Search
  • Follow NativePlanet
Share
» »ಬೀದರ್ ಕೋಟೆಯ ರಹಸ್ಯ...!

ಬೀದರ್ ಕೋಟೆಯ ರಹಸ್ಯ...!

ಬೀದರ್ ಕೋಟೆ ಕರ್ನಾಟಕದಲ್ಲಿನ ಉತ್ತರ ಭಾಗದಲ್ಲಿರುವ ಬೀದರ್ ನಗರದಲ್ಲಿದೆ. ಈ ಪ್ರದೇಶದಲ್ಲಿ ಅನೇಕ ಪ್ರವಾಸಿ ಸ್ಥಳಗಳು ಕೂಡ ಇವೆ. 1427 ರಲ್ಲಿ ಬಹುಮನಿ ರಾಜವಂಶದ ಸುಲ್ತಾನನಾದ ಅಲ್ಲಾವುದ್ದಿನ್ ಬಹುಮಾನ್ ತನ್ನ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀ

By Sowmyabhai

ಬೀದರ್ ಕೋಟೆಯು ಕರ್ನಾಟಕದಲ್ಲಿನ ಪ್ರಖ್ಯಾತವಾದ ಕೋಟೆಗಳಲ್ಲಿ ಒಂದಾಗಿದೆ. ಬೀದರ್ ಒಂದು ಚಾರಿತ್ರಿಕ ಹಾಗು ಪುರಾತನವಾದ ನಗರ. ಬೆಂಗಳೂರಿನಿಂದ ಬೀದರ್‍ಗೆ ಸುಮಾರು 690 ಕಿ.ಮೀ ದೂರದಲ್ಲಿದೆ. ಕ್ರಿ.ಪೂ ಈ ನಗರವನ್ನು ಶಾತವಾಹನರು ಆಳ್ವಿಕೆ ಮಾಡುತ್ತಿದ್ದರು. ಆ ನಂತರ ಈ ನಗರವು ಕ್ರಿ.ಶ 753 ರಲ್ಲಿ ರಾಷ್ಟ್ರಕೂಟರ ಕೈಗೆ ಹೋಯಿತು.

ಬೀದರ್ ಕೋಟೆ ಕರ್ನಾಟಕದಲ್ಲಿನ ಉತ್ತರ ಭಾಗದಲ್ಲಿರುವ ಬೀದರ್ ನಗರದಲ್ಲಿದೆ. ಈ ಪ್ರದೇಶದಲ್ಲಿ ಅನೇಕ ಪ್ರವಾಸಿ ಸ್ಥಳಗಳು ಕೂಡ ಇವೆ. 1427 ರಲ್ಲಿ ಬಹುಮನಿ ರಾಜವಂಶದ ಸುಲ್ತಾನನಾದ ಅಲ್ಲಾವುದ್ದಿನ್ ಬಹುಮಾನ್ ತನ್ನ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‍ಗೆ ವರ್ಗಾಯಿಸಿಕೊಂಡನು.

1.ಬೀದರ್ ಕೋಟೆಯ ರಹಸ್ಯ...!

1.ಬೀದರ್ ಕೋಟೆಯ ರಹಸ್ಯ...!

pc: Krb2383

ಇಲ್ಲಿನ ನಗರಕ್ಕೆ, ಜಿಲ್ಲೆಗೆ ಹಾಗು ಕೋಟೆಗೆ ಒಂದೇ ಹೆಸರು "ಬೀದರ್". ಹಳೆಯ ನಗರಗಳಲ್ಲಿ ಇದು ಕೂಡ ಒಂದಾಗಿದೆ. ಪ್ರಾಚೀನ ಕಲ್ಯಾಣಿ ಚಾಳುಕ್ಯರ ರಾಜಧಾನಿಯಾದ ಬಸವ ಕಲ್ಯಾಣಿ ಬೀದರ್‍ನ ಪಶ್ಚಿಮಕ್ಕೆ 40 ಮೈಲಿ ದೂರದಲ್ಲಿದೆ.

2.ಬೀದರ್ ಕೋಟೆಯ ರಹಸ್ಯ...!

