Search
  • Follow NativePlanet
Share
» »ಕುತೂಹಲಕರ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ

ಕುತೂಹಲಕರ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ

By Vijay

ಕೆಲವು ತಾಣಗಳೆ ಹಾಗೆ....ಎತ್ತರದ ಬೆಟ್ಟ, ವಿಶಾಲವಾಗಿ ಹರಡಿರುವ ಭೂಮಿ, ಕೆಳಗೆ ಸುತ್ತಲೂ ಹಸಿರಿನಿಂದ ಕೂಡಿದ ಗದ್ದೆಗಳು, ಎಲ್ಲೆಲ್ಲೂ ಏಕಾಂತ, ಹೆಚ್ಚು ಕಮ್ಮಿ ನಿರ್ಜನ ಪ್ರದೇಶ, ತನ್ನ ಪ್ರಾಕೃತಿಕ ಪರಾಕ್ರಮ ತೋರುತ್ತ ಸುಂಯ್ ಸುಂಯ್ ಎಂದು ಬೀಸುವ ಗಾಳಿ ಇವುಗಳ ಮಧ್ಯೆ ಅತಿ ಪುರಾತನ ಕಾಲದ ಕೆಲವು ವಿಶಿಷ್ಟ ರಚನೆಗಳು. ಇವೆಲ್ಲವೂ ಸೇರಿ ಭೇಟಿ ನೀಡಿದವರಿಗೆ ಒಂದು ವಿಚಿತ್ರ ಅನುಭವ ನೀಡದೆ ಇರಲಾರವು.

ವಿಶೇಷ ಲೇಖನ : ಮೂರು ಲಕ್ಷ ವರ್ಷ ಪುರಾತನ ಭೀಮ್ ಬೆಟ್ಕಾ ವಿಸ್ಮಯ

ಇಂತಹ ಏಕಾಂತ ಸ್ಥಳಗಳಿಗೆ ಭೇಟಿ ನೀಡುವ ಬಯಕೆ, ಅಲ್ಲಿರುವ ರಚನೆಗಳ ಕುರಿತು ತಿಳಿಯುವ ಕುತೂಹಲ ನಿಮಗಿದ್ದರೆ ಒಂದೊಮ್ಮೆ ಆಂಧ್ರಪ್ರದೇಶ ರಾಜ್ಯದಲ್ಲಿರುವ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ ಎಂಬ ಎರಡು ಪುರಾತನ ಬೆಟ್ಟ ತಾಣಗಳಿಗೆ ಭೇಟಿ ನೀಡಿ. ಆಂಧ್ರದ ವೈಜಾಗ್/ವಿಶಾಖಾಪಟ್ಟಣಂ ಜಿಲ್ಲೆಯ ಸಂಕರಂ ಎಂಬ ಗ್ರಾಮದ ಬಳಿ ಈ ಎರಡು ಗುಡ್ಡಗಳು ನೆಲೆಸಿವೆ.

ವಿಶಾಖಾಪಟ್ಟಣಂ ನಗರ ಕೆಂದ್ರದಿಂದ 45 ಕಿ.ಮೀ ದೂರದಲ್ಲಿರುವ ಈ ಗುಡ್ಡಗಳು, ಬೆಲ್ಲದ ಮಾರುಕಟ್ಟೆಗೆ ಪ್ರಖ್ಯಾತವಾದ ಅನಕಪಲ್ಲಿ ಪಟ್ಟಣದಿಂದ ಕೆಲವೆ ಕೆಲವು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿವೆ. ಇವು ಮೂಲತಃ ಬೌದ್ಧ ತಾಣಗಳಾಗಿದ್ದು ನಾಲ್ಕನೇಯ ಶತಮಾನಕ್ಕೆ ಸಂಬಂಧಿಸಿದ್ದಾಗಿವೆ. ಇಂದಿಗೂ ಈ ತಾಣಗಳು ಭೇಟಿ ನೀಡಲು ಒಂದು ರೀತಿಯಲ್ಲಿ ಆಕರ್ಷಣೆ ಉಂಟುಮಾಡುತ್ತವೆ. ಪ್ರಸ್ತುತ ಲೇಖನದಲ್ಲಿ ಈ ತಾಣಗಳ ಕುರಿತು ತಿಳಿಯಿರಿ.

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ವೈಜಾಗ್ ಜಿಲ್ಲೆಯ ಅನಕಪಲ್ಲಿ ಪಟ್ಟಣದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಸಂಕರಂ ಎಂಬ ಗ್ರಾಮದ ಬಳಿ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ ಗುಡ್ಡಗಳು ಸ್ಥಿತವಿದೆ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಸಂಕರಂ ಗ್ರಾಮವು ಹಿಂದೆ ಬೌದ್ಧ ಧರ್ಮವು ಉತ್ತುಂಗದ ಸ್ಥಿತಿಯಲ್ಲಿದ್ದಾಗ ಅಂದರೆ ಬೌದ್ಧ ಧರ್ಮದ ಮೂರು ಆಯಾಮಗಳಾದ ಹೀನಯಾನ, ಮಹಾಯಾನ ಹಾಗೂ ವಜ್ರಯಾನಗಳು ಸುಶ್ರಾವ್ಯ ಸ್ಥಿತಿಯಲ್ಲಿದ್ದಾಗ ಈ ಗ್ರಾಮವು ಬೌದ್ಧ ಧರ್ಮದಲ್ಲಿ ಉಪಯೋಗಿಸಲಾಗುವ ಪದದಂತೆ ಸಂಘರಂ ಎಂದು ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: Jvsnkk

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಕಾಲ ಕ್ರಮೇಣ ಸಂಘರಂ ಬಾಯಿಯಿಂದ ಬಾಯಿಗೆ ಸಂಚರಿಸುತ್ತ ಕೊನೆಯದಾಗಿ ಸಂಕರಂ ಎಂಬ ಹೆಸರು ಪಡೆಯಿತು. ಸಂಕರಂ ಗ್ರಾಮದ ಉತ್ತರ ದಿಕ್ಕಿನಲ್ಲಿ ತೆರಳಿದಾಗ ಪೂರ್ವಕ್ಕೆ ಬೊಜ್ಜನಕೊಂಡ ಗುಡ್ಡವು ಹಾಗೂ ಪಶ್ಚಿಮಕ್ಕೆ ಲಿಂಗಲಕೊಂಡ ಗುಡ್ಡವು ನೆಲೆಸಿರುವುದನ್ನು ಕಾಣಬಹುದು.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಈ ಎರಡೂ ಗುಡ್ಡಗಳು ಹಚ್ಚ ಹಸಿರಿನಿಂದ ಕೂಡಿರುವ ಆಕರ್ಷಕವಾಗಿ ಕಂಡುಬರುವ ಭತ್ತದ ಗದ್ದೆಗಳಿಂದ ಸುತ್ತುವರೆದಿದೆ. ಎರಡೂ ಗುಡ್ಡಗಳಲ್ಲಿ ಏಕಶಿಲೆಯಲ್ಲಿ ರಚಿಸಲಾದ ಹಲವಾರು ಸ್ತೂಪಗಳು, ಚೈತ್ಯಗಳು, ಬಂಡೆಯಲ್ಲಿ ಕೆತ್ತಲಾದ ಗುಹೆಗಳು ಹಾಗೂ ಬೌದ್ಧಾಶ್ರಮಗಳು ಇರುವುದನ್ನು ಕಾಣಬಹುದು.

ಚಿತ್ರಕೃಪೆ: Keerthi27

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಹೀಗಾಗಿ ನಾಲ್ಕನೇಯ ಶತಮಾನದಲ್ಲಿ ಆಂಧ್ರದಲ್ಲಿ ಬೌದ್ಧ ಧರ್ಮವು ಪ್ರವರ್ಧಮಾನಕ್ಕೆ ಬರುತ್ತಿತ್ತೆನ್ನಲಾಗಿದ್ದು ಈ ತಾಣಗಳು ಬೌದ್ಧ ಜೀವನ ಶೈಲಿಯ ಹಾಗೂ ವಾಸ್ತುಶಿಲ್ಪ ಕಲೆಯನ್ನು ಅನಾವರಣಗೊಳಿಸುವ ಐತಿಹಾಸಿಕ ಮಹತ್ವ ಪಡೆದ ಅದ್ಭುತ ತಾಣಗಳಾಗಿ ಇತಿಹಾಸ ಪ್ರಿಯ ಪ್ರವಾಸಿಗರನ್ನು ಸೆಳೆಯುತ್ತವೆ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಯೋಜನಾಬದ್ಧವಾಗಿ ನಿರ್ಮಿಸಲಾದ ರಚನೆಗಳಿಗೆ ಬೌದ್ಧ ಧರ್ಮದಲ್ಲಿ ಬೌದ್ಧರಾಮ ಅಥವಾ ಸಂಘರಾಮ ಎಂದು ಕರೆಯಲಾಗುತ್ತಿತ್ತು. ಇಂದು ಅದೆ ಸಂಘರಾಮವು ಸಂಕರಂ ಆಗಿ ಮಾರ್ಪಾಡಾಗಿದೆಯಷ್ಟೆ. ಬೊಜ್ಜನಕೊಂಡವು ಪೂರ್ವ ದಿಕ್ಕಿನಲ್ಲಿರುವ ಗುಡ್ಡವಾಗಿದ್ದು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ, ಸ್ತೂಪಗಳು, ಮಹಾಸ್ತೂಪಗಳು, ಕಟ್ಟೆಯಾಕಾರದಲ್ಲಿ ಕೆತ್ತಿದ ಬಂಡೆಗಳು ಹಾಗೂ ಗುಮ್ಮಟಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಗುಮ್ಮಟಗಳು ಇಟ್ಟಿಗೆಗಳಿಂದ ನಿರ್ಮಿತವಾಗಿರುವುದನ್ನೂ ಸಹ ಗಮನಿಸಬಹುದಾಗಿದೆ. ಇಟ್ಟಿಗೆಗಳಿಂದ ನಿರ್ಮಿತ ಸ್ತೂಪಗಳು, ಚಿಕ್ಕ ಚೈತ್ಯಗಳು ಎಲ್ಲೆಡೆ ಆವರಿಸಿರುವುದನ್ನು ಕಾಣಬಹುದು. ಇಟ್ಟಿಗೆ ಸ್ತೂಪಗಳ ಮಧ್ಯೆ, ಶಿಲೆಯಲ್ಲಿ ಕೆತ್ತಿದ ಸ್ತೂಪಗಳೂ ಸಹ ಕಂಡುಬರುತ್ತವೆ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಶಿಲೆಯಲ್ಲಿ ಕೆತ್ತಲಾದ ಹರಿತಿ ಎಂಬ ದೇವಿಯ ವಿಗ್ರಹವನ್ನು ಬೊಜ್ಜನಕೊಂಡ ಗುಡ್ಡದ ಬುಡದಲ್ಲಿ ಕಾಣಬಹುದು. ಗುಡ್ಡದ ಮೇಲೆ ಬಂಡೆಯಲ್ಲಿ ಕೆತ್ತಲಾದ ಆರು ಗುಹೆಗಳಿವೆ. ಅವುಗಳ ಜೊತೆಗೆ ಇತರೆ ರಚನೆಗಳೂ ಸಹ ನಿರ್ಮಿಸಲ್ಪಟ್ಟಿವೆ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಇಲ್ಲಿರುವ ಗುಹೆಗಳಲ್ಲಿ ಒಂದು ಪ್ರಮುಖ ಗುಹೆಯು ಮಹಾ ಸ್ತೂಪವನ್ನು ಕೇಂದ್ರದಲ್ಲಿಯೂ, ಅದರ ಸುತ್ತಲು 16 ಆಧಾರ ಖಂಬಗಳನ್ನು ನಿರ್ಮಿಸಲಾಗಿದೆ. ಮುಖ್ಯ ಸ್ತೂಪದ ಮೇಲೆ ಗುಮ್ಮಟವನ್ನು ಕೆತ್ತಲಾಗಿದೆ ಹಾಗೂ ಇದರ ಮೇಲೆ ಮತ್ತೊಂದು ಅಂತಸ್ತಿನಲ್ಲಿ ಬುದ್ಧನ ಪ್ರತಿಮೆಯನ್ನು ಕೆತ್ತಲಾಗಿದೆ.

ಚಿತ್ರಕೃಪೆ: Kkkishore

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಧ್ಯಾನದಲ್ಲಿ ಮುಳುಗಿದ ಬುದ್ಧ ಹಾಗೂ ಅವನ ಪರಿಚಾರಕರನ್ನು ವಿವಿಧ ರಚನೆಗಳಲ್ಲಿ ಕೆತ್ತಲಾಗಿರುವುದನ್ನು ಕಾಣಬಹುದು. ಇನ್ನೂ ಪಶ್ಚಿಮದಲ್ಲಿರುವ ಗುಡ್ಡವು ಲಿಂಗಲಕೊಂಡ ಎಂದು ಕರೆಯಲ್ಪಡುತ್ತದೆ. ಇಲ್ಲಿಯೂ ಸಹ ಬೊಜ್ಜನಕೊಂಡದಲ್ಲಿರುವಂತೆ ಸ್ತೂಪಗಳು, ಚೈತ್ಯಗಳು ಇರುವುದನ್ನು ಕಾಣಬಹುದು.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

1907-8 ರಲ್ಲಿ ಇಲ್ಲಿ ನಡೆದ ಉತ್ಖನನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪುರಾತನವಾದ ವಸ್ತುಗಳನ್ನು ಶೋಧಿಸಲಾಗಿದೆ. ಆ ಸಂದರ್ಭದಲ್ಲಿ ಟೇರಾಕೊಟ್ಟಾ ಪಾತ್ರೆ ಪಗಡೆಗಳು, ಪ್ರತಿಮೆಗಳು, ಇತರೆ ವಸ್ತುಗಳು, ಗುಪ್ತರ ಕಾಲದ ಅದರಲ್ಲೂ ಸಮುದ್ರಗುಪ್ತನ ಕಾಲದಲ್ಲಿ ಅಂದರೆ (ಕ್ರಿ.ಶ 340 ರಿಂದ 375) ರ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಒಂದು ಬಂಗಾರದ ನಾಣ್ಯ ಹಾಗೂ ಪಶ್ಚಿಮ ಚಾಲುಕ್ಯರ ಕಾಲದಲ್ಲಿ ಬಳಸಲ್ಪಡುತ್ತಿದ್ದ ತಾಮ್ರದ ನಾಣ್ಯಗಳು ದೊರೆತಿವೆ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಇತಿಹಾಸದ ಪ್ರಕಾರ ಸುಮಾರು 2000 ವರ್ಷಗಳ ಹಿಂದೆ ಬೌದ್ಧ ಸನ್ಯಾಸಿಗಳು ಈ ಗುಡ್ಡದ ಮೇಲೆ ವಾಸಿಸುತ್ತಿದ್ದರು ಹಾಗೂ ಆ ಸಂದರ್ಭದಲ್ಲಿ ಈ ಸ್ಥಳವು ಬುದ್ಧಿನಿ ಕೊಂಡ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇಂದಿಗೂ ವೈಶಾಖ ಪೌರಣಮಿಯನ್ನು ಈ ಗುಡ್ಡಗಳ ಮೇಲೆ ಆನಂದದಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: Divyapentapalli777

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಗತ ಇತಿಹಾಸದ ವೈಭವವನ್ನು ಇಂದಿಗೂ ಮೌನದಿಂದಲೆ ಹೇಳುತ್ತಿರುವ ಈ ಅವಳಿ ಗುಡ್ಡಗಳು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಯೋಗ್ಯತೆಯನ್ನು ಪಡೆದಿವೆ ಎಂದರೆ ತಪ್ಪಾಗಲಾರದು. ಶಾಂತಿಪ್ರಿಯ ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡಲೇಬೇಕೆಂಬುದು ಈ ಲೇಖನದ ಉದ್ದೇಶವೂ ಆಗಿದೆ. ಲಿಂಗಲಕೊಂಡದ ಚಿತ್ರ.

ಚಿತ್ರಕೃಪೆ: Jvsnkk

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ನಮ್ಮ ಸುತ್ತ ಮುತ್ತಲಿನಲ್ಲೆ ಇರುವ ಅದಿನ್ನೆಷ್ಟೊ ಸ್ಥಳಗಳು ಪ್ರವರ್ಧಮಾನಕ್ಕೆ ಬರಬೇಕಾಗಿವೆ. ಒತ್ತಡದಿಂದ ಬಳಲಿ ಬೆಂಡಾದ ಮನಗಳಿಗೆ ಈ ಪ್ರಶಾಂತಮಯ ಸ್ಥಳಗಳು ನವ ಚೈತನ್ಯ ಉಂಟುಮಾಡುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ. ಲಿಂಗಲಕೊಂಡದ ಚಿತ್ರ.

ಚಿತ್ರಕೃಪೆ: Aitijhya

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ವಿಶಾಖಾಪಟ್ಟಣ ಆಂಧ್ರದ ಒಂದು ಪ್ರಮುಖ ನಗರ ಕೇಂದರವಾಗಿದ್ದು ಭಾರತದ ಎಲ್ಲ ಮಹಾನಗರಗಳಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. ಒಂದೊಮ್ಮೆ ವಿಶಾಖಾಪಟ್ಟಣಕ್ಕೆ ಬಂದರೆ ಅಲ್ಲಿಂದ ಈ ಅವಳಿ ಗುಡ್ಡಗಳಿಗೆ ಸುಲಭವಾಗಿ ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Aitijhya

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಗುಡ್ಡದ ಮೇಲಿನಿಂದ ಕಂಡುಬರುವ ಸಂಕರಂ ಗ್ರಾಮದ ಹಚ್ಚ ಹಸಿರಿನಿಂದ ಕೂಡಿದ ಗದ್ದೆಗಳ ಮನಮೋಹಕ ನೋಟ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡದಿಂದ ಲಿಂಗಲಕೊಂಡಕ್ಕೆ ಹೋಗುವ ಬಂಡೆಯಲ್ಲೆ ಕೆತ್ತಲಾದ ಪುರಾತನ ಪಾದಚಾರಿ ಮಾರ್ಗ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಲಿಂಗಲಕೊಂಡದಲ್ಲಿ ಕಂಡುಬರುವ ಶಿಲೆಗಳಲ್ಲಿ ಕೆತ್ತಲಾದ ಬೌದ್ಧ ಸ್ತೂಪಗಳ ಒಂದು ನೋಟ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ವ್ಯವಸ್ಥಿತವಾಗಿ ನಿರ್ಮಿಸಲ್ಪಟ್ಟ ಬೌದ್ಧ ವಿಹಾರಗಳು, ಬೊಜ್ಜನಕೊಂಡ ಗುಡ್ಡದಲ್ಲಿ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ:

ಬೊಜ್ಜನಕೊಂಡ ಗುಡ್ಡದಲ್ಲಿ ಬಂಡೆಯಲ್ಲಿ ಕೆತ್ತಲಾದ ಒಂದು ಚಿಕ್ಕ ಗುಹೆ.

ಚಿತ್ರಕೃಪೆ: Adityamadhav83

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X