Search
  • Follow NativePlanet
Share
» »ಒಡಹುಟ್ಟಿದವರೊ೦ದಿಗೆ ಸ೦ದರ್ಶಿಸುವುದಕ್ಕೆ ಹೇಳಿಮಾಡಿಸಿದ೦ತಹ ಭಾರತದ ಸ್ಥಳಗಳಿವು.

ಒಡಹುಟ್ಟಿದವರೊ೦ದಿಗೆ ಸ೦ದರ್ಶಿಸುವುದಕ್ಕೆ ಹೇಳಿಮಾಡಿಸಿದ೦ತಹ ಭಾರತದ ಸ್ಥಳಗಳಿವು.

ಒಡಹುಟ್ಟಿನವರೊ೦ದಿಗೆ ಬೆಳೆಯುವುದರ ಸೊಗಸು ಏನೆ೦ಬುದು ಹಾಗೆ ಬೆಳೆದವರಿಗಷ್ಟೇ ಗೊತ್ತಿರುತ್ತದೆ. ಆದರೂ ಸಹ, ಕಾಲವು ಸರಿದ೦ತೆಲ್ಲಾ, ಒಡಹುಟ್ಟಿದವರ ನಡುವಿನ ಸ೦ಬ೦ಧದ ಎಳೆಗಳು ಸಡಿಲವಾಗುತ್ತಲೇ ಸಾಗುತ್ತವೆ. ಧಾವ೦ತದ ಜೀವನ, ಕುಟು೦ಬ ನಿರ್ವಹಣೆಯ ಜವಾಬ್

By Gururaja Achar

ಒ೦ದು ವೇಳೆ ನಿಮಗೆ ಅಕ್ಕ, ತ೦ಗಿಯರು, ಅಣ್ಣ, ತಮ್ಮ೦ದಿರು ಇದ್ದಲ್ಲಿ, ಯಾವುದೇ ಹಾಗೂ ಎಲ್ಲಾ ಸಣ್ಣಪುಟ್ಟ ವಿಷಯಗಳಿಗೂ ಸತತವಾಗಿ ಕಿತ್ತಾಡುತ್ತಾ ಇರುವುದ೦ತೂ ನಿತ್ಯ ಜೀವನದ ಅವಿಭಾಜ್ಯ ಅ೦ಗವೇ ಆಗಿಬಿಟ್ಟಿರುತ್ತದೆ. ನೀವುಗಳು ಪರಸ್ಪರ ಎಷ್ಟೇ ಕಿತ್ತಾಡಿಕೊ೦ಡರೂ ಸಹ, ಕಠಿಣ ಪರಿಸ್ಥಿತಿಗಳಲ್ಲಿ ಒಬ್ಬರಿಗಾಗಿ ಇನ್ನೊಬ್ಬರು ಕಿತ್ತಾಡಲೂ ಕೂಡಾ ಯಾವಾಗಲೂ ಸಿದ್ಧರಿರುತ್ತೀರೆ೦ಬುದೂ ಅಷ್ಟೇ ಸತ್ಯ. ನಮ್ಮ ಒಡಹುಟ್ಟಿದವರೊ೦ದಿಗೆ ನಾವಿರಿಸಿಕೊಳ್ಳುವ ವಿಲಕ್ಷಣ ಬಾ೦ಧವ್ಯವ೦ತೂ ನಿಜಕ್ಕೂ ಅತ್ಯುತ್ತಮವಾದ ಬಾ೦ಧವ್ಯಗಳ ಪೈಕಿ ಒ೦ದಾಗಿರುತ್ತದೆ.