2.ಬೀದರ್ ಕೋಟೆಯ ರಹಸ್ಯ...!

pc: wikimedia.org

ಬೀದರ್ ನಗರದ ಪರಿಸರ ಪ್ರದೇಶದಲ್ಲಿ ಕಾರಂಜಿ ನದಿಯ ಮೂಲಕ ನೀರಿನ ಅವಶ್ಯಕತೆಯನ್ನು ಪಡೆಯುತ್ತಾರೆ. ಈ ಕಾರಂಜಿ ನದಿ ಮಂಜಿರಾ ನದಿಯ ಉಪನದಿಯಾಗಿದೆ. ಇಲ್ಲಿನ ವಾತಾವರಣವು ವರ್ಷಾಂದಾದ್ಯಂತ ಆಹ್ಲಾಕರವಾಗಿ, ಅನುಕೂಲಕರವಾಗಿರುತ್ತದೆ.

3.ಬೀದರ್ ಕೋಟೆಯ ರಹಸ್ಯ...!

3.ಬೀದರ್ ಕೋಟೆಯ ರಹಸ್ಯ...!

pc: wikimedia.org

ಏಪ್ರಿಲ್ ಹಾಗು ಮೇ ತಿಂಗಳಿನಲ್ಲಿಯೂ ಮಳೆಗಳು ಬೀಳುವ ಪ್ರದೇಶವಾದ್ದರಿಂದ ತಂಪಾಗಿರುತ್ತದೆ. ಬೀದರ್‍ನಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ದೇಶದ ಮೂಲೆ-ಮೂಲೆಗಳಿಂದಲೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

4.ಬೀದರ್ ಕೋಟೆಯ ರಹಸ್ಯ...!

4.ಬೀದರ್ ಕೋಟೆಯ ರಹಸ್ಯ...!

pc: wikimedia.org

ಪ್ರಸ್ತುತವಿರುವ ಬೀದರ್ ಕೋಟೆಯನ್ನು ನಿರ್ಮಾಣ ಮಾಡಿದ್ದು ಬಹುಮನಿ ಸುಲ್ತಾನನಾದ ಅಲ್ಲಾವುದ್ದೀನ್ ಬಹುಮಾನ್. ಆತನು 1427 ರಲ್ಲಿ ತನ್ನ ರಾಜಧಾನಿಯಾದ ಗುಲ್ಬರ್ಗಾದಿಂದ ಬೀದರ್‍ಗೆ ವರ್ಗಾಯಿಸಿಕೊಂಡು ಕೋಟೆಯನ್ನು ನಿರ್ಮಾಣ ಮಾಡಿದನು ಎಂದು ಚರಿತ್ರೆಯ ಮೂಲಕ ತಿಳಿದುಬರುತ್ತದೆ.

5.ಬೀದರ್ ಕೋಟೆಯ ರಹಸ್ಯ...!

5.ಬೀದರ್ ಕೋಟೆಯ ರಹಸ್ಯ...!

pc: wikimedia.org

ಈ ಪ್ರದೇಶದಲ್ಲಿ ದೃಢವಾದ ಹಾಗು ಚಿಕ್ಕದಾದ ಒಂದು ಕೋಟೆ ಇದೆ ಎಂದು 1322 ರಲ್ಲಿ ನಡೆದ ಮೊದಲ ಮುಸ್ಲಿಂ ದಂಡಯಾತ್ರೆಗೆ ಸಂಬಂಧಿಸಿದ ರಾಜಕುಮಾರನಾದ ಉಲುಘು ಖಾನ್‍ನ ಮೂಲಕ ತೊಘಲಕ್ ಸಾಮ್ರಾಜ್ಯವು ಕುಸಿಯಿತು ಎಂದು ಕೆಲವು ಆಧಾರಗಳ ಮೂಲಕ ತಿಳಿದು ಬರುತ್ತದೆ. ಬಹುಮನಿ ಸಾಮ್ರಾಜ್ಯವು ಸ್ಥಿರವಾದ ನಂತರ 1347 ರಲ್ಲಿ ಬೀದರ್ ಸುಲ್ತಾನ್, ಅಲ್ಲಾವುದ್ದೀನ್, ಬುಹುಮನ್ ಷಾ ಆಳ್ವಿಕೆಯ ಹಿಡಿತಕ್ಕೆ ಬಂದಿತು.

6.ಬೀದರ್ ಕೋಟೆಯ ರಹಸ್ಯ...!

6.ಬೀದರ್ ಕೋಟೆಯ ರಹಸ್ಯ...!

pc: Vinayak

ಮೊದಲ ಅಹಮದ್ ಷಾ (1422 ರಿಂದ 1486) ಆಳ್ವಿಕೆಯಲ್ಲಿ ಬೀದರ್ ಬಹುಮನಿ ಸಾಮ್ರಾಜ್ಯದ ರಾಜಧಾನಿಯಾಯಿತು. ಹಳೆಯ ಕೋಟೆಯ ಸ್ಥಾನದಲ್ಲಿ ಹೊಸ ಕೋಟೆಯ ಜೊತೆ-ಜೊತೆಯಲ್ಲಿ ಮಹಲ್‍ಗಳು, ಮಸೀದಿಗಳು, ರಾಜಭವನಗಳು, ತೋಟಗಳು ನಿರ್ಮಾಣವಾದವು. ಬೀದರ್ ಚರಿತ್ರೆಯಲ್ಲಿ ಒಬ್ಬ ವ್ಯಕ್ತಿಯು 1466 ರಲ್ಲಿ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದನು. ಆತನ ಹೆಸರೇ ಮಹಮದ್ ಗವಾನ್.

7.ಬೀದರ್ ಕೋಟೆಯ ರಹಸ್ಯ...!

7.ಬೀದರ್ ಕೋಟೆಯ ರಹಸ್ಯ...!

pc: Lala Deen Dayal

ಕ್ರಿ.ಶ 1656 ರಲ್ಲಿ ಮೊಘಲ್ ಚಕ್ರವರ್ತಿಯಾದ ಔರಂಗಜೇಬ್ ಆಕ್ರಮಿಸಿಕೊಳ್ಳುವರೆವಿಗೂ ಈ ಕೋಟೆಯು ಬಾರಿದ್ ಷಾಹಿ ಸಾಮ್ರಾಜ್ಯದ ಅಧೀನದಲ್ಲಿತ್ತು. 1724 ರಲ್ಲಿ ಬೀದರ್ ನಿಜಾಮರ ನವಾಬನಾದ ಆಸಫ್ ಜಾಹಿಲಾ ಹಿಡಿತದಲ್ಲಿ ಬಂದಿತು. ಬಿಜಾಪುರ ಸಾಮ್ರಾಜ್ಯದಲ್ಲಿ 1619 ರಿಂದ
1620 ರಲ್ಲಿ ಸೇರಿ, 1657 ರಲ್ಲಿ ಮೊಘಲ್ ರಾಜ ಪ್ರತಿನಿಧಿತ್ವದ ಕೆಳಗೆ ಬಂದಿತು. 1686 ರಲ್ಲಿ ಮೊಘಲ್ ಸಾಮ್ರಾಜ್ಯದ ಭಾಗವಾಯಿತು.

8.ಬೀದರ್ ಕೋಟೆಯ ರಹಸ್ಯ...!

8.ಬೀದರ್ ಕೋಟೆಯ ರಹಸ್ಯ...!

pc: Santosh3397


1751 ರಿಂದ 1762 ರ ಮಧ್ಯೆ ಆಸಫ್ ಖಾನ್‍ನ 3 ನೇ ಕುಮಾರನಾದ ನವಾಬ್ ಸಾಹಿದ್ ಮೊಹಮದ್ ಖಾನ್ ಅಸಫುದ್ದೌಲಾ ಬೀದರ್ ಕೋಟೆಯಲ್ಲಿ ಆಳ್ವಿಕೆ ಮಾಡಿದನು. ತನ್ನ ಸಹೋದರನಾದ 3 ನೇ ಮೀರ್ ನಿಜಾಂ ಅಲಿಖಾನ್ ಅಸಫ್ ಜಾನನ್ನು ಕೋಟೆಯಲ್ಲಿ ಬಂಧಿಸಿ 1763 ರ ಸೆಪ್ಟೆಂಬರ್ 16 ರಂದು ಹತ್ಯೆಯಾಗುವವರೆವಿಗೂ ಆತನ ಆಳ್ವಿಕೆಯಲ್ಲಿಯೇ ಮುಂದುವರೆದಿತ್ತು.

9.ಬೀದರ್ ಕೋಟೆಯ ರಹಸ್ಯ...!

9.ಬೀದರ್ ಕೋಟೆಯ ರಹಸ್ಯ...!

pc: Santosh3397

ಬೀದರ್‍ನ ಹಳೆಯ ಹೆಸರಾದ ಮೊಹಮ್ಮದಾ ಬಾದ್ ಕೂಡ ಇತನ ಹೆಸರಿನಿಂದಲೇ ಗುರುತಿಸಲಾಯಿತು. ಈ ವಿಧವಾಗಿ ಬಹುಮನಿ ರಾಜರು ಗುಲ್ಬರ್ಗಾದಿಂದ 1347 ರಿಂದ 1424ರ ಮಧ್ಯ ಕಾಲದಲ್ಲಿ 1424 ರಿಂದ ರಾಜ್ಯ ಸಮಾಪ್ತಿಯಾಗುವವರೆವಿಗೂ ಆಳ್ವಿಕೆ ಮುಂದುವರೆಸಿದರು. ತದ ನಂತರ ಸಾಮ್ರಾಜ್ಯವು 5 ಭಾಗಗಳಾದವು.

10.ಬೀದರ್ ಕೋಟೆಯ ರಹಸ್ಯ...!

10.ಬೀದರ್ ಕೋಟೆಯ ರಹಸ್ಯ...!

pc: Santosh3397

ಬಿಜಾಪುರ, ಗೋಲ್ಕಂಡ ಅಹಮದಾ ನಗರ, ಬೀದರ್, ಬೆರಾರ್ ಪ್ರದೇಶಗಳಾಗಿ ಸಾಮ್ರಾಜ್ಯವು 5 ಭಾಗಗಳಾದವು. ಭಾರತ ಸ್ವಾತಂತ್ರ್ಯದ ನಂತರದ ಬೀದರ್ ಮೈಸೂರಿನ ಭಾಗವಾಯಿತು.

11.ಸೇರಿಕೊಳ್ಳುವ ಬಗೆ ಹೇಗೆ?

11.ಸೇರಿಕೊಳ್ಳುವ ಬಗೆ ಹೇಗೆ?

ಬೀದರ್‍ಗೆ ರೈಲು, ರಸ್ತೆ ಹಾಗು ವಿಮಾನ ಮಾರ್ಗದ ಮೂಲಕ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಬೆಂಗಳೂರಿನಿಂದ ಬೀದರ್‍ಗೆ 690 ಕಿ.ಮೀ ದೂರದಲ್ಲಿದೆ, ಗುಲ್ಬರ್ಗಾದ ಈಶಾನ್ಯಕ್ಕೆ 116 ಕಿ.ಮೀ ದೂರದಲ್ಲಿದೆ. ಹೈದ್ರಾಬಾದ್‍ನಿಂದ ಸುಮಾರು 130 ಕಿ.ಮೀ ದೂರದಲ್ಲಿದೆ.

12.ವಿಮಾನ ಮಾರ್ಗದ ಮೂಲಕ

12.ವಿಮಾನ ಮಾರ್ಗದ ಮೂಲಕ

ಬೀದರ್‍ಗೆ ಅತಿ ಸಮೀಪದ ವಿಮಾನ ನಿಲ್ದಾನವೆಂದರೆ ಅದು ಹೈದ್ರಾಬಾದ್‍ನಲ್ಲಿನ ರಾಜೀವ್‍ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಅನೇಕ ರಾಜ್ಯಗಳಿಂದ ವಿಮಾನಗಳು ಇಲ್ಲಿಗೆ ಸಂಪರ್ಕ ಸಾಧಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X