Search
  • Follow NativePlanet
Share
» »ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಭಾರತದ ಸೋಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಒಡಿಶಾ, ಅದರ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತವಾಗಿದೆ, ಇದು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಂಸ್ಕೃತಿಕವಾಗಿ ಪ್ರಬಲವಾಗಿರುವ ಈ ರಾಜ್ಯವು ಭಾರತದಲ್ಲಿನ ಕೆಲವು ಅತ್ಯುತ್ತಮ ಕಡಲ ತೀರಗಳನ್ನು ಹೊಂದಿದೆ. ಇಂದು ನಾವು ಒಡಿಶಾದ ವಿಶೇಷವಾದ ಚಂಡಿಪುರ ಬೀಚ್ ಬೀಚ್‌ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಚಂಡಿಪುರ್ ಬೀಚ್

ಎಲ್ಲಿದೆ ಚಂಡಿಪುರ್ ಬೀಚ್

PC:Heritageorissa

ಭುವನೇಶ್ವರದಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಬಾಲಸೋರ್ ಹಳ್ಳಿಯ ಹತ್ತಿರದಲ್ಲಿ ಚಂಡಿಪುರ್ ಬೀಚ್ ಇದೆ.

ಯುಗಾಂತ್ಯದ ಮುನ್ಸೂಚನೆ ನೀಡುತ್ತಂತೆ ಇಲ್ಲಿನ ಗುಹೆ, ಅಂಥದ್ದೇನಿದೆ ಇದರೊಳಗೆಯುಗಾಂತ್ಯದ ಮುನ್ಸೂಚನೆ ನೀಡುತ್ತಂತೆ ಇಲ್ಲಿನ ಗುಹೆ, ಅಂಥದ್ದೇನಿದೆ ಇದರೊಳಗೆ

ಹೈಡ್‌ ಆಂಡ್‌ ಸೀಕ್‌ ಬೀಚ್‌

ಹೈಡ್‌ ಆಂಡ್‌ ಸೀಕ್‌ ಬೀಚ್‌

PC: Sankara Subramanian

ಈ ಬೀಚ್‌ನ ವಿಶೇಷತೆ ಏನೆಂದರೆ ನೀವು ಬೀಚ್‌ನ್ನು ಒಂದು ದಿನ ನೋಡಿದರೆ, ಮರುದಿನ ಆ ಬೀಚ್ ಕಣ್ಮರೆಯಾಗುವುದನ್ನು ನೋಡಬಹುದಾಗಿದೆ. . ಬೀಚ್‌ ಇದ್ದ ಜಾಗದಲ್ಲಿ ಮರಳಿನ ದಿಬ್ಬಗಳನ್ನು ಕಾಣಬಹುದು. ಹಾಗಾಗಿ ಈ ಬೀಚ್‌ನ್ನು ಹೈಡ್‌ ಆಂಡ್‌ ಸೀಕ್‌ ಬೀಚ್‌ ಎಂದೂ ಕರೆಯಲಾಗುತ್ತದೆ.

ಉಬ್ಬರವಿಳಿತ

ಉಬ್ಬರವಿಳಿತ

PC:Subhashish Panigrahi

ಕಡಲತೀರದ ಉಬ್ಬರವಿಳಿತದಿಂದಾಗಿ ಈ ನೀರು ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಕಡಿಮೆ ಮತ್ತು ಹೆಚ್ಚಿನ ಅಲೆಗಳ ಸಮಯದಲ್ಲಿ. ಹೀಗಾಗುತ್ತದೆ. ನೀವು ದಿನವಿಡೀ ಈ ಬೀಚ್‌ನಲ್ಲಿ ಕೂತರೆ ನಿಮಗೆ ಈ ಏರಿಳಿತವನ್ನು ಕಾಣಬಹುದು.ಇಲ್ಲಿನ ಸ್ಥಳೀಯರಿಗೆ ಈ ಬೀಚ್‌ನ ನೀರು ಯಾವಾಗ ಇರುತ್ತದೆ. ಯಾವಾಗ ಇರೋದಿಲ್ಲ ಎನ್ನುವ ನಿಗಧಿತ ಸಮಯ ತಿಳಿದಿದೆ.

30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ

ಕಪ್ಪೆಚಿಪ್ಪು, ಮೀನುಗಳನ್ನು ಕಾಣಬಹುದು

ಕಪ್ಪೆಚಿಪ್ಪು, ಮೀನುಗಳನ್ನು ಕಾಣಬಹುದು

PC: Amritachattopadhyay10

ಕಡಿಮೆ ಉಬ್ಬರವಿಳಿತದ ಸಮಯದಲ್ಲಿ ಕಡಲತೀರಗಳು, ಕಪ್ಪೆಚಿಪ್ಪುಗಳು, ಮುತ್ತು, ಏಡಿಗಳು ಮತ್ತು ತೀರ ಸಣ್ಣ ಮೀನುಗಳನ್ನು ನೀವು ಕಾಣಬಹುದು. ಇವುಗಳು ಎಲ್ಲಾ ಬೀಚ್‌ಗಳಲ್ಲಿ ಕಾಣಸಿಗೋದಿಲ್ಲ.

ಗೋಲ್ಡನ್ ಬೀಚ್ ಫೆಸ್ಟಿವಲ್

ಗೋಲ್ಡನ್ ಬೀಚ್ ಫೆಸ್ಟಿವಲ್

ಗೋಲ್ಡನ್ ಬೀಚ್ ಫೆಸ್ಟಿವಲ್ ಇಲ್ಲಿ ನಡೆಯುವ ಪ್ರಮುಖ ಉತ್ಸವವಾಗಿದೆ. ಈ ನಾಲ್ಕು ದಿನಗಳ ಉತ್ಸವವು ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ನಡೆಯುತ್ತದೆ. ಉತ್ಸವದ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X