Search
  • Follow NativePlanet
Share
» »ಭಾರತದ ಅತ್ಯಂತ ಸುಂದರ ಕೆಲವು ಚರ್ಚುಗಳಲ್ಲಿ ಕ್ರಿಸ್ಮಸ್ ಆಚರಿಸಿ

ಭಾರತದ ಅತ್ಯಂತ ಸುಂದರ ಕೆಲವು ಚರ್ಚುಗಳಲ್ಲಿ ಕ್ರಿಸ್ಮಸ್ ಆಚರಿಸಿ

ಕೊಲ್ಕತ್ತಾದಲ್ಲಿರುವ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್, ಗೋವಾದ ಬಾಮ್ ಜೀಸಸ್ನ ಬೆಸಿಲಿಕಾ ಮುಂತಾದ ಭಾರತದ ಅತ್ಯಂತ ಸುಂದರ ಚರ್ಚುಗಳ ಬಗ್ಗೆ ಲೇಖನವು ನಿಮಗೆ ಮಾಹಿತಿ ನೀಡುತ್ತದೆ. ಇನ್ನಷ್ಟು ತಿಳಿದುಕೊಳ್ಳಲು ಮತ್ತಷ್ಟು ಓದಿ.

By Manjula Balaraj Tantry

ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳಿಗೆ ನೆಲೆಯಾದ ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವು ಮೂರನೇ ಅತಿ ದೊಡ್ಡ ಧರ್ಮವೆಂದು ಪರಿಗಣಿಸಲ್ಪಡುತ್ತದೆ, ಈ ಕಾರಣದಿಂದಾಗಿ ಭಾರತದ ವಿವಿಧ ಕಡೆಗಳಲ್ಲಿ ಚರ್ಚ್ ಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು ತುಂಬಾ ಹಳೆಯ ಕಾಲದ್ದಾಗಿದೆ.

28 ಮಿಲಿಯನ್ ಅನುಯಾಯಿಗಳನ್ನೊಳಗೊಂಡ ಕ್ರೈಸ್ತ ಧರ್ಮವು ಭಾರತದ ಮೂರನೇ ದೊಡ್ದ ಧರ್ಮವಾಗಿದೆ. ಧರ್ಮದ ಇತಿಹಾಸ ಮತ್ತು ಅನೇಕ ಚರ್ಚುಗಳು ಕ್ರಿ. ಶ 52ರಲ್ಲಿ ಹಿಂದಿನದ್ದಾಗಿದೆ. ಸೇಂಟ್ ಥಾಮಸ್, ಅಪೊಸ್ತಲರಿ ಕೇರಳದ ಇಂದಿನ ಕೊಡುಂಗಲ್ಲೂರ್ ನ ಮುಝೀರಿಸ್ ಬಂದರು ಪಟ್ಟಣದಲ್ಲಿ ಇಳಿದರು. ಅವರ ಆಗಮನದೊಂದಿಗೆ ಇಲ್ಲಿ ಒಂದು ಹೊಸ ನಂಬಿಕೆ ಹುಟ್ಟಲು ಕಾರಣವಾಯಿತು.

ಸಂತ ತೋಮಸ್ ರು ಕೇರಳದಲ್ಲಿ ಅನೇಕ ಚರ್ಚುಗಳನ್ನು ನಿರ್ಮಾಣ ಮಾಡಿದ್ದರು ಎನ್ನಲಾಗುತ್ತದೆ. ಮತ್ತು ಗಾಸ್ಪೆಲ್ ರ ಸಂದೇಶವನ್ನು ಹರಡಲು ಇನ್ನಿತರರು ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರವನ್ನು ಕಟ್ಟಲು ಸ್ಪೂರ್ತಿಯಾಯಿತು ಎಂದು ನಂಬಲಾಗಿದೆ.

ಡಚ್, ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ಚರ್ಚುಗಳ ನಿರ್ಮಾಣದ ಸಮಯದಲ್ಲಿ ವಸಾಹತುಶಾಹಿಯ ಗಮನಾರ್ಹವಾಗಿತ್ತು , ಅವರು ಎಲ್ಲಾ ಕಡೆಗಳ ಭೂಮಿಗಳಲ್ಲಿ ಚರ್ಚುಗಳನ್ನು ಕಟ್ಟಿದರು ಮತ್ತು ಇವುಗಳ ಮೂಲಕ ಹೊಸ ವಾಸ್ತುಶೈಲಿ ಪ್ರಭಾವಗಳನ್ನು ಕೂಡಾ ಪರಿಚಯಿಸಿದರು, ಅಂತಿಮವಾಗಿ ಕೆಲವು ಸುಂದರವಾದ ರಚನೆಗಳು ಮೂಡಿಬಂದವು.