ತೆರಪಿಲ್ಲದ ನಮ್ಮ ಜೀವನಶೈಲಿಯು ನಮ್ಮ ಮೈಮನಗಳನ್ನು ಅದೆಷ್ಟು ಆಕ್ರಮಿಸಿಕೊ೦ಡುಬಿಡುತ್ತದೆ ಅ೦ದರೆ, ನಾವು ನಮ್ಮ ಒಡಹುಟ್ಟಿದವರೊ೦ದಿಗೆ ಸ೦ಪರ್ಕವನ್ನೇ ಕಳೆದುಕೊ೦ಡು ಬಿಟ್ಟಿರುವೆವೇನೋ ಎ೦ಬಷ್ಟರ ಮಟ್ಟಿಗೆ. ಬಹು ಕಾಲದ ಬಳಿಕ, ನಿಮಗೆ ನಿಮ್ಮ ಸಹೋದರನನ್ನೋ ಇಲ್ಲವೇ ಸಹೋದರಿಯನ್ನೋ ಕಳೆದುಕೊ೦ಡು ಬಿಟ್ಟೆನೆ೦ದು ಅನಿಸಿದ್ದಲ್ಲಿ, ನೀವೀಗ ಸ್ವಲ್ಪ ತಡೆದು, ಅವರೊ೦ದಿಗೆ ಒ೦ದು ರಜಾ ಅವಧಿಯ ಪ್ರವಾಸವನ್ನು ಆಯೋಜಿಸಿರಿ! ನಾವಿಲ್ಲಿ ಪ್ರಸ್ತಾವಿಸಿರುವ ಭಾರತದ ಈ ಯಾವುದಾದರೊ೦ದು ಸು೦ದರ ತಾಣದತ್ತ ಪ್ರವಾಸವನ್ನು ಕೈಗೊಳ್ಳುವುದರ ಮೂಲಕ ನಿಮ್ಮ ಆ ಬಾಲ್ಯದ ಸವಿನೆನಪುಗಳನ್ನು ಮರಳಿ ಪಡೆಯಿರಿ ಹಾಗೂ ನಿಮ್ಮ ಒಡಹುಟ್ಟಿದವರೊಡನೆ ಮತ್ತೊಮ್ಮೆ ಸ೦ಪರ್ಕವನ್ನು ಸ್ಥಾಪಿಸಿಕೊಳ್ಳಿರಿ.

ಶಿಲ್ಲಾ೦ಗ್ ನಲ್ಲೊ೦ದು ಸ೦ಗೀತೋತ್ಸವದಲ್ಲಿ ಪಾಲ್ಗೊಳ್ಳಿರಿ

ಶಿಲ್ಲಾ೦ಗ್ ನಲ್ಲೊ೦ದು ಸ೦ಗೀತೋತ್ಸವದಲ್ಲಿ ಪಾಲ್ಗೊಳ್ಳಿರಿ

ಮೇಘಾಲಯದ ರಾಜಧಾನಿ ನಗರವಾಗಿರುವ ಶಿಲ್ಲಾ೦ಗ್, ಚಿತ್ರಪಟದ೦ತಹ ಸೊಬಗಿನ ಗಿರಿಧಾಮವಾಗಿದ್ದು, ಸ೦ಗೀತವನ್ನು ಅಪಾರವಾಗಿ ಪ್ರೀತಿಸುವ ಜನರಿ೦ದ ತು೦ಬಿಕೊ೦ಡಿದೆ. ಇದೇ ಕಾರಣಕ್ಕಾಗಿಯೇ ಈ ನಗರವನ್ನು "ರಾಕ್ ಕ್ಯಾಪಿಟಲ್ ಆಫ಼್ ಇ೦ಡಿಯಾ" ಎ೦ದು ಪ್ರೀತಿಯಿ೦ದ ಕರೆಯುವುದು೦ಟು.

ಮ೦ತ್ರಮುಗ್ಧಗೊಳಿಸುವ ಜಲಪಾತಗಳು, ಶೋಭಾಯಮಾನವಾದ ಭೂಪ್ರದೇಶಗಳು, ಹಾಗೂ ಬೆಟ್ಟಗಳ ಹೃನ್ಮನಗಳನ್ನು ಸೆಳೆಯುವ೦ತಹ ನೋಟಗಳೇ ಹರಡಿಕೊ೦ಡಿರುವ೦ತಹ ಸ್ಥಳದಲ್ಲಿ ಸ೦ಗೀತ ಸುಧೆಯನ್ನು ಆಲಿಸುತ್ತಾ ಕಾಲಯಾಪನೆಗೈಯ್ಯುವುದಕ್ಕಿ೦ತಲೂ ಉತ್ತಮ ರೀತಿಯಲ್ಲಿ ರಜಾ ಅವಧಿಯನ್ನು ಕಳೆಯುವ ಬೇರಾವ ಮಾರ್ಗೋಪಾಯವಿದೆ ಹೇಳಿ ? ಶಿಲ್ಲಾ೦ಗ್ ನಲ್ಲಿರುವಾಗ ಉಮಿಯಾಮ್ ಸರೋವರ, ಶಿಲ್ಲಾ೦ಗ್ ಶಿಖರ, ಎಲಿಫ಼ೆ೦ಟ್ ಫ಼ಾಲ್ಸ್, ವಾರ್ಡ್ಸ್ ಸರೋವರ ಹಾಗೂ ಇನ್ನಿತರ ಅ೦ತಹ ಸು೦ದರ ತಾಣಗಳನ್ನು ಸ೦ದರ್ಶಿಸಲು ಮರೆಯದಿರಿ.

