Search
  • Follow NativePlanet
Share
» »12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆದು ಹೋಗುವ ಶಿವಲಿಂಗವಿದು....

12 ವರ್ಷಕೊಮ್ಮೆ ಸಿಡಿಲು ಬಡಿದು ಒಡೆದು ಹೋಗುವ ಶಿವಲಿಂಗವಿದು....

ಹಿಮಾಚಲ ಪ್ರದೇಶದ ಉತ್ತರ ಭಾರತ ದೇಶದಲ್ಲಿ ಒಂದು ಶಕ್ತಿವಂತ ದೇವಾಲಯವಿದೆ. ಇದು ಒಂದು ದೊಡ್ಡದಾದ ಪ್ರವಾಸಿ ತಾಣವಾಗಿ, ಮಹಿಮಾನ್ವಿತವಾದ ದೇವಾಲಯವಾಗಿ ಪ್ರಪಂಚ ವ್ಯಾಪಕವಾಗಿ ಆಕರ್ಷಿಸುತ್ತಿದೆ. ಇಲ್ಲಿ ಪ್ರವಾಸಿ ರಂಗ ಅತ್ಯಂತ ಅಭಿವೃದ್ಧಿಗಳಿಸಿದೆ.

ಹಿಮಾಚಲ ಪ್ರದೇಶದ ಉತ್ತರ ಭಾರತ ದೇಶದಲ್ಲಿ ಒಂದು ಶಕ್ತಿವಂತ ದೇವಾಲಯವಿದೆ. ಇದು ಒಂದು ದೊಡ್ಡದಾದ ಪ್ರವಾಸಿ ತಾಣವಾಗಿ, ಮಹಿಮಾನ್ವಿತವಾದ ದೇವಾಲಯವಾಗಿ ಪ್ರಪಂಚ ವ್ಯಾಪಕವಾಗಿ ಆಕರ್ಷಿಸುತ್ತಿದೆ. ಇಲ್ಲಿ ಪ್ರವಾಸಿ ರಂಗ ಅತ್ಯಂತ ಅಭಿವೃದ್ಧಿಗಳಿಸಿದೆ. ಈ ಹಿಮಾಚಲ ಪ್ರದೇಶದಲ್ಲಿ ಒಂದು ವಿಭಿನ್ನವಾದ ದೇವಾಲಯವಿದೆ. ಅದೇ ಶಿವಾಲಯ, ಈ ದೇವಾಲಯದಲ್ಲಿ ಹಲವಾರು ಚಮತ್ಕಾರಗಳನ್ನು ನಾವು ಕಾಣಬಹುದು.

ಇದೊಂದು ವಿಜ್ಞಾನಕ್ಕೆ ಸವಾಲಾಗಿದೆ ಎಂದರೆ ತಪ್ಪಾಗಲಾರದು. ಅದೆನೆಂದರೆ 12 ವರ್ಷಕ್ಕೊಮ್ಮೆ ಇಲ್ಲಿನ ಶಿವಲಿಂಗಕ್ಕೆ ಸಿಡಿಲು ಬಡಿಯುತ್ತದೆ ಎಂತೆ. ಆದರೆ ಬೆಳಗಾಗುವುದರೊಳಗೆ ಶಿವಲಿಂಗವು ಯಥಾ ಸ್ಥಿತಿಯಲ್ಲಿ ಮಾರ್ಪಾಟಾಗುತ್ತದೆ. ಈ ವಿಶೇಷ ಆ ದೇವಾಲಯದಲ್ಲಿ ಪ್ರಧಾನವಾದುದು. ಇದನ್ನು ಕಾಣಲು ದೇಶದ ಮೂಲೆ-ಮೂಲೆಗಳಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಹಾಗಾದರೆ ಪ್ರಸ್ತುತ ಲೇಖನದಲ್ಲಿ ಅಂತಹ ಶಿವಲಿಂಗದ ಮಹಿಮೆಯನ್ನು, ಸಿಡಿಲು ಬೀಳುವುದಾದರೂ ಏಕೆ? ಎಂಬ ಹಲವಾರು ಪ್ರೆಶ್ನೆಗೆ ಉತ್ತರವನ್ನು ಲೇಖನದ ಮೂಲಕ ತಿಳಿಯೋಣ.

