Search
  • Follow NativePlanet
Share
» »ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳಿರುವುದು ಎಲ್ಲಿ ಗೊತ್ತಾ?

ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳಿರುವುದು ಎಲ್ಲಿ ಗೊತ್ತಾ?

ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಧಾಮವನ್ನು ಸರಳವಾಗಿ ಬಿಆರ್‌ಟಿ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತದೆ. ಭಾರತದ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರದ ಅನುಮೋದನೆಯ ನಂತರ ಕರ್ನಾಟಕ ಸರ್ಕಾರದ ಇದನ್ನು ಹುಲಿ ಸಂರಕ್ಷಣಾ ಸ್ಥಳ ವೆಂದು ಘೋಷಿಸಿದೆ.

ಅತೀ ಹೆಚ್ಚು ಆನೆಗಳು

ಅತೀ ಹೆಚ್ಚು ಆನೆಗಳು

PC:Kalyan Varma

ಏಷ್ಯಾದಲ್ಲೇ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಎರಡನೇ ಸ್ಥಳ ಕರ್ನಾಟಕವಂತೆ. ಇಲ್ಲಿ ಅತೀ ಹೆಚ್ಚು ಆನೆಗಳಿವೆಯಂತೆ. ಪಶ್ಚಿಮಘಟ್ಟಗಳಲ್ಲಿ ಸಿಗುವ ಸಂಪತ್ತು ಬಹಳಷ್ಟು. ಸಾವಿರದ ಆರುನೂರು ಕಿ.ಮೀ ಪಶ್ಚಮ ಘಟ್ಟಗಳಿವೆ. ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳಷ್ಟು ಎತ್ತರವಾಗಿಲ್ಲದಿದ್ದರೂ ಪಶ್ಚಿಮ ಘಟ್ಟಗಳಿಗಿಂತಲೂ ಹಳೆಯದಂತೆ. ತಿರುಪತಿ ಬೆಟ್ಟಗಳೂ ಕೂಡಾ ಪೂರ್ವಘಟ್ಟಗಳಿಗೆ ಸೇರುತ್ತವೆ.

ರಂಗನಾಥ ಸ್ವಾಮಿ

ರಂಗನಾಥ ಸ್ವಾಮಿ

ರಂಗನಾಥ ಸ್ವಾಮಿಕರ್ನಾಟಕದಲ್ಲಿ ಹರಡಿರುವ ಪೂರ್ವಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳು ಸಂಧಿಸೋದು ಚಾಮರಾಜ ನಗರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ. ಇಲ್ಲಿ ಪೂರ್ವ ಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳು ಸೇರುತ್ತವಂತೆ. ದಲ್ಲಿನ ಬೆಟ್ಟಗಳ ನಡುವೆ ರಂಗನಾಥ ಸ್ವಾಮಿ ನೆಲೆಯೂರಿದ್ದಾನೆ.

ಬಿಳಿ ಮಂಜಿನಿಂದ ಕೂಡಿರುತ್ತದೆ

ಬಿಳಿ ಮಂಜಿನಿಂದ ಕೂಡಿರುತ್ತದೆ

PC:Prashanthns

ಈ ಬೆಟ್ಟಗಳು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಎಳಂದೂರು, ಕೊಳ್ಳೆಗಾಲ ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿವೆ. ಈ ಪ್ರದೇಶವು ವರ್ಷದ ಬಹುಭಾಗ ಬಿಳಿ ಮಂಜಿನಿಂದ ಮತ್ತು ಮೋಡಗಳಿಂದಲೂ ಆವರಿಸಿರುತ್ತದೆ.

ಬಿಳಿಗಿರಿ ರಂಗನ ಬೆಟ್ಟ

ಬಿಳಿಗಿರಿ ರಂಗನ ಬೆಟ್ಟ

PC:Shyamal

ಬಿಳಿಗಿರಿ ರಂಗನ ಬೆಟ್ಟಗಳ ವ್ಯಾಪ್ತಿಯು ಕಾವೇರಿ ಮತ್ತು ಕಪಿಲಾ ನದಿಗಳ ನಡುವೆ ನೆಲೆಸಿದೆ. ಈ ಬೆಟ್ಟಗಳು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಎಳಂದೂರು ತಾಲೂಕಿನಲ್ಲಿದೆ ಮತ್ತು ಪಾಶ್ಚಿಮಾತ್ಯ ಮತ್ತು ಪೂರ್ವ ಘಟ್ಟಗಳ ನಡುವಿನ ಜೈವಿಕ ಭೌಗೋಳಿಕ ಸೇತುವೆ ಎಂದು ಪರಿಗಣಿಸಲಾಗಿದೆ. ಬಿಳಿಗಿರಿ ರಂಗನ ಬೆಟ್ಟಗಳನ್ನು ಸ್ಥಳೀಯವಾಗಿ ಬಿಳಿಗಿರಿ ರಂಗನ ಬೆಟ್ಟ ಎಂದು ಕರೆಯುತ್ತಾರೆ.

ರಂಗನಾಥ ಸ್ವಾಮಿ

ರಂಗನಾಥ ಸ್ವಾಮಿ

ಈ ಬೆಟ್ಟಗಳ ಪರ್ವತ ಶ್ರೇಣಿಯ ಅತ್ಯುನ್ನತ ಶಿಖರದಲ್ಲಿರುವ ರಂಗನಾಥ ಸ್ವಾಮಿ ದೇವಾಲಯವು ಹೆಸರುವಾಸಿಯಾಗಿದ್ದು, ಬೆಟ್ಟದ ಬಂಡೆಯ ಮೇಲೆ ಇರುವುದರಿಂದ ಬೆಟ್ಟದ ಹೆಸರನ್ನು ನೀಡಲಾಗಿದೆ. ದೇವತೆಯ ಸ್ಥಳೀಯ ರೂಪವನ್ನು ಬಿಳಿಗಿರಿ ರಂಗ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ವಿಶಿಷ್ಟವಾಗಿ ನಿಂತಿರುವ ರೂಪದಲ್ಲಿ ಚಿತ್ರಿಸಲಾಗಿದೆ.

ಬ್ರಹ್ಮರಥೋತ್ಸವ

ಬ್ರಹ್ಮರಥೋತ್ಸವ

ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ.ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ.

 ಬೆಂಗಳೂರಿನಿಂದ 230 ಕಿ.ಮೀ

ಬೆಂಗಳೂರಿನಿಂದ 230 ಕಿ.ಮೀ

ಬೆಂಗಳೂರಿನಿಂದ 230 ಕಿ.ಮೀ ಕರ್ನಾಟಕದ ಪ್ರಮುಖ ವನ್ಯಜೀವಿ ತಾಣವಾಗಿದೆ. ಇಲ್ಲಿ ಅನೇಕ ಹುಲಿಗಳಿವೆ. ಆನೆಗಳು ಸಾಕಷ್ಟಿದೆ. ಬಿಳಿಗಿರಿ ರಂಗನ ಬೆಟ್ಟ ಬೆಂಗಳೂರಿನಿಂದ 230ಕಿ.ಮಿ ದೂರದಲ್ಲಿದ್ದರೆ, ಮೈಸೂರಿನಿಂದ 85 ಕಿ.ಮೀ ದೂರದಲ್ಲಿದೆ. ಚಾಮರಾಜನಗರದಿಂದ 45 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X