ಸ್ಯಾನ್ ಥೋಮ್ ಬೆಸಿಲಿಕಾ

ಸ್ಯಾನ್ ಥೋಮ್ ಬೆಸಿಲಿಕಾ

ಇದು ಚೆನ್ನೈ ನಗರದಲ್ಲಿದ್ದು ಇದರ ನಿರ್ಮಾಣವು 16ನೇ ಶತಮಾನದಲ್ಲಿ ಸಂತ ಥಾಮಸ್ ರ ಸಮಾಧಿ ಮೇಲೆ ಪೋರ್ಚುಗೀಸರಿಂದ ನಿರ್ಮಿಸಲಾಗಿದೆ ನಂತರ ಇದು ಬ್ರಿಟಿಷರು ಇದನ್ನು 1893 ರಲ್ಲಿ ಪುನಃ ನಿರ್ಮಿಸಿದರು.

ನವ-ಗೋಥಿಕ್ ಶೈಲಿಯ ವಾಸ್ತುಶಿಲ್ಪವನ್ನು ಈ ರಚನೆಯಲ್ಲಿ ಕಾಣಬಹುದು, ಇದು 19ನೇ ಶತಮಾನದ ವಾಸ್ತುಶಿಲ್ಪ ಶೈಲಿಯಲ್ಲಿದೆ. ಅಪೊಸ್ತಲರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿರುವ ವಿಶ್ವದ ಮೂರು ಪ್ರಸಿದ್ಧ ಚರ್ಚುಗಳಲ್ಲಿ ಈ ಚರ್ಚ್ ಸಹ ಒಂದಾಗಿದೆ.

PC: Vinoth Chandar

ಅವರ್ ಲೇಡಿ ಆಫ್ ಡೊಲೊರ್ಸ್ ಬೆಸಿಲಿಕಾ

ಅವರ್ ಲೇಡಿ ಆಫ್ ಡೊಲೊರ್ಸ್ ಬೆಸಿಲಿಕಾ

ಪುತನ್ಪಲ್ಲಿ ಎಂದೂ ಕರೆಯಲ್ಪಡುವ, ಅವರ್ ಲೇಡಿ ಆಫ್ ಡೋಲೋರ್ಸ್ ಬಾಸಿಲಿಕಾ ಏಷ್ಯಾದಲ್ಲೇ ಮೂರನೇ ಅತ್ಯಂತ ಎತ್ತರದ ಚರ್ಚ್ ಆಗಿದೆ ಮತ್ತು ಇದು ಗೋಥಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ಮೂಲ ಚರ್ಚ್ ಅನ್ನು 1814 ರಲ್ಲಿ ನಿರ್ಮಿಸಲಾಯಿತು ಮತ್ತು ಇದು ತ್ರಿಶೂರ್ ನಲ್ಲಿ ನಿರ್ಮಿಸಲಾದ ಮೊದಲ ಚರ್ಚ್ ಎಂಬ ಪ್ರಖ್ಯಾತಿಯನ್ನು ಹೊಂದಿದೆ.1929 ರಲ್ಲಿ ಪುನಃ ನಿರ್ಮಾಣಗೊಂಡಿತು. ಇದು ದೇಶದ ಅತ್ಯಂತ ದೊಡ್ಡ ಚರ್ಚ್ ಗಳಲ್ಲಿ ಒಂದಾಗಿದೆ.

PC: Official Site

ಅವರ್ ಲೇಡಿ ಆಫ್ ದಿ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್, ಗೋವಾ

ಅವರ್ ಲೇಡಿ ಆಫ್ ದಿ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್, ಗೋವಾ

ಗೋವಾದಲ್ಲಿ ನಿರ್ಮಿಸಲಾದ ಮೊದಲ ಚರ್ಚ್ ಎಂದು ನಂಬಲಾಗಿದೆ. ಇದರ ರಚನೆಯು ಧಾರ್ಮಿಕ ಪರಿಸ್ಥಿತಿಗಳ ಬಗ್ಗೆ ಮತ್ತು ಆ ಸಮಯದಲ್ಲಿ ಸಿಗುತ್ತಿದ್ದ ಸಂಪತ್ತು ಇತ್ಯಾದಿಗಳ ಬಗ್ಗೆ ಗಮನಾರ್ಹ ವಿವರಣೆಯನ್ನು ನೀಡುತ್ತದೆ. ಈ ರಚನೆಯ ಒಳಾಂಗಣಗಳು ಒಂದೇ ಸಮಯದಲ್ಲಿ ಇತರರಿಂದ ನಿರ್ಮಿಸಲಾದ ರಚನೆಯಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ತುಂಬಾ ಸರಳವಾಗಿದೆ.