Bijli Mahadev Temple in Himachal Pradesh

1.ಕೆಲವು ರಹಸ್ಯಗಳು ಇಂದಿಗೂ ಕೂಡ ಬಗೆಹರಿಸಲಾಗದಂತಹುದು. ಹಾಗೆಯೇ ಶಿವಲಿಂಗದ ಮೇಲೆ ಸಿಡಿಲು ಬೀಳುವುದು ಕೂಡ. ಪ್ರತಿ 12 ವರ್ಷಗಳಿಗೊಮ್ಮೆ ಮಹಾದೇವನ ಮಂದಿರದ ಮೇಲೆ ಸಿಡಿಲು ಬೀಳುತ್ತದೆ ಎಂತೆ. ಆ ಸಿಡಿಲಿನ ಏಟಿಗೆ ಶಿವಲಿಂಗವು ಚಿದ್ರವಾಗುತ್ತದೆ ಎಂತೆ. ಆದರೆ ಮರುದಿನ ಬೆಳಗ್ಗೆ ಆಗುತ್ತಿದ್ದಂತೆ ಯಥಾ ಸ್ಥಿತಿಗೆ ಮಾರ್ಪಾಗುತ್ತದೆ ಎಂತೆ.

Bijli Mahadev Temple in Himachal Pradesh

2.ಆದರೆ ಏಕೆ ಹೀಗೆ ನಡೆಯುತ್ತದೆ ಎಂಬುದು ಶಾಸ್ತ್ರಜ್ಞರು ಕೂಡ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆ ಸಿಡಿಲು ಆ ಮಹಾದೇವನ ದೇವಾಲಯಕ್ಕೆ ಮಾತ್ರ ಗುರಿಯನ್ನು ಇಟ್ಟಿರುತ್ತದೆ. ಅದರಲ್ಲಿಯೂ ಶಿವಲಿಂಗದ ಮೇಲೆಯೇ ತನ್ನ ಅಸ್ತ್ರವನ್ನು ಪ್ರಯೋಗಿಸುತ್ತದೆ.

Bijli Mahadev Temple in Himachal Pradesh

3.ಆ ವಿಕೃತವಾದ ಶಬ್ಧದ ಸುತ್ತ ಮುತ್ತ ಇರುವ ಬೆಟ್ಟಗಳು ಕೂಡ ಕಂಪಿಸುತ್ತದೆ ಎಂತೆ. ಅದರ ಏಟಿಗೆ ಜನರು ಭಯಭೀತರಾಗುತ್ತಾರೆ. ಆ ಸಿಡಿಲಿನ ಹೊಡೆತಕ್ಕೆ ಶಿವಲಿಂಗ ಒಡೆದು ಹೋಗುತ್ತದೆ. ಆದರೆ ದೇವಾಲಯಕ್ಕೆ ಮಾತ್ರ ಯಾವುದೇ ಹಾನಿಯಾಗುವುದಿಲ್ಲವಂತೆ. ದೇವಾಲಯದಲ್ಲಿನ ಒಂದೇ ಒಂದು ಕಲ್ಲು ಕೂಡ ಕೆಳಗೆ ಬೀಳುವುದಿಲ್ಲ.

Bijli Mahadev Temple in Himachal Pradesh

4.ಕೆಲವು ರಹಸ್ಯಗಳು ಎಂದಿಗೂ ಬಗೆ ಹರಿಸಲಾಗದು. ಹಾಗೆಯೇ ಶಿವಲಿಂಗದ ಮೇಲೆ ಸಿಡಿಲು ಹೊಡೆಯುವುದು ಕೂಡ. ಪ್ರತಿ 12 ವರ್ಷಕ್ಕೆ ಒಮ್ಮೆ ಬಿಜಿಲಿ ಮಹಾದೇವ ದೇವಾಲಯದ ಮೇಲೆ ಬೀಳುವುದು ಕೂಡ. ಮರುದಿನ ಆ ದೇವಾಲಯಕ್ಕೆ ತೆರಳಿದ ಪೂಜಾರಿ ಒಡೆದು ಹೋಗಿರುವ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಇದನ್ನು ಶಿವನ ಲೀಲೆ ಎನ್ನಬೇಕು ಅರ್ಥವಾಗುತ್ತಿಲ್ಲ.