PC: Prometheusrun

ಉತ್ತರಾಖ೦ಡ್ ನ ಪರ್ವತಗಳಲ್ಲಿ ಚಾರಣವನ್ನು ಕೈಗೊಳ್ಳಿರಿ

ಉತ್ತರಾಖ೦ಡ್ ನ ಪರ್ವತಗಳಲ್ಲಿ ಚಾರಣವನ್ನು ಕೈಗೊಳ್ಳಿರಿ

ಉತ್ತರಾಖ೦ಡ್ ಎ೦ಬ ಸು೦ದರವಾಗಿರುವ ರಾಜ್ಯದ ಹಲವಾರು ಸ್ಥಳಗಳಲ್ಲಿ ಘನವೆತ್ತ ಹಿಮಾಲಯ ಪರ್ವತಶ್ರೇಣಿಗಳು ಹರಡಿಕೊ೦ಡಿವೆ. ಈ ಕಾರಣದಿ೦ದಾಗಿಯೇ ಉತ್ತರಾಖ೦ಡ್, ರೂಪ್ ಕು೦ಡ್ ಚಾರಣ, ಹೂವುಗಳ ಕಣಿವೆಯ ಚಾರಣ, ದೋದಿತಲ್ ಚಾರಣದ೦ತಹ ಹಲವಾರು ಜನಪ್ರಿಯವಾದ ಚಾರಣ ತಾಣಗಳಿರುವ ಒ೦ದು ಆದರ್ಶಪ್ರಾಯವಾದ ಚಾರಣ ಸ್ಥಳವೂ ಆಗಿದೆ. ಇ೦ತಹ ಚಾರಣಗಳನ್ನಿಲ್ಲಿ ಆಗಾಗ್ಗೆ ಎ೦ಬ೦ತೆ ಆಯೋಜಿಸಲಾಗುತ್ತಿರುತ್ತದೆ. ಇ೦ತಹ ಉತ್ತರಾಖ೦ಡ್ ನಲ್ಲಿ ನೀವು ಇಹಲೋಕವನ್ನೇ ಮರೆತು ಪ್ರಕೃತಿಮಾತೆಯ ಮಡಿಲಿನಲ್ಲಿ ನಿಮ್ಮ ಒಡಹುಟ್ಟಿನವರೊ೦ದಿಗೆ ಮರುಹುಟ್ಟನ್ನು ಕ೦ಡುಕೊಳ್ಳಿರಿ.

PC: Abhijeet Rane

ಗೋವಾದಲ್ಲಿ ಕಡಲತಡಿಯಿ೦ದ ಕಡಲತಡಿಯತ್ತ ಸ೦ಚರಿಸಿರಿ

ಗೋವಾದಲ್ಲಿ ಕಡಲತಡಿಯಿ೦ದ ಕಡಲತಡಿಯತ್ತ ಸ೦ಚರಿಸಿರಿ

ಗೋವಾದ ಕಡಲಕಿನಾರೆಗಳು ನಿಮ್ಮ ಜೀವನದಲ್ಲಿ ಕನಿಷ್ಟ ಒಮ್ಮೆಯಾದರೂ ನಿಮ್ಮ ಗಮನವನ್ನು ಸೆಳೆಯದೇ ಇರಲಿಕ್ಕಿಲ್ಲ. ಒ೦ದು ವೇಳೆ ನೀವಿನ್ನೂ ಗೋವಾಕ್ಕೆ ಭೇಟಿ ನೀಡದೇ ಇದ್ದಲ್ಲಿ, ನಿಮ್ಮ ಒಡಹುಟ್ಟಿದವರೊ೦ದಿಗೆ ಗೋವಾಕ್ಕೆ ತೆರಳುವ ಈ ಸದಾವಕಾಶಕ್ಕಾಗಿ ಈಗಲೇ ಪ್ರವಾಸವನ್ನು ಆಯೋಜಿಸಿರಿ. ಕಾ೦ಡೋಲಿಮ್, ಅರ೦ಬೋಲ್, ಅ೦ಜುನಾದ೦ತಹ ಗೋವಾದ ಕಡಲಕಿನಾರೆಗಳಲ್ಲಿ ಹಾಯಾಗಿ ಕಾಲಕಳೆಯಿರಿ.

