Search
  • Follow NativePlanet
Share
» »200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?

200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ 200ರೂ. ನೋಟು ನೀವು ನೋಡಿರಲೇ ಬೇಕಲ್ವಾ... ಈಗಾಗಲೇ ಇದು ಸಾಕಷ್ಟು ಜನರ ಕೈಯಲ್ಲಿ ಹರಿದಾಡುತ್ತಿದೆ. ಹಳದಿ, ಕೇಸರಿ ಮಿಶ್ರಿತ ಬಣ್ಣ ಈ ನೋಟನ್ನು ಸರಿಯಾಗಿ ನೋಡಿದ್ದೀರಾ? ಅದರ ಹಿಂದುಗಡೆ ಇರುವ ಫೋಟೋ ಯಾವ ಸ್ಥಳದ್ದು ಎಂದು ಹೇಳಬಲ್ಲಿರಾ?

ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!

200ರೂ. ನೋಟ್‌ನಲ್ಲಿರುವ ಸ್ಥಳ ಯಾವುದು?

200ರೂ. ನೋಟ್‌ನಲ್ಲಿರುವ ಸ್ಥಳ ಯಾವುದು?

PC: wikipedia

ಇದು ಮಧ್ಯಪ್ರದೇಶದಲ್ಲಿರುವ ಸಾಂಚಿ ಸ್ತೂಪ . ಮಧ್ಯ ಪ್ರದೇಶದ ರೈಸೇನ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯೆ ಸಾಂಚಿ. ಒಂದು ಸಣ್ಣ ಗುಡ್ಡದ ಬುಡದಲ್ಲಿರುವ ಸಾಂಚಿ, ಹಲವಾರು ಬೌದ್ಧ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಮೌರ್ಯರ ಕಾಲದಲ್ಲಿ ನಿರ್ಮಿಸಲಾಗಿದೆ. ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?

ಪ್ರವಾಸೋಧ್ಯಮಕ್ಕೊಂದು ಕೊಡುಗೆ

ಪ್ರವಾಸೋಧ್ಯಮಕ್ಕೊಂದು ಕೊಡುಗೆ

PC: Suyash Dwivedi

ಕ್ರಿ.ಪೂ ಮೂರನೇ ಶತಮಾನದಿಂದ ಕ್ರಿ.ಶ ಹನ್ನೆರಡನೇ ಶತಮಾನದ ವರೆಗಿನ ಸ್ತೂಪಗಳು, ಗುಡಿಗಳು, ಮಠಗಳು ಹಾಗೂ ಸ್ತಂಭಗಳು ಇಲ್ಲಿನ ಪ್ರವಾಸೋದ್ಯಮಕ್ಕೆ ಕೊಡುಗೆಯಾಗಿದೆ. ಈ ಸ್ಮಾರಕಗಳ ಮೇಲಿರುವ ಕೆತ್ತನೆಗಳು, ಇಲ್ಲಿನ ಸಂಪ್ರದಾಯ ಹಾಗೂ ಬೌದ್ಧ ಪುರಾಣಗಳ ಚಿತ್ರಣ ನೀಡುತ್ತದೆ. ಚರಿತ್ರಾ ಪುಟಗಳಿಂದ ಸಾಂಚಿಯಲ್ಲಿರುವ ಬೌದ್ಧ ಸ್ಮಾರಕಗಳನ್ನು ನೋಡಿದರೆ, ಸಾಂಚಿಯ ಚರಿತ್ರೆ ಹಾಗೂ ಬುದ್ಧನಿಗೆ ಹತ್ತಿರದ ನಂಟು ಇದೆಯೆಂದು ಯಾತ್ರಿಗಳು ಆಲೋಚಿಸಬಹುದು. ಆದರೆ ತನ್ನ ಜೀವಿತಾವಧಿಯಲ್ಲಿ ಬುದ್ಧನು ಸಾಂಚಿಗೆ ಒಮ್ಮೆಯೂ ಭೇಟಿ ನೀಡಿರಲಿಲ್ಲ ಎಂದು ನಂಬಲು ಕಷ್ಟವಾಗಬಹುದು. ಅದಾಗ್ಯೂ, ಸಾಂಚಿಯ ನಿಶ್ಶಬ್ದತೆಯಲ್ಲಿ ಬುದ್ಧನ ಇರುವಿಕೆಯ ಅರಿವು, ಇತರ ಬೌದ್ಧ ಕೇಂದ್ರಗಳಿಗಿಂತ ಹೆಚ್ಚಾಗಿ ಉಂಟಾಗಬಹುದು.

ಶ್ರೀಮಂತ ವರ್ತಕರ ಕೇಂದ್ರವಾಗಿದ್ದ ಸಾಂಚಿ

ಶ್ರೀಮಂತ ವರ್ತಕರ ಕೇಂದ್ರವಾಗಿದ್ದ ಸಾಂಚಿ

PC: wikipedia

ಮೊದಲಿಗೆ ಸಾಂಚಿ, 'ವಿದಿಶಾಗಿರಿ' ಎಂಬ ಶ್ರೀಮಂತ ವರ್ತಕರ ಕೇಂದ್ರವಾಗಿತ್ತು. ಸಾಂಚಿಯನ್ನು ಬೌದ್ಧ ಸಂಪ್ರದಾಯದ ಅಗ್ರಗಣ್ಯ ಕೇಂದ್ರವಾಗಿ ರೂಪುಗೊಳ್ಳಲು ಪ್ರೇರೇಪಿಸಿದ ಈ ಪ್ರಭಾವಿ ವರ್ತಕರಿಗೆ ಸಾಂಚಿ ಯಾವತ್ತೂ ಋಣಿಯಾಗಿರುತ್ತದೆ.

ರಾಜ ಅಶೋಕನ ಪ್ರೇಮಕಥೆ ಇದೆ

ರಾಜ ಅಶೋಕನ ಪ್ರೇಮಕಥೆ ಇದೆ

PC: wikipedia

ಬೌದ್ಧ ಧರ್ಮದ ನಿಷ್ಠೆಯ ಭಕ್ತೆಯಾಗಿದ್ದ ದೇವಿ ಎಂಬ ಸುಂದರ ಹುಡುಗಿಯ ಪ್ರೇಮಕಥೆಯನ್ನು ಸಾಂಚಿ ಬಹಿರಂಗಗೊಳಿಸುತ್ತದೆ. ರಾಜ ಅಶೋಕ ಈ ಹುಡುಗಿಯನ್ನು ಪ್ರೀತಿಸಿದ್ದು, ಸಾಂಚಿಯಲ್ಲಿ ಇಂತಹ ಸುಂದರವಾದ ಸ್ಮಾರಕಗಳ ರಚನೆಗೆ ದೇವಿ ಅಶೋಕನನ್ನು ಪ್ರೇರೇಪಿಸಿದ್ದಳು ಎಂದು ನಂಬಲಾಗುತ್ತದೆ. ಇಲ್ಲೆ ಅವರಿಬ್ಬರ ಮದುವೆಯಾಗಿದ್ದು ಎನ್ನಲಾಗುತ್ತದೆ.

ಸಾಂಚಿಯಲ್ಲಿ ಇನ್ನೇನೆಲ್ಲಾ ಇದೆ

ಸಾಂಚಿಯಲ್ಲಿ ಇನ್ನೇನೆಲ್ಲಾ ಇದೆ

PC: wikipedia

1818 ರಲ್ಲಿ ಪುರಾತತ್ವವಸ್ತು ಅನ್ವೇಷಣಾ ಅಧಿಕಾರಿಗಳು ಈ ಖ್ಯಾತ ಹಿನಾಯಾನ ಬೌದ್ಧ ಕೇಂದ್ರವನ್ನು ಪತ್ತೆಹಚ್ಚಿದರು. ಸಾಂಚಿಯ ಹೆಬ್ಬಾಗಿಲು ಹಾಗೂ ಸ್ತೂಪದ ವಾಸ್ತು ಅದ್ಬುತ ಹಾಗೂ ಮನೋಹರವಾಗಿದ್ದು, ಇದು ಭಾರತದಲ್ಲಿನ ಆಕರ್ಷಕ ಹಾಗೂ ಸುಂದರ ಬೌದ್ಧ ಕೇಂದ್ರಗಳಲ್ಲಿ ಒಂದಾಗಿದೆ. ಸಾಂಚಿಯ ಸುತ್ತಲಿನ ಆಕರ್ಷಣೆಗಳು ಸಾಂಚಿ ಪ್ರವಾಸೋದ್ಯಮ ಯಾತ್ರಿಗಳಿಗೆ ಹಲವಾರು ಆಕರ್ಷಣೆಗಳನ್ನು ಮುಂದಿಡುತ್ತದೆ - ಬೌದ್ಧ ವಿಹಾರ, ಸಾಂಚಿ ಸ್ತೂಪದ ನಾಲ್ಕು ಹೆಬ್ಬಾಗಿಲುಗಳು, ಸಾಂಚಿ ವಸ್ತುಸಂಗ್ರಹಾಲಯ, ದಿ ಗ್ರೇಟ್ ಬೌಲ್, ಗುಪ್ತ ದೇವಸ್ಥಾನ, ಅಶೋಕ ಸ್ಥಂಭ ಮತ್ತು ಸಾಂಚಿ ಸ್ತೂಪ(ಮೂರು). ಸಾಂಚಿಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲದೆ, ಯಾತ್ರಿಗಳು ಇಲ್ಲಿನ ಆಕರ್ಷಕ ಪ್ರಕೃತಿ ದೃಶ್ಯವನ್ನು ಸವಿಯಬಹುದು.

ಸಾಂಚಿಯನ್ನು ತಲುಪುವುದು ಹೇಗೆ?

ಸಾಂಚಿಯನ್ನು ತಲುಪುವುದು ಹೇಗೆ?

PC:Vivek Shrivastava

ಸಾಂಚಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ, ಭೋಪಾಲ್ ನ ರಾಜ ಭೋಜ್ ವಿಮಾನನಿಲ್ದಾಣ. ಯಾತ್ರಿಗಳು ಭೋಪಾಲ್ ವಿಮಾನ ನಿಲ್ದಾಣದಿಂದ ಸಾಂಚಿಯನ್ನು ಟ್ಯಾಕ್ಸಿ ಮೂಲಕ ತಲುಪಬಹುದು. ಸಾಂಚಿಗೆ ಹತ್ತಿರದ ರೈಲು ನಿಲ್ದಾಣ ಕೂಡ ಭೋಪಾಲ್ ನಲ್ಲಿದೆ. ಸಾಂಚಿಯಲ್ಲಿ ನವೆಂಬರ್ ಮತ್ತು ಫೆಬ್ರವರಿಯಲ್ಲಿ ಧಾರ್ಮಿಕ ಹಬ್ಬಗಳು ನಡೆಯುತ್ತವೆ. ಹಾಗಾಗಿ ಅಕ್ಟೋಬರ್ ನಿಂದ ಮಾರ್ಚ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಆರಾಮವಾಗಿ ತಿರುಗಾಡಿಕೊಂಡು ಬರಬಹುದು.

Read more about: india note rupees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X