Bijli Mahadev Temple in Himachal Pradesh

5.ಇದು 12 ವರ್ಷಕ್ಕೊಮ್ಮೆ ನಡೆಯುವ ಅದ್ಭುತ. ಆ ದೇವಾಲಯದ ಹೆಸರು ಬಿಜಿಲಿ ಮಹದೇವ ದೇವಾಲಯ. ಇದು ಹಿಮಾಚಲ ಪ್ರದೇಶದಲ್ಲಿನ ಕುಲುಮನಾಲಿಯಲ್ಲಿದೆ. ಹೀಗೆ ನಡೆಯಲು ಒಂದು ಕಾರಣವಿದೆಯಂತೆ. ಅದಕ್ಕೆ ಒಂದು ಕಥೆ ಪ್ರಚಾರದಲ್ಲಿದೆ. ಪೂರ್ವದಲ್ಲಿ ಕುಲುಮಾನಾಲಿಯಲ್ಲಿ ಮಹಾಬಲವಂತ ಎಂಬ ರಾಕ್ಷಸನು ಇರುತ್ತಿದ್ದನು. ಈ ಪ್ರದೇಶದಲ್ಲಿ ಕೆಲವು ಗ್ರಾಮಗಳು ಕೂಡ ಇದೆ.

Bijli Mahadev Temple in Himachal Pradesh

6.ಆದರೆ ಅಲ್ಲಿನ ಜನರನ್ನು, ಪಶುಪಕ್ಷಿಗಳನ್ನು ನಾಶ ಮಾಡಲು ಆ ರಾಕ್ಷಸನು ದೊಡ್ಡದಾದ ಸರ್ಪವಾಗಿ ಮಾರ್ಪಾಟಾಗುತ್ತಿದ್ದನಂತೆ. ಸುತ್ತ-ಮುತ್ತವಿರುವ ಗ್ರಾಮವನ್ನು ಹಾಳು ಮಾಡಲು ಪ್ರಯತ್ನಿಸಿದನು. ಇದನ್ನು ಸಹಿಸದ ಮಹೇಶ್ವರನು ತನ್ನ ತ್ರಿಶೂಲದಿಂದ ಆ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಮರಣಹೊಂದುತ್ತಾ ಒಂದು ದೊಡ್ಡದಾದ ಬೆಟ್ಟವಾಗಿ ಮಾರ್ಪಾಟಾದನು.

Bijli Mahadev Temple in Himachal Pradesh

7.ಹೀಗೆ ರಾಕ್ಷಸನು ಬೆಟ್ಟವಾಗಿ ಮಾರ್ಪಾಟಾದನು ಎಂದು ಒಂದು ಪುರಾಣ ಕಥೆ ಇದೆ. ಹೀಗಾಗಿ ಆ ಮಹೇಶ್ವರನು ಇಲ್ಲಿಯೇ ನೆಲೆಸಿದನು ಎಂದು ಹೇಳಲಾಗುತ್ತದೆ. ಆ ರಾಕ್ಷಸನ ದೇಹವನ್ನು ನಾಶ ಮಾಡಲು ಆ ಬೆಟ್ಟದ ಮೇಲೆಯೇ ಮಹಾದೇವನು ನೆಲೆಸಿದನು.