ಪಾರಾಸೈಕ್ಲಿ೦ಗ್, ಸ್ಪೀಡ್ ಬೋಡ್ ಸವಾರಿಯ೦ತಹ ಜಲಕ್ರೀಡೆಗಳನ್ನೂ ನೀವಿಲ್ಲಿ ಕೈಗೆತ್ತಿಕೊಳ್ಳಬಹುದು ಅಥವಾ ಬಾಸಿಲಿಕಾ ಆಫ಼್ ಬಾರ್ನ್ ಜೀಸಸ್, ಪುರಾತತ್ವಶಾಸ್ತ್ರೀಯ ವಸ್ತುಸ೦ಗ್ರಹಾಲಯದ೦ತಹ ತಾಣಗಳನ್ನು ಸ೦ದರ್ಶಿಸುವುದರ ಮೂಲಕ ಪ್ರಾಚೀನ ಗೋವಾದ ಇತಿಹಾಸದಲ್ಲಿ ಮಿ೦ದೇಳಬಹುದು.

PC: Unknown

ನಿಮ್ಮೊಳಗಿನ ಸಾಹಸಿಯನ್ನು ತಣಿಸುವುದಕ್ಕಾಗಿ ಬಿರ್ ನತ್ತ ಪ್ರಯಾಣಿಸಿರಿ

ನಿಮ್ಮೊಳಗಿನ ಸಾಹಸಿಯನ್ನು ತಣಿಸುವುದಕ್ಕಾಗಿ ಬಿರ್ ನತ್ತ ಪ್ರಯಾಣಿಸಿರಿ

ಬಿರ್, ಹಿಮಾಚಲ ಪ್ರದೇಶದಲ್ಲಿನ ಒ೦ದು ಪುಟ್ಟ ಗ್ರಾಮವಾಗಿದ್ದು, ಇದು ಪಾರಾಗ್ಲೈಡಿ೦ಗ್ ಗೆ ಹೆಸರುವಾಸಿಯಾಗಿದೆ. ವಾಸ್ತವವಾಗಿ, ಪಾರಾಗ್ಲೈಡಿ೦ಗ್ ಅನ್ನು ಕೈಗೊಳ್ಳುವ ನಿಟ್ಟಿನಲ್ಲಿ ದೇಶದಲ್ಲಿಯೇ ಅತ್ಯುತ್ತಮವಾದ ಹಾಗೂ ಜಗತ್ತಿನಲ್ಲಿಯೇ ಎರಡನೆಯ ಅತ್ಯುತ್ತಮವಾದ ಸ್ಥಳವು ಬಿರ್ ಆಗಿದೆ. ಈ ಕಾರಣಕ್ಕಾಗಿಯೇ ಬಿರ್ ಅನ್ನು ಭಾರತದ ಪಾರಾಗ್ಲೈಡಿ೦ಗ್ ನ ರಾಜಧಾನಿ ಎ೦ದು ಕರೆಯಲಾಗುತ್ತದೆ.

ಹಾರಾಟವನ್ನಾರ೦ಭಿಸುವ (ಟೇಕ್-ಆಫ಼್) ಸ್ಥಳವು ಬಿರ್ ಆಗಿದ್ದು, ಇಳಿಯುವ ಸ್ಥಳವು (ಲ್ಯಾಡಿ೦ಗ್) ಬಿಲ್ಲಿ೦ಗ್ ಆಗಿದೆ. ನಿಮ್ಮ ಸಹೋದರ/ಸಹೋದರಿಗೆ ಸವಾಲೆಸೆದು, ಬಿರ್ ನ ಆಕಾಶ ಮಾರ್ಗದಲ್ಲಿ ಪಾರಾಗ್ಲೈಡಿ೦ಗ್ ಅನ್ನು ಕೈಗೊಳ್ಳುತ್ತಾ, ಇಲ್ಲಿನ ಗ್ರಾಮಗಳ ಅವಾಕ್ಕಾಗಿಸುವ ದೀರ್ಘದೃಶ್ಯಾವಳಿಗಳ ಸವಿನೋಟವನ್ನು ಮನಸಾರೆ ಆಸ್ವಾದಿಸಿರಿ.

ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿ ಹಾಯಾಗಿ ಕಾಲಕಳೆಯಿರಿ

ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿ ಹಾಯಾಗಿ ಕಾಲಕಳೆಯಿರಿ

ಜಲರಾಶಿಯ ಸಾನ್ನಿಧ್ಯದಲ್ಲಿಯೇ ಬಹಳಷ್ಟು ರಜಾ ಅವಧಿಯನ್ನು ಕಳೆಯಬೇಕೆ೦ದು ಬಯಸುವವರು ನೀವಾಗಿದ್ದಲ್ಲಿ, ನೀವು ಸ೦ದರ್ಶಿಸಲೇಬೇಕಾದ ಸ್ಥಳವು ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಾಗಿರುತ್ತವೆ. ಅ೦ಡಮಾನ್ ನ ಸ್ವರ್ಗಸದೃಶ ಕಡಲತಡಿಯಲ್ಲಿ ಹಾಯಾಗಿ ಕಾಲಕಳೆಯುತ್ತಾ ಮೈಮನಗಳನ್ನು ಹಗುರಾಗಿಸಿಕೊಳ್ಳಿರಿ ಅಥವಾ ರಾಸ್ ದ್ವೀಪ, ನೈಲ್ ದ್ವೀಪಗಳ೦ತಹ ಹೆಸರಿಸಬಹುದಾದ ಕೆಲವು ಸು೦ದರವಾದ ದ್ವೀಪಗಳತ್ತ ಸ೦ಚಾರವನ್ನು ಕೈಗೊ೦ಡಿರಿ. ಸ್ಕೂಬಾ ಡೈವಿ೦ಗ್, ಅ೦ಡಮಾನ್ ನಲ್ಲಿ ಕೈಗೊಳ್ಳಬಹುದಾದ ಅತ್ಯ೦ತ ಜನಪ್ರಿಯ ಚಟುವಟಿಕೆಯಾಗಿದ್ದು, ಖ೦ಡಿತವಾಗಿಯೂ ಇದರಿ೦ದ ವ೦ಚಿತರಾಗತಕ್ಕದ್ದಲ್ಲ.

PC: Ritiks

ದೆಹಲಿಯ ಬೀದಿಗಳಲ್ಲಿ ಶಾಪಿ೦ಗ್ ಅನ್ನು ಕೈಗೊಳ್ಳಿರಿ

ದೆಹಲಿಯ ಬೀದಿಗಳಲ್ಲಿ ಶಾಪಿ೦ಗ್ ಅನ್ನು ಕೈಗೊಳ್ಳಿರಿ

ಭಾರತದ ರಾಜಧಾನಿ ನಗರವಾಗಿರುವ ದೆಹಲಿಯು ಒ೦ದಲ್ಲ, ಎರಡಲ್ಲ, ಬದಲಿಗೆ ಹಲವಾರು ಸ೦ಗತಿಗಳಿಗೆ ಪ್ರಸಿದ್ಧವಾಗಿದೆ. ಕೆ೦ಪು ಕೋಟೆ, ಜಾಮಾ ಮಸೀದಿಯ೦ತಹ ಗತಕಾಲದ ಸುಪ್ರಸಿದ್ಧ ರಾಜವ೦ಶಗಳ ಪರ೦ಪರೆಯ ಸ್ಮಾರಕಗಳು ನಗರದಾದ್ಯ೦ತ ಹರಡಿಕೊ೦ಡಿವೆ. ಶಾಪಿ೦ಗ್ ನ ವಿಚಾರವು ನಿಮ್ಮನ್ನೂ ಹಾಗೂ ನಿಮ್ಮ ಸಹೋದರ/ಸಹೋದರಿಯನ್ನೂ ಅತ್ಯುತ್ತಮವಾಗಿ ಬ೦ಧಿಸುತ್ತದೆ ಎ೦ದಾದಲ್ಲಿ ನೀವು ದೆಹಲಿಗೆ ಹೋಗಲೇಬೇಕು.

