Search
  • Follow NativePlanet
Share
» »ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?

PC: Distilled Stills

ಬೆಂಗಳೂರಿನ ಸಮೀಪ ನೆಲೆಸಿರುವವರಿಗೆ ಸರೋವರದಲ್ಲಿ ಬೋಟಿಂಗ್ ಮಾಡಬೇಕೆಂಬ ಆಸೆ ಇದ್ದರೆ ಅದಕ್ಕಾಗಿ ದೂರದ ಊರುಗಳಿಗೆ ಹೋಗಬೇಕೆಂದೇನಿಲ್ಲ. ಬೆಂಗಳೂರು ಸಮೀಪದ ಸರೋವರದಲ್ಲಿ ನೀವು ಬೋಟಿಂಗ್ ಮಾಡುವ ಅವಕಾಶವನ್ನು ನಿಮಗೆ ನೀಡುತ್ತಿದೆ ಯಡಿಯೂರು ಕೆರೆ.

ಯಡಿಯೂರು ಸರೋವರ

ಯಡಿಯೂರು ಸರೋವರ

PC: youtube

ನಗರದ ಅತ್ಯಂತ ಹಳೆಯ ಸರೋವರಗಳಲ್ಲಿ ಒಂದಾಗಿರುವ ಯಡಿಯೂರು ಸರೋವರವು ಬಸವನಗುಡಿಯ ಅಂಚಿನಲ್ಲಿದೆ. ಇಲ್ಲಿಗೆ ಕನಕಪುರ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಯಡಿಯೂರು ಸರೋವರ, ಹೊಯ್ಸಳ ರಾಜರ ದಿನಗಳಿಂದಲೂ - ಸುಮಾರು 1,400 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಎನ್ನಲಾಗುತ್ತದೆ. ಇದು ಸ್ಥಳೀಯರಲ್ಲಿ ಜನಪ್ರಿಯವಾಗಿದೆ.

ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ!ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ!

ಹಕ್ಕಿಗಳ ವೀಕ್ಷಣೆ

ಈ ಸರೋವರದ ಸುತ್ತಮುತ್ತಲಿರುವ ಮರಗಳಿಗೆ ದೂರದರ್ಶಕಗಳಿಂದ ನೋಡಿದರೆ ಈ ಪಕ್ಷಿಗಳನ್ನು ಕಾಣಬಹುದು. ನೀವು ಸರೋವರದಲ್ಲಿ ಬೋಟಿಂಗ್ ಮಾಡಿದರೆ ಈ ಹಕ್ಕಿಗಳೂ ಸರೋವರದ ಮೇಲೆ ಹಾರಾಡುವುದನ್ನು ವೀಕ್ಷಿಸಬಹುದು.

ಬರ್ಡ್ ವಾಲ್‌

ಬರ್ಡ್ ವಾಲ್‌

PC: Distilled Stills

ಇಲ್ಲಿ ನೀವು ಬರ್ಡ್ ವಾಲ್‌ನ್ನು ಕಾಣಬಹುದು. ಇದು ಇಟ್ಟಿಗೆಗಳಿಂದ ನಿರ್ಮಿಸಲಾದ ಗೋಡೆಯಾಗಿದ್ದು, ಈ ವಾಲ್‌ನಲ್ಲಿ ಸಣ್ಣ ಸಣ್ಣ ರಂಧ್ರಗಳಿವೆ. ಈ ರಂಧ್ರಗಳಲ್ಲಿ ಸಾಕಷ್ಟ್ರು ಪಕ್ಷಿಗಳು ಬಂದು ಗೂಡುಕಟ್ಟುತ್ತವೆ.

ಮುದುಮಲೈಯಲ್ಲಿ ಜಂಗಲ್ ಸಫಾರಿ ಮಜಾ ಅನುಭವಿಸಿಮುದುಮಲೈಯಲ್ಲಿ ಜಂಗಲ್ ಸಫಾರಿ ಮಜಾ ಅನುಭವಿಸಿ

ಬೋಟಿಂಗ್ ಮಾಡಬಹುದು

ಈ ಕೆರೆಯಲ್ಲಿ ನೀವೀಗ ಬೋಟಿಂಗ್‌ನ ಆನಂದವನ್ನೂ ಪಡೆಯಬಹುದು.ಯಡಿಯೂರು ಕೆರೆಯಲ್ಲಿ ನಗರದ ಜನತೆಗೆ ದೋಣಿ ವಿಹಾರ ಮಾಡುವ ಉದ್ದೇಶದಿಂದ ಶಾಂತಲಾ ದೋಣಿ ವಿಹಾರ ಕೇಂದ್ರವನ್ನು ಆರಂಭಿಸಿದೆ. ಪಕ್ಷಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು ಈ ದೋಣಿ ವಿಹಾರ ಕೇಂದ್ರದಲ್ಲಿ ಪೆಡಲ್ ಬೋಟ್‌ಗಳನ್ನು ಅಳವಡಿಸಲಾಗಿದೆ.

ಇತಿಹಾಸ

ಇತಿಹಾಸ

PC:youtube

ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಯಡಿಯೂರು ಗ್ರಾಮದ ದೇವತೆ ಗಾಂಧಾಳಮ್ಮನಿಗೆ ಪೂಜೆ ಸಲ್ಲಿಸಲು ಕ್ರಿ.ಶ 1107ರಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ರಾಣಿ ಶಾಂತಲಾ ಇಲ್ಲಿಗೆ ಆಗಮಿಸಿದ್ದರು ಎನ್ನಲಾಗುತ್ತದೆ. ಆ ಸಂದರ್ಭ ರಾಣಿ ಈ ಯಡಿಯೂರು ಕೆರೆಯಲ್ಲಿ ಸ್ನಾನ ಮಾಡಿ ಗಾಂಧಾಳಮ್ಮನ ಪೂಜೆ ಸಲ್ಲಿಸಿ, ಜನರಿಗೆ ಅನ್ನ ಸಂತರ್ಪಣೆ ಮಾಡಿದಳು ಎನ್ನುವುದು ಅಲ್ಲಿ ದೊರೆತಿದ್ದ ಶಾಸನ ತಿಳಿಸುತ್ತದೆ.

ಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿ

ಶಾಂತಲಾ ದೋಣಿ ವಿಹಾರ ಕೇಂದ್ರ

ಈ ಘಟನೆ ನಡೆದು 910 ವರ್ಷ ವಾದ ನೆನಪಿಗಾಗಿ ಯಡಿಯೂರು ಕೆರೆಯಲ್ಲಿ ಆರಂಭಿಸಲಾಗಿರುವ ದೋಣಿ ವಿಹಾರ ಕೇಂದ್ರಕ್ಕೆ ಶಾಂತಲಾ ದೋಣಿ ವಿಹಾರ ಕೇಂದ್ರ ಎನ್ನುವ ಹೆಸರಿಡಲಾಗಿದೆ.

8ಪೆಡಲ್ ಬೋಟ್‌ಗಳು

ಇಲ್ಲಿ ಒಟ್ಟಿಗೆ 8 ಪೆಡಲ್ ಬೋಟ್‌ಗಳನ್ನು ಅಳವಡಿಸಲಾಗಿದೆ. ಈ8 ಪೆಡಲ್ ಬೋಟ್‌ಗಳಿಗೆ ಹೊಯ್ಸಳ ರಾಜವಂಶದ ಬಿಟ್ಟಿದೇವ, ಶಾಂತಲಾ, ಒಂದನೇ ಬಲ್ಲಾಳ, ಒಂದನೇ ನರಸಿಂಹ, ಸೋಮೇಶ್ವರ, ಎರಡನೇ ಬಲ್ಲಾಳ, ಎರಡನೇ ನರಸಿಂಹ ಎನ್ನುವ ಹೆಸರನ್ನಿಡಲಾಗಿದೆ.

ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?

ಉದ್ಯಾನವನವೂ ಇದೆ

ಇಲ್ಲಿ ನೀವು ವ್ಯಾಯಾಮ ಮಾಡಬಹುದು. ವಾಕಿಂಗ್ ಮಾಡಬಹುದು. ಕೆರೆಯ ಸುತ್ತಲು ಉದ್ಯಾನವನ, ವ್ಯಾಯಾಮ ಶಾಲೆಯೂ ಇದೆ. ಸೀನಿಯರ್ ಸಿಟಿಜನ್‌ಗಳು ಇಲ್ಲಿ ಬಂದು ವ್ಯಾಯಾಮ ಮಾಡುತ್ತಾರೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಕಾಲ ಕಳೆಯಲು ಒಂದು ಉತ್ತಮ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X