Search
  • Follow NativePlanet
Share
» »ಬಿಜಾಪುರದಲ್ಲಿರುವ ಈ ಐತಿಹಾಸಿಕ ತಾಣಗಳ ಬಗ್ಗೆ ನಿಮಗೆ ಗೊತ್ತಿದ್ಯಾ?

ಬಿಜಾಪುರದಲ್ಲಿರುವ ಈ ಐತಿಹಾಸಿಕ ತಾಣಗಳ ಬಗ್ಗೆ ನಿಮಗೆ ಗೊತ್ತಿದ್ಯಾ?

ಬಿಜಾಪುರವು ಕರ್ನಾಟಕದ ಒಂದು ಹಳೇಯ ನಗರ. ಇದನ್ನು ವಿಜಯಪುರ ಎನ್ನಲಾಗುತ್ತದೆ.ಈ ನಗರವನ್ನು ನಿರ್ಮಿಸಿದ ಖ್ಯಾತಿ ಚಾಲುಕ್ಯ ರಾಜವಂಶಸ್ಥರಿಗೆ ಸಲ್ಲುತ್ತದೆ. ಈ ಐತಿಹಾಸಿಕ ನಗರವು ಅನೇಕ ರಾಜವಂಶಸ್ಥರು, ಸಾಮ್ರಾಟರ ಅಧೀನದಲ್ಲಿತ್ತು. 14ನೇ ಶತಮಾನದಲ್ಲಿ ಆದಿಲ್ ಶಾಹಿಗಳ ಆಳ್ವಿಕೆಯಲ್ಲೂ ಇತ್ತು.

ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?

ಇಲ್ಲಿ ದೊಡ್ಡ ಸ್ಮಾರಕ ನಿರ್ಮಿಸುವ ಕಾರ್ಯವನ್ನೂ ಮಾಡಲಾಗಿತ್ತು. ಇಲ್ಲಿ ಅನೇಕ ರಾಜವಂಶಸ್ಥರು ಆಳಿದ್ದ ಕಾರಣ ಇದನ್ನು ದಕ್ಷಿಣ ಭಾರತದ ಒಂದು ಸಮೃದ್ಧ ಸಾಂಸ್ಕೃತಿಕ ಕೇಂದ್ರ ಎನ್ನಲಾಗುತ್ತದೆ. ಹಾಗಿದ್ರೆ ಬನ್ನಿ ಬಿಜಾಪುರದಲ್ಲಿ ಸುತ್ತಾಡಬಹುದಾದಂತಹ ಐತಿಹಾಸಿಕ ಸ್ಥಳಗಳು ಯಾವ್ಯಾವು ಅನ್ನೋದನ್ನು ನೋಡೋಣ.

ಗೋಲ್ ಗುಂಬಜ್

ಗೋಲ್ ಗುಂಬಜ್

ಗೋಲ್‌ ಗುಂಬಜ್ ಒಂದು ಐತಿಹಾಸಿಕ ಸ್ಮಾರಕವಾಗಿದ್ದು ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿಯ ಗೋಲ್ ಗುಂಬಜ್ ವಾಸ್ತುಕಲೆಯ ರೂಪದಲ್ಲಿ ನೋಡಬಹುದಾದ ಒಂದು ಸ್ಮಾರಕವಾಗಿದೆ. ಇದನ್ನು 1656ರಲ್ಲಿ ನಿರ್ಮಿಸಲಾದ ಈ ಸ್ಮಾರಕವು ಬಿಜಾಪುರದ ಸುಲ್ತಾನ ಆದಿಲ್ ಶಾ ನ ಸಮಾಧಿಯಾಗಿದೆ. ಬಿಜಾಪುರದಲ್ಲಿ ಆದಿಲ್ ಶಾ ನು ಅನೇಕ ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದನು.

ಗುಂಬಜ್ ಎತ್ತರ

ಗುಂಬಜ್ ಎತ್ತರ

PC: Shashidhara halady ಇದರ ಉದ್ದ ಮತ್ತು ಅಗಲ 50 ಮೀ , ಹೊರಗಡೆ ಎತ್ತರ 198ಅಡಿ ಮತ್ತು ಒಳಗಡೆ ಎತ್ತರ 175ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (೧೨೪ ಅಡಿ) ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ. ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ ಇದಾಗಿದ್ದು ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ.

ಇಬ್ರಾಹಿಂ ರೋಜಾ

ಇಬ್ರಾಹಿಂ ರೋಜಾ

PC: Rahul240488

ಇದು ಇಬ್ರಾಹಿಮ್ ಆದಿಲ್ ಶಾ ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ.

ಬಾರಾ ಕಮಾನ್

ಬಾರಾ ಕಮಾನ್

PC: Ksprabhukumar37

ಬಾರಾ ಕಮಾನ್‌ನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ , ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ.

ಮಲಿಕ್-ಎ-ಮೈದಾನ್ ಫಿರಂಗಿ

ಮಲಿಕ್-ಎ-ಮೈದಾನ್ ಫಿರಂಗಿ

PC:Santoshsmalagi

ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನುಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ.ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ , 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ.ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ.ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ.

 ತಾಜ್ ಬೌಡಿ

ತಾಜ್ ಬೌಡಿ

PC: Akshatha

ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನುಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರುಚಾಂದ ಬಾವಡಿಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು. ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು.

ಜುಮ್ಮಾ ಮಸೀದಿ

ಜುಮ್ಮಾ ಮಸೀದಿ

PC:Cousens, Henry

ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಲಾಗಿದೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹುದಾಗಿದೆ. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ತಾಳಿಕೋಟೆಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X