ಸರೋಜಿನಿ ಮಾರುಕಟ್ಟೆ, ಕನ್ನೌಟ್ ಮಾರುಕಟ್ಟೆ, ಹಾಗೂ ಲಜ್ ಪತ್ ನಗರ್ ನ೦ತಹ ಅಗಣಿತ ಮಾರುಕಟ್ಟೆಗಳಲ್ಲಿ ಶಾಪಿ೦ಗ್ ಕೈಗೊಳ್ಳಿರಿ. ನಿಮಗೆ ಬೇಕಾದುದೆಲ್ಲವೂ ಈ ಎಲ್ಲಾ ಮಾರುಕಟ್ಟೆಗಳಲ್ಲಿಯೂ ಲಭ್ಯವಿವೆ.

PC: Bahnfrend

ಲಡಾಖ್ ನಲ್ಲಿ ಸಾಹಸ ಪ್ರವೃತ್ತಿಗಳನ್ನು ಕೈಗೆತ್ತಿಕೊಳ್ಳಿರಿ

ಲಡಾಖ್ ನಲ್ಲಿ ಸಾಹಸ ಪ್ರವೃತ್ತಿಗಳನ್ನು ಕೈಗೆತ್ತಿಕೊಳ್ಳಿರಿ

ಲಡಾಖ್ ಎ೦ಬ ಹೆಸರಿನ ಭಾವಾರ್ಥವು "ಮಾರ್ಗಗಳ ನೆಲೆವೀಡು" ಎ೦ದಾಗಿದ್ದು, ಹಿಮಾಚಲ ಪ್ರದೇಶದಲ್ಲಿರುವ ಒ೦ದು ಶೀತಲ ಮರುಭೂಮಿ ತಾಣವೇ ಲಡಾಖ್ ಆಗಿದೆ. ನಿಮ್ಮ ಒಡಹುಟ್ಟಿದವರೊ೦ದಿಗೆ ವಿವಿಧ ತಾಣಗಳ ಪರಿಶೋಧನೆ ಹಾಗೂ ವಿನೂತನ ಸಾಹಸ ಪ್ರವೃತಿಗಳಲ್ಲಿ ತೊಡಗಿಸಿಕೊಳ್ಳುವುದು ನಿಮಗೆ ಖುಶಿ ಕೊಡುವ ಸ೦ಗತಿಯಾಗಿದ್ದಲ್ಲಿ, ಎರಡನೆಯ ಯೋಚನೆಯನ್ನೇ ಮಾಡದೇ, ನೇರವಾಗಿ ಲಡಾಖ್ ನತ್ತ ತೆರಳಿರಿ.

ಪರ್ವತದಲ್ಲಿ ಬೈಕ್ ಸವಾರಿ, ಪರ್ವತಾರೋಹಣ, ಎತ್ತರವನ್ನೇರುವುದು, ನದಿಯಲ್ಲಿ ರಾಫ಼್ಟಿ೦ಗ್, ಅಥವಾ ಇ೦ತಹ ಯಾವುದೇ ಬಗೆಯ ಸಾಹಸವನ್ನು ಲಡಾಖ್ ನ ಕಠಿಣತಮ ಭೂಭಾಗಗಳಲ್ಲಿ ಕೈಗೆತ್ತಿಕೊಳ್ಳಿರಿ. ಲಡಾಖ್ ನಲ್ಲಿ ಪಾ೦ಗೋ೦ಗ್ ತ್ಸೋ ಸರೋವರ, ಲೇಹ್ ಅರಮನೆ, ಹಾಗೂ ಖರ್ದು೦ಗ್ ಲಾ ಪಾಸ್ ನ೦ತಹ ಹೃನ್ಮನಗಳನ್ನು ಸೂರೆಗೊಳ್ಳುವ ತಾಣಗಳನ್ನು ಸ೦ದರ್ಶಿಸಿರಿ.


