Search
  • Follow NativePlanet
Share
» »15 ದಿನದಲ್ಲಿ ಒಬ್ಬರೇ ಇಡೀ ದಕ್ಷಿಣ ಭಾರತದ ಪ್ರವಾಸ ಮಾಡಲು ಇಲ್ಲಿದೆ ಕಂಪ್ಲೀಟ್ ಟ್ರಾವೆಲ್ ಗೈಡ್

15 ದಿನದಲ್ಲಿ ಒಬ್ಬರೇ ಇಡೀ ದಕ್ಷಿಣ ಭಾರತದ ಪ್ರವಾಸ ಮಾಡಲು ಇಲ್ಲಿದೆ ಕಂಪ್ಲೀಟ್ ಟ್ರಾವೆಲ್ ಗೈಡ್

ದಕ್ಷಿಣ ಭಾರತವು ಭಾರತದಲ್ಲೆ ಅತ್ಯಂತ ರಮಣೀಯ ಮತ್ತು ಸಾಟಿಯಿಲ್ಲದ ಮೋಡಿ ಮಾಡುವ ಸೌಂದರ್ಯವನ್ನು ಹೊಂದಿದ್ದು ಅತಿ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ದಕ್ಷಿಣ ಭಾರತವು ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುವ ಸುಂದರವಾದ ಪ್ರದೇಶವಾಗಿದ್ದು ಚಳಿಗಾಲದಲ್ಲಿ ಈ ಪ್ರದೇಶದ ಸೌಂದರ್ಯ ಇನ್ನಷ್ಟು ಆಕರ್ಷಕವಾಗಿರುತ್ತದೆ.

ದಕ್ಷಿಣ ಭಾರತದ ನಿಜವಾದ ಸೌಂದರ್ಯವನ್ನು ಅನುಭವಿಸಲು ನಾವು ನಿಮಗೆ ಎರಡು ವಾರಗಳ ಪ್ರಯಾಣ ಮಾರ್ಗದರ್ಶಿಯನ್ನು ನೀಡುತ್ತಿದ್ದೇವೆ. ಈ ಹದಿನೈದು ದಿನಗಳ ಸಂಕ್ಷಿಪ್ತ ಮಾರ್ಗದರ್ಶಿ ದಕ್ಷಿಣ ಭಾರತವನ್ನು ಅನ್ವೇಷಿಸಲು ಯೋಜಿತ ವಿವರ ಮತ್ತು ಸಲಹೆಗಳನ್ನೂ ನೀಡುತ್ತದೆ. ನೀವು ಕ್ಯಾಮೆರಾ ಇಟ್ಕೊಂಡ್ ದಕ್ಷಿಣ ಭಾರತದ ಪ್ರಮುಖ ಕಾಡು ಮೇಡುಗಳಿಂದ, ಪ್ರಶಾಂತ ಕೇರಳ ಹಿನ್ನೀರಿನಿಂದ ಪುರಾತನ ದೇವಾಲಯಗಳವರೆಗೆ ಮತ್ತು ಕಾಡು ಪ್ರಾಣಿಗಳನ್ನು ಅನ್ವೇಷಿಸಬಹುದು. ಈ ಚಳಿಗಾಲದ ಯಾವುದೇ ಎರಡು ವಾರಗಳಲ್ಲಿ ದಕ್ಷಿಣ ಭಾರತದ ಅದ್ಬುತ ಪ್ರದೇಶಗಳನ್ನು ಅನ್ವೇಷಿಸುತ್ತ "ಇನ್ಕ್ರೆಡಿಬಲ್ ಇಂಡಿಯಾ" ಎಂಬ ಶೀರ್ಷಿಕೆಯನ್ನು ಈ ಹದಿನೈದು ದಿನಗಳಲಲ್ಲಿ ನಿಜವಾಗಿಯೂ ಅರ್ಥಮಾಡಿಕೊಳ್ಳಬಹುದು.

ರೈಲು, ಬಸ್, ರಿಕ್ಷಾ ಮತ್ತು ಹೌಸ್‌ಬೋಟ್‌ಗಳ ಮೂಲಕ ಪ್ರಯಾಣಿಸುವುದು ತಮಿಳುನಾಡಿನ ವಾಸ್ತುಶಿಲ್ಪದ ಅದ್ಭುತಗಳು ಮತ್ತು ಕೇರಳದ ಪ್ರಶಾಂತ ಹಿನ್ನೀರಿನ ಒಳನೋಟವನ್ನುತುಂಬಾ ಹತ್ತಿರದಿಂದ ಅರಿಯಲು ಒಂದು ಉತ್ತಮ ಮಾರ್ಗವಾಗಿದೆ.

