳು ಹಿಮಾಲಯದಲ್ಲಿ ಹುಟ್ಟುವ ನಾಲ್ಕು ಪವಿತ್ರ ನದಿಗಳ ಮೂಲಗಳನ್ನು ಸಹ ಗುರುತಿಸುತ್ತವೆ. ಗಂಗಾನದಿಯು ಗಂಗೋತ್ರಿಯಲ್ಲೂ ಯಮುನಾ ನದಿಯು ಯಮುನೋತ್ರಿಯಲ್ಲಿ, ಮಂದಾಕಿನಿಯು ಕೇದಾರನಾಥ ಮತ್ತು ಅಲಕನಂದವು ಬದ್ರಿನಾಥ ದಲ್ಲಿಯೂ ಹರಿಯುತ್ತದೆ. ನಿಜವಾದ ಹಿಮನದಿಗಳು ದೇವಾಲಯಗಳ ಸ್ಥಳಗಳಿಂದ ಸ್ವಲ್ಪ ಮುಂದೆ ಇವೆ (ಎಲ್ಲರ ಅನುಕೂಲಕ್ಕಾಗಿ); ಆದುದರಿಂದ ಪ್ರತಿ ವರ್ಷ, ಸಾಹಸಿಗರು ಮತ್ತು ಚಾರಣಿಗರು ಸಾಮಾನ್ಯವಾಗಿ ಹಿಮನದಿಗಳಿಗೆ ಚಾರಣ ಮಾಡುತ್ತಾರೆ.

ಈ ತಾಣಗಳ ಗಮನಾರ್ಹ ವಿಷಯವೇನೆಂದರೆ ಈ ಸ್ಥಳಗಳು ನೈಸರ್ಗಿಕ ಬಿಸಿನೀರಿನ ಬುಗ್ಗೆಗಳನ್ನು ಹೊಂದಿದೆ. ದೇವಾಲಯಗಳ ಸಮೀಪದಲ್ಲಿರುವವುಗಳನ್ನು ತಪ್ಟ ಕುಂಡ್ ಎಂದು ಕರೆಯಲಾಗುತ್ತದೆ. ಈ ನಿರಂತರವಾಗಿ ಹರಿಯುವ, ಭೂಶಾಖದ ಬಿಸಿಯಾದ ನೀರಿನ ಬಿಸಿನೀರಿನ ಬುಗ್ಗೆಗಳು ಖನಿಜಾಂಶದಿಂದ ಸಮೃದ್ಧವಾಗಿವೆ. ಮತ್ತು ಚಿಕಿತ್ಸಕ ಮೌಲ್ಯಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ. ಕೆಲವು ಸ್ಥಳಗಳಲ್ಲಿ, ತಾಪಮಾನವು ನಂಬಲಾಗದಷ್ಟು ಕಡಿಮೆಯಾಗಿದೆ, ಈ ಬಿಸಿನೀರಿನ ಬುಗ್ಗೆಗಳು ಹಿಮದ ಕರಗುವಿಕೆಗೆ ಅನುಗುಣವಾಗಿ ಚಲಿಸುತ್ತವೆ. ಮತ್ತು ಇವುಗಳು ತಾಪಮಾನದ ವ್ಯತಿರಿಕ್ತತೆಯನ್ನು ಅನುಭವಿಸುವುದು ಅದ್ಭುತವಾಗಿದೆ.