ಎರಡು ಬಲಿಪೀಠಗಳಿಂದ ಸುತ್ತುವರಿಯಲ್ಪಟ್ಟ ಈ ರಚನೆಯು ಇದನ್ನು ಭೇಟಿಕೊಡುವವರನ್ನು ಸುಲಭವಾಗಿ ಸೆಳೆಯುತ್ತದೆ. ಎಡಭಾಗದಲ್ಲಿರುವ ಬಲಿಪೀಠವು ಶಿಲುಬೆಯ ಮೇಲಿರುವ ಏಸುಕ್ರಿಸ್ತನಿಗೆ ಸಮರ್ಪಿತವಾಗಿದ್ದು ಇನ್ನೊಂದು ರೋಸರಿಯ ಅವರ್ ಲೇಡಿಗೆ ಸಮರ್ಪಿತವಾಗಿದೆ.

ಈ ಎರಡೂ ಪ್ರತಿಮೆಗಳು ಪೋರ್ಚುಗೀಸ್ ಅವಧಿಗೆ ಉತ್ತಮವಾದ ಉದಾಹರಣೆಗಳಾಗಿವೆ, ಇವುಗಳು ಹೆಚ್ಚು ಸುಸಜ್ಜಿತವಾದ, ಆಳವಾಗಿ ಕೆತ್ತಿದ ಅಲಂಕಾರಗಳು ಮತ್ತು ಕಾಂಪ್ಯಾಕ್ಟ್ ಆಗಿ ಉಳಿದಿವೆ.

PC: Nicolas Vollmer

ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ , ವೆಲಾಂಕನಿ

ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ , ವೆಲಾಂಕನಿ

ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಚರ್ಚುಗಳ ಪೈಕಿ ಒಂದಾದ ವೇಲಾಂಕಣಿಯಲ್ಲಿರುವ ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ ಆಗಿದೆ. ಈ ಚರ್ಚು 16 ನೇ ಶತಮಾನಕ್ಕೂ ಹಿಂದಿನ ಇತಿಹಾಸವನ್ನು ಹೊಂದಿದೆ ಎಂದು ಪತ್ತೆ ಹಚ್ಚಲಾಗಿದೆ. ಬೆಸಿಲಿಕಾ ನಿರ್ಮಿಸಲಾಗಿರುವ ಈ ಸ್ಥಳಗಳಲ್ಲಿ ಮೂರು ಪವಾಡಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಈ ಮೂರು ಪವಾಡಗಳೆಂದರೆ ಮೇರಿಯ ಮತ್ತು ಶಿಶು ಏಸುವಿನ ಆತ್ಮವು ಕುರಿಮೇಯಿಸುವ ಹುಡುಗನಾಗಿಯೂ ಎರಡನೆಯ ಪವಾಡವೆಂದರೆ ಬಡ ಮಜ್ಜಿಗೆ ವ್ಯಾಪಾರಿಯನ್ನು ಗುಣಪಡಿಸುವುದರ ಮೂಲಕ ಮತ್ತು ಕೊನೆಯದಾಗಿ ಪೊರ್ಚುಗೀಸ್ ಪ್ರಯಾಣಿಗರನ್ನು ಭಯಂಕರವಾದ ಚಂಡಮಾರುತದಿಂದ ರಕ್ಷಿಸುವುದರ ಮೂಲಕ ಪವಾಡಗಳು ನಡೆದಿವೆ ಎಂದು ಹೇಳಲಾಗುತ್ತದೆ.

ಈ ದೇವಾಲಯವನ್ನು ಪೂರ್ವದ ಲಾರ್ಡೆಸ್ ಎಂದೂ ಕರೆಯುತ್ತಾರೆ ಮತ್ತು ಇಲ್ಲಿ ಒಂಬತ್ತು ದಿನಗಳ ಹಬ್ಬವನ್ನು ಆಚರಿಸಲಾಗುತ್ತದೆ, ಇದು ಹತ್ತಿರದ ಮತ್ತು ದೂರದ ಸುಮಾರು ಮಿಲಿಯನ್ ನಷ್ಟು ಯಾತ್ರಿಕರನ್ನು ಆಕರ್ಷಿಸುತ್ತದೆ.

PC: Manojz Kumar

ಮೇದಕ್ ಕ್ಯಾಥ್ರೆಡಾಲ್ ತೆಲಂಗಾಣ

ಮೇದಕ್ ಕ್ಯಾಥ್ರೆಡಾಲ್ ತೆಲಂಗಾಣ

ಮೇದಕ್ ಕ್ಯಾಥ್ರೆಡಾಲ್ ದೇಶದ ಅತೀ ದೊಡ್ಡ ಚರ್ಚುಗಳು ಮತ್ತು ಅತ್ಯಂತ ಸುಂದರವಾದ ಕಟ್ಟಡಗಳಲ್ಲೊಂದಾಗಿದೆ. ಈ ಚರ್ಚ್ ಅನ್ನು ಡಿಸೆಂಬರ್ 25, 1924 ರಂದು ಪವಿತ್ರಗೊಳಿಸಲಾಯಿತು ಮತ್ತು ಇದನ್ನು ಮೂಲತಃ ಬ್ರಿಟಿಷ್ ವೆಸ್ಲಿಯನ್ ಮೆಥಡಿಸ್ಟ ಇದನ್ನು ನಿರ್ಮಿಸಿದರು.