ಹದಿನೈದು ದಿನಗಳ ಕಾಲ ದಕ್ಷಿಣ ಭಾರತದಲ್ಲಿ ನೀವು ನೋಡಬಹುದಾದ ಮತ್ತು ಮಾಡಬಹುದಾದ ಚಟುವಟಿಕೆಗಳು.

ಕೊಚ್ಚಿಯ ಅದ್ಬುತ ಕೋಟೆಗಳು

ವಯನಾಡ್ ವನ್ಯಜೀವಿ ಅಭಯಾರಣ್ಯ

ಚಾಮುಂಡಿ ದೇವಸ್ಥಾನ ಮತ್ತು ಮೈಸೂರು ಅರಮನೆ

ಮಾಮಲ್ಲಾಪುರಂ ದೇವಾಲಯಗಳು

ಪಾಂಡಿಚೆರಿ ಆಶ್ರಮಗಳು

ಮಧುರೈ ಉದ್ದಕ್ಕೂ ಸೈಕಲ್-ರಿಕ್ಷಾ ಸವಾರಿ

ಏಲಕ್ಕಿ ಹಿಲ್ಸ್ ಮಸಾಲೆ ತೋಟ

ಕೇರಳದಲ್ಲಿ ಹೋಂಸ್ಟೇ

ಚಳಿಗಾಲದಲ್ಲಿ ದಕ್ಷಿಣ ಭಾರತದಲ್ಲಿ ನೀವು ಭೇಟಿ ನೀಡಬಹುದಾದ ಕೆಲವು ಅತ್ಯುತ್ತಮ ತಾಣಗಳು ಮೇಲೆ ತಿಳಿಸಲಾಗಿದೆ. ಆದರೆ ಎರಡು ವಾರಗಳಲ್ಲಿ ಈ ಅನೇಕ ಚಟುವಟಿಕೆಗಳು ಮತ್ತುತಾಣಗಳನ್ನು ಹೇಗೆ ನೋಡುವುದು ಎಂದು ನೀವು ಯೋಚಿಸುತ್ತಿದ್ದರೆ? ಚಿಂತಿಸಬೇಡಿ! ನಾವು ನಿಮಗಾಗಿ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಿದ್ದೇವೆ ! ಈ ವೇಳಾಪಟ್ಟಿ ಪರಿಪೂರ್ಣವಾಗಿದ್ದು, ನೀವು ಇದನ್ನ ಫಾಲೋ ಮಾಡಿದರೆ ಕೇವಲ ಎರಡು ವಾರಗಳಲ್ಲಿ ನೀವು ಒಂದು ತಿಂಗಳಾದ ಪ್ರವಾಸವನ್ನು ಪೂರ್ಣಗೊಳಿಸಬಹುದು.

ಜಗತ್ತಿನಲ್ಲಿ ಯಾವುದೇ ಸ್ಥಳವನ್ನು ಒಂದು ದಿನದಲ್ಲಿ ಸಂಪೂರ್ಣವಾಗಿ ಅನ್ವೇಷಿಸಲು ಸಾಧ್ಯವಿಲ್ಲ. ಆದಾಗ್ಯೂ, ಭೇಟಿ ನೀಡುವ ಸ್ಥಳದ ಸಂಸ್ಕೃತಿ ಮತ್ತು ಅದರ ಬಗ್ಗೆ ತಿಳಿಯಲು ಒಂದು ಅಥವಾ ಎರಡು ದಿನ ಸಾಕು. ಆದ್ದರಿಂದ, ಹದಿನೈದು ದಿನಗಳು ಸ್ಥಳಗಳನ್ನು ಅನ್ವೇಷಿಸಲು ಸರಿಯಾಗುತ್ತದೆ.