ಯಮುನೋತ್ರಿ

ಯಮುನೋತ್ರಿ

ಬಂಡಾರ್ ಪುಂಚ್ ಪರ್ವತದಲ್ಲಿ ನೆಲೆಸಿರುವ ಇದು 3291 ಮೀಟರ್ ಎತ್ತರದಲ್ಲಿದೆ. ಯಮುನೋತ್ರಿಯು ಯಮುನಾದೇವಿಯ ಆವಾಸಸ್ಥಾನವಾಗಿದೆ ಈ ದೇವಾಲಯವು ಇದು ಚಾರ್ ಧಾಮ್ ಯಾತ್ರೆಯ ಅತ್ಯಂತ ಪಶ್ಚಿಮದ ದೇಗುಲವಾಗಿದೆ ಮತ್ತು ಭಕ್ತರು ಮೊದಲು ಈ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಯಮುನೋತ್ರಿಯು ಇಲ್ಲಿ ಹುಟ್ಟುವ ಪವಿತ್ರವಾದ ಯಮುನಾ ನದಿಯ ಮೂಲವಾಗಿದೆ, ಆದರೂ ನಿಜವಾದ ಹಿಮನದಿಯು ಮುಂದೆ ಇದೆ ಆದುದರಿಂದ ಸುಲಭವಾಗಿ ಪ್ರವೇಶಿಸಲಾಗುವುದಿಲ್ಲ. ವಾಹನದಿಂದ ಜಾನಕಿ ಚಟ್ಟಿವರೆಗೆ ತಲುಪಬಹುದಾಗಿದೆ ತದನಂತರ ಏಳು ಕಿಲೋಮೀಟರ್ ಗಳ ಚಾರಣ ಕೂಡ ಮಾಡಬಹುದಾಗಿದೆ ಅಥವಾ ಕುದುರೆ ಅಥವಾ ಡೋಲಿಯಲ್ಲಿ ಕುಳಿತುಕೊಂಡು ದೇವಾಲಯವನ್ನು ತಲುಪಬಹುದಾಗಿದೆ. ಇಲ್ಲಿ ಸಣ್ಣ ಸಣ್ಣ ಅಂಗಡಿಗಳು, ಸಣ್ಣ ಹೋಟೇಲುಗಳು, ಕುಡಿಯುವ ನೀರಿನ ಸೌಲಭ್ಯಗಳು ಕೃತಕ ಶೌಚಾಲಯಗಳು, ವಿಶ್ರಾಂತಿ ಸ್ಥಳಗಳು ಮುಂತಾದವುಗಳ ವ್ಯವಸ್ಥೆ ಇರುವುದರಿಂದ ಈ ಮಾರ್ಗದಲ್ಲಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ಗಂಗೋತ್ರಿ

ಗಂಗೋತ್ರಿ

ಗಂಗೋತ್ರಿ ದೇವಾಲಯವು ರಾಜ ಭಗೀರಥನ ಪೂರ್ವಜರ ಪಾಪಗಳನ್ನು ತೊಳೆಯಲು ನದಿಯ ರೂಪವನ್ನು ಪಡೆದ ಗಂಗಾ ಮಾತೆಗೆ ಸಮರ್ಪಿತವಾಗಿದೆ. ಇಲ್ಲಿ ಭಾಗೀರಥಿ ಎಂದು ಕರೆಯಲ್ಪಡುವ ಈ ನದಿಯು ನಂತರ ಇಲ್ಲಿಂದ ಧುಮುಕುವುದರಿಂದ ಗಂಗಾ ಎಂದು ಕರೆಯಲಾಯಿತು. ಪವಿತ್ರ ನದಿಯು ಗೌಮುಖ ಹಿಮನದಿಯಲ್ಲಿ ಹುಟ್ಟುತ್ತದೆ, ಇದು ಗಂಗೋತ್ರಿ ದೇವಸ್ಥಾನದಿಂದ 18 ಕಿಮೀ ಮುಂದೆ ಇದೆ. ಅನೇಕ ಉತ್ಸಾಹಿಗಳು ಪ್ರತಿ ವರ್ಷ ಹಿಮನದಿಗೆ ಚಾರಣ ಮಾಡುತ್ತಾರೆ ಮತ್ತು ಇದು ಸವಾಲಿನ ಚಾರಣಗಳಲ್ಲಿ ಒಂದಾಗಿದೆ. ದೇವಾಲಯವು 3100 ಮೀ ಎತ್ತರದಲ್ಲಿದೆ ಮತ್ತು ಸೈಟ್ ಅನ್ನು ತಲುಪಲು ಸುಸಜ್ಜಿತ ಮೋಟಾರು ರಸ್ತೆಯನ್ನು ತೆಗೆದುಕೊಳ್ಳಬಹುದು. ಪಾರ್ಕಿಂಗ್‌ನಿಂದ ದೇಗುಲವನ್ನು ತಲುಪಲು ಕೆಲವು ನೂರು ಮೀಟರ್‌ಗಳಷ್ಟು ನಡೆದುಕೊಂಡು ಹೋಗಬೇಕು. ಗಂಗೋತ್ರಿಗೆ 50 ಕಿ.ಮೀ ಮೊದಲು ಇರುವ ಗಂಗ್ನಾನಿ ಎಂಬ ಸ್ಥಳವು ನೈಸರ್ಗಿಕ ಬಿಸಿನೀರಿನ ಬುಗ್ಗೆಗಳನ್ನು ಹೊಂದಿದೆ. ಗಂಗೋತ್ರಿ ದೇವಸ್ಥಾನಕ್ಕೆ ತೆರಳುವ ಮೊದಲು ಭಕ್ತರು ಪವಿತ್ರ ಸ್ನಾನ ಮಾಡಲು ಈ ಸ್ಥಳದಲ್ಲಿ ನಿಲ್ಲುತ್ತಾರೆ.