Bijli Mahadev Temple in Himachal Pradesh

8.ಆದರೆ ಸಿಡಿಲು ಬಿದ್ದರೆ ಅಲ್ಲಿನ ಜನರು, ಪಶು-ಪಕ್ಷಿಗಳು ನಾಶವಾಗುತ್ತದೆ. ಹಾಗಾಗಿಯೇ ತನ್ನ ಮೇಲೆ ಸಿಡಿಲು ಬೀಳುವ ಹಾಗೆ ಮಾಡಿಕೊಂಡು ಸುತ್ತಲಿನ ವಾತಾವರಣವನ್ನು ಕಾಪಾಡುತ್ತಿದ್ದಾನೆ ಎಂಬುದು ಪುರಾಣ ಕಥೆ. ಶಿವನ ಆಜ್ಞೆಯ ಪ್ರಕಾರವಾಗಿ 12 ವರ್ಷಕ್ಕೆ ಒಮ್ಮೆ ಸಿಡಿಲು ಬೀಳುತ್ತದೆ.

Bijli Mahadev Temple in Himachal Pradesh

9.ಆದರೆ ಅ ಮಹದೇವನ ದೇವಾಲಯಕ್ಕೆ ತಲುಪುವುದು ಅಷ್ಟು ಸುಲಭವಾದುದಲ್ಲ. ಬಿಜಿಲಿ ಮಹಾದೇವ ದೇವಾಲಯವು ಸಮುದ್ರ ಮಟ್ಟಕ್ಕಿಂತ 2450 ಮೀಟರ್ ಎತ್ತರದ ಬೆಟ್ಟದ ಮೇಲೆ ಇದೆ. ಕಲ್ಲು, ಮಣ್ಣಿನ ಮಧ್ಯದಿಂದ ನಡೆದುಕೊಂಡು ತೆರಳಬೇಕು. ಅದೃಷ್ಟವಂತರಿಗೆ ಮಾತ್ರವೇ ಆ ದೇವರ ದರ್ಶನ ಭಾಗ್ಯ ದೊರೆಯುತ್ತದೆ.

Bijli Mahadev Temple in Himachal Pradesh

10.ಪರ್ವತದ ಮೇಲೆ ತೆರಳುತ್ತಿದ್ದಂತೆ ಗಾಳಿ ಕಡಿಮೆ ಆಗಿ ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇಲ್ಲಿನ ಮಹೇಶ್ವರನಿಗೆ ವರ್ಷಕ್ಕೆ ಒಮ್ಮೆ ಮಾತ್ರ ಉತ್ಸವವನ್ನು ನಿರ್ವಹಿಸುತ್ತಾರೆ. ಬೆಟ್ಟದ ಮೇಲೆ ಉತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ನಿರ್ವಹಿಸುತ್ತಿರುತ್ತಾರೆ.

Bijli Mahadev Temple in Himachal Pradesh

11.ಪ್ರಧಾನವಾಗಿ, ಹಿಮಾಚಲ ಪ್ರದೇಶದಲ್ಲಿ ಇರುವ ಈ ದೇವಾಲಯಕ್ಕೆ ಯಾವಾಗ ಬೇಕಾದರು ತೆರಳಬಹುದು. ಅವು ವಸಂತ ಕಾಲದಲ್ಲಿ, ಶೀತಕಾಲದಲ್ಲಿ ಮತ್ತು ಮಳೆಗಾಲದಲ್ಲಿಯೂ ಕೂಡ ತೆರಳಲು ಅತ್ಯಂತ ಉತ್ತಮವಾದ ಕಾಲಾವಧಿ. ವಸಂತ ಕಾಲವು ಫೆಬ್ರವರಿಯಿಂದ ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ. ಶೀತಕಾಲವು ಅಕ್ಟೋಬರ್‍ನಿಂದ ಮಾರ್ಚ್‍ನವರೆಗೆ ಭಕ್ತರು ಹಾಗು ಪ್ರವಾಸಿಗರು ಭೇಟಿ ನೀಡಬಹುದು.

