Search
  • Follow NativePlanet
Share
» »ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ !

ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ !

ದೇಶದಲ್ಲಿ ಎಷ್ಟೆಲ್ಲಾ ದೇವರ ಮಂದಿರಗಳಿವೆ, ಗುಡಿಗಳಿವೆ. ಯಾವ ಯಾವ ರೂಪದಲ್ಲಿ ದೇವರನ್ನು ಪೂಜಿಸಲಾಗುತ್ತಿದೆ. ರಾಜಸ್ತಾನದಲ್ಲಿ ಬುಲೆಟ್ ಬೈಕ್‌ಗೆ ಪೂಜೆ ಮಾಡಲಾಗುತ್ತಿದೆ ಎಂದರೆ ಆಶ್ಚರ್ಯವಾಗದೇ ಇರಲಾರದು. ಬುಲೆಟ್ ಬೈಕ್‌ಗಾಗಿ ಮಂದಿರವನ್ನೂ ಕಟ್ಟಿಸಿದ್ದಾರೆ ಇಲ್ಲಿಯ ಜನ.

ಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆಇಲ್ಲಿ 27 ನಕ್ಷತ್ರಕ್ಕೂ ಶನಿ ಶಾಂತಿ ಹೋಮ ಮಾಡಿಸ್ತಾರಂತೆ

ಎಲ್ಲಿದೆ ಈ ಬುಲೆಟ್ ಬಾಬಾ ಮಂದಿರ

ಎಲ್ಲಿದೆ ಈ ಬುಲೆಟ್ ಬಾಬಾ ಮಂದಿರ

PC: Clément Bardot

ಓಂ ಬನ್ನಾ ಇದೊಂದು ಪುಣ್ಯಕ್ಷೇತ್ರ. ಇದನ್ನು ಓಂ ಬಾಬಾ ಹಾಗೂ ಬುಲೆಟ್ ಬಾಬಾ ಎಂದೂ ಕರೆಯಲಾಗುತ್ತದೆ. ಜೋದ್‌ಪುರದ ಬಳಿ ಇರುವ ಪಾಲಿ ಜಿಲ್ಲೆಯಲ್ಲಿ ಈ ದೇವಾಲಯವಿದೆ . ಇದು ಪಾಲಿಯಿಂದ 20 ಕಿ.ಮೀ ದೂರದಲ್ಲಿದೆ. ಹಾಗೂ ಜೋಧ್‌ಪುರದಿಂದ 50ಕಿ.ಮೀ ದೂರದಲ್ಲಿದೆ.

ಬುಲೆಟ್ ಬೈಕ್‌ಗೆ ಪೂಜೆ

ಬುಲೆಟ್ ಬೈಕ್‌ಗೆ ಪೂಜೆ

PC : Sentiments777
ಇಲ್ಲಿ 350ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಕೂಡಾ ಇದೆ. ಈ ಮಂದಿರವನ್ನು ನಿರ್ಮಿಸುವ ಯೋಜನೆಯನ್ನು ಹವಾಡದಲ್ಲಿ ಅನುತೋಷ್ ಬ್ಯಾನರ್ಜಿ ಮಾಡಿದರು. ಇಲ್ಲಿ ಪ್ರತಿನಿತ್ಯ ಬಹಳಷ್ಟು ಸಂಖ್ಯೆಯಲ್ಲಿ ಜನರು ಸುರಕ್ಷಿತ ಯಾತ್ರೆಯ ಪ್ರಾರ್ಥನೆ ಮಾಡಲು ಬರುತ್ತಾರೆ.

ಇದರ ಹಿಂದಿನ ಕಥೆ

ಇದರ ಹಿಂದಿನ ಕಥೆ

PC: Sentiments777
1988ರ ಡಿಸೆಂಬರ್ 2 ರಂದು ಓಂ ಬನ್ನಾ ಎನ್ನುವ ವ್ಯಕ್ತಿ ಪಾಲಿಯ ಹತ್ತಿರದ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಬೈಕ್‌ನ ನಿಯಂತ್ರಣ ತಪ್ಪಿ ಬೈಕ್ ಮರವೊಂದಕ್ಕೆ ಢಿಕ್ಕಿ ಹೊಡೆದು ಈ ಅಪಘಾತದಲ್ಲಿ ಓಂ ಬನ್ನಾ ಸಾವನ್ನಪ್ಪಿದ್ದರು. ಈ ಘಟನೆ ನಡೆದ ಮರುದಿನ ಸಮೀಪದ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಓಂ ಬನ್ನಾರ ಬುಲೆಟ್ ಬೈಕ್‌ನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು.

ಮತ್ತೆ ಪ್ರತ್ಯಕ್ಷವಾಗುತ್ತಿದ್ದ ಬೈಕ್

ಮತ್ತೆ ಪ್ರತ್ಯಕ್ಷವಾಗುತ್ತಿದ್ದ ಬೈಕ್

PC: Daniel Villafruela

ಆದರೆ ಮರುದಿನ ಬೆಳಗೆ ಬೈಕ್ ಮತ್ತೆ ಆ ಘಟನಾ ಸ್ಥಳದಲ್ಲೇ ಪ್ರತ್ಯಕ್ಷವಾಗುತ್ತಿತ್ತು. ಪೊಲೀಸರು ಮತ್ತೆ ಅಲ್ಲಿಂದ ಬೈಕ್‌ನ್ನು ಪೊಲೀಸ್‌ ಠಾಣೆ ಕೊಂಡೊಯ್ದು ಬೈಕ್‌ನ ಪೆಟ್ರೋಲ್ ಖಾಲಿ ಮಾಡಿ, ಚೈನ್‌ನಿಂದ ಕಟ್ಟಿಹಾಕಿ ಇಡುತ್ತಿದ್ದರು. ಆದರೂ ಮರುದಿನ ಬೆಳಗ್ಗೆ ಬೈಕ್ ಮತ್ತೆ ಘಟನಾ ಸ್ಥಳದಲ್ಲೇ ಇರುತ್ತಿತ್ತು. ಇದರಿಂದ ಪೊಲೀಸರ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ

PC: Sentiments777
ಈ ಚಮತ್ಕಾರವನ್ನು ನೋಡಲು ಸ್ಥಳೀಯ ಜನರು ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದರು. ಕ್ರಮೇಣ ಆ ಬುಲೆಟ್ ಬೈಕ್‌ನ ಪೂಜೆ ಮಾಡಲು ಪ್ರಾರಂಭಿಸಿದರು. ಚಮತ್ಕಾರದ ಈ ಕಥೆ ಅತೀ ಶೀಘ್ರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೂ ಹಬ್ಬಿತು. ಬೈಕ್‌ಗೆ ಒಂದು ಮಂದಿರವನ್ನೂ ನಿರ್ಮಿಸಲಾಯಿತು.

ಇಲ್ಲಿ ಪ್ರಾರ್ಥನೆ ಮಾಡಿದರೆ ಯಾತ್ರೆ ಸುಗಮ

ಇಲ್ಲಿ ಪ್ರಾರ್ಥನೆ ಮಾಡಿದರೆ ಯಾತ್ರೆ ಸುಗಮ

PC: Daniel Villafruela
ಆ ಮಂದಿರ ಬುಲೆಟ್ ಬಾಬಾ ಮಂದಿರ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿತು. ಇಲ್ಲಿ ಪ್ರಾರ್ಥನೆ ಮಾಡುವುದರಿಂದ ದೂರ ದೂರದ ಯಾತ್ರೆ ಸುಗಮವಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು.

Read more about: rajasthan temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X