ನೀವು ಒಬ್ಬರೇ ಈ ಋತುವಿನಲ್ಲಿ ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನೂ ಸೀಮಿತ ಸಮಯದಲ್ಲಿ ನೋಡಲು ಬಯಸಿದರೆ ನಾವು ನಿಮಗೆ ಸಂಕ್ಷಿಪ್ತ ಮತ್ತು ಉಪಯುಕ್ತ ಪ್ಲಾನ್ ನನ್ನು ನೀಡಿದ್ದೇವೆ. ಈ ಸಂಪೂರ್ಣ ಪ್ರವಾಸವು 1700 ಕಿ.ಮೀ ಭೂಪ್ರದೇಶವು ನಲವತ್ತು ಗಂಟೆಗಳ ಪ್ರಯಾಣವಾಗಿದೆ. ನಿಮ್ಮ ಅನುಕೂಲಕ್ಕಾಗಿ ನೀವು ಈ ಪ್ಲಾನ್ಗೆ ಇನ್ನಷ್ಟು ಚಟುವಟಿಕೆಗಳನ್ನು ಸೇರಿಸಬಹುದು ಅಥವಾ ತೆಗೆದು ಹಾಕಬಹುದು. ಆದರೆ, ಈ ಪ್ರವಾಸವನ್ನು 14 ದಿನಗಳಲ್ಲಿ ಪೂರ್ಣಗೊಳಿಸುವ ಯೋಚನೆ ಇದೆ. ಆದ್ದರಿಂದ, ಈ ಪ್ಲಾನ್ ಅನ್ನು ಅನುಸರಿಸುವುದು ಉತ್ತಮ.

1 ಮತ್ತು 2 ನೆ ದಿನ

1 ಮತ್ತು 2 ನೆ ದಿನ

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಗರದ ಹೃದಯಭಾಗದಲ್ಲಿದ್ದು ಇಲ್ಲಿಂದ ನಿಯಮಿತವಾಗಿ ವಿಮಾನಗಳು ಭಾರತದ ಇತರ ಪ್ರಮುಖ ನಗರಗಳಿಂದ ಸಂಪರ್ಕಿಸುತ್ತವೆ. ಆದ್ದರಿಂದ ನಿಮ್ಮ ಹದಿನೈದು ದಿನದ ದಕ್ಷಿಣ ಭಾರತ ಪ್ರವಾಸವನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸ್ಥಳವಾಗಿದೆ. ಮೊದಲಿಗೆ, ರುಚಿಕರವಾದ ಸ್ಥಳೀಯ ಪಾಕಪದ್ಧತಿಯನ್ನು ಸವಿಯುತ್ತ. ಮಧ್ಯಾಹದ ಊಟದ ನಂತರ, ನೀವು ಕೊಚ್ಚಿ ಕೋಟೆಯನ್ನು ಅನ್ವೇಷಿಸಬಹುದು. ಸಂಜೆ, ಕೇರಳದ ಸಾಂಪ್ರದಾಯಿಕ ನೃತ್ಯದ ಒಂದು ಪ್ರಕಾರವಾದ ಕಥಕ್ಕಳಿ ಪ್ರದರ್ಶನವನ್ನು ಆನಂದಿಸಲು ಕೇರಳದ ಪ್ರಸಿದ್ಧ ಕಥಕ್ಕಳಿ ಕೇಂದ್ರಕ್ಕೆ ಭೇಟಿ ನೀಡಬಹುದು. ಈ ಪ್ರದರ್ಶನಗಳನ್ನು ಹವಾನಿಯಂತ್ರಿತ ಗ್ಯಾಲರಿಯಲ್ಲಿ ಪ್ರತಿದಿನ ಸಂಜೆ 6:00 ರಿಂದ 7:30 ರವರೆಗೆ ನಡೆಸಲಾಗುತ್ತದೆ.

ಇತರ ಪ್ರವಾಸಿ ಆಕರ್ಷಣೆಗಳಾದ ಯಹೂದಿ ಸಿನಗಾಗ್, ವಿಲ್ಲಿಂಗ್ಡನ್ ದ್ವೀಪ, ಮೆರೈನ್ ಡ್ರೈವ್ ಮತ್ತು ಕಲಾಡಿಗಳನ್ನು ಭೇಟಿ ಮಾಡಲು ಮತ್ತೊಂದು ದಿನವನ್ನು ಕಳೆಯಿರಿ. ಆದಾಗ್ಯೂ, ನಿಮ್ಮ ಪ್ರಯಾಣದ ಮೂರನೇ ದಿನದಂದು ಕಲ್ಪೆಟ್ಟಾಗೆ ಹೋಗಲು ನೀವು ರಾತ್ರಿ ರೈಲು ಹಿಡಿಯುವುದನ್ನು ಮರೆಯಬೇಡಿ.