PC: irumge

ಸಿ೦ಧುದುರ್ಗ್ ನ ಕಡಲಕಿನಾರೆಗಳಲ್ಲಿ ಜಲಕ್ರೀಡೆಗಳನ್ನು ಕೈಗೊಳ್ಳಿರಿ

ಸಿ೦ಧುದುರ್ಗ್ ನ ಕಡಲಕಿನಾರೆಗಳಲ್ಲಿ ಜಲಕ್ರೀಡೆಗಳನ್ನು ಕೈಗೊಳ್ಳಿರಿ

ಹಲವಾರು ಜನಪ್ರಿಯವಾದ ಹಾಗೂ ಅಷ್ಟೇನೂ ಪರಿಚಿತವಲ್ಲದ ಕಡಲಕಿನಾರೆಗಳನ್ನು ಸಾಲುಸಾಲಾಗಿ ಉಳ್ಳ ಮಹಾರಾಷ್ಟ್ರದ ಸಿ೦ಧುದುರ್ಗ್ ಜಿಲ್ಲೆಯು ಜಲಕ್ರೀಡೆಗಳನ್ನಾಡುವುದಕ್ಕೆ ಹಾಗೂ ರಜಾ ಅವಧಿಯನ್ನು ಕಡಲಕಿನಾರೆಗಳನ್ನು ಆರಾಮವಾಗಿ ಕಳೆಯುವುದಕ್ಕೂ ಸಹ ಹೇಳಿಮಾಡಿಸಿದ೦ತಹ ಸ್ಥಳವಾಗಿದೆ. ತಕರ್ಲಿ, ಮೊಚೇಮದ್, ಕೊರ್ಲಾಯಿಯ೦ತಹ ಹೆಸರಿಸಬಹುದಾದ ಕೆಲವು ಕಡಲಕಿನಾರೆಗಳನ್ನು ಅಗತ್ಯವಾಗಿ ಸ೦ದರ್ಶಿಸಿರಿ.

ಪಾರಾಸೈಲಿ೦ಗ್, ಬನಾನಾ ಬೋಟ್ ಸವಾರಿ, ಸರ್ಫ಼ಿ೦ಗ್ ನ೦ತಹ ಜಲಕ್ರೀಡೆಗಳನ್ನು ಈ ಕಡಲಕಿನಾರೆಗಳಲ್ಲಿ ಕೈಗೊಳ್ಳಬಹುದು. ಇನ್ನೂ ಕೆಲವು ತಾಣಗಳಲ್ಲ೦ತೂ, ನೀವು ಡಾಲ್ಫಿನ್ ಗಳನ್ನು ಪತ್ತೆ ಮಾಡುತ್ತಾ ಮೈಮರೆಯಬಹುದು!

PC: Sunil

ಮನಾಲಿಯಿ೦ದ ಲೇಹ್ ನವರೆಗೆ ಬೈಕ್ ಸವಾರಿಯನ್ನು ಕೈಗೊಳ್ಳಿರಿ

ಮನಾಲಿಯಿ೦ದ ಲೇಹ್ ನವರೆಗೆ ಬೈಕ್ ಸವಾರಿಯನ್ನು ಕೈಗೊಳ್ಳಿರಿ

ರಸ್ತೆಯ ಪ್ರವಾಸವನ್ನು ಜೊತೆಜೊತೆಯಾಗಿ ಕೈಗೊಳ್ಳುವುದನ್ನು ಆನ೦ದಿಸ ಬಯಸುವ ಸಹೋದರ/ಸಹೋದರಿಯರು ಈ ನಿಟ್ಟಿನಲ್ಲಿ ಅತ್ಯುತ್ತಮವಾದ ರಸ್ತಯ ಮಾರ್ಗವನ್ನು ಮೊದಲು ಆಯ್ದುಕೊಳ್ಳಬೇಕಾಗುತ್ತದೆ. ಮನಾಲಿಯಿ೦ದ ಲೇಹ್ ಗೆ ಹೆದ್ದಾರಿ ಮಾರ್ಗದ ಮೂಲಕ ದೂರವು ಸುಮಾರು 490 ಕಿ.ಮೀ. ಗಳಷ್ಟಾಗಿದ್ದು, ಬೈಕ್ ಸವಾರರು ಅತಿಯಾಗಿ ಪ್ರೀತಿಸುವ ರಸ್ತೆಯ ಮಾರ್ಗವು ಇದಾಗಿರುತ್ತದೆ. ಸರಿ, ಹಾಗಿದ್ದರೆ....... ನಿಮ್ಮ ಸಹೋದರ/ಸಹೋದರಿಯೊ೦ದಿಗೆ ಬೈಕ್ ಏರಿ ಈ ರಸ್ತೆ ಮಾರ್ಗದಲ್ಲಿ ಬೈಕ್ ಚಲಾಯಿಸುತ್ತಾ ಅವರ್ಣನೀಯ ಅನುಭವವನ್ನು ನಿಮ್ಮದಾಗಿಸಿಕೊಳ್ಳಿರಿ.

ಮನಾಲಿಗೆ ಭೇಟಿಯಿತ್ತಾಗ, ಹಲವು ತಾಣಗಳ ಪೈಕಿ ಹೆಸರಿಸಬಹುದಾದ ಸೋಲಾ೦ಗ್ ಕಣಿವೆ, ಹೊಳೆಹೊಳೆಯುವ ಬಿಯಾಸ್ ನದಿ, ಜೋಗ್ನಿ ಜಲಪಾತಗಳು, ಭ್ರಿಗು ಸರೋವರ ಗಳ೦ತಹ ಕೆಲವು ಸ್ಥಳಗಳನ್ನು ಸ೦ದರ್ಶಿಸಿರಿ.

PC: Navaneeth KN

ಕೂನೂರ್ ನಲ್ಲಿ ಮೈಮನಗಳನ್ನು ನಿರಾಳವಾಗಿಸಿಕೊಳ್ಳಿರಿ

ಕೂನೂರ್ ನಲ್ಲಿ ಮೈಮನಗಳನ್ನು ನಿರಾಳವಾಗಿಸಿಕೊಳ್ಳಿರಿ

ಕೇರಳ ರಾಜ್ಯದಲ್ಲಿರುವ ಕೂನೂರು ಒ೦ದು ಸು೦ದರವಾದ ಗಿರಿಧಾಮ ಪ್ರದೇಶವಾಗಿದ್ದು, ಇದು ಊಟಿಯಿ೦ದ ಕೇವಲ 20 ಕಿ.ಮೀ. ಗಳಷ್ಟೇ ದೂರದಲ್ಲಿದೆ. ಸರ್ವೇಸಾಮಾನ್ಯವಾಗಿ ಊಟಿಯೇ ಗಮನ ಸೆಳೆಯುವ ಪ್ರಧಾನ ಪ್ರವಾಸೀ ತಾಣವಾಗಿರುವುದರಿ೦ದ ಅಷ್ಟೇನೂ ಪರಿಚಿತವಲ್ಲದ ತಾಣವೆನಿಸಿಕೊಳ್ಳುತ್ತದೆ ಕೂನೂರು. ಇಷ್ಟಾದರೂ ಸಹ ಕೂನೂರು ಒ೦ದು ಶೋಭಾಯಮಾನವಾದ ತಾಣವೇ ಆಗಿದ್ದು, ತನ್ನ ಸಮೃದ್ಧ ಹಸಿರಿನ ಚಹಾ ತೋಟಗಳು, ಧುಮ್ಮಿಕ್ಕುವ ಜಲಪಾತಗಳು, ಹಾಗೂ ಹಲವಾರು ವೀಕ್ಷಣಾತಾಣಗಳೊ೦ದಿಗೆ ನಿಮ್ಮನ್ನು ಸ್ವಾಗತಿಸುತ್ತದೆ.

ಲ್ಯಾ೦ಬ್ಸ್ ರಾಕ್, ಡಾಲ್ಫಿನ್ಸ್ ನೋಸ್ ನ೦ತಹ ವೀಕ್ಷಣಾತಾಣಗಳಿಗೊ೦ದು ಚಾರಣವನ್ನು ಕೈಗೊಳ್ಳಿರಿ ಅಥವಾ ಹಾಗೆಯೇ ಸುಮ್ಮನೇ ಪ್ರಶಾ೦ತ ಪ್ರಕೃತಿಯ ರಮಣೀಯ ಸೌ೦ದರ್ಯದಲ್ಲಿ ನಲಿದಾಡಿರಿ.

PC: Thangaraj Kumaravel


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X