ಕೇದಾರನಾಥ

ಕೇದಾರನಾಥ

ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಕೇದಾರನಾಥ ದೇವಾಲಯವು ಭಾರತದ ಶಿವ ದೇವಾಲಯಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಶಿವನು ವಿರಕ್ತನಾಗಿರುವುದರಿಂದ, ಕೇದಾರನಾಥದಲ್ಲಿ ಅವನ ವಾಸಸ್ಥಾನವು ಎಲ್ಲಕ್ಕಿಂತ ದೂರದಲ್ಲಿದೆ ಎಂದು ನಂಬಲಾಗಿದೆ. ಮತ್ತು ನಿಜವಾಗಿಯೂ, ಗರ್ವಾಲ್ ಹಿಮಾಲಯದ ಚೋರಬರಿ ಗ್ಲೇಸಿಯರ್ ಬಳಿ 3584 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ಪ್ರವೇಶಿಸಲಾಗುವುದಿಲ್ಲ.

ದೇವಾಲಯದ ಸುತ್ತಲಿನ ಹಿಮದಿಂದ ಆವೃತವಾದ ಪರ್ವತಗಳ ತೆರೆದ ನೋಟವು ಮನಮೋಹಕವಾಗಿದ್ದು, ಸುಂದರವಾಗಿ ಕಾಣುತ್ತದೆ. ಮಂದಾಕಿನಿ ನದಿಯು ಅದರ ಸಮೀಪದಲ್ಲಿ ಹುಟ್ಟುತ್ತದೆ, ಇದು ಇಲ್ಲಿಯ ಭೂದೃಶ್ಯದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಾಚೀನ ಕೇದಾರನಾಥ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ನಿರ್ಮಿಸಿದರು. ಪಾಂಡವರು ನಿರ್ಮಿಸಿದ ಪುರಾತನ ದೇವಾಲಯದ ಸ್ಥಳದಲ್ಲಿಯೇ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಕೇದಾರನಾಥದ ಪವಿತ್ರ ದೇಗುಲವನ್ನು ಕಡಿದಾದ, 16-ಕಿಮೀ ಉದ್ದದ ಆರೋಹಣದ ಮೂಲಕ ತಲುಪಬಹುದು. ಲಭ್ಯವಿರುವ ಇತರ ಆಯ್ಕೆಗಳು ಹೆಲಿಕಾಪ್ಟರ್, ಕುದುರೆಗಳು, ಪಲ್ಲಕ್ಕಿ ಮತ್ತು ಪಿಟ್ಟು (ನಿಮ್ಮನ್ನು ವ್ಯಕ್ತಿಯ ಹಿಂಭಾಗದಲ್ಲಿ ಬುಟ್ಟಿಯಲ್ಲಿ ಒಯ್ಯಲಾಗುತ್ತದೆ)ಗಳ ಮೂಲಕ ಪ್ರಯಾಣಿಸಬಹುದಾಗಿದೆ. ದೇವಾಲಯದ ಬಳಿ, ಶಿಖರದಲ್ಲಿ ಉಳಿಯಲು ಆಯ್ಕೆಗಳು ಲಭ್ಯವಿದೆ.