ಈ ಕಟ್ಟಡವು 100 ಅಡಿ ಅಗಲ ಮತ್ತು 200 ಅಡಿ ಉದ್ದವಿದ್ದು ಗೋಥಿಕ್ ರಿವೈವಲ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಈ ಚರ್ಚು ಒಂದೇ ಸಮಯದಲ್ಲಿ ಸುಮಾರು 5000 ಜನರಿಗೆ ಸ್ಥಳಾವಕಾಶ ನೀಡುವ ಸಾಮರ್ಥ್ಯವನ್ನು ಹೊಂದಿದೆ.

PC: Myrtleship

ಬಾಸಿಲಿಕಾ ಆಫ್ ಬೊಮ್ ಜೀಸಸ್

ಬಾಸಿಲಿಕಾ ಆಫ್ ಬೊಮ್ ಜೀಸಸ್

ಇದು ಹಳೇ ಗೋವಾದಲ್ಲಿದೆ. ಬೋಮ್ ಜೀಸಸ್ ನ ಬಾಸಲಿಕವು ಒಂದು ಪ್ರಸಿದ್ದವಾದ ಚರ್ಚ್ ಆಗಿದ್ದು ಇದು ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ನ ಮೃತ ಅವಶೇಷಗಳನ್ನು ಹೊಂದಿದೆ .ದೇಶದ ಬರೋಕ್ ಮಾದರಿಯ ವಾಸ್ತುಶಿಲ್ಪ ಶೈಲಿಯನ್ನು ಪ್ರದರ್ಶಿಸುವ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಇದನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.

ಇದು ಭಾರತದ ಹಾಗೂ ಗೋವಾದಲ್ಲಿರುವ ಅತ್ಯಂತ ಹಳೆಯ ಚರ್ಚುಗಳಲ್ಲೊಂದಾಗಿದೆ. ಈ ಸುಂದರವಾದ ಚರ್ಚ್ ನ ನಿರ್ಮಾಣವು 1594 ರಲ್ಲಿ ಪ್ರಾರಂಭವಾಯಿತು ಮತ್ತು 1605 ರಲ್ಲಿ ಪೂರ್ಣಗೊಂಡಿತು.

PC: Hemant192

ಸೈಂಟ್ ಪೌಲ್ ಕ್ಯಾಥ್ರೆಡಾಲ್ ಕೋಲ್ಕತ್ತಾ

ಸೈಂಟ್ ಪೌಲ್ ಕ್ಯಾಥ್ರೆಡಾಲ್ ಕೋಲ್ಕತ್ತಾ

ಕೊಲ್ಕತ್ತಾದಲ್ಲಿರುವ ಸೇಂಟ್ ಪಾಲ್ ಕ್ಯಾಥೆಡ್ರಲ್ ಚರ್ಚ್ ಅದರ ಗೋಥಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ ಮತ್ತು ಇದು ಸಂತೋಷದ ನಗರದಲ್ಲಿರುವ ಅತ್ಯಂತ ದೊಡ್ಡ ಕ್ಯಾಥೆಡ್ರಲ್ ಎಂದು ಹೇಳಲಾಗುತ್ತದೆ ಇದು ಬ್ರಿಟಿಷ್ ಸಾಮ್ರಾಜ್ಯದ ಸಾಗರೋತ್ತರ ದೇಶದಲ್ಲಿ ನಿರ್ಮಿಸಿದ ಮೊದಲ ಕಟ್ಟಡವಾಗಿದೆ.

ಸೇಂಟ್ ಜಾನ್ಸ್ ಚರ್ಚ್ ಅನ್ನು ಬದಲಿಸಲು ಈ ಕ್ಯಾಥೆಡ್ರಲ್ ಅನ್ನು ನಿರ್ಮಿಸಲಾಯಿತು, ಇದು ಕೊಲ್ಕತ್ತಾದಲ್ಲಿ ಬೆಳೆಯುತ್ತಿರುವ ಯುರೋಪಿಯನ್ ಸಮುದಾಯಕ್ಕೆ ಸ್ದಳಾವಕಾಶ ಕಲ್ಪಿಸಲು ತುಂಬಾ ಚಿಕ್ಕದಾಗಿದೆ. ಭಾರತದ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಇಂಡೋ-ಗೋಥಿಕ್ ಶೈಲಿಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.

PC: Ankitesh Jha

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X