3 ಮತ್ತು 4 ನೆ ದಿನ

3 ಮತ್ತು 4 ನೆ ದಿನ

ಕಲ್ಪೆಟ್ಟ - ವಯನಾಡ್ ಜಿಲ್ಲೆಯ ನೀಲಂಬೂರು ರಸ್ತೆಯನ್ನು ತಲುಪಲು ಬೆಳಗಿನ 8 ಗಂಟೆಗಳ ರುದ್ರ ರಮಣೀಯ ಪ್ರಯಾಣದ ಮೂಲಕ ರೈಲಿನಲ್ಲಿ ಪ್ರಯಾಣಿಸಿ. ಕಲ್ಪೆಟ್ಟಾಗೆ ರೈಲ್ವೆ ನಿಲ್ದಾಣವಿಲ್ಲ. ಆದಾಗ್ಯೂ, ನೀವು ನೀಲಂಬೂರು ರಸ್ತೆಯಿಂದ ಕಲ್ಪೆಟ್ಟೆಗೆ ಬಸ್ ಪಡೆಯಬಹುದು, ಇದು 3 ಗಂಟೆಗಳ ಡ್ರೈವ್ ಆಗಿದೆ.

ದಣಿವನ್ನು ನಿವಾರಿಸಲು ನೀವು ಒಂದೆರಡು ಗಂಟೆಗಳ ವಿರಾಮ ತೆಗೆದುಕೊಳ್ಳಬಹುದು. ಸುಧಾರಿಸಿಕೊಂಡು ನೀವು ಮೂರನೆಯ ದಿನ ಕಲ್ಪೆಟ್ಟಾದ ಅರಣ್ಯ ಪ್ರದೇಶಗಳ ಮೂಲಕ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಇದು ನಿಮಗೆ ಅಷ್ಟು ಆಕರ್ಷಕವೆನಿಸದಿದ್ದರೆ, ನಾಲ್ಕನೇ ದಿನ ಆನೆಗಳು ಮತ್ತು ಕಾಡೆಮ್ಮೆ ಗಳನ್ನೂ ಹುಡುಕುತ್ತಾ ವನ್ಯಜೀವಿ ಸಫಾರಿಯನ್ನು ಮಾಡಬಹುದು, ಸಂಜೆ ಮೈಸೂರಿಗೆ ಸ್ಥಳೀಯ ಅಥವಾ ಪ್ರವಾಸಿ ಬಸ್ ಹಿಡಿಯಿರಿ.

4 ಮತ್ತು 5 ನೆ ದಿನ

4 ಮತ್ತು 5 ನೆ ದಿನ

ಮೈಸೂರು - ಇದು ಕಲ್ಪೆಟ್ಟಾದಿಂದ ಕೇವಲ ಒಂದೆರಡು ಗಂಟೆಗಳ ಪ್ರಯಾಣವಾಗಿದ್ದು ಇದು ಸುಮಾರು 125 ಕಿ.ಮೀ ದೂರದಲ್ಲಿದೆ. ನೀವು ಮೈಸೂರ್ ತಲುಪಿದಾಗ, ಪ್ರಾಚೀನ ನಗರವನ್ನು ಅನ್ವೇಷಿಸಲು ಬೈಕು ಅಥವಾ ಕಾರನ್ನು ಬಾಡಿಗೆಗೆ ತೆಗೆದುಕೊಳ್ಳಿ.ಇದರಿಂದ ನಿಮಗೆ ಈ ನಗರದ ಸೌಂದರ್ಯವನ್ನು ಪೂರ್ತಿಯಾಗಿ ಸವಿಯಲು ಸಾಕಷ್ಟು ಸಮಯ ದೊರೆಯುತ್ತದೆ. ಮೈಸೂರು ಅರಮನೆ, ಚಾಮುಂಡಿ ದೇವಸ್ಥಾನ, ಮೈಸೂರು ಮೃಗಾಲಯ ಮೈಸೂರಿನಲ್ಲಿ ನೋಡಲೇಬೇಕಾದ ಕೆಲವು ಆಕರ್ಷಣೆಗಳು. ಹೇಗಾದರೂ ಸರಿ, ರಾತ್ರಿಯಲ್ಲಿ ಝಗಝಗಿಸುವ ಮೈಸೂರು ಅರಮನೆಯ ದೃಶ್ಯವನ್ನು ನೋಡುವುದು ಮರೆಯಬೇಡಿ. ಮಾಮಲ್ಲಾಪುರಂ ನಿಮ್ಮ ಮುಂದಿನ ತಾಣವಾಗಿದೆ.