ಬದ್ರಿನಾಥ

ಬದ್ರಿನಾಥ

ಬದರಿನಾಥ ದೇವಾಲಯವು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ಬದ್ರಿನಾರಾಯಣನಿಗೆ ಸಮರ್ಪಿತವಾಗಿದೆ. ಇದು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ. ಕೇದಾರನಾಥ ದೇವಾಲಯದಂತೆ, ಬದರಿನಾಥ ದೇವಾಲಯವು 8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟ ಪ್ರಾಚೀನ ದೇವಾಲಯವಾಗಿದೆ. ದೇವಾಲಯದ ಆವರಣದಲ್ಲಿ ತಪ್ಟ್ ಕುಂಡ್ ಅಥವಾ ನೈಸರ್ಗಿಕ ಬಿಸಿನೀರಿನ ಬುಗ್ಗೆ ಇದೆ, ಅಲ್ಲಿ ಭಕ್ತರು ದೇವಾಲಯವನ್ನು ಪ್ರವೇಶಿಸುವ ಮೊದಲು ಪವಿತ್ರ ಸ್ನಾನ ಮಾಡುತ್ತಾರೆ.

ಹಿಮಾಲಯದ ಅಲಕನಂದಾ ನದಿಯು ಸತೋಪಂಥ್ ಮತ್ತು ಭಾಗೀರಥ್ ಖಾರಕ್ ಹಿಮನದಿಗಳ ಸಂಗಮದಿಂದ ಹುಟ್ಟುತ್ತದೆ, ಇದು ಬದರಿನಾಥ ಪಟ್ಟಣದಿಂದ ಮುಂದೆ. ಪಾಂಡವರು ಸ್ವರ್ಗಕ್ಕೆ ಪ್ರಯಾಣಿಸುವಾಗ ಬದರಿನಾಥದಿಂದ 3 ಕಿಮೀ ದೂರದಲ್ಲಿರುವ ಬದರಿನಾಥ ಮತ್ತು ಮನ ಗ್ರಾಮದ ಮೂಲಕ ಪ್ರಯಾಣಿಸಿದರು ಎಂದು ನಂಬಲಾಗಿದೆ. ಮನವು ಗುಹಾ ದೇವಾಲಯವನ್ನು ಹೊಂದಿದೆ ಎಂದು ತಿಳಿದುಬಂದಿದೆ, ಅಲ್ಲಿ ಋಷಿ ವೇದ ವ್ಯಾಸರು ಮಹಾಭಾರತ ಮತ್ತು ನಾಲ್ಕು ಪವಿತ್ರ ವೇದಗಳನ್ನು ಬರೆದಿದ್ದಾರೆ.

FAQ's
  • ಚಾರ್ ಧಾಮ್ ಯಾತ್ರೆಗೆ ಹೋಗುವುದು ಹೇಗೆ?

    ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಉತ್ತರಾಖಂಡ್ ಸರಕಾರವು ಕೆಲವು ಪ್ರವಾಸವನ್ನು ಆಯೋಜಿಸುತ್ತದೆ ಮಾತ್ರವಲ್ಲದೆ ಖಾಸಗಿ ಕಂಪೆನಿಗಳು ನಿರ್ವಹಿಸುತ್ತವೆ. ಚಾರ್ ಧಾಮ ಯಾತ್ರೆಯು ಒಂದು ದೊಡ್ಡ ವಿಷಯವಾಗಿರುವುದರಿಂದ ಹಲವಾರು ಪ್ರಯಾಣ ವ್ಯವಸ್ಥೆಗಳನ್ನು ರಾಜ್ಯದಾದ್ಯಂತ ನಿರ್ವಹಿಸುವ ಕೇಂದ್ರಗಳನ್ನು ಕಾಣಬಹುದಾಗಿದೆ. ಪ್ರತಿ ವರ್ಷ ಸಂದರ್ಶಕರ ಸಂಖ್ಯೆ ಹೆಚ್ಚುತ್ತಿದೆ ಮತ್ತು ದೇವಾಲಯಗಳು ನಿರ್ದಿಷ್ಟ ಅವಧಿಗೆ ಮಾತ್ರ ತೆರೆದಿರುವುದರಿಂದ, ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ ಮತ್ತು ಕಾಯ್ದಿರಿಸಲು ಸಲಹೆ ನೀಡಲಾಗುತ್ತದೆ.

    ಸಾಮಾನ್ಯವಾಗಿ ಚಾರ್ ಧಾಮ್ ಯಾತ್ರೆಯನ್ನು ಪೂರೈಸಲು ರಸ್ತೆಯ ಮೂಲಕ ಹತ್ತು ದಿವಸಗಳ ಅವಧಿ ಸಾಕಾಗುತ್ತದೆ. ಸಮಯದ ಮಿತಿಯನ್ನು ಹೊಂದಿರುವವರು ಅಥವಾ ಹೆಚ್ಚುವರಿ ಹಣವನ್ನು ಖರ್ಚು ಮಾಡಲು ಅಭ್ಯಂತರ ಇಲ್ಲದೇ ಇರುವವರು ಹೆಲಿಕಾಪ್ಟರ್ ಮೂಲಕ ಯಾತ್ರೆಯನ್ನು ಪೂರ್ಣಗೊಳಿಸಲು ಆಯ್ಕೆ ಮಾಡಬಹುದು. ಆದಾಗ್ಯೂ, ಪರ್ವತಗಳಲ್ಲಿನ ಹವಾಮಾನವು ಬದಲಾವಣೆ ಹೊಂದುತ್ತಾ ಇರುತ್ತದೆ ಮತ್ತು ಕೆಟ್ಟ ಹವಾಮಾನದಿಂದಾಗಿ ಚಾಪರ್ ಸೇವೆಗಳನ್ನು ಯಾವಾಗ ಬೇಕಾದರೂ ರದ್ದುಗೊಳಿಸಬಹುದು ಎಂಬುದನ್ನು ನೆನಪಿನಲ್ಲಿಡಬೇಕು.

    ಮಂಗಳಕರ ಯಾತ್ರೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ಪ್ರದಕ್ಷಿಣಾಕಾರವಾಗಿ ಕೈಗೊಳ್ಳಬೇಕು ಎಂದು ನಂಬಲಾಗಿದೆ. ಆದ್ದರಿಂದ, ಸಂದರ್ಶಕರು ಚಾರ್ ಧಾಮ್ ಯಾತ್ರೆಯನ್ನು ಹರಿದ್ವಾರ ಅಥವಾ ಋಷಿಕೇಶದಿಂದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್‌ಗೆ ಹೋಗಲು ಪ್ರಾರಂಭಿಸುತ್ತಾರೆ. ಇಡೀ ಚಾರ್ ಧಾಮ್ ಸರ್ಕ್ಯೂಟ್ 10 ದಿನಗಳ ಅವಧಿಯಲ್ಲಿ ಸರಿಸುಮಾರು 1300 ಕಿ.ಮೀ. ದೂರದ ಪ್ರಯಾಣವನ್ನು ಹೊಂದಿದೆ.

     

  • ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ

    ಚಳಿಗಾಲದಲ್ಲಿಯ ಹಿಮವು ಕರಗಿ ಈ ನದಿಗಳಿಗೆ ನೀರು ಹರಿಯುವ ಸಮಯದಲ್ಲಿ ಈ ಪ್ರಾಚೀನ ದೇವಾಲಯಗಳ ಕಪಾಟ್ ಅಥವಾ ಬಾಗಿಲುಗಳು ಎಪ್ರಿಲ್ ಕೊನೆ ಅಥವಾ ಮೇ ಯಲ್ಲಿ ತೆರೆಯುತ್ತಾರೆ. ಮೇಯಿಂದ ಜೂನ್ ವರೆಗೆ ಚಾರ್ ಧಾಮಗಳಿಗೆ ಭೇಟಿ ಕೊಡಲು ಸೂಕ್ತ ಸ್ಥಳಗಳಾಗಿವೆ. ಮಾನ್ಸೂನ್ ತಿಂಗಳುಗಳಲ್ಲಿ ಈ ಪ್ರದೇಶವು ಭಾರೀ ಮಳೆಯನ್ನು ಅನುಭವಿಸುವುದರಿಂದ ಈ ಅವಧಿಯಲ್ಲಿ ಭಕ್ತರು ವಿರಳವಾಗಿ ಭೇಟಿ ನೀಡುತ್ತಾರೆ.

    ಮಾನ್ಸೂನ್ ಮಳೆಗಾಲದ ನಂತರ, ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹವಾಗಿ ಏರಿಕೆ ಕಂಡು ಬರುತ್ತದೆ. ಜನರು ಪ್ರತಿದಿನ ಧಾಮಗಳಿಗೆ ಭೇಟಿ ನೀಡುತ್ತಾರೆ ಮತ್ತು ದೇವಾಲಯಗಳ ಮುಚ್ಚುವ ಸಮಯದಲ್ಲಿ ಸಂಖ್ಯೆಗಳು ಹೆಚ್ಚಾಗುತ್ತಲೇ ಇರುತ್ತವೆ. ದೀಪಾವಳಿ ಹಬ್ಬದ ಆಸುಪಾಸಿನಲ್ಲಿ ಅಕ್ಟೋಬರ್/ನವೆಂಬರ್ ತಿಂಗಳಿನಲ್ಲಿ ದೇವಾಲಯಗಳು ಮುಚ್ಚಲ್ಪಡುತ್ತವೆ ಮತ್ತು ಋತುವಿನ ಮೊದಲ ಹಿಮಪಾತವು ಪ್ರಾರಂಭವಾಗುತ್ತದೆ.

    ಹಿಮಪಾತವಾಗಲು ಪ್ರಾರಂಭವಾದ ನಂತರ ದೇವಾಲಯಗಳು ಮುಚ್ಚಲ್ಪಡುತ್ತವೆ ಮತ್ತು ಇವು ಚಳಿಗಾಲದಾದ್ಯಂತ ಇವುಗಳು ಹಿಮದಿಂದ ಮುಚ್ಚಲ್ಪಟ್ಟು ಹಿಮ ಕರಗಿ ನೀರಾಗುವ ಸಮಯದಲ್ಲಿ ತೆರೆಯಲ್ಪಡುತ್ತವೆ. ದೇವಾಲಯಗಳು ಮತ್ತು ಹತ್ತಿರದ ಹಳ್ಳಿಗಳ ನಿವಾಸಿಗಳು ಈ ಅವಧಿಯಲ್ಲಿ ಕಡಿಮೆ ಎತ್ತರಕ್ಕೆ ವಲಸೆ ಹೋಗುತ್ತಾರೆ. ಆರು ತಿಂಗಳ ನಂತರ ದೇವಾಲಯಗಳನ್ನು ತೆರೆದಾಗ, ದೇವಾಲಯವನ್ನು ಮುಚ್ಚುವಾಗ ಬೆಳಗುವ ಎಣ್ಣೆ ದೀಪಗಳ ಜ್ವಾಲೆಯು ಇನ್ನೂ ಜೀವಂತವಾಗಿ ಮತ್ತು ಉರಿಯುತ್ತಿರುವುದು ಕಂಡುಬರುತ್ತದೆ. ಶಿವನ ಉಗ್ರ ಅಭಿರೂಪವಾದ ಭೈರವನು ಈ ಅವಧಿಯಲ್ಲಿ ದೇವಾಲಯಗಳನ್ನು ಕಾಪಾಡುತ್ತಾನೆ ಎಂಬುದು ಒಂದು ನಂಬಿಕೆ.

     

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X