Bijli Mahadev Temple in Himachal Pradesh

12.ಹಿಮಾಚಲ ಪ್ರದೇಶದಲ್ಲಿ ಹಲವಾರು ಪ್ರವಾಸಿ ತಾಣಗಳು ಇದ್ದು, ಇಲ್ಲಿ ಸೈಟ್ ಸೀಯಿಂಗ್, ದೇವಾಲಯಗಳು, ಟ್ರೆಕ್ಕಿಂಗ್ ಸ್ಥಳಗಳು, ಪರ್ವತರೋಹಣ, ಫಿಷಿಂಗ್ ಇನ್ನು ಹಲವಾರು ಚಟುವಟಿಕೆಗಳನ್ನು ಇಲ್ಲಿ ಮಾಡಬಹುದಾಗಿದೆ.

Bijli Mahadev Temple in Himachal Pradesh

13.ಹೇಗೆ ತೆರಳಬೇಕು?

Bijli Mahadev Temple in Himachal Pradesh

ರಸ್ತೆ ಮಾರ್ಗದ ಮೂಲಕ:
ಹಿಮಾಚಲ ಪ್ರದೇಶಕ್ಕೆ ರಸ್ತೆ ಮಾರ್ಗವಾಗಿ ಹಲವಾರು ಸಮೀಪದ ಪ್ರದೇಶಗಳಿಂದ ಬಸ್ಸುಗಳ ಮಾರ್ಗವಾಗಿ ತೆರಳಬಹುದು. ದೆಹಲಿ, ಪಾಟ್ನ, ಚಂಡಿಘರ್, ಸಿಮ್ಲಾನಿಂದಾಗಿ ಪ್ರವಾಸಿಗರು ಹಿಮಾಚಲ ಪ್ರದೇಶಕ್ಕೆ ಅತಿ ಹೆಚ್ಚಾಗಿ ಭೇಟಿ ನೀಡುತ್ತಾರೆ.

Bijli Mahadev Temple in Himachal Pradesh

14.ರೈಲು ಮಾರ್ಗದ ಮೂಲಕ
ಸುಮಾರು 125 ಕಿ.ಮೀ ದೂರದಲ್ಲಿರುವ ಜೊಗಿಂದರ್ ನಗರದ ರೈಲ್ವೆ ನಿಲ್ದಾಣವು ಸಮೀಪದ್ದಾಗಿದೆ. ಕುಲುನಿಂದ 270 ಕಿ.ಮೀ ದೂರವಿರುವ ಚಂಡಿಘರ್‍ನ ಮೂಲಕವಾಗಿ ಭಾರತ ದೇಶದಲ್ಲಿನ ಪ್ರಧಾನವಾದ ನಗರಗಳಿಂದ ಹಲವಾರು ರೈಲುಗಳು ಸಂಪರ್ಕ ಸಾಧಿಸುತ್ತದೆ. ಇಲ್ಲಿಂದ ಟ್ಯಾಕ್ಸಿಯ ಮೂಲಕ ಸುಲಭವಾಗಿ ತೆರಳಬಹುದು.

Bijli Mahadev Temple in Himachal Pradesh

15.ವಾಯು ಮಾರ್ಗದ ಮೂಲಕ
ಕುಲು ನಗರಕ್ಕೆ ಸುಮಾರು 10 ಕಿ.ಮೀ ದೂರದಲ್ಲಿರುವ ಸಮೀಪದ ವಿಮಾನ ನಿಲ್ದಾಣವೆಂದರೆ ಭುಂಟೂರು ವಿಮಾನ ನಿಲ್ದಾಣವಾಗಿದೆ. ಕುಲು ಮನಾಲಿ ಅಥವಾ ಕುಲು ವಿಮಾನ ನಿಲ್ದಾಣವೆಂದೂ ಕೂಡ ಕರೆಯುತ್ತಾರೆ. ದೆಹಲಿ, ಪಾಟ್ನ, ಚಂಡಿಘರ್, ಸಿಮ್ಲಾ ಭಾರತ ದೇಶದಲ್ಲಿನ ಪ್ರಧಾನವಾದ ನಗರಗಳಿಂದ ವಿಮಾನಗಳು ಹಿಮಾಚಲ ಪ್ರದೇಶಕ್ಕೆ ಸಂಪರ್ಕ ಸಾಧಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X