6 ಮತ್ತು 7 ನೆ ದಿನ

6 ಮತ್ತು 7 ನೆ ದಿನ

ಮಾಮಲ್ಲಾಪುರಂ - ಮೈಸೂರಿನಿಂದ ಚೆನ್ನೈಗೆ 9 ಗಂಟೆಗಳ ರೈಲು ಪ್ರಯಾಣವು ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯವನ್ನು ನೀಡುತ್ತದೆ. ಒಮ್ಮೆ ನೀವು ಚೆನ್ನೈನಲ್ಲಿದ್ದರೆ, ನೀವು ಮಾಮಲ್ಲಾಪುರಕ್ಕೆ ಬಸ್ ಪ್ರಯಾಣವನ್ನು ಪಡೆಯಬಹುದು. ನಂತರ ನೀವು ಶೋರ್ ಟೆಂಪಲ್ ಮತ್ತು ಇತರ ಪುರಾತನ ಸ್ಮಾರಕಗಳಿಗೆ ಭೇಟಿ ನೀಡಬಹುದು. ನೀವು 2 ದಿನಗಳಲ್ಲಿ ಮಾಮಲ್ಲಾಪುರವನ್ನು ಇನ್ನಷ್ಟು ಅನ್ವೇಷಿಸಬಹುದು.

8 ಮತ್ತು 9 ನೆ ದಿನ

8 ಮತ್ತು 9 ನೆ ದಿನ

ಪುದುಚೇರಿ - ಮಾಮಲ್ಲಾಪುರಂನಿಂದ ಒಂದು ಗಂಟೆ ಪ್ರಯಾಣವು ನಿಮ್ಮನ್ನು ಪುದುಚೇರಿಯ ಪ್ರಶಾಂತ ಬೀಚ್ ಸ್ವರ್ಗಕ್ಕೆ ಕರೆದೊಯ್ಯುತ್ತದೆ. ಈ ನಗರವನ್ನು ಅನ್ವೇಷಿಸುವುದರ ಜೊತೆಗೆ ಇಲ್ಲಿನ, ಅಧಿಕೃತ ಪಾಕಪಟ್ಟದಿಯನ್ನು ಸವಿಯಿರಿ ಮತ್ತು ಶಾಂತ ಕಡಲತೀರದಲ್ಲಿ ಆಟವಾಡಿ.

ಪುದುಚೇರಿಯಲ್ಲಿ ಅನೇಕ ಆಶ್ರಮಗಳಿವೆ, ನೀವು ಇಲ್ಲಿನ ಯಾವುದಾದರೊಂದು ಆಶ್ರಮದಲ್ಲಿ ಒಂದು ರಾತ್ರಿ ಉಚಿತವಾಗಿ ಕಳೆಯಬಹುದು. ಅದೇನೇ ಇದ್ದರೂ, ನೀವು ಆಶ್ರಮದಲ್ಲಿರುವಾಗ ಶ್ರೀ ಅರಬಿಂದೋ ಘೋಸ್ ಮತ್ತು ಪುದುಚೇರಿಯ ಇತಿಹಾಸದ ಬಗ್ಗೆ ತಿಳಿಯಲು ಸ್ವಲ್ಪ ಸಮಯವನ್ನು ಮೀಸಲಿಡಿ.

10 ಮತ್ತು 11 ನೆ ದಿನ

10 ಮತ್ತು 11 ನೆ ದಿನ

ಮಧುರೈ - ಇದು ಪುದುಚೇರಿಯಿಂದ ಸುಮಾರು 330 ಕಿ.ಮೀ ದೂರದಲ್ಲಿದ್ದು ಇಲ್ಲಿಗೆ ತಲುಪಲು ಸುಮಾರು 6 ಗಂಟೆ ತೆಗೆದುಕೊಳ್ಳುತ್ತದೆ. ಮಧುರೈ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆದ್ದರಿಂದ ಈ ಪಟ್ಟಣದ ಪ್ರವಾಸಕ್ಕಾಗಿ ಸೈಕಲ್-ರಿಕ್ಷಾ ಏರಿ ಮತ್ತು ದಾರಿಯುದ್ದಕ್ಕೂ ಇತರ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಿ.

ಭಾರತದ ಅತ್ಯಂತ ಹಳೆಯ ನಗರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸ್ಥಳೀಯ ಪಾಕಪದ್ಧತಿಯಲ್ಲಿ ಪಾಲ್ಗೊಳ್ಳಿ, ಕಾಲಿವುಡ್ ಚಲನಚಿತ್ರಗಳನ್ನೂ ವೀಕ್ಷಿಸಿ ಅಥವಾ ಸ್ಥಳೀಯರೊಂದಿಗೆ ಸಂಭಾಷಣೆ ನಡೆಸಿ. ಮುಂದಿನ ಗಮ್ಯಸ್ಥಾನ ತೆಕ್ಕಡಿ.

12 ನೇ ದಿನ

12 ನೇ ದಿನ

ತೆಕ್ಕಡಿ - ತೆಕ್ಕಡಿಗೆ ತೆರಳಲು ನೀವು ಬಸ್ ಸೇವೆಯನ್ನು ಪಡೆಯಬಹುದು. ಇದು ಮಧುರೈನಿಂದ ಸುಮಾರು 140 ಕಿ.ಮೀ ದೂರದಲ್ಲಿದೆ. ಏಲಕ್ಕಿ ಬೆಟ್ಟಗಳಲ್ಲಿನ ಮಸಾಲೆ ತೋಟಗಳು ತೆಕ್ಕಡಿಯಲ್ಲಿ ನೋಡಲೇಬೇಕಾದ ಆಕರ್ಷಣೆಯಾಗಿವೆ. ಮಸಾಲೆ ತೋಟಗಳ ಮಾರ್ಗದರ್ಶಿ ಪ್ರವಾಸವು ಈ ಸಣ್ಣ ಹಳ್ಳಿಗಳ ಗತ ಕಾಲದ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲುತ್ತದೆ. ಇದಲ್ಲದೆ, ಅದರ ಅಧಿಕೃತ ಸ್ಥಳೀಯ ಪಾಕಪದ್ಧತಿಗೆ ತೆಕ್ಕಡಿ ಹೆಸರುವಾಸಿಯಾಗಿದೆ. ತೆಕ್ಕಡಿ ಅನ್ವೇಷಿಸಲು ಒಂದು ದಿನ ಸಾಕು. ಇದನ್ನು ಮುಗಿಸಿಕೊಂಡು ನಿಮ್ಮ ಪ್ರಯಾಣವನ್ನು ಅಲೆಪ್ಪಿಗೆ ಮುಂದುವರೆಸಿ.

13 ಮತ್ತು 14 ನೆ ದಿನ

13 ಮತ್ತು 14 ನೆ ದಿನ

ಅಲ್ಲೆಪ್ಪಿ - ತೆಕ್ಕಡಿಯಿಂದ ಅಲೆಪ್ಪಿಗೆ ಆಗಾಗ್ಗೆ ಬಸ್ಸುಗಳಿವೆ. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳ ಮಧ್ಯೆ ನಾಲ್ಕು ಗಂಟೆಗಳ ಪ್ರಯಾಣವಾಗಿದೆ. ಉತ್ತಮ ಹಿನ್ನೀರಿನ ಅನುಭವಕ್ಕಾಗಿ ಸ್ಥಳೀಯ ಹೋಂಸ್ಟೇನಲ್ಲಿ ಒಂದು ದಿನ ಕಳೆಯಿರಿ. ಸೆರೆಹಿಡಿದ ಎಲ್ಲಾ ಚಿತ್ರಗಳನ್ನು ಪ್ರಯಾಣದ ಮೂಲಕ ನೋಡಿ ನಿಮ್ಮ ನೆನಪುಗಳನ್ನು ಮತ್ತೆ ಮೆಲುಕುಹಾಕಿಕೊಳ್ಳಿ.ಕೊಳ್ಳುತ್ತಾ ಈ ಪ್ಲಾನ್ ಅನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಮೇಲೆ ನಿಮ್ಮ ಭುಜದ ಮೇಲೆ ನೀವೇ ತತ್ತಿ ಕೊಳ್ಳಿ ಮತ್ತು ಎರಡು ವಾರಗಳಲ್ಲಿ ನಿಮ್ಮ ಯಶಸ್ವಿ ಪ್ರಯಾಣವನ್ನು ಪೂರ್ಣಗೊಳಿಸಲು ಕೊಚ್ಚಿಗೆ ಹಿಂತಿರುಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X