Search
  • Follow NativePlanet
Share
» »ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಬಿ.ಆರ್.ಟಿ ಹಿಲ್ಸ್ ಎಂದರೆ ಬಿಳಿಗಿರಿ ರಂಗನಾಥನ ಬೆಟ್ಟ. ಇದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಒಂದು ಅದ್ಭುತವಾದ ಬೆಟ್ಟದ ಶ್ರೇಣಿ. ಈ ಪ್ರದೇಶದಲ್ಲಿ ಬಿಳಿರಂಗನಾಥ ಸ್ವಾಮಿ ದೇವಾಲಯ, ವನ್ಯಜೀವಿ ಅಭಯಾರಣ್ಯ ಕೂಡ ಇದೆ. ಈ ಸುಂದರವಾದ

ಬಿ.ಆರ್.ಟಿ ಹಿಲ್ಸ್ ಎಂದರೆ ಬಿಳಿಗಿರಿ ರಂಗನಾಥನ ಬೆಟ್ಟ. ಇದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಒಂದು ಅದ್ಭುತವಾದ ಬೆಟ್ಟದ ಶ್ರೇಣಿ. ಈ ಪ್ರದೇಶದಲ್ಲಿ ಬಿಳಿರಂಗನಾಥ ಸ್ವಾಮಿ ದೇವಾಲಯ, ವನ್ಯಜೀವಿ ಅಭಯಾರಣ್ಯ ಕೂಡ ಇದೆ. ಈ ಸುಂದರವಾದ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶ ಇದಾಗಿದೆ.

ಇಲ್ಲಿನ ನೀಲಾಕಾಶ, ಎತ್ತರವಾದ ಬೆಟ್ಟಗಳು, ದೊಡ್ಡದಾದ ಮೈದಾನಗಳು, ಸುಂದರವಾದ ದೇವಾಲಯಗಳು, ವನ್ಯಜೀವಿಗಳನ್ನು ಕಾಣುತ್ತಾ ಒಂದು ದಿನದ ಪ್ರವಾಸವನ್ನು ಆನಂದಿಸಬಹುದಾಗಿದೆ. ಬಾಲ್ಯದ ನೆನಪುಗಳನ್ನು ನೆನಪಿಸುವ ಈ ತಾಣಕ್ಕೆ ಭೇಟಿ ನೀಡಲೇಬೇಕು ಅಲ್ಲವೇ?. ವನ್ಯ ಮೃಗಗಳನ್ನು ಕಾಣವುದಕ್ಕೆ ಉತ್ತಮ ಸಮಯವೆಂದರೆ ಅದು ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ. ವಾರಾಂತ್ಯವನ್ನು ಕಳೆಯಲು ಅಥವಾ ವಿಶ್ರಾಂತಿಗಾಗಿ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಬಹುದಾಗಿದೆ.

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ದಕ್ಷಿಣ ಭಾರತ ದೇಶದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಪ್ರಾಕೃತಿಕ ದೃಶ್ಯಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಇಲ್ಲಿನ ಪ್ರವಾಸವು ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ನವ ವಧುವಾಗಿ ಶೃಂಗಾರಗೊಂಡ ಪ್ರಕೃತಿಯು ಪ್ರವಾಸಿಗರನ್ನು ಸ್ವಾಗತಿಸುತ್ತಾಳೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಳಿಗಿರಿರಂಗನಾಥನ ಬೆಟ್ಟ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ ಎಂದೇ ಹೇಳಬಹುದು.

PC:Prashanthns

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯವು ಪ್ರವಾಸಿಗರು ತಪ್ಪದೇ ಭೇಟಿ ನೀಡಲೇಬೇಕಾಗಿರುವ ತಾಣವಾಗಿದೆ. ರಂಗನಾಥ ದೇವಾಲಯವು ಅಭಯಾರಣ್ಯದ ಉತ್ತರದ ಭಾಗಗಳ ಮೇಲಿರುವ ಒಂದು ಬೃಹತ್ ಬಂಡೆಯ ತುದಿಯಲ್ಲಿದೆ. ಬೆಟ್ಟದ ಬಂಡೆ ಬಿಳಿ ಬಣ್ಣದಲ್ಲಿ ಕಾಣುತ್ತದೆ. ಹಾಗಾಗಿಯೇ ಬಿಳಿಗಿರಿ ಅಂದರೆ ಬಿಳಿ ಬೆಟ್ಟ ಎಂಬ ಅರ್ಥವಿದೆ. ಇಲ್ಲಿ ರಂಗನಾಥ ಸ್ವಾಮಿಯು ನೆಲೆಸಿದ್ದಾನೆ. ಟಿಪ್ಪು ಸುಲ್ತಾನನು ಹಿಂದೆ ಇದ್ದ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಪುನರ್ ನಾಮಕರಣ ಮಾಡುವ ಸಂದರ್ಭದಲ್ಲಿ ಈ ಬೆಟ್ಟಯನ್ನು ಭೇಟಿ ಮಾಡಿದನು.

PC:Haritsa8

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಇಲ್ಲಿನ ಪ್ರಧಾನವಾದ ಆಕರ್ಷಣೆ ಎಂದರೆ ಅದು ಬಿಳಿಗಿರಿ ರಂಗನಾಥ ಸ್ವಾಮಿ ವನ್ಯ ಪ್ರಾಣಿ ಸಂರಕ್ಷಣಾಲಯ. ಇದನ್ನು ತಪ್ಪದೇ ನೋಡಬೇಕಾಗಿರುವ ತಾಣವೇ ಆಗಿದೆ. ಏಕೆಂದರೆ ಇದು ಕರ್ನಾಟಕದಲ್ಲಿನ ತುಂಗಭದ್ರ, ಕಾವೇರಿ ನದಿಗಳ ಮಧ್ಯ ಇದೆ. ಇದು ಸಮುದ್ರ ಮಟ್ಟಕ್ಕೆ ಸುಮಾರು 5,091 ಅಡಿ ಎತ್ತರದಲ್ಲಿದೆ. ಸುಮಾರು 500 ಚದರ ಮೀಟರ್ ವಿಸ್ತಾರವಾಗಿರುವ ಈ ಸಂರಕ್ಷಣಾಲಯದಲ್ಲಿ ಸುಮಾರು 270 ವಿಧದ ಪಕ್ಷಿಗಳು, ಪ್ರಾಣಿಗಳು ಇವೆ. ಅರಣ್ಯವು ಹೂವು, ವೃಕ್ಷಗಳಿಂದ ಸಂಪತ್ತು ಭರಿತವಾಗಿದೆ.

PC:Dineshkannambadi

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಆನೆಗಳ ನಿವಾಸದ ಪ್ರಯಾಣಕ್ಕೆ ಇದೊಂದು ಅತ್ಯುತ್ತಮವಾದ ತಾಣ ಎಂದು ಹೇಳುತ್ತಾರೆ. ಇಲ್ಲಿ ಏಶಿಯಾ ಆನೆಗಳು, ಹುಲಿಗಳು, ಚಿರತೆಗಳು ಇವೆ. ಎಲ್ಲಿಯೇ ನೋಡಿದರೂ ಪಕ್ಷಿಗಳ ಕಲರವ, ವನ್ಯ ಮೃಗಗಳ ವಿಹಾರಗಳು ಪ್ರವಾಸಿಗರಿಗೆ ಆನಂದವನ್ನು ಉಂಟು ಮಾಡುತ್ತದೆ. ರಾಜ್ಯ ಅರಣ್ಯ ಶಾಖೆಯು ಸಂದರ್ಶನರಿಗಾಗಿ ವಿಶೇಷವಾದ ಕಾಟೆಜ್‍ಗಳನ್ನು ಅರಣ್ಯ ಮಧ್ಯದಲ್ಲಿ ಏರ್ಪಾಟು ಮಾಡಿದ್ದಾರೆ.

PC:Kalyan Varma

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಎತ್ತರವಾದ ಬೆಟ್ಟಗಳು, ದಟ್ಟವಾದ ಅರಣ್ಯ ಪ್ರದೇಶಗಳ ಮಧ್ಯೆ ಸಾಗುವ ಈ ಪ್ರಯಾಣವನ್ನು ಪ್ರಕೃತಿ ಪ್ರೇಮಿಗಳು ಆನಂದಿಸದೇ ಇರಲಾರರು. ಇದೊಂದು ಅದ್ವೀತಿಯ ಅನುಭವ ಎಂದೇ ಹೇಳಬಹುದು. ಯಾವಾಗ ಯಾವ ವನ್ಯಜೀವಿ ಮೃಗವು ಮೇಲೆ ಬೀಳುತ್ತದೆಯೋ ಒಂದು ತಿಳಿಯದ ಭಯದ ವಾತಾವರಣದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.

PC:L. Shyamal

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ದೊಡ್ಡ ಸಂಪಿಗೆ ಮರ ಇಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣ. ಈ ಮರವು ಸುಮಾರು 34 ಮೀಟರ್ ದೊಡ್ಡದು, 20 ಮೀಟರ್ ಅಗಲ ಇದೆ. ಈ ಮರದ ಬಗ್ಗೆ ಸ್ಥಳೀಯ ಕಥೆಯ ಅನುಸಾರ ಸುಮಾರು 2000 ಕ್ಕಿಂತ ಹಳೆಯದು. ಇದು ಒಂದು ದೇವಾಲಯದಿಂದ ಸುಮಾರು ಬಿ,ಆರ್, ಹಿಲ್ಸ್‍ಗೆ ಸುಮಾರು 4 ಕಿ.ಮೀ ದೂರದಲ್ಲಿದೆ. ಈ ಮರದ ಕೆಳಗೆ ಅನೇಕ ಶಿವಲಿಂಗಗಳು ಇರುತ್ತವೆ.

PC:Dineshkannambadi

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಇಲ್ಲಿ ಟ್ರೆಕ್ಕಿಂಗ್, ರ್ಯಾಫ್ಟಿಂಗ್ ,ಕಾವೇರಿ ಮತ್ತು ಕಪಿಲ ನದಿಗಳ ಮೇಲೆ ವಿಹಾರ ಮಾಡಬೇಕಾಗಿರುವವರು ಎಷ್ಟೋ ಸೌಕರ್ಯಯುತವಾಗಿರುತ್ತದೆ. ಇಲ್ಲಿ ಫೀಶಿಂಗ್, ಬೋಟ್ ವಿಹಾರನಂತಹದು ಕೂಡ ಮಾಡಬಹುದು.

PC:br hills camp


ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...

ಹೇಗೆ ತಲುಪಬೇಕು?

ವಿಮಾನ ಮಾರ್ಗದ ಮೂಲಕ
ಬಿಳಿರಂಗನಾಥ ಸ್ವಾಮಿ ಬೆಟ್ಟಕ್ಕೆ ಸಮೀಪದ ವಿಮಾನನಿಲ್ದಾಣವೆಂದರೆ ಅದು ಮೈಸೂರು ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 235 ಕಿ.ಮೀ ದೂರದಲ್ಲಿದೆ.

ರೈಲು ಮಾರ್ಗದ ಮೂಲಕ
ಬಿಳಿರಂಗನಾಥ ಸ್ವಾಮಿ ಬೆಟ್ಟಗೆ ರೈಲ್ವೆ ಸ್ಟೇಷನ್ ಇಲ್ಲ. ಸುಮಾರು 90 ಕಿ.ಮೀ ದೂರದಲ್ಲಿದೆ ಮೈಸೂರು ರೈಲ್ವೆ ನಿಲ್ದಾಣವಿದೆ. ಇಲ್ಲಿಂದ ಟ್ಯಾಕ್ಸಿಯಲ್ಲಿ ಅಥವಾ ಕ್ಯಾಬ್‍ನಲ್